ಯೋಗರಾಜ್ ಭಟ್ಟರ ಸಿನಿಮಾದಿಂದ ಹೊರನಡೆದ ರಚಿತಾ ರಾಮ್ ಕಾರಣವೇನು ಗೊತ್ತಾ

ಯೋಗರಾಜ್ ಭಟ್ ಅವರು ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದ ನಿರ್ದೇಶಕ. ಮುಂಗಾರು ಮಳೆ ಸಿನಿಮಾ ಇಡೀ ದಕ್ಷಿಣ ಭಾರತದಲ್ಲಿ ಎಂತಹ ಕ್ರೇಜ್ ಸೃಷ್ಟಿಸಿತ್ತು ಎನ್ನುವುದು ನಮಗೆಲ್ಲ ಗೊತ್ತಿದೆ. ಇಡೀ ಸೌತ್ ಇಂಡಿಯನ್ ಸಿನಿ ಇಂಡಸ್ಟ್ರಿಯಲ್ಲಿ 50 ಕೋಟಿ ಕಲೆಕ್ಷನ್ ಮಾಡಿದ ಮೊದಲ ಸಿನಿಮಾ ಆಗಿತ್ತು ಮುಂಗಾರು ಮಳೆ. ಅದಕ್ಕಿಂತ ಮೊದಲು ಯೋಗರಾಜ್ ಭಟ್ ಅವರು ಒಂದೆರಡು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರೂ ಸಹ, ಅವರಿಗೆ ಬಿಗ್ ಸಕ್ಸಸ್ ತಂದುಕೊಟ್ಟಿದ್ದು ಮುಂಗಾರು ಮಳೆ ಸಿನಿಮಾ. ಇದಾದ ನಂತರ ಯೋಗರಾಜ್ ಭಟ್ ಅವರು ಸ್ಯಾಂಡಲ್ ವುಡ್ ನ ಸ್ಟಾರ್ ಡೈರೆಕ್ಟರ್ ಎಂದು ಹೆಸರು ಮಾಡಿದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ದಿಗಂತ್ ಹಾಗೂ ಇನ್ನಿತರ ಕಲಾವಿದರ ಜೊತೆ ಸಿನಿಮಾ ಮಾಡಿದರು. ಈಗ ಯೋಗರಾಜ್ ಭಟ್ ಅವರು ಒಂದು ಸಿನಿಮಾ ನಿರ್ದೇಶನ ಮಾಡುತ್ತಾರೆ ಅಂದ್ರೆ, ತಮಗೆ ಆ ಸಿನಿಮಾದಲ್ಲಿ ಅವಕಾಶ ಸಿಗಲಿ ಎಂದು ಕಲಾವಿದರು ಅಪೇಕ್ಷೆ ಪಡುತ್ತಾರೆ. ಪ್ರಸ್ತುತ ಯೋಗರಾಜ್ ಭಟ್ ಅವರ ಸಿನಿಮಾಗೆ ಆಯ್ಕೆಯಾಗಿದ್ದ ನಟಿ ರಚಿತಾ ರಾಮ್ ಅವರು, ಇದೀಗ ಸಿನಿಮಾ ಇಂದ ಔಟ್ ಆಗಿದ್ದಾರೆ. ಅದಕ್ಕೆ ಕಾರಣ ಏನು ಎಂದು ತಿಳಿಸುತ್ತೇವೆ ನೋಡಿ..

ಕನ್ನಡದ ಯಶಸ್ವಿ ನಟಿ ಮತ್ತು ಬ್ಯುಸಿಯೆಸ್ಟ್ ನಟಿಯರಲ್ಲಿ ಒಬ್ಬರು ರಚಿತಾ ರಾಮ್. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿ ಆಗಿರುವ ರಚಿತಾ ರಾಮ್ ಅವರು ಇತ್ತೀಚೆಗೆ ಸೂಪರ್ ಮಚ್ಚಿ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ಕನ್ನಡದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ರಚಿತಾ ಅಭಿನಯದ ವೀರಂ ಮತ್ತು ಏಕ್ ಲವ್ ಯಾ ಸಿನಿಮಾ ಬಿಡುಗಡೆ ಆಗಲು ಸಿದ್ಧವಾಗಿದೆ. ಇದಲ್ಲದೆ ಬ್ಯಾಡ್ ಮ್ಯಾನರ್ಸ್, ಶಬರಿ, ಮ್ಯಾಟ್ನಿ, ಮಾನ್ಸೂನ್ ರಾಗ, ಲವ್ ಮಿ ಆರ್ ಹೇಟ್ ಮಿ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಇಷ್ಟು ಬೇಡಿಕೆ ಇರುವ ನಟಿ ರಚಿತಾ ರಾಮ್ ಎಂದರೆ ತಪ್ಪಾಗುವುದಿಲ್ಲ.

ರಚಿತಾ ರಾಮ್ ಅವರು ಕನ್ನಡದ ಎಲ್ಲಾ ಸ್ಟಾರ್ ನಟರ ಜೊತೆಯಲ್ಲಿ ಅಭಿನಯ ಮಾಡಿದ್ದಾರೆ. ಹೊಸಬರ ಜೊತೆಯಲ್ಲೂ ನಟಿಸಿದ್ದಾರೆ. ಯೋಗರಾಜ್ ಭಟ್ ಅವರು ನಿರ್ದೇಶನ ಮಾಡುತ್ತಿರುವ ಗರಡಿ ಸಿನಿಮಾಗೆ ನಾಯಕಿಯಾಗಿ ರಚಿತಾ ಅವರು ಆಯ್ಕೆಯಾಗಿದ್ದರು. ಚಿತ್ರತಂಡ ಅಧಿಕೃತವಾಗಿ ಈ ಮಾಹಿತಿ ನೀಡಿತ್ತು. ಗರಡಿ ಸಿನಿಮಾದಲ್ಲಿ ಹೀರೋ ಆಗಿ ಕನ್ನಡದ ನಟ ಯಶಸ್ ಸೂರ್ಯ ನಟಿಸುತ್ತಿದ್ದು, ಹಿರಿಯನಟ ಬಿ.ಸಿ.ಪಾಟೀಲ್ ಅವರು ಮುಖ್ಯಪಾತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ. ಇದು ಬಹಳ ವಿಭಿನ್ನವಾದ ಸಿನಿಮಾ ಆಗಿರಲಿದೆ. ಇತ್ತೀಚೆಗೆ ರಚಿತಾ ರಾಮ್ ಅವರು ಈ ಸಿನಿಮಾ ನಾಯಕಿ ಎನ್ನುವ ವಿಚಾರ ಅಧಿಕೃತವಾಗಿಯೇ ಹೊರಬಂದಿತ್ತು.

ಆದರೆ ಈಗ ರಚಿತಾ ರಾಮ್ ಅವರೇ ಈ ಸಿನಿಮಾದಿಂದ ಹೊರಬಂದಿದ್ದಾರೆ. ರಚಿತಾ ಅವರು ಹೊರಬರಲು ಕಾರಣ ಡೇಟ್ಸ್ ಸಮಸ್ಯೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಕಾರಣ ಗರಡಿ ಸಿನಿಮಾದಲ್ಲಿ ನಟಿಸಲು ರಚಿತಾ ರಾಮ್ ಅವರಿಗೆ ಡೇಟ್ಸ್ ಸಮಸ್ಯೆ ಉಂಟಾಗಿದೆ. ಬೇರೆ ಸಿನಿಮಾಗಳ ಡೇಟ್ಸ್ ಜೊತೆ ಗರಡಿ ಸಿನಿಮಾ ಡೇಟ್ಸ್ ಹೊಂದಿಸಿಕೊಳ್ಳಲು ಸಾಧ್ಯವಾಗದ ಕಾರಣ ರಚಿತಾ ರಾಮ್ ಅವರು ಸಿನಿಮಾ ಇಂದ ಹೊರಬಂದಿದ್ದಾರೆ. ಇದು ರಚಿತಾ ಅವರಿಗೆ ಬೇಸರ ಉಂಟು ಮಾಡಿದೆ. ಯಾಕಂದ್ರೆ ರಚಿತಾ ರಾಮ್ ಅವರಿಗೆ ಯೋಗರಾಜ್ ಭಟ್ ಅವರ ಜೊತೆ ಕೆಲಸ ಮಾಡಬೇಕು ಎನ್ನುವುದು ದೊಡ್ಡ ಕನಸಾಗಿತ್ತು. ಅದಕ್ಕೆ ಅವಕಾಶ ಕೂಡ ಸಿಕ್ಕಿತ್ತು, ಆದರೆ ಈಗ ಅದು ಕೈತಪ್ಪಿಹೋಗಿದೆ.

ಸಿನಿಮಾ ಒಪ್ಪಿಕೊಂಡ ಸಮಯದಲ್ಲಿ ಮಾತನಾಡಿದ್ದ ರಚಿತಾ ರಾಮ್. ಯೋಗರಾಜ್ ಭಟ್ ಮತ್ತು ಸೂರಿ ಅವರ ಜೊತೆ ಮಾತನಾಡಬೇಕು ಎನ್ನುವುದು ನನ್ನ ಕನಸಾಗಿತ್ತು, ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಸೂರಿ ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಅದರಿಂದ ತುಂಬಾ ಸಂತೋಷವಾಗಿತ್ತು. ಯೋಗರಾಜ್ ಭಟ್ ಅವರು ಗರಡಿ ಸಿನಿಮಾ ಕಥೆ ಹೇಳಿದಾಗ, ತುಂಬಾ ಥ್ರಿಲ್ ಆಗಿದ್ದೆ, ಹಳ್ಳಿ ಹುಡುಗಿಯ ಪಾತ್ರವಾಗಿತ್ತು. ಆದರೆ ನನಗೆ ಡೇಟ್ಸ್ ಸಮಸ್ಯೆ ಇದೆ ಎನ್ನುವುದನ್ನು ಕೂಡ ಯೋಗರಾಜ್ ಭಟ್ ಅವರಿಗೆ ಹೇಳಿದ್ದೆ, ಈ ಪಾತ್ರದಲ್ಲಿ ನೀವು ನಟಿಸಿದರೆ ಚೆನ್ನಾಗಿರುತ್ತೆ ಅಂತ ಕೂಡ ಹೇಳಿದ್ರು, ಡೇಟ್ಸ್ ನೋಡಿಕೊಂಡು ಸಿನಿಮಾ ಚಿತ್ರೀಕರಣ ಮಾಡೋಣ ಎಂದು ಯೋಗರಾಜ್ ಭಟ್ ಅವರು ಹೇಳಿದ್ದಾರೆ ಎಂದು ತಿಳಿಸಿದ್ದರು ರಚಿತಾ ರಾಮ್..

ಆದರೆ ಈಗ ಡೇಟ್ಸ್ ಸಮಸ್ಯೆ ಇಂದಲೇ ರಚಿತಾ ರಾಮ್ ಅವರು ಹೊರಬಂದಿದ್ದಾರೆ. ಗರಡಿ ಸಿನಿಮಾದಲ್ಲಿ ಇನ್ಯಾವ ನಾಯಕಿ ಹೀರೋಯಿನ್ ಆಗಿ ನಟಿಸಬಹುದು ಎನ್ನುವ ಕುತೂಹಲಕ್ಕೂ ಉತ್ತರ ಸಿಕ್ಕಿದ್ದು, ಈ ಹಿಂದೆ ಯೋಗರಾಜ್ ಭಟ್ ಅವರ ಪಂಚತಂತ್ರ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ, ಸೋನಲ್ ಮೊಂಥೆರೋ ಗರಡಿ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸೋನಲ್ ಸಹ ಚಂದನವನದಲ್ಲಿ ಬ್ಯುಸಿ ಆಗಿದ್ದಾರೆ..ಬನಾರಸ್, ಶುಗರ್ ಫ್ಯಾಕ್ಟರಿ, ಭಗವಾನ್ ಶ್ರೀಕೃಷ್ಣ ಪರಮಾತ್ಮ, ಬುದ್ಧಿವಂತ 2 ಸಿನಿಮಾಗಳಲ್ಲಿ ಸೋನಲ್ ಅವರು ಬ್ಯುಸಿ ಆಗಿದ್ದಾರೆ. ಯೋಗರಾಜ್ ಭಟ್ ಅವರ ಹಿಂದಿನ ಸಿನಿಮಾಗಳ ಹಾಗೆ ಗರಡಿ ಸಿನಿಮಾ ಕೂಡ ಸೂಪರ್ ಹಿಟ್ ಆಗಲಿ ಎಂದು ಹಾರೈಸೋಣ.