ರಾಕಿ ಭಾಯ್ ಯಶ್ ಕೆಜಿಎಫ್2 ಸಿನಿಮಾಗೆ ಪಡೆದಿರುವ ಅಸಲಿ ಸಂಭಾವನೆ ಎಷ್ಟು ಗೊತ್ತಾ? ತಿಳಿದರೆ ನಿಜಕ್ಕೂ ಶಾಕ್ ಆಗ್ತೀರಾ..

ನಟ ಯಶ್ ಅವರು ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಎನ್ನಿಸಿಕೊಂಡಿದ್ದಾರೆ. ಕೆಜಿಎಫ್2 ಪ್ರಪಂಚದಲ್ಲಿ ಎಷ್ಟರ ಮಟ್ಟಿಗೆ ಇದೆ ಎನ್ನುವುದು ಈಗಾಗಲೇ ನಮಗೆಲ್ಲ ಗೊತ್ತಿದೆ. ಕೆಜಿಎಫ್ ಚಾಪ್ಟರ್ 1 ಬಿಡುಗಡೆಯಾದ ನಂತರ ಕೆಜಿಎಫ್2 ಬಗ್ಗೆ ಕ್ರೇಜ್ ಹೆಚ್ಚಾಗಿಯೇ ಇತ್ತು. ರಾಕಿ ಭಾಯ್ ಮತ್ತು ಅಧೀರನ ನಡುವೆ ನಡೆಯುವ ಯುದ್ಧ ನೋಡಲು ವೀಕ್ಷಕರು ಕಾತುರರಾಗಿ ಕಾಯುತ್ತಿದ್ದರು. ಇದೀಗ ಕೆಜಿಎಫ್ 2 ದೃಶ್ಯಕಾವ್ಯವನ್ನು ನೋಡಲು ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ಇದೇ ಏಪ್ರಿಲ್ 14ರಂದು ಕೆಜಿಎಫ್2 ಸಿನಿಮಾ ತೆರೆಕಾಣಲಿದೆ. ಈ ಸಿನಿಮಾ ಬಗ್ಗೆ ಜನರಲ್ಲಿ ಭಾರಿ ಕುತೂಹಲ ಇದೆ. ಇನ್ನು ಕೆಜಿಎಫ್2 ಸಿನಿಮಾಗೆ ನಟ ಯಶ್ ಪಡೆದಿರುವ ಸಂಭಾವನೆ ಎಷ್ಟು ಎನ್ನುವ ಸುದ್ದಿಯೊಂದು ಈಗ ಭಾರಿ ಚರ್ಚೆಯಾಗುತ್ತಿದೆ. ನಿಜಕ್ಕೂ ರಾಕಿ ಭಾಯ್ ಕೆಜಿಎಫ್2 ಗೆ ಪಡೆದಿರುವ ಸಂಭಾವನೆ ಎಷ್ಟು ಗೊತ್ತಾ..

ದೊಡ್ಡದಾಗಿ ಸಾಧನೆ ಮಾಡಬೇಕು ಎಂದು ಬೆಂಗಳೂರಿಗೆ ಬಂದ ಹುಡುಗ ಯಶ್, ಅಂದು ಅವಕಾಶಕ್ಕಾಗಿ ಪರದಾಡುತ್ತಿದ್ದ ಯಶ್ ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್. ಅಂದು ಒಂದು ಪೇಮೆಂಟ್ ಗಾಗಿ ಎದುರು ನೊಡುತ್ತಿದ್ದ ಯಶ್ ಅವರು ಇಂದು ಕೋಟಿ ಕೋಟಿ ಪೇಮೆಂಟ್ ಪಡೆಯುಟ್ಟಿದ್ದಾರೆ. ಇಡೀ ಭಾರತ ಚಿತ್ರರಂಗದಲ್ಲಿ ರಾಕಿ ಭಾಯ್ ಎಂದೇ ಖ್ಯಾತಿಯಾಗಿದ್ದಾರೆ ನಟ ಯಶ್. ಒಂದು ಸಿನಿಮಾಗೆ ಯಶ್ ಅವರು ದುಬಾರಿ ಸಂಭಾವನೆಯನ್ನೆ ಪಡೆಯುತ್ತಾರೆ. ಅದರಲ್ಲೂ ಕೆಜಿಎಫ್ ಸಿನಿಮಾ ಬಿಡುಗಡೆಯಾದ ನಂತರ ಯಶ್ ಅವರಿಗೆ ಬೇಡಿಕೆ ಇನ್ನು ಹೆಚ್ಚಾಗಿದೆ.

ಹಾಗಾಗಿ ಕೆಜಿಎಫ್ ಚಾಪ್ಟರ್2 ಗೆ ಯಶ್ ಅವರು ಪಡೆದಿರುವ ಸಂಭಾವನೆ ಎಷ್ಟಿರಬಹುದು ಎನ್ನುವ ಚರ್ಚೆ ಈಗ ಎಲ್ಲೆಡೆ ಹಾಟ್ ಟಾಪಿಕ್ ಆಗಿದೆ. ನೀವೇನಾದರೂ ಯಶ್ ಅವರು ಪಡೆದಿರುವ ಸಂಭಾವನೆ ಎಷ್ಟು ಕೋಟಿ ಎಂದು ಹುಡುಕುತ್ತಾ ಹೋದರೆ ಖಂಡಿತವಾಗಿಯೂ ಯಾವುದೇ ಮಾಹಿತಿ ಸಿಗುವುದಿಲ್ಲ, ಯಶ್ ಅವರು ಇಷ್ಟು ಹಣ ಪಡೆದಿದ್ದಾರೆ ಎಂದು ಲೆಕ್ಕವು ಸಿಗುವುದಿಲ್ಲ. ಈ ರೀತಿ ಯಾಕೆ ಎಂದು ನಿಮ್ಮಲ್ಲಿ ಪ್ರಶ್ನೆ ಮೂಡಬಹುದು. ಇದಕ್ಕೆ ಕಾರಣ ಏನೆಂದರೆ, ಇಲ್ಲನ ಅಸಲಿ ವಿಚಾರ ಏನು ಅಂದ್ರೆ, ಯಶ್ ಅವರು ಕೆಜಿಎಫ್2 ಸಿನಿಮಾಗೆ ಸಂಭಾವನೆಯನ್ನೇ ಪಡೆದಿಲ್ಲ. ಇದು ಆಶ್ಚರ್ಯ ಎನ್ನಿಸಿದರು ನಿಜವೇ ಆಗಿದೆ..

ಹೌದು ನಟ ಯಶ್ ಕೆಜಿಎಫ್2 ಸಿನಿಮಾದಲ್ಲಿ ನಟಿಸಲು ಒಂದು ರೂಪಾಯಿ ಸಂಭಾವನೆಯನ್ನು ಸಹ ಪಡೆದುಕೊಂಡಿಲ್ಲ. ಹಾಗಿದ್ದರೆ ಯಶ್ ಅವರು ಸಂಭಾವನೆ ಪಡೆಯದೆಯೇ ಕೆಜಿಎಫ್ 2 ನಲ್ಲಿ ನಟಿಸಿದ್ದಾರಾ? ಈಗಾಗಲೇ ಚಿತ್ರೀಕರಣ ಮುಗಿದು ಸಿನಿಮಾ ಬಿಡುಗಡೆ ಅಗೋದಕ್ಕೆ ರೆಡಿ ಇದೆ, ಎಂದು ನೀವು ಅಂದುಕೊಳ್ಳಬಹುದು. ಇಲ್ಲಿ ಕೂಡ ಅಸಲಿ ವಿಚಾರ ಮತ್ತು ಮಾಸ್ಟರ್ ಪ್ಲಾನ್ ಬೇರೆಯೇ ಇದೆ. ನಟ ಯಶ್ ಅವರು ಸಂಭಾವನೆ ಪಡೆದುಕೊಂಡಿಲ್ಲ, ಬದಲಾಗಿ ಸಿನಿಮಾ ಬಿಡುಗಡೆಯಾದ ನಂತರ ಬರುವ ಹಣದಲ್ಲಿ ಶೇರ್ ಪಡೆದುಕೊಳ್ಳಲಿದ್ದಾರೆ.

ಹೌದು.. ಈಗ ಯಶ್ ಅವರು ಯಾವುದೇ ಸಂಭಾವನೆ ಪಡೆದುಕೊಂಡಿಲ್ಲ. ಆದರೆ ಕೆಜೆಎಫ್2 ಬಿಡುಗಡೆಯಾದ ನಂತರ, ಸಿನಿಮಾ ಎಷ್ಟು ಹಣಗಳಿಕೆ ಮಾಡುತ್ತದೆಯೋ, ಅದರಲ್ಲಿ ಇಂತಿಷ್ಟು ಪರ್ಸೆಂಟ್ ಎಂದು ಯಶ್ ಅವರು ಶೇರ್ ಪಡೆದುಕೊಳ್ಳಲಿದ್ದಾರೆ. ಸಂಭಾವನೆ ಎಂದರೆ ಇಷ್ಟೇ ಹಣ ಎಂದು ಸಿನಿಮಾ ಬಿಡುಗಡೆ ಆಗುವ ಮೊದಲೇ ನಿಗದಿ ಮಾಡಿ ಕೊಡಲಾಗುತ್ತದೆ. ಅದಾದ ಬಳಿಕ ಕಲಾವಿದರಿಗೆ ಹಣ ನೀಡಲಾಗುವುದಿಲ್ಲ. ಕೆಲವೊಬ್ಬರು ಉದಾರಿ ಪ್ರೊಡ್ಯೂಸರ್ ಗಳಿದ್ದರೆ, ಸಿನಿಮಾ ಚೆನ್ನಾಗಿ ಕಲೆಕ್ಷನ್ ಮಾಡಿದಾಗ, ಕಲಾವಿದರಿಗೂ ಲಾಭದ ಹಣ ಕೊಡುತ್ತಾರೆ. ಆದರೆ ಹಲವರು ಕೊಡುವುದಿಲ್ಲ. ಹಾಗಾಗಿ ಸಂಭಾವನೆಗಿಂತ ಶೇರ್ ಪಡೆದುಕೊಳ್ಳುವುದು ಒಳ್ಳೆಯದು ಎಂದು ಯಶ್ ಅವರು ಸಹ ತೀರ್ಮಾನ ಮಾಡಿದ್ದಾರೆ..

ಕೆಜಿಎಫ್2 ಬಿಡುಗಡೆಯಾದ ನಂತರ ಇಷ್ಟು ಪರ್ಸೆಂಟ್ ಶೇರ್ ಎಂದು ಪಡೆದುಕೊಳ್ಳಲಿದ್ದಾರೆ ನಟ ಯಶ್. ಈ ರೀತಿ ಶೇರ್ ಪಡೆದುಕೊಳ್ಳುವುದು ಈಗಿನ ಟ್ರೆಂಡ್ ಆಗಿದ್ದು, ನಟ ಸುದೀಪ್ ಅವರು ಸಹ ಸಂಭಾವನೆ ಪಡೆಯದೆ ಶೇರ್ ಪಡೆದುಕೊಳ್ಳುತ್ತಿದ್ದಾರೆ. ಬಾಲಿವುಡ್ ನ ಕೆಲವು ನಾಯಕರು ಸಹ ಇದೇ ರೀತಿ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಕೆಜಿಎಫ್2 ಸಿನಿಮಾದ ಟ್ರೈಲರ್ ಬಿಡುಗಡೆಯಾಗಿ, ಹಿಂದಿನ ಎಲ್ಲಾ ದಾಖಲೆಗಳನ್ನು ಸೈಡ್ ಗೆ ಇಟ್ಟಿದ್ದು, ಸಿನಿಮಾ ಬಿಡುಗಡೆಯಾದ ಮೇಲೆ ಎಷ್ಟು ಕೋಟಿ ಹಣ ಗಳಿಕೆ ಮಾಡಲಿದೆ ಎಂದು ಕಾದು ನೋಡಬೇಕಿದೆ.