ಬ್ರೇಕ್ ಫೇಲ್ ಆಗಿ ಯಶ್ ಮನೆಗೆ ನುಗ್ಗಿದ ಟ್ರ್ಯಾಕ್ಟರ್..

ರಾಕಿಂಗ್ ಸ್ಟಾರ್ ಯಶ್ ಮನೆ ಬಳಿ ಟ್ರ್ಯಾಕ್ಟರ್ ಒಂದು ಬ್ರೇಕ್ ಫೇಲ್ ಆಗಿ ಯಶ್ ಮನೆಗೆ ಟ್ರ್ಯಾಕ್ಟರ್ ನುಗ್ಗಿದ ಘಟನೆ ನಿನ್ನೆ ರಾತ್ರಿ ನಡೆದಿದೆ.. ಘಟನೆಯಲ್ಲಿ ಕಾಂಪೌಂಡ್ ಹಾಗೂ ದ್ವಿಚಕ್ರ ವಾಹನ ಜಖಂಗೊಂಡಿದ್ದು ಅದೃಷ್ಟವಶಾತ್ ಯಾವುದೇ ದೊಡ್ಡ ಅಪಾಯ ಸಂಭವಿಸಿಲ್ಲ..

ಹೌದು ನಿನ್ನೆ ರಾತ್ರಿ ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರೋ ರಾಕಿಂಗ್ ಸ್ಟಾರ್ ಯಶ್ ಅವರ ಮನೆಯ ಕಾಂಪೌಂಡಿಗೆ ಟ್ರ್ಯಾಕ್ಟರ್ ಡಿಕ್ಕಿಯಾಗಿದೆ. ಪರಿಣಾಮ ಮನೆಯ ಮುಂದೆ ನಿಲ್ಲಸಲಾಗಿದ್ದ ಬೈಕ್ ಜಖಂ ಆಗಿದೆ. ಬ್ರೇಕ್ ಫೇಲ್ ಆಗಿದ್ದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಯಶ್ ಮನೆಯ ಕಾಂಪೌಂಡಿಗೆ ಡಿಕ್ಕಿಯಾಗಿದೆ.

ಆದರೆ ಆ ಸಮಯದಲ್ಲಿ ಘಟನಾ ಸ್ಥಳದಲ್ಲಿ ಯಾರು ಇಲ್ಲದ ಕಾರಣ ಯಾರಿಗೂ ಏನೂ ತೊಂದರೆ ಆಗಿಲ್ಲ. ಬಳಿಕ ಸ್ಥಳಕ್ಕೆ ಪೊಲೀಸರು ಬಂದಿದ್ದು, ಜೆಸಿಬಿ ಮೂಲಕ ಟ್ರ್ಯಾಕ್ಟರ್ ಅನ್ನು ಸ್ಥಳಾಂತರಿಸಿದ್ದಾರೆ. ಜೊತೆಗೆ ಈ ಸಂದರ್ಭದಲ್ಲಿ ಯಶ್ ಅವರ ಮನೆಯಲ್ಲಿಯೂ ಸಹ ಯಾರೂ ಇರಲಿಲ್ಲ ಎನ್ನಲಾಗಿದ್ದು ಅದೃಷ್ಟವಶಾತ್ ಸ್ಥಳದಲ್ಲಿ ಯಾರೂ ಇಲ್ಲದ್ದರಿಂದ ಆಗಬಹುದಾದ ದೊಡ್ಡ ಅನಾಹುತ ತಪ್ಪಿದಂತಾಗಿದೆ..

ವಿಷಯ ತಿಳಿದ ಪೊಲೀಸರು ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ್ದಾರೆ.. ಇನ್ನು ಯಶ್ ಅವರು ಕೂಡ ವಿಷಯ ತಿಳಿದು ಸ್ಥಳಕ್ಕೆ ಬಂದು ಏನಾಗಿದೆ ಎಂದು ತಿಳಿದುಕೊಂಡಿದ್ದಾರೆ ಎನ್ನಲಾಗಿದೆ..