ಮದುವೆಯಾಗಿ ಒಂದೇ ವಾರಕ್ಕೆ ರೂಮಿನಲ್ಲಿ ಹೆಂಡತಿಯ ನಿಜ ಅವತಾರ ನೋಡಿ ಬೆಚ್ಚಿ ಬಿದ್ದ ಗಂಡ..

ಗಂಡ ಹೆಂಡತಿಯ ಸಂಬಂಧ ಏಳೇಳು ಜನ್ಮಗಳ ಅನುಬಂಧ ಅನ್ನೋದು ಹಿರಿಯರ ಮಾತು.. ಆದರೆ ಇಬ್ಬರ ವಿಚಾರದಲ್ಲಿ ಎಲ್ಲವೂ ಸರಿಯಿದ್ದರೆ ಮಾತ್ರವೇ ಆ ಮಾತು ಸತ್ಯ ಎನಿಸುತ್ತದೆ.. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಆ ಏಳೇಳು ಜನ್ಮದ ಅನುಬಂಧ ಯಾವಾಗ ಯಾವ ಸಮಯದಲ್ಲಿ ಮುರಿದು ಬೀಳುವುದೋ ಹೇಳಲಾಗದು..ಅದರಲ್ಲೂ ಇಲ್ಲೊಂದು ಜೋಡಿಯ ಕತೆ ನೋಡಿದರೆ ನಿಜಕ್ಕೂ ಆ ಗಂಡನ‌ ಕತೆ ಅಯ್ಯೋ ಎನಿಸುವುದಂತೂ ಸತ್ಯ.. ಹೌದು ಮದುವೆಯಾದ ಒಂದೇ ವಾರಕ್ಕೆ ಬಳೆ ಕೊಡಿಸಿ ಎಂದು ಹೆಂಡತಿ ಗಂಡನನ್ನು ಪ್ರೀತಿಯಿಂದ ಕೇಳಿದಳು.. ಹೆಂಡತಿಯ ಆಸೆ ಪೂರೈಸುವ ಸಲುವಾಗಿ ಬಳೆ ಕೊಡಿಸಲು ಹೆಂಡತಿಯನ್ನು ಕರೆದುಕೊಂಡು ಹೋದ.. ಆದರೆ ನಡುರಸ್ತೆಯಲ್ಲಿ ಹೆಂಡತಿ ಮಾಡಿದ ಕೆಲಸಕ್ಕೆ ಇದೀಗ ಗಂಡ ಬೆಚ್ಚಿಬೀಳುವಂತಾಗಿದೆ..

ಹೌದು ಈಕೆಯ ಹೆಸರು ಮೋನಿ ಕುಮಾರಿ.. ಈಕೆಯ ಗಂಡನ ಹೆಸರು ವಿವೇಕ್.. ಕಳೆದ ಹತ್ತು ದಿನಗಳ ಹಿಂದಷ್ಟೇ ಜೂನ್ 14 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಫೋಟೋದಲ್ಲಿ ಪೋಸ್ ಕೊಟ್ಟಿರುವಂತೆ ಇಬ್ಬರೂ ಬಹಳ ಸಂತೋಷವಾಗಿಯೇ ಇದ್ದರು.. ಆದರೆ ಹೆಂಡತಿಯ ಆ ನಗು ಮುಖದ ಹಿಂದೆ ಬೇರೆಯದ್ದೇ ಮುಖ ಇದೆ ಎನ್ನುವುದು ಗಂಡ ವಿವೇಕ್ ಗೆ ತಿಳಿಯದಾಯಿತು..

ಹೌದು ಮದುವೆಯಾದ ನಂತರ ಬಹಳ ಸಂತೋಷವಾಗಿದ್ದ ಜೋಡಿ ಸಂಬಂಧಿಕರುಗಳ ಮನೆಗಳಿಗೆ ಔತಣ ಕೂಟಕ್ಕೆ ಹೋಗುತ್ತಿದ್ದರು.. ಹೋದ ಕಡೆಯಲ್ಲೆಲ್ಲಾ ಈ ಜೋಡಿ ನೋಡಿ ಇವರ ಮೇಲೆ ಯಾರ ಕಣ್ಣು ಬೀಳದಿರಲಿ ಎಂದು ಹಾರೈಸಿದ್ದೂ ಉಂಟು.. ಇನ್ನು ಈ ಜೋಡಿಯೂ ಊರೂರು ದೇವಸ್ಥಾನ ಅದು ಇದು ಅಂತ ಸುತ್ತಿ ಆತ್ಮೀಯವಾಗಿದ್ದರು‌.. ಇನ್ನು ಎಲ್ಲಾ ಹೆಂಡತಿಯರಂತೆ ಮೋನಿ ಕುಮಾರಿ ಗಂಡನಿಗೆ ಅದು ಇದು ಕೊಡಿಸಿ ಎಂದು ಕೇಳಿದ್ದಾಳೆ.. ಅದರಲ್ಲೂ ನಿಮ್ಮ ಕೈಯಾರೆ ನಾನು ಬಳೆ ತೊಡಿಸಿಕೊಳ್ಳಬೇಕು ಎಂದಿದ್ದಾಳೆ.. ಹೆಂಡತಿಯ ಆಸೆ ಈಡೇರಿಸಲು ಮುಂದಾದ ಗಂಡ ವಿವೇಕ್ ಆಕೆಯನ್ನು ಜೂನ್ 22 ರಂದು ಸಂಜೆ ಬಳೆ ಕೊಡಿಸಲೆಂದು ಹೊರಗೆ ಕರೆದುಕೊಂಡು ಹೋಗಿದ್ದಾನೆ..

ಇತ್ತ ಹೆಂಡತಿಗೆ ಬಳೆ ಕೊಡಿಸಲು ಪೇಟೆಗೆ ಕರೆದುಕೊಂಡು ಹೋಗುತ್ತಿದ್ದ ವಿವೇಕ್ ನನ್ನು ದಾರಿಯ ಮಧ್ಯೆ ಗುಂಪೊಂದು ಅಡ್ಡ ಗಟ್ಟಿದೆ.. ಅತ್ತ ಮತ್ತೊಂದು ಗುಂಪು ಹೆಂಡತಿ ಮೋನಿ ಕುಮಾರಿಯನ್ನು ಕಾರ್ ನಲ್ಲಿ ಕೂರಿಸಿಕೊಂಡು ಪರಾರಿಯಾಗಿದೆ..

ಏನಾಗುತ್ತಿದೆ ಎಂದು ವಿವೇಕ್ ಗೆ ಅರ್ಥವಾಗುವಷ್ಟರಲ್ಲಿ ತನ್ನನ್ನು ಅಷ್ಟೊಂದು ಪ್ರೀತಿ ಮಾಡುತ್ತಿದ್ದ ಹೆಂಡತಿಯನ್ನು ಯಾರೋ ಎತ್ತಿಕೊಂಡು ಹೋಗಿದ್ದ ಕಂಡು ದಿಕ್ಕು ತೋಚದಂತಾಗಿದೆ.. ತಕ್ಷಣ ಮನೆಗೆ ಬಂದ ವಿವೇಕ್ ಮನೆಯವರಿಗೆ ವಿಚಾರ ತಿಳಿಸಿ ತಕ್ಷಣ ಪೊಲೀಸ್ ಠಾಣೆಗೆ ವಿಚಾರ ತಿಳಿಸಿದ್ದಾರೆ.. ಆದರೆ ಆನಂತರವೇ ವಿವೇಕ್ ಗೆ ತನ್ನ ಪತ್ನಿಯ ನಿಜ ರೂಪ ಕಂಡಿದ್ದು.. ಹೌದು ರೂಮಿನಲ್ಲಿ ಹೆಂಡತಿಯ ಅಸಲಿ ಸತ್ಯ ಕಂಡು ವಿವೇಕ್ ಬೆಚ್ಚಿಬಿದ್ದಿದ್ದಾನೆ..

ಹೌದು ಪೊಲೀಸರಿಗೆ ದೂರು ಕೊಟ್ಟು ಬಂದ ವಿವೇಕ್.. ಬೇಸರದಲ್ಲಿ ತನ್ನ ರೂಮಿಗೆ ಹೋಗಿದ್ದಾನೆ.. ಬೆಳಗ್ಗೆಯಷ್ಟೇ ಅಷ್ಟೊಂದು ಪ್ರೀತಿ ಮಾಡುತ್ತಿದ್ದ ಹೆಂಡತಿ ಈಗ ಇಲ್ಲ ಎಂದು ಸಂಕಟ ಪಡುತ್ತಲೇ ರೂಮಿಗೆ ಕಾಲಿಟ್ಟಿದ್ದಾನೆ.. ಆದರೆ ವಿವೇಕ್ ಗೆ ರೂಮಿನಲ್ಲಿ ಮೋನಿ ಕುಮಾರಿಯ ಅಸಲಿ ಸತ್ಯ ತಿಳಿದಿದೆ.. ರೂಮಿನಲ್ಲಿ ಹೆಂಡತಿಯ ಯಾವೊಂದು ವಸ್ತುವೂ ಇರಲಿಲ್ಲ.. ಅದರಲ್ಲೂ ಮದುವೆಗೆ ಮಾಡಿಸಿದ್ದ ಚಿನ್ನವೂ ಸಹ ರೂಮಿನಲ್ಲಿ‌ ಇರಲಿಲ್ಲ..

ಕೊನೆಗೆ ಈ ವಿಚಾರವನ್ನು‌ ಪೊಲೀಸರಿಗೆ ತಿಳಿಸಿದಾಗ ಮೋನಿ ಕುಮಾರಿಯ ಫೋನ್ ಟ್ರ್ಯಾಕ್‌ ಮಾಡಿಸಿ ನೋಡಿದಾಗ ಸತ್ಯ ಬಯಲಾಗಿದೆ.. ವಿವೇಕ್ ನನ್ನು ಅಡ್ಡ ಗಟ್ಟಿದ ಗುಂಪಿನಲ್ಲಿ ಇದ್ದ ಒಬ್ಬನ ಜೊತೆ ಮೋನಿ ಕುಮಾರಿ ಫೋನಿನಲ್ಲಿ ಸಾಕಷ್ಟು ಬಾತಿ ಮಾತನಾಡಿದ್ದಾಳೆ.. ಕೊನೆಗೆ ಇಬ್ಬರ ಮೊಬೈಲ್ ಅನ್ನು ಸಹ ಟ್ರ್ಯಾಕ್‌ ಮಾಡಿ ಇಬ್ಬರನ್ನೂ ಒಟ್ಟಿಗೆ ಹಿಡಿದಿದ್ದಾರೆ.. ಆಗ ಪೊಲೀಸರ ಮುಂದೆ ಮೋನಿ ಕುಮಾರಿ ಸತ್ಯ ಒಪ್ಪಿಕೊಂಡಿದ್ದಾಳೆ..

ಹೌದು ಮೋನಿ ಕುಮಾರಿ ಬಿಹಾರ್ ನ ನೌವಾಗರ್ಹಿ ನಿವಾಸಿ ರಾಮ್ವಿಲಾಸ್ ಪೊದ್ದಾರ್ ಅವರ ಮಗಳು.. ಇತ್ತ ಮುಂಗೇರ್ ನಿವಾಸಿ ರಾಮವಿಲಾಸ್ ಗುಪ್ತಾ ಅವರ ಮಗ ವಿವೇಕ್ ಪೊದ್ದಾರ್.. ಈ ಇಬ್ಬರಿಗೂ ಮದುವೆ ನಿಶ್ಚಯ ಮಾಡಲಾಗಿತ್ತು.. ಆದರೆ ಕಳೆದ ಆರು ವರ್ಷಗಳಿಂದಲೂ ಮೋನಿ ಕುಮಾರಿ ದಿವ್ಯಾಂಶು ಕುಮಾರ್ ಎಂಬಾತನನ್ನು ಪ್ರೀತಿಸುತ್ತಿದ್ದಳು.. ಇಬ್ಬರ ವಿಚಾರ ಮನೆಯಲ್ಲಿ ತಿಳಿಸಿದರೂ ಸಹ ಮದುವೆಗೆ ಒಪ್ಪಿರಲಿಲ್ಲ.. ಕೊನೆಗೆ ಮೋನಿ ಕುಮಾರಿ ವಿವೇಕ್ ಜೊತೆ ಮದುವೆಯಾದಳು.. ಆದರೆ ಮದುವೆಯ ನಂತರ ಈ ಪ್ಲ್ಯಾನ್ ಮಾಡಿರುವ ಮೋನಿ ಕುಮಾರಿ ತನ್ನನ್ನು ತಾನೇ ಈ ಕೆಲಸ ಮಾಡಿಸಿಕೊಂಡಿದ್ದಾಳೆ.. ಇತ್ತ ಪೊಲೀಸರ ಮುಂದೆ ಹೇಳಿಕೆ ಕೊಟ್ಟ ಪ್ರಿಯಕರ ದಿವ್ಯಾಂಶು ಕುಮಾರ್.. ಮೋನಿ ಹೇಳಿದ ಹಾಗೆ ನಾನು ಮಾಡಿದೆ.. ಎಲ್ಲವೂ ಅವಳ ಪ್ಲ್ಯಾನ್ ನಂತೆ ನಡೆದಿದೆ ಎಂದಿದ್ದಾನೆ.. ಸಧ್ಯ ಇಬ್ಬರೂ ಪೊಲೀಸರ ವಶದಲ್ಲಿದ್ದು ನ್ಯಾಯಾಲಯಕ್ಕೆ ಒಪ್ಪಿಸುತ್ತಿದ್ದಾರೆ..

ಅವರೇನೋ ಈ ಕೆಲಸ ಮಾಡಿ ಒಂದಾಗುವರೋ ಇಲ್ಲವೋ ಬೇರೆ ವಿಚಾರ.. ಆದರೆ ಇತ್ತ ಮದುವೆಯಾಗಿ ಅತ್ತ ಹೆಂಡತಿಯೂ ಇಲ್ಲ.. ಇತ್ತ ಗೌರವವೂ ಹಾಳು ಎನ್ನುವಂತಾಗಿದೆ ವಿವೇಕ್ ನ ಪರಿಸ್ಥಿತಿ.. ಈಗ ನಾನೇನು ಮಾಡಬೇಕು ಎಂದು ಮೋನಿ ಕುಮಾರಿ ಮನೆಯವರ ಮುಂದೆ ಪ್ರಶ್ನೆ ಇಟ್ಟಿದ್ದಾನೆ.. ಒಟ್ಟಿನಲ್ಲಿ ಸಂಬಂಧಿಕರು ಸುಂದರ ಸಂಸಾರ ಎಂದುಕೊಂಡಿದ್ದ ಜೋಡಿಯ ಮದುವೆ ವಾರಕ್ಕೆ ಮುರಿದು ಬಿದ್ದಂತಾಗಿದೆ.. ಹೋದೋಳು ಹೋದ್ಳು.. ಮದುವೆಗೆ ಮೊದಲೇ ಹೋಗಿದ್ದರೆ ಆಗೋದು.. ಈಗ ಗಂಡ ವಿವೇಕ್ ನ ಜೀವನವೂ ಹಾಳು ಎನ್ನುತ್ತಿದ್ದಾರೆ ನೆಟ್ಟಿಗರು..