ನಟ ಯಶ್ ಧರಿಸುವ ಈ ವಾಚ್ ನ ಅಸಲಿ ಬೆಲೆ ಎಷ್ಟು ಗೊತ್ತಾ? ಶಾಕ್‌ ಆದ ನೆಟ್ಟಿಗರು.

ನಟ ಯಶ್ ಕೆಜಿಎಫ್ ಸಿನಿಮಾ ಮೂಲಕ ಗ್ಲೋಬಲ್ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಯಶ್ ಅವರ ಬಗ್ಗೆ ಇಂದು ಗೊತ್ತಿಲ್ಲ ಎಂದು ಹೇಳುವವರ ಸಂಖ್ಯೆ ತುಂಬಾ ಕಡಿಮೆ. ರಾಕಿ ಭಾಯ್ ಎಂದೇ ಎಲ್ಲರೂ ಯಶ್ ಅವರನ್ನು ಗುರುತಿಸುತ್ತಿದ್ದರೆ. ಅಷ್ಟರ ಮಟ್ಟಿಗೆ ಯಶ್ ಅವರ ಜನಪ್ರಿಯತೆ ಇದೆ. ಇಂದು ಯಶ್ ಅವರು ಇಡೀ ಭಾರತ ಚಿತ್ರರಂಗ ತಮ್ಮತ್ತ ತಿರುಗಿ ನೋಡುವ ಹಾಗೆ ಮಾಡಿದ್ದಾರೆ. ಕನ್ನಡ ಚಿತ್ರರಂಗವನ್ನು ಮುಂದಿನ ಲೆವೆಲ್ ತೆಗೆದುಕೊಂಡು ಹೋಗುವಲ್ಲಿ ಸಾಗುತ್ತಿದ್ದಾರೆ. ನಟ ಯಶ್ ಅವರು ಸಿನಿಮಾದ ಪಾತ್ರಗಳಲ್ಲಿ ಕಾಣುವಷ್ಟೇ ಸ್ಟೈಲಿಶ್ ಆಗಿ ತೆರೆಯ ಹಿಂದೆ ನಿಜ ಜೀವನದಲ್ಲಿ ಸಹ ಇದ್ದಾರೆ. ಇತ್ತೀಚೆಗೆ ನಡೆದ ಕೆಜಿಎಫ್2 ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಯಶ್ ಅವರು ಧರಿಸಿದ್ದ ವಾಚ್, ಎಲ್ಲರ ಗಮನ ಸೆಳೆದಿದೆ. ಆ ವಾಚ್ ನ ಬೆಲೆ ಎಷ್ಟು ಕೋಟಿ ಎಂದು ತಿಳಿದರೆ ನೀವು ಶಾಕ್ ಆಗುವುದು ಗ್ಯಾರಂಟಿ.

ನಟ ಯಶ್ ಅವರು ಹುಟ್ಟಿದ್ದು ಸಾಮಾನ್ಯವಾದ ಮಧ್ಯಮವರ್ಗದ ಕುಟುಂಬದಲ್ಲಿ. ಕಷ್ಟದಲ್ಲೇ ಹುಟ್ಟಿಬೆಳೆದ ಯಶ್ ಅವರು, ಜೀವನದಲ್ಲಿ ಏನನ್ನಾದರೂ ದೊಡ್ಡದಾಗಿ ಸಾಧಿಸಬೇಕು ಎನ್ನುವ ಕನಸುಗಳ ಜೊತೆಯಲ್ಲೇ ಬೆಳೆದರು, ಇವರ ಕನಸು ಕರೆತಂದಿದ್ದು ನಟನೆಯ ಕಡೆಗೆ. ಮೈಸೂರಿನಲ್ಲಿ ನಾಟಕಗಳಲ್ಲಿ ಸಹ ಅಭಿನಯಿಸುತ್ತಿದ್ದ ಯಶ್ ಅವರು, ಸಿನಿಮಾದಲ್ಲಿ ನಟಿಸಬೇಕು ಎನ್ನುವ ಕನಸ್ಸಿನಿಂದ ಬೆಂಗಳೂರಿಗೆ ಬಂದರು. ಇಲ್ಲಿ ಅವರಿಗೆ ಅವಕಾಶ ಸಿಗುವುದು ಅಷ್ಟು ಸುಲಭ ಆಗಿರಲಿಲ್ಲ. ಸಣ್ಣ ಪುಟ್ಟ ಪಾತ್ರಗಳು ಹಾಗು ಧಾರಾವಾಹಿಗಳಲ್ಲಿ ಮೊದಲು ನಟಿಸಿದರು ಯಶ್. ನಂತರ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು.

ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ನಾಯಕನಾದರು ಯಶ್, ಅದಾದ ಬಳಿಕ ರಾಕಿ ಹೆಸರಿನ ಸಿನಿಮಾಗೆ ಸೋಲೋ ಹೀರೋ ಆದರು. ಯಶ್ ಅವರಲ್ಲಿದ್ದ ಟ್ಯಾಲೆಂಟ್ ಮತ್ತು ಡ್ಯಾನ್ಸ್ ಸ್ಕಿಲ್ಸ್ ಒಂದರ ಮೇಲೊಂದು ಪಾತ್ರಗಳು ಸಿಗುವ ಹಾಗೆ ಮಾಡಿತು. ಒಳ್ಳೆಯ ಸಿನಿಮಾಗಳನ್ನು ಮಾಡಿಕೊಂಡು ಬರುತ್ತಿದ್ದ ಯಶ್ ಅವರ ಕೆರಿಯರ್ ಗೆ ಟರ್ನಿಂಗ್ ಪಾಯಿಂಟ್ ನೀಡಿದ್ದು, ಕಿರಾತಕ ಸಿನಿಮಾ, ಈ ಸಿನಿಮಾ ಸೂಪರ್ ಹಿಟ್ ಆಗಿ ಜನರಿಗೆ ತುಂಬಾ ಹತ್ತಿರವಾಗಿಬಿಟ್ಟರು ನಟ ಯಶ್. ಇದಾದ ಬಳಿಕ ತೆರೆಕಂಡ ರಾಜಾಹುಲಿ ಸಿನಿಮಾ ಇನ್ನು ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟಿತು.

ಅದಾದ ಬಳಿಕ ಯಶ್ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಸೇರಿದಂತೆ ಸೂಪರ್ ಹಿಟ್ ಸಿನಿಮಾಗಳಿಗೆ ನಾಯಕನಾದರು. ಯಶ್ ಅವರ ಕೆರಿಯರ್ ಅನ್ನು ಸಂಪೂರ್ಣವಾಗಿ ಬದಲಾಯಿಸಿ, ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಾಡಿದ್ದು, ಕೆಜಿಎಫ್ ಸಿನಿಮಾ ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿದ ಈ ಸಿನಿಮಾ, ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತೆರೆಕಂಡು, ಭಾರಿ ಸಕ್ಸಸ್ ಕಂಡಿತು. ಎಲ್ಲಾ ಚಿತ್ರರಂಗವೂ ಕರ್ನಾಟಕದ ಕಡೆಗೆ ತಿರುಗಿ ನೋಡುವ ಹಾಗೆ ಮಾಡಿತು ಕೆಜಿಎಫ್.3 ವರ್ಷಗಳ ಹಿಂದೆ ತೆರೆಕಂಡ ಕೆಜಿಎಫ್ ಕ್ರೇಜ್ ಇಂದಿಗೂ ಹಾಗೆ ಇದೆ. ಈಗ ಕೆಜಿಎಫ್2 ಬಿಡುಗಡೆಯಾಗಲು ಸಿದ್ಧವಾಗಿದೆ.

ಕೆಜಿಎಫ್2 ಸಿನಿಮಾ ಏಪ್ರಿಲ್ 14ರಂದು ತೆರೆಕಾಣಲು ಸಜ್ಜಾಗಿದೆ. ಇತ್ತೀಚೆಗಷ್ಟೇ ಸಿನಿಮಾ ಟ್ರೈಲರ್ ಅದ್ಧೂರಿಯಾಗಿ ಬೆಂಗಳೂರಿನಲ್ಲಿ ಲಾಂಚ್ ಆಯಿತು. ಈ ಕಾರ್ಯಕ್ರಮಕ್ಕೆ ಇಡೀ ಕೆಜಿಎಫ್2 ತಂಡ, ನಟ ಶಿವ ರಾಜ್ ಕುಮಾರ್, ಸಂಜಯ್ ದತ್, ರವಿನಾ ಟಂಡನ್, ಯಶ್, ರಾಧಿಕಾ ಪಂಡಿತ್, ನಿರ್ದೇಶಕ ಪ್ರಶಾಂತ್ ನೀಲ್ ಸೇರಿದಂತೆ ಎಲ್ಲರೂ ಹಾಜರಿದ್ದರು. ಬಾಲಿವುಡ್ ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ಈ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಈ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ನಟ ಯಶ್ ಅವರು ಬಹಳ ಸ್ಟೈಲಿಶ್ ಆಗಿ ಬಂದಿದ್ದರು.

ಬ್ಲ್ಯಾಕ್ ಅಂಡ್ ಬ್ಲ್ಯಾಕ್ ಧರಿಸಿ ಬಂದಿದ್ದ ನಟ ಯಶ್ ಅವರ ಕೈಯಲ್ಲಿದ್ದ ವಾಚ್ ಎಲ್ಲರ ಗಮನ ಸೆಳೆಯಿತು. ಯಶ್ ಅವರು ಧರಿಸಿದ್ದ ಈ ವಾಚ್ ಪ್ರಪಂಚದ ಅತ್ಯಂತ ದುಬಾರಿ ಬ್ರ್ಯಾಂಡ್ ಗಳಲ್ಲಿ ಒಂದಾಗಿದೆ. ಪಕೆಟ್ ಫಿಲಿಪ್ ಬ್ರ್ಯಾಂಡ್ ನ ದುಬಾರಿ ವಾಚ್ ಅನ್ನು ಯಶ್ ಅವರು ಧರಿಸಿದ್ದರು, ಈ ವಾಚ್ ನ ಬೆಲೆ ಬರೋಬ್ಬರಿ 3.50 ಕೋಟಿ ರೂಪಾಯಿ ಆಗಿದೆ. ಈ ವಾಚ್ ಅನ್ನು ರೋಸ್ ಗೋಲ್ಡ್ ಇಂದ ಮಾಡಿದ್ದು, ಅತ್ಯಂತ ಉತ್ಕೃಷ್ಟವಾದ ಲೋಹವನ್ನು ಸೇರಿಸಲಾಗಿದೆ. ಹಲವು ವರ್ಷಗಳಿಂದ ಈ ಬ್ರ್ಯಾಂಡ್ ಚಾಲ್ತಿಯಲ್ಲಿದ್ದು, ಇನ್ನು ದುಬಾರಿ ಬೆಲೆಯಲ್ಲಿ ಹಾಗೂ ಡಿಸೈನ್ ಗಳಲ್ಲಿ ವಾಚ್ ಸಿಗುತ್ತದೆ. ಈ ವಾಚ್ ನ ಬೆಲೆ ಕೇಳಿ ನೆಟ್ಟಿಗರು ಶಾಕ್ ಆಗಿದ್ದು, ಬಾಯಿಮೇಲೆ ಬೆರಳಿಟ್ಟುಕೊಂಡಿದ್ದಾರೆ.