ಕೊಬ್ಬು ಕರಗಿಸಲು ಮನೆಯಲ್ಲೇ ಇರುವ ಈ 3 ಸಾಮಾಗ್ರಿಗಳು ಸಾಕು..

ಇಂದಿನ ಜೀವನ ಶೈಲಿ ಮತ್ತು ಆಹಾರ ಕ್ರಮದಿಂದಾಗಿ ಹೆಚ್ಚಿನವರಲ್ಲಿ ಬೊಜ್ಜು ಕಾಣಿಸಿ ಕೊಳ್ಳುವುದು. ಹೊಟ್ಟೆಯಲ್ಲಿ ತುಂಬಿರುವ ಬೊಜ್ಜು ಕಡಿಮೆ ಮಾಡುವುದು ಕಠಿಣ ಕೆಲಸ. ಹೊಟ್ಟೆಯ ಕೊಬ್ಬು ಆರೋಗ್ಯಕ್ಕೆ ತುಂಬಾ ಹಾನಿಕರ. ಇದರಿಂದಾಗಿ ಮಧುಮೇಹದಿಂದ ಹಿಡಿದು ಹೃದಯದ ಸಮಸ್ಯೆ, ನಿದ್ರಾಹೀನತೆ ಮತ್ತು ಕ್ಯಾನ್ಸರ್ ನಂತಹ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿ ಕೊಳ್ಳಬಹುದು.

ಹೊಟ್ಟೆಯ ಬೊಜ್ಜು ವ್ಯಕ್ತಿಯೊಬ್ಬನ ಆತ್ಮವಿಶ್ವಾಸ ಕುಗ್ಗಿಸುವುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಮಧ್ಯಭಾಗದಲ್ಲಿರುವ ಕೊಬ್ಬು ಹೊಟ್ಟೆಯ ಕೊಬ್ಬಿಗೆ ಪ್ರಮುಖ ಕಾರಣ. ಇದು ತುಂಬಾ ಅಪಾಯಕಾರಿ ಕೂಡ. ಕೊಬ್ಬು ಹೊಟ್ಟೆಯಲ್ಲಿ ತುಂಬಾ ಆಳವಾಗಿ ಇರುವ ಕೊಬ್ಬು ಚರ್ಮ, ಕಿಡ್ನಿ ಮತ್ತು ಯಕೃತ್ ನಂತಹ ಕೆಲವೊಂದು ಮಹತ್ವದ ಅಂಗಾಂಗಗಳ ಸುತ್ತಲು ಆವರಿಸಿಕೊಂಡಿರುವುದು.

ಹೊಟ್ಟೆ ಕೊಬ್ಬನ್ನ ಇಳಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಮಾತ್ರವಲ್ಲದೆ, ಸೌಂದರ್ಯಕ್ಕೂ ತುಂಬಾ ಒಳ್ಳೆಯದು. ಹೊಟ್ಟೆಯು ಸಮತಟ್ಟಾಗಿದ್ದರೆ ಚರ್ಮದ ಸೌಂದರ್ಯ ವೃದ್ಧಿಸುವುದು. ಅದೇ ರೀತಿಯಾಗಿ ನಿಮಗೆ ಯಾವುದೇ ರೀತಿಯ ಬಟ್ಟೆ ಧರಿಸಬಹುದು ಮತ್ತು ಆತ್ಮವಿಶ್ವಾಸವನ್ನು ಕೂಡ ಇದು ಹೆಚ್ಚಿಸುವುದು. ಹೊಟ್ಟೆಯ ಕೊಬ್ಬು ಇಳಿಸುವ ಏಳು ವಿಧಾನಗಳ ಬಗ್ಗೆ ನೀವು ತಿಳಿಯಿರಿ.. ಹೊಟ್ಟೆಯ ಕೊಬ್ಬು ಇಳಿಸುವಂತಹ ಆಹಾರಗಳನ್ನು ಸೇವಿಸಿ. ಹೊಟ್ಟೆಯ ಕೊಬ್ಬು ಇಳಿಸಿಕೊಳ್ಳುವ ಮೊದಲು ಬಯುಸವವರು ಮುಖ್ಯವಾಗಿ ಪಾಲಿಸಬೇಕಾಗಿರುವಂತಹ ವಿಚಾರವೆಂದರೆ, ಅದು ಸರಿಯಾದ ಆಹಾರ ಕ್ರಮ ಮತ್ತು ವ್ಯಾಯಮ.

ಹೊಟ್ಟೆ ಕೊಬ್ಬು ಕರಗಿಸಲು ವ್ಯಾಯಾಮವು ಅತೀ ಮಹತ್ವದ್ದಾಗಿದೆ. ವ್ಯಾಯಾಮದ ಬಗ್ಗೆ ಕೆಳಗೆ ತಿಳಿಸಿಕೊಡಲಿದ್ದೇವೆ. ಇದಕ್ಕೆ ಮೊದಲು ನೀವು ಕೊಬ್ಬು ಕರಗಿಸುವ ಆಹಾರಗಳ ಬಗ್ಗೆ ತಿಳಿಯಿರಿ. ಇದರ ಜೊತೆಗೆ ನಾವು ಹೇಳುವ, ಮನೆಯಲ್ಲೇ ಇರುವ ಈ 3 ಪದಾರ್ಥಗಳನ್ನು ಬಳಸಿ ಬೇಗನೆ ನಿಮ್ನ ಹೊಟ್ಟೆಯ ಬೊಜ್ಜನ್ನು ಕರಗಿಸಿಕೊಳ್ಳಿ.

ಬೇಕಾಗುವ ಪದಾರ್ಥಗಳು: ಕೊಬ್ಬರಿ ಎಣ್ಣೆ, ಕರ್ಪೂರ,
ವಿಕ್ಸ್ ವೇಪರ್.. ಮಾಡುವ ವಿಧಾನ: 1 ಚಮಚ ಕೊಬ್ಬರಿ ಎಣ್ಣೆಗೆ 2
ಕರ್ಪೂರ, ಚಿಟಿಕೆ ವಿಕ್ಸ್ ವೇಪರ್ ಹಾಕಿ. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ. ನಂತರ ನಿಮ್ಮ ದೇಹದ ಯಾವ ಭಾಗದಲ್ಲಿ ಕೊಬ್ಬು ತುಂಬೆದೆಯೋ ಅಲ್ಲಿಗೆ ಹಚ್ಚಿ.

ಈ ಮಿಶ್ರಣವನ್ನು ನೀವು ಯಾವಾಗ ಬೇಕಾದರೂ ಉಪಯೋಗಿಸಬಹುದು. ಬಹು ಮುಖ್ಯವಾಗಿ ಬೆಳಗ್ಗೆ ರಾತ್ರಿ ವಾಕಿಂಗ್, ಎಕ್ಸಸೈಸ್ ಮಾಡುವಾಗ ಅಥವಾ ಮನೆ ಕೆಲಸ ಮಾಡುವಾಗ ಬಳಸಿದರೆ ಬೇಗ ಸಣ್ಣಗಾಗುತ್ತೀರಿ. ಡಯಟ್, ಎಕ್ಸಸೈಸ್ ಜೊತೆಗೆ 1 ತಿಂಗಳು ಇದನ್ನು ಬಳಸಿದರೆ ನಿಮಗೇ ರಿಸಲ್ಟ್ ಗೊತ್ತಾಗುತ್ತದೆ.