ತೆಲುಗು ಮಾದ್ಯಮದಲ್ಲಿ ರಾಧಿಕಾ ಬಗ್ಗೆ ಮನಬಿಚ್ಚಿ ಮಾತನಾಡಿದ ಯಶ್.. ನಿಜಕ್ಕೂ ಇದು ದೊಡ್ಡಗುಣ ಎಂದರೆ..

ಸಧ್ಯ ಭಾರತದ ಚಿತ್ರರಂಗದಲ್ಲಿ ನಮ್ಮ ಕನ್ನಡದ ಸಿನಿಮಾ ಕೆಜಿಎಫ್ ನದ್ದೇ ಹವಾ ಎಂದರೆ ತಪ್ಪಾಗಲಾರದು.. ಬಾಲಿವುಡ್ ನಲ್ಲಿ ಸಾಕಷ್ಟು ದಾಖಲೆಗಳನ್ನು ಅಳಿಸಿ ಹೊಸ ದಾಖಲೆಗಳನ್ನು ಬರೆಯುತ್ತಿದೆ.. ಇನ್ನು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಕೋಟಿ ಕೋಟಿ ಗಳಿಕೆ ಕಾಣುತ್ತಿದ್ದು ಕನ್ನಡ ಸಿನಿಮಾ ಇಂಡಸ್ಟ್ರಿಯ ಹೊಸ ಯುಗದ ಆರಂಭವೆನ್ನಬಹುದು.. ಇನ್ನು ಸಿನಿಮಾ ಬಿಡುಗಡೆಯಾದ ನಂತರ ಯಶ್ ಅವರು ಎಲ್ಲಿಯೂ ಕಾಣ ಸಿಕ್ಕಿರಲಿಲ್ಲ.. ಆದರೆ ನಿನ್ನೆ ರಾಧಿಕಾ ಪಂಡಿತ್ ಅವರು ಯಶ್ ಅವರ ಜೊತೆಗಿನ ಫೋಟೋ ಹಂಚಿಕೊಂಡಿದ್ದು ಯಶ್ ಸಧ್ಯ ಕಳೆದ ಸಾಕಷ್ಟು ತಿಂಗಳ ಬಿಡುವಿಲ್ಲದ ಕೆಲಸದ ನಡುವೆ ಇದೀಗ ಸಂಪೂರ್ಣ ರಿಲ್ಯಾಕ್ಸ್ ಮೂಡ್ ನಲ್ಲಿದ್ದು ಪತ್ನಿ ಹಾಗೂ ಮಕ್ಕಳ ಜೊತೆ ಗೋವಾದಲ್ಲಿ ಸಮಯ ಕಳೆಯುತ್ತಿದ್ದಾರೆ..

ಇನ್ನು ಇದೀಗ ಸಾಮಾಜಿಕ ಜಾಲತಾಣದಲ್ಲಿ ಯಶ್ ಅವರು ತೆಲುಗು ಮಾದ್ಯಮವೊಂದರಲ್ಲಿ ರಾಧಿಕಾ ಪಂಡಿತ್ ಅವರ ಬಗ್ಗೆ ಆಡಿರುವ ಮಾತುಗಳು ವೈರಲ್ ಆಗಿದ್ದು ನಿಜಕ್ಕೂ ಯಶ್ ಅವರ ದೊಡ್ಡತನ ಎನ್ನುಬಹುದು.. ಹೌದು ಕೆಜಿಎಫ್ ಬಿಡುಗಡೆಗೂ ಮುನ್ನ ಯಶ್ ಹಾಗೂ ಚಿತ್ರತಂಡ ಸಾಲು ಸಾಲು ಸಂದರ್ಶನಗಳನ್ನು ನೀಡಿದ್ದರು.. ಇನ್ನು ಕರ್ನಾಟಕದಲ್ಲಿ ಸಿನಿಮಾ ಬಗ್ಗೆ ಮಾತ್ರ ಸಂದರ್ಶನದಲ್ಲಿ ಕೇಳಿದರೆ ಬೇರೆ ರಾಜ್ಯಗಳಲ್ಲಿ ಯಶ್ ಅವರಿಗೆ ಅವರ ಕುಟುಂಬ ಹಾಗೂ ವ್ಯಯಕ್ತಿಕ ಜೀವನದ ಬಗ್ಗೆಯೂ ಕುತೂಹಲದಿಂದ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದರು..

ಆ ಸಮಯದಲ್ಲಿ ಯಶ್ ಅವರು ರಾಧಿಕಾ ಪಂಡಿತ್ ಅವರ ಬಗ್ಗೆ ಮಾತನಾಡಿದ್ದು ನಿಜಕ್ಕೂ ಒಬ್ಬ ಗಂಡ ತನ್ನ ಹೆಂಡತಿಗೆ ಯಾವ ರೀತಿ ಗೌರವ ನೀಡಬೇಕೆಂಬುದನ್ನು ತೋರಿದಂತಿತ್ತು.. ಹೌದು ಮನೆಯಲ್ಲಿ ನಿಮಗೆ ಸಪೋರ್ಟ್ ಹೇಗಿದೆ ಎಂದು ಕೇಳಿದಾಗ ಉತ್ತರ ನೀಡಿದ ಯಶ್ ಅವರು “ರಾಧಿಕಾ ಅವರಿಂದ ನನಗೆ ಹೇಳಿಕೊಳ್ಳಲಾಗದಷ್ಟು ಸಪೋರ್ಟ್ ಸಿಗ್ತಾ ಇದೆ.. ನಾನು ಡೌನ್ ಆದಾಗ ಹತ್ತಿರದವರ ವಿಚಾರದಲ್ಲಿ ನೊಂದುಕೊಂಡಾಗ ನನ್ನನ್ನು ಮತ್ತೆ ಮೊದಲಿನಂತೆ ಮಾಡೋದೆ ಅವರು..

ಅವರು ನನಗೆ ಬಿಗ್ ಸಪೋರ್ಟ್.. ಅವರು ನಾನು ಒಟ್ಟಿಗೆ ಈ ಜರ್ನಿ ಆರಂಭಿಸಿದ್ದು.. ಕಿರುತೆರೆಯಿಂದ ಒಟ್ಟಿಗೆ ಬೆಳೆದಿದ್ದು ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯ ದೊಡ್ಡ ನಟಿ.. ಆದರೂ ಸಹ ನನಗಾಗಿ ಮಕ್ಕಳಿಗಾಗಿ ಬ್ರೇಕ್ ಪಡೆದು ತಮ್ಮ ಕೆರಿಯರ್ ಅನ್ನು ಸ್ಯಾಕ್ರಿಫೈಸ್ ಮಾಡಿದ್ದಾರೆ.. ನನ್ನ ಪ್ರತಿ ಹಂತದಲ್ಲಿಯೂ ಜೊತೆಗಿದ್ದಾರೆ.. ಇನ್ನು ನನಗೆ ಕನ್ನಡ ಬಿಟ್ಟು ಬೇರೆ ಯಾವ ಭಾಷೆಯೂ ಸರಿಯಾಗಿ ಬರ್ತಾ ಇರ್ಲಿಲ್ಲ.. ಈಗಲೂ ಸಹ ಸರಿಯಾಗಿ ಬರೋದಿಲ್ಲ..

ಆದರೆ ನನಗೆ ನನ್ನ ಮೇಲೆ ಒಂದು ಕಾನ್ಫಿಡೆನ್ಸ್ ಇದೆ.. ಆ ನಂಬಿಕೆಯಿಂದಲೇ ನಾನು ಪ್ರಯತ್ನಗಳನ್ನು ಮಾಡ್ತೀನಿ.. ನಾನು ಇಂಗ್ಲೀಷ್ ನಲ್ಲಿ ಮಾತನಾಡುವಾಗ ಏನಾದ್ರು ತಪ್ಪು ಮಾಡಿದ್ರೆ ಅವಳು ಹೀಗಲ್ಲಾ ಹಾಗೆ ಮಾತಾಡು ಅಂತು ತಿದ್ದುತ್ತಾರೆ.. ಈಗಲೂ ಸಹ ನನ್ನಲ್ಲಿ ಅನೇಕ ಒಳ್ಳೆಯ ಬೆಳವಣಿಗೆ ಗಳಿಗೆ ಅವಳೇ ಕಾರಣ ಎಂದು ಯಾವುದೇ ಸಣ್ಣ ಅಹಂ ಭಾವವೂ ಇಲ್ಲದೇ ಮಡದಿ ಬಗ್ಗೆ ಮನತುಂಬಿ ಮಾತನಾಡಿದ್ದಾರೆ..

ಹೌದು ಯಶ್ ಅವರ ಮಾತು ಕೇಳಿದ ನಿರೂಪಕಿ ಸಹ ರಾಧಿಕಾ ಪಂಡಿತ್ ಅವರ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದು ನಿಜಕ್ಕೂ ಗಂಡ ಹೆಂಡತಿ ಒಟ್ಟಾಗಿ ಜೀವನದಲ್ಲಿ ಬೆಳೆದು ಒಬ್ಬರಿಗೊಬ್ಬರು ಜೊತೆಯಾಗಿ ನಿಂತು ಒಬ್ಬರ ಸಕ್ಸಸ್ ನಲ್ಲಿ‌ ಮತ್ತೊಬ್ಬರು ಸಂತೋಷ ಕಾಣುವುದಕ್ಕೆ ಯಶ್ ಹಾಗೂ ರಾಧಿಕಾ ಪಂಡಿತ್ ಜೋಡಿ ನೈಜ್ಯ ಉದಾಹರಣೆ ಎನ್ನಬಹುದು..