ಕನ್ನಡ ಕಿರುತೆರೆಯ ಖ್ಯಾತ ನಟ ಇನ್ನಿಲ್ಲ.. ಕಣ್ಣೀರಿಟ್ಟ ಟಿ ಎನ್ ಸೀತಾರಾಮ್‌ ಅವರು..

ಕನ್ನಡ ಚಿತ್ರರಂಗ ಹಾಗೂ ಕನ್ನಡ ಕಿರುತೆರೆಯಲ್ಲಿ ಕಳೆದ ಒಂದೆರೆಡು ವರ್ಷದಿಂದ ಸಾಕಷ್ಟು ಕಲಾವಿದರುಗಳನ್ನು ಕಳೆದುಕೊಳ್ಳುತ್ತಿಒದ್ದು ಹಿರಿಯ ಕಲಾವಿದರೂ ಒಬ್ಬೊಬ್ಬರಾಗಿಯೇ ಇಹಲೋಕ ತ್ಯಜಿಸುತ್ತಿರುವುದು ನಿಜಕ್ಕೂ ಒಂದು ಕಾಲ ಘಟ್ಟದ ಕಲಾವಿದರು ಮಾಯವಾಗುತ್ತಿದ್ದಾರಾ ಇನ್ನು ಅವರುಗಳೆಲ್ಲಾ ನಮಗೆ ನೆನಪು ಮಾತ್ರವಾ ಎನಿಸುತ್ತಿದೆ.. ಅದೇ ರೀತಿ ಇದೀಗ ಮತ್ತೊಬ್ಬ ಕನ್ನಡ ಕಿರುತೆರೆಯ ಖಯುಾತ ನಟ ಇಹಲೋಕ ತ್ಯಜಿಸಿದ್ದಾರೆ.. ಹೌದು ಕನ್ನಡ ಕಿರುತೆರೆಯ ಮಾಂತ್ರಿಕ ನಿರ್ದೇಶಕ ಟಿ ಎನ್‌ ಸೇತಾರಾಮ್‌ ಅವರ ಪ್ರತಿಯೊಂದು ದಾರಾವಾಹಿಯಲ್ಲಿಯೂ ಅಬಿಮನಯಿಸುತ್ತಿದ್ದ ಕಲಾವಿದ ಕೊನೆಯುಸಿರೆಳೆದಿದ್ದಾರೆ..

ಕನ್ನಡ ಕಿರುತೆರೆ ನಟ ಯಲಹಂಕ ಬಾಲಾಜಿ ವಿಧಿವಶರಾಗಿದ್ದಾರೆ. ಅಲ್ಪ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಯಲಹಂಕ ಬಾಲಾಜಿ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಯಲಹಂಕ ಬಾಲಾಜಿ ನಿಧನರಾಗಿರುವುದಕ್ಕೆ ಕಿರುತೆರೆ ನಿರ್ದೇಶಕ ಟಿ.ಎನ್‌.ಸೀತಾರಾಮ್ ಅವರು ತಮ್ಮ ಸಾಮಾಜಿಕ ಜಾಲತಾಣದ;ಲ್ಲಿ ವಿಚಾರ ತಿಳಿಸಿ ಫೇಸ್‌ಬುಕ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.

ಟಿ.ಎನ್‌.ಸೀತಾರಾಮ್ ಅವರ ಫೇಸ್‌ಬುಕ್ ಪೋಸ್ಟ್ ನನ್ನ ಆತ್ಮೀಯ ಗೆಳೆಯ ಯಲಹಂಕ ಬಾಲಾಜಿ ಅಲ್ಪ ಕಾಲದ ಅನಾರೋಗ್ಯದ ನಂತರ ನಿಧನ ಹೊಂದಿದ್ದಾರೆ. ನನ್ನ ಎಲ್ಲಾ ಧಾರಾವಾಹಿಗಳಲ್ಲೂ ನಟಿಸಿದ್ದರು. ಮಾಯಾಮೃಗ ದಿಂದ ಮಗಳು ಜಾನಕಿ ವರೆಗೆ.. ಅತ್ಯಂತ ಹೃದಯವಂತ ಗೆಳೆಯ. ಎಲ್ಲ ಕಷ್ಟಗಳಲ್ಲೂ, ಸಂತೋಷಗಳಲ್ಲೂ ಜತೆಗೆ ಇರುತ್ತಿದ್ದ ಮನುಷ್ಯ. ಇಡೀ ಬದುಕಿನುದ್ದಕ್ಕೂ ಕಷ್ಟ ಕಂಡಿದ್ದರೂ ನಗುತ್ತಾ ಬದುಕಿದ ಗೆಳೆಯ. ಬಾಲಾಜಿ ಇನ್ನಿಲ್ಲ ಎಂದು ನೆನೆಸಿಕೊಂಡರೆ ಅಪಾರ ಸಂಕಟವಾಗುತ್ತದೆ. ತೀವ್ರ ನೋವಿನ ವಿದಾಯ ಬಾಲಾಜಿ ಎಂದು ಫೇಸ್‌ಬುಕ್‌ನಲ್ಲಿ ಟಿ.ಎನ್‌.ಸೀತಾರಾಮ್ ಬರೆದುಕೊಂಡಿದ್ದಾರೆ.

ಯಲಹಂಕ ಬಾಲಾಜಿ.. ಏಪ್ರಿಲ್ 16, 1963 ರಂದು ಜನಿಸಿದವರು ಯಲಹಂಕ ಬಾಲಾಜಿ. ನಟನೆ ಹಾಗೂ ಫೋಟೋಗ್ರಫಿಯಲ್ಲಿ ಯಲಹಂಕ ಬಾಲಾಜಿ ಅವರು ಆಸಕ್ತಿ ಹೊಂದಿದ್ದರು. ಮಾಯಾಮೃಗ, ಮುಕ್ತ ಮುಕ್ತ, ಮಹಾ ಪರ್ವ, ಮನ್ವಂತರ’, ‘ಮುಕ್ತ’, ಮಿಂಚು,ಮಗಳು ಜಾನಕಿ, ಚಂದಿರ ಮುಂತಾದ ಧಾರಾವಾಹಿಗಳಲ್ಲಿ ಯಲಹಂಕ ಬಾಲಾಜಿ ಅಭಿನಯಿಸಿದ್ದರು.

ಓಂ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.. ಮಹರ್ಷಿ ರವೀಂದ್ರ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9620202225. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9620202225