ಏಲಕ್ಕಿ ತಿನ್ನುವವರು ನೋಡಲೇಬೇಕಾದ ವಿಚಾರ.. ಏಲಕ್ಕಿ ತಿಂದರೆ ಏನಾಗತ್ತೆ ಗೊತ್ತಾ?

ಆರೋಗ್ಯವನ್ನು ಕಾಪಾಡಿಕೊಳ್ಳುವುದು, ಯಾವುದೇ ರೋಗ ರುಜಿನಗಳಿಂದ ಮುಕ್ತವಾಗಿ ಜೀವನ ನಡೆಸುವುದು ಅತ್ಯಂತ ಮುಖ್ಯವಾದ ವಿಷಯ. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತಲಿನ ಪರಿಸರ, ಪ್ರದೂಷಣೆ ಮೊದಲಾದವುಗಳಿಂದಾಗಿ ಆರೋಗ್ಯಕರ ಜೀವನ ನಡೆಸುವುದೇ ಅತ್ಯಂತ ಕಷ್ಟಕರವಾಗಿದೆ. ಆದರೆ ಕೆಲವು ಅಡುಗೆ ಮನೆಯ ಪದಾರ್ಥಗಳು ನಮ್ಮ ಆರೋಗ್ಯವನ್ನು ಸದಾ ಕಾಪಾಡುವಲ್ಲಿ ಸಹಾಯಕವಾಗಿವೆ. ಅರಿಶಿನದಿಂದ ಹಿಡಿದು ದಿನನಿತ್ಯವೂ ಬಳಸುವ ಉಪ್ಪಿನ ವರೆಗೆ ಪ್ರತಿಯೊಂದು ವಸ್ತುವಿನಲ್ಲಿಯೂ ಒಂದಲ್ಲಾ ಒಂದು ರೀತಿಯ ಆರೋಗ್ಯಕರ ಗುಣ ಇದ್ದೇ ಇರುತ್ತದೆ. ಇಂತಹ ಆರೋಗ್ಯ ಬೂಸ್ಟರ್ ಆಗಿರುವ ಒಂದು ಪದಾರ್ಥ ಏಲಕ್ಕಿ. ಹಿಂದೆಲ್ಲಾ ಏಲಕ್ಕಿಯ ಬಳಕೆ ಅತ್ಯಂತ ಅಧಿಕವಾಗಿತ್ತು. ಅದನ್ನು ದೇವರ ಪ್ರಸಾದದಿಂದ ಹಿಡಿದು ಮನೆಯಲ್ಲಿ ಯಾವುದೇ ಸಿಹಿ ತಿನಿಸುಗಳನ್ನು ಮಾಡುವಾಗಲು ಏಲಕ್ಕಿ ಒಂದು ಪ್ರಮುಖ ವಸ್ತು ಎನಿಸಿಕೊಳ್ಳುತ್ತಿತ್ತು. ಅದರಲ್ಲೂ ಏಲಕ್ಕಿಯ ಘಮ ಯಾವುದೇ ತಿನಿಸಿನ ರುಚಿಯನ್ನು ಹೆಚ್ಚು ಮಾಡುತ್ತದೆ.

ಏಲಕ್ಕಿಯಲ್ಲಿ ಇರುವ ಸತ್ವಗಳು ನಗಣ್ಯ. ಪೊಟ್ಯಾಶಿಯಂ, ಕ್ಯಾಲ್ಶಿಯಂ, ಮ್ಯಾಗ್ನೀಶಿಯಂ ಜೊತೆಗೆ ವಿಟಮಿನ್ ಗಳಾದ ಬಿ೧, ಬಿ೬, ಬಿ ಸಿ ಹಾಗೂ ಫೈಬರ್ ಅಂಶಗಳನ್ನೂ ಕೂಡ ಹೊಂದಿದೆ. ಹಾಗಾದರೆ ಈ ಏಲಕ್ಕಿ ತಿಂದರೆ ಏನಾಗುತ್ತದೆ ಗೊತ್ತಾ?

ಬಾಯಿಯ ದುರ್ಗಂಧ ಒಂದು ದೊಡ್ಡ ಸಮಸ್ಯೆ. ಕೆಲವರಿಗೆ ಏನೇ ಮಾಡಿದರೂ ಬಾಯಿ ವಾಸನೆ ಬರುತ್ತಲೇ ಇರುತ್ತದೆ. ಅಂಥವರು ಬೆಳಿಗ್ಗೆ ಎದ್ದು ಹಲ್ಲುಜ್ಜುವ ಮೊದಲು ಒಂದೆರಡು ಏಲಕ್ಕಿ ಜೊತೆ ಪುದಿನ ಎಲೆಗಳನ್ನು ಹಾಕಿ ಚೆನ್ನಾಗಿ ಅಗಿಯಬೇಕು. ಇದನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಬಾಯಿಯ ವಾಸನೆ ನಿವಾರಣೆಯಾಗುತ್ತದೆ.

ಸರಿಯಾದ ಜೀರ್ಣಕ್ರಿಯೆಗೂ ಏಲಕ್ಕಿ ರಾಮಬಾಣ. ಊಟವಾದ ನಂತರ ಒಂದು ಅಥವಾ ಎರಡು ಏಲಕ್ಕಿಯನ್ನು ಬಾಯಿಯಲ್ಲಿ ಹಾಕಿಕೊಂಡು ಅಗಿಯುವುದರಿಂದ ಜೀರ್ಣಕ್ರಿಯೆ ಸರಿಯಾಗುತ್ತದೆ. ಹೊಟ್ಟೆಯಲ್ಲಿ ಯಾವುದೇ ರೀತಿಯ ಕಸಿವಿಸಿ ಆಗುತ್ತಿದ್ದರೆ ತಿಂದ ಆಹಾರ ಸರಿ ಇಲ್ಲದೇ ಹೊಟ್ಟೆ ಭಾರವೆನಿಸಿದರೂ ಕೂಡ ಏಲಕ್ಕಿ ತಿಂದರೆ ಕೂಡಲೇ ಆರಾಮವಾಗುತ್ತದೆ.

ಏಲಕ್ಕಿಯಲ್ಲಿ ಸೋಡಿಯಂ, ಫೈಬರ್ ಅಂಶಗಳೂ ಇರುವುದರಿಂದ ತೂಕ ಇಳಿಸಲೂ ಕೂಡ ಇದು ಸಹಾಯಕ. ಇನ್ನೋ ನಮಗೆ ದಿನವೂ ತಲೆ ನೋವು ಉಂಟಾಗುತ್ತಿದ್ದರೆ, ಮೈಕೈ ನೋವು ಕಾಣಿಸಿಕೊಳ್ಳುತ್ತಿದ್ದರೆ  ದಿನವೂ ಬೆಳಗ್ಗೆ ಒಂದೆರಡು ಏಲಕ್ಕಿಯನ್ನು ಅಗೆದು ತಿನ್ನುವುದರಿಂದ ಈ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಜೊತೆಗೆ ಹೈ ಬಿಪಿ ಇರುವವರು ಏಲಕ್ಕಿಯನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಬಿಪಿ ಕೂಡ ನಿಯಂತ್ರಣಕ್ಕೆ ಬರುತ್ತದೆ. ಹಾಗಾಗಿ ಇಂಥ ನೂರಾರು ಪ್ರಯೋಜನಗಳನ್ನು ಹೊಂದಿರುವ ಏಲಕ್ಕಿಯನ್ನು ತಪ್ಪದೇ ಸೇವಿಸಿ. ನಿಮ್ಮ ಆರೋಗ್ಯದಲ್ಲಿಯೂ ಸಾಕಷ್ಟು ಸುಧಾರಣೆಯಾಗುವುದನ್ನು ಗಮನಿಸಿ.