ಯಲಹಂಕ‌ ಮೇಲ್ಸೇತುವೆಗೆ ಡಾ.ವಿಠಲ್ ರಾವ್ ಸೂಚಿಸಿದ ಕನ್ನಡಿಗನ ಹೆಸರು ಯಾರದ್ದು ಗೊತ್ತಾ?

ಸದ್ಯ ಉದ್ಘಾಟನೆಗೆ ಸಿದ್ಧವಾಗಿರುವ ಯಲಹಂಕ ಫ್ಲೈ ಓವರ್ ಗೆ ಯಾರ ಹೆಸರಿಡಬೇಕೆಂಬುದೇ ದೊಡ್ಡ ಚರ್ಚೆಯಾಗಿದೆ.. ಅತ್ತ ರಾಜ್ಯದ ಬಿಜೆಪಿ ಸರ್ಕಾರ ಸ್ವಾತಂತ್ರ್ಯ ಹೋರಾಟಗಾರರಾದ ವೀರ ಸಾವರ್ಕರ್ ಅವರ ಹೆಸರು ಇಡಲಿದ್ದೇವೆ ಎಂದು ತಿಳಿಸಿದ ಬೆನ್ನಲ್ಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಅದನ್ನು ವಿರೋಧಿಸಿದರು.. ಜೊತೆಗೆ ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಯಾರೂ ಇಲ್ಲವಾ ಎಂಬ ಚರ್ಚೆ ಆರಂಭವಾಯಿತು..

ಇನ್ನು ಬಿಜೆಪಿ ಬೆಂಬಲಿಗರು ವೀರ ಸಾವರ್ಕರ್ ಅವರ ಹೆಸರೇ ಇಡಬೇಕೆಂದರು.. ಇದರ ಪರ ವಿರೋಧದ ಚರ್ಚೆ ಹೆಚ್ಚಾದಂತೆ.. ಮೇಲ್ಸೇತುವೆಯ ಉದ್ಘಾಟನಾ ಕಾರ್ಯಕ್ರಮವನ್ನೇ ಮುಂದೂಡಲಾಯಿತು..

ಇದೆಲ್ಲದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಅವರವರ ಅನಿಸಿಕೆಗಳನ್ನು ಯಾರ ಹೆಸರಿಡಬೇಕೆಂಬ ಸಲಹೆಗಳನ್ನು ನೀಡುತ್ತಲೇ ಇದ್ದಾರೆ.. ಅದೇ ರೀತಿ ಇಂದು ಡಾ.ವಿಠಲ್ ರಾವ್ ಖ್ಯಾತಿಯ ನಟ ರವಿಶಂಕರ್ ಗೌಡ ಅವರೂ ಸಹ ಈ ಬಗ್ಗೆ ಮಾತನಾಡಿದ್ದು ದೀರ್ಘವಾಗಿ ಆಲೋಚಿಸಿ ನೋಡಿದರೆ ಅವರ ಮಾತು ಕೆಲವರಿಗೆ ಸರಿ ಎನಿಸುತ್ತದೆ.. ಹಾಗಂತ ಅವರೆಲ್ಲಾ ಸಾವರ್ಕರ್ ಅವರ ಹೆಸರನ್ನು ವಿರೋಧಿಸುತ್ತಿಲ್ಲ.. ಅವರವರ ಅನಿಸಿಕೆ ಅಭಿಪ್ರಾಯ ಅವರವರಿಗಷ್ಟೇ..

ಇನ್ನು ನಟ ರವಿಶಂಕರ್ ಗೌಡ ಅವರು ಹೇಳಿರುವಂತೆ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿರುವ ಮೈಸೂರಿನ ರಾಜರುಗಳ ಹೆಸರನ್ನು ಮೇಲ್ಸೇತುವೆಗೆ ಇಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದಂತೆ ಕಾಣುತ್ತಿದೆ… ಹೌದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಕರುನಾಡ ಏಳಿಗೆಗೆ ಕಾರಣಕರ್ತರಾದ ಒಬ್ಬರ ಹೆಸರು ನೆನಪಾಗಲಿಲ್ಲವೇ ನಿಮಗೆ.. ಮನಸ್ಸಿಗೆ ನೋವಾಗುತ್ತಿದೆ..” ಎಂದು ಬರೆದು ಪೋಸ್ಟ್ ಮಾಡಿದ್ದರು..

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಹುತೇಕರು.. ಹೌದು ಆಲೋಚಿಸಬೇಕಾದ ವಿಚಾರ ಎಂದಿದ್ದರು.. ಆದರೆ ಅದಾಗಲೇ ಮೇಲ್ಸೇತುವೆಗೆ ಸಾವರ್ಕರ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎನ್ನಲಾಗುತ್ತಿದ್ದು ಉದ್ಘಾಟನಾ ದಿನದವರೆಗೂ ಏನೆಲ್ಲಾ ಬೆಳವಣಿಗೆಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.. ಅಂದು ಇಂದಿರಾ ಕ್ಯಾಂಟಿನ್ ಹೆಸರಿಟ್ಟಾಗಲೂ ಅನೇಕ ಕನ್ನಡಿಗರು ವಿರೋಧಿಸಿದ್ದರು.. ಆದರೆ ಸರ್ಕಾರದ ನಿರ್ಣಯವೇ ಅಂತಿಮವಾಗಿತ್ತು.. ಈಗಲೂ ಅಷ್ಟೇ ಸರ್ಕಾರ ಏನು ನಿರ್ಣಯ ತೆಗೆದುಕೊಳ್ಳುವುದೋ ಅದೇ ಅಂತಿಮ.. ಪರವಾಗಲಿ.. ವಿರೀಧವಾಗಲಿ.. ಜನ ಸಾಮಾನ್ಯರದ್ದು ಅಭಿಪ್ರಾಯವಷ್ಟೇ‌‌..