ಮಾಜಿ ಪತಿ ನಾಗಚೈತನ್ಯಗೆ ನೇರವಾಗಿಯೇ ಸವಾಲೆಸೆದ ಸಮಂತಾ..

ಸೌತ್ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ಜೋಡಿ ಎನಿಸಿಕೊಂಡಿದ್ದ ನಾಗಚೈತನ್ಯ ಹಾಗೂ ಸಮಂತಾ ಇಬ್ಬರೂ ದೂರಾಗಿ ಸಾಕಷ್ಟು ತಿಂಗಳುಗಳೇ ಕಳೆದಿದ್ದರೂ ಸಹ ಆಗಾಗ ಇಬ್ಬರ ವಿಚಾರ ಸುದ್ದಿಯಾಗುತ್ತಲೇ ಇದೆ.. ಇದೀಗ ಸಮಂತಾ ತಮ್ಮ ಮಾಜಿ ಪತಿ ನಾಗಚೈತನ್ಯಗೆ ನೇರವಾಗಿಯೇ ಸವಾಲೆಸೆದಿದ್ದಾರೆ.. ಹೌದು ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ಸಹ ಒಂದೇ ಇಂಡಸ್ಟ್ರಿಯಲ್ಲಿ ಇರುವುದರಿಂಡ ಆಗಾಗ ಮುಖಾಮುಖಿಯಾಗಲೇ ಬೇಕಾದ ಸಂದರ್ಭ ಎದುರಾಗುತ್ತದೆ.. ಈಗಲೂ ಸಹ ಅಂತಹುದೇ ಒಂದು ಸನ್ನಿವೇಶ ಎದುರಾಗಿದ್ದು ಅತಿ ಹೆಚ್ಚು ಪ್ರೀತಿಸಿ ಮದುವೆಯಾಗಿ ನಂತರ ದೂರಾಗಿ ಈಗ ಮತ್ತೆ ಎದುರಾಳಿಗಳಾಗಿ ನಿಂತಿದ್ದಾರೆ..

ಹೌದು ನಟಿ ಸಮಂತಾ ಮಾಜಿ ಪತಿ ನಾಗಚೈತನ್ಯ ಜತೆಗಿನ ಸಂಬಂಧಕ್ಕೆ ಈಗಾಗಲೇ ಅಂತ್ಯ ಹಾಡಾಗಿದೆ.. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿದ್ದ ನಾಗ ಚೈತನ್ಯ ಜೊತೆಗಿನ ಎಲ್ಲಾ ಫೋಟೋಗಳನ್ನೂ ಸಹ ಡಿಲೀಟ್ ಮಾಡಿದ್ದಾರೆ. ಅಷ್ಟರ ಮಟ್ಟಿಗೆ ಅವರ ನೆನಪುಗಳನ್ನು ಅಳಿಸಿ ಹಾಕಲು ಪ್ರಯತ್ನ ಮಾಡಿದ್ದಾರೆ.. ಆದರೆ ಈಗ ಆ ಜೋಡಿ ಮತ್ತೆ ಸಮಂತಾ ಮಾಜಿ ಪತಿಗೆ ಎದುರಾಳಿಯಾಗಿ ನಿಂತಿದ್ದಾರೆ..

ಹೌದು ವಯಕ್ತಿಕ ಬದುಕಿನ ಏಲ್ಲಾ ಕಹಿ ಘಟನೆಗಳನ್ನ ಮರೆತು ಸಿನಿಮಾಗಳ ಮುಖ ಮಾಡಿರೋ ಈ ಇಬ್ಬರು ತಾರೆಯರು. ಇದೀಗ ಒಬ್ಬರನೊಬ್ಬರು ಎದುರು ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಬ್ಬರು ಒಂದೇ ಕ್ಷೇತ್ರದಲ್ಲಿ ಇರುವುದರಿಂದ ಮುಖಾಮುಖಿ ಆಗೋದು ಅನಿವಾರ್ಯವಾಗಿದೆ. ಚಿತ್ರರಂಗದಲ್ಲಿ ನಾಗಚೈತನ್ಯ ಸಿನಿಮಾಗೆ ಫೈಟ್ ಕೊಡೊದಕ್ಕೆ ಸಮಂತಾ ಸಜ್ಜಾಗಿದ್ದಾರೆ.ತಮ್ಮ ಸಿನಿಮಾಗಳ ಮೂಲಕ ಸಮಂತಾ ಮತ್ತು ನಾಗಚೈತನ್ಯ ಮತ್ತೆ ಮುಖಾಮುಖಿಯಾಗುತ್ತಿದ್ದಾರೆ..

ಒಂದು ದಿನದ ಅಂತರದಲ್ಲಿ ಮಾಜಿ ಪತಿ ಪತ್ನಿಯ ಸಿನಿಮಾ ರಿಲೀಸ್ ಆಗಲಿದೆ.. ನಾಗಚೈತನ್ಯ ನಟನೆಯ ಲಾಲ್‌ಸಿಂಗ್ ಚಡ್ಡಾ ಮತ್ತು ಸಮಂತಾ ನಟನೆಯ ಯಶೋದ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಎದುರಾಗಲು ರೆಡಿಯಾಗಿದ್ದಾರೆ.. ಹೌದು ಈ ಹಿಂದೆ ಕೆಜಿಎಫ್ ಸಿನಿಮಾ ಎದುರು ಬಿಡುಗಡೆಯಾಗಬೇಕಿದ್ದ ಆಮೀರ್ ಖಾನ್ ನಟನೆಯ ಲಾಲ್‌ಸಿಂಗ್ ಚಡ್ಡಾ ತಮ್ಮ ನಿರ್ಧಾರವನ್ನು ಬದಲಿಸಿ ಮೇ ಹನ್ನೊಂದಕ್ಕೆ ದಿನಾಂಕ ನಿಗದಿ ಮಾಡಿಕೊಂಡಿದ್ದರು..

ಇತ್ತ ಸಮಂತಾ ನಟನೆಯ ಯಶೋದ ಸಿನಿಮಾ ಕೂಡ ಮೇ ಹನ್ನೆರೆಡರಂದು ತೆರೆಗೆ ಬರುತ್ತಿದೆ.. ಆಮೀರ್ ಖಾನ್ ನಟನೆಯ ಈ ಚಿತ್ರದಲ್ಲಿ ನಾಗಚೈತನ್ಯ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.. ಚಿತ್ರದಲ್ಲಿ ಮೇಜರ್ ರೋಲ್ ಪ್ಲೇ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಚಿತ್ರವಾಗಿ ರಿಲೀಸ್ ಆಗ್ತಿರೋ ಯಶೋದ ಚಿತ್ರದ ಟ್ರೈಲರ್ ಗಳಿಗೆ ಈಗಾಗಲೇ ಫಿದಾ ಆಗಿರೋ ಅಭಿಮಾನಿಗಳಿಗೆ ಸಿನಿಮಾಗಾಗಿ ಎದುರು ನೋಡ್ತಿದ್ದಾರೆ.. ಒಟ್ಟಿನಲ್ಲಿ ರಿಲೀಸ್‌ಗೂ ಮುಂಚೆಯೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಈ ಎರಡು ಚಿತ್ರಗಳಲ್ಲಿ ಪ್ರೇಕ್ಷಕ ಪ್ರಭುಗಳು ಯಾವ ಸಿನಿಮಾವನ್ನು ಗೆಲ್ಲಿಸುವರೋ ಕಾದು ನೋಡಬೇಕಿದೆ..