ಬಿಗ್ ಶಾಕಿಂಗ್.. ಮಧ್ಯರಾತ್ರಿ ಮುಖ್ಯಮಂತ್ರಿ ಯಡಿಯೂರಪ್ಪನವರು ಆಸ್ಪತ್ರೆಗೆ ದಾಖಲು..

ನಿನ್ನೆ ಮಧ್ಯಾಹ್ನವಷ್ಟೇ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಕೊರೊನಾ ಪಾಸಿಟಿವ್ ಆಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.. ಇದೀಗ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೂ ಕೊರೊನಾ ಪಾಸಿಟಿವ್ ಆಗಿದ್ದು ಮಧ್ಯರಾತ್ರಿಯಲ್ಲಿಯೇ ಆಸ್ಪತ್ರೆಗೆ ದಾಖಲಿಸಲಾಗಿದ್ದು ಈ ಬಗ್ಗೆ ಅಧಿಕೃತವಾಗಿ‌ ಖಚಿತಪಡಿಸಿದ್ದಾರೆ..

ಹೌದು ತಮಗೆ ಕೊರೊನಾ ಬಂದಿರುವುದರ ಬಗ್ಗೆ ಟ್ವಿಟ್ ಮಾಡಿರುವ ಯಡಿಯೂರಪ್ಪನವರು “ನನ್ನ ಕೊರೋನಾ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಎಂದು ಬಂದಿದ್ದು, ರೋಗಲಕ್ಷಣಗಳು ಇಲ್ಲದಿದ್ದರೂ ಮುನ್ನೆಚ್ಚರಿಕೆ ದೃಷ್ಟಿಯಿಂದ, ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದಿರುವವರು, ಕ್ವಾರಂಟೈನ್ ನಲ್ಲಿದ್ದು ಮುಂಜಾಗ್ರತೆ ವಹಿಸಿ ಎಂದು ಕೋರುತ್ತೇನೆ.” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..

ಈ ಹಿಂದೆ ಯಡಿಯೂರಪ್ಪನವರ ಕಾರು ಚಾಲಕನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಾಗಲೂ ಬಿಎಸ್ ವೈ ಕ್ವಾರಂಟೈನ್ ನಲ್ಲಿದ್ದರು.ಮ್ ಆದರೀಗ ಸ್ವತಃ ಅವರಿಗೇ ಸೋಂಕು‌ ಕಾಣಿಸಿಕೊಂಡಿದ್ದು ಯಡಿಯೂರಪ್ಪನವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಜನರು ಪ್ರಾರ್ಥಿಸಿದ್ದಾರೆ..

ಇನ್ನು ಆಗಸ್ಟ್ 5 ನೇ ತಾರೀಕಿನಂದು ರಾಮಮಂದಿರದ ಭೂಮಿ ಪೂಜೆ ನಡೆಯಲಿದ್ದು ಕಾರ್ಯಕ್ರಮಕ್ಕೆ ಅಮಿತ್ ಶಾ, ಯಡಿಯೂರಪ್ಪನವರು ಆಸ್ಪತ್ರೆಯಲ್ಲಿರುವುದರಿಂದ ಹಾಗೂ ಕೆಲ ನಾಯಕರು ಹಾಜರಾಗುವುದಿಲ್ಲ..‌ ಜೊತೆಗೆ ಮುಖ್ಯಮಂತ್ರಿಗಳು ವಾರದಿಂದ ಬಹುತೇಕ ಅಧಿಕಾರಿಗಳು ಹಾಗೂ ರಾಜಕಾರಣಿಗಳನ್ನು ಭೇಟಿ ಮಾಡಿರುವುದರಿಂದ ಎಲ್ಲರೂ ಕ್ವಾರಂಟೈನ್ ಆಗಲಿದ್ದಾರೆ..