ವಿಷ್ಣುವರ್ಧನ್ ಅವರು ತಮ್ಮ ಕೊನೆಯ ಸಿನಿಮಾಗೆ ಪಡೆದಿದ್ದ ಸಂಭಾವನೆ ಎಷ್ಟು ಗೊತ್ತಾ?

ಕನ್ನಡ ಚಿತ್ರರಂಗ ಮೇರುನಟ ಸಹಾಸಸಿಂಹ, ಅಭಿನವ ಭಾರ್ಗವ ವಿಷ್ಣುವರ್ಧನ್ ಅವರು. ಕನ್ನಡ ಚಿತ್ರರಂಗಕ್ಕೆ ಇವರು ನೀಡಿರುವ ಕೊಡುಗೆ ಅಪಾರ. 200 ಸಿನಿಮಾಗಳಲ್ಲಿ ನಟಿಸಿ, ಅಭಿಮಾನಿಗಳ ಮನಸ್ಸಿನಲ್ಲಿ ಅಮರವಾಗಿ ಉಳಿದಿದ್ದಾರೆ ವಿಷ್ಣುದಾದ. ಆದರೆ ಕನ್ನಡ ಚಿತ್ರರಂಗವೇ ಇವರಿಗೆ, ಇವರಿಗಿದ್ದ ಘನತೆಗೆ ತಕ್ಕ ಹಾಗೆ ಮರಿಯಾದೆ ಕೊಡಲಿಲ್ಲ. ವಿಷ್ಣುವರ್ಧನ್ ಅವರಿಗೆ ಕನ್ನಡ ಚಿತ್ರರಂಗದ ಮೂಲಕ ಹೆಚ್ಚಾಗಿ ಸಿಕ್ಕಿದ್ದು ನೋವು. ಆದರೂ ಸದಾ ನಗು ನಗುತ್ತಲೇ ಇದ್ದವರು ವಿಷ್ಣು ದಾದ. ಅಭಿಮಾನಿಗಳ ಆರಾಧ್ಯ ದೈವ ವಿಷ್ಣುವರ್ಧನ್ ಅವರು ತಮ್ಮ ಕೊನೆಯ ಸಿನಿಮಾಗೆ ಪಡೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?

ಕನ್ನಡ ಚಿತ್ರರಂಗದ ಚಿತ್ರಬ್ರಹ್ಮ ಎಂದೇ ಹೆಸರು ಪಡೆದುಕೊಂಡಿದ್ದ ಪುಟ್ಟಣ್ಣ ಕಣಗಾಲ್ ಅವರೊಡನೆ ಕೆಲಸ ಮಾಡಿ, ಪುಟ್ಟಣ್ಣ ಅವರು ನಿರ್ದೇಶನ ಮಾಡಿದ, ನಾಗರಹಾವು ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ನಟ ವಿಷ್ಣುವರ್ಧನ್. ಮೊದಲ ಸಿನಿಮಾದಲ್ಲೇ ಅದ್ಭುತವಾದ ಯಶಸ್ಸು ಗಳಿಸಿ, ಆಂಗ್ರಿ ಯಂಗ್ ಮ್ಯಾನ್ ಪಾತ್ರಗಳಿಗೆ ಹೇಳಿ ಮಾಡಿಸಿದ ಹಾಗಿದ್ದರು, ನೋಡಲು ಎಷ್ಟು ಹ್ಯಾಂಡ್ಸಮ್ ಆಗಿದ್ದರೋ ಅವರ ಅಭಿನಯವು ಅಷ್ಟೇ. ಪ್ರಬುದ್ಧವಾಗಿತ್ತು.

ಹೀಗೆ ನಾಗರಹಾವು ಸಿನಿಮಾದಿಂದ ಶುರುವಾದ ಪಯಣ, ಕನ್ನಡದಲ್ಲಿ ಕನ್ನಡದಲ್ಲಿ ಸಾಕಷ್ಟು ಬೇರೆ ಬೇರೆ ರೀತಿಯ ಪಾತ್ರಗಳಲ್ಲಿ ನಟಿಸುವ ಅವಕಾಶವನ್ನು ವಿಷ್ಣುವರ್ಧನ್ ಅವರಿಗೆ ನೀಡಿತು. ಯಾವುದೇ ಪಾತ್ರ ಕೊಟ್ಟರು ಲೀಲಾಜಾಲವಾಗಿ ಅಭಿನಯಿಸುತ್ತಿದ್ದ ಕಲಾವಿದ ವಿಷ್ಣುವರ್ಧನ್ ಅವರು. ಅವರ ನಟನೆಯ ಬಗ್ಗೆ ಎರಡನೇ ಮಾತೆ ಇಲ್ಲ. ಅಣ್ಣಾವ್ರನ್ನು ಬಿಟ್ಟರೆ, ಅವರಷ್ಟು ಎತ್ತರಕ್ಕೆ ಬೆಳೆದಿದ್ದು ವಿಷ್ಣುವರ್ಧನ್ ಅವರು. ಕನ್ನಡದಲ್ಲಿ ಮಾತ್ರವಲ್ಲದೆ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಸಹ ನಟನೆ ಮಾಡಿ, ಎಲ್ಲೆಡೆ ಬೇಡಿಕೆ ಸೃಷ್ಟಿಸಿಕೊಂಡಿದ್ದರು.

ವಿಷ್ಣುದಾದ ಅವರು ನಟನೆಯಿಂದ ಎಷ್ಟು ಜನಪ್ರಿಯತೆ ಪಡೆದುಕೊಂಡಿದ್ದರೋ, ಅಷ್ಟೇ ಜನಪ್ರಿಯತೆಯನ್ನು ಒಳ್ಳೆಯತನದಿಂದ ಗಳಿಸಿಕೊಂಡಿದ್ದರು. ಇವರ ಸರಳ ಸ್ವಭಾವ, ಸಹಾಯ ಮನೋಭಾವ, ಒಂದು ಮಗುವಿಗೂ ಕೂಡ ಮರಿಯಾದೆ ಕೊಟ್ಟು ನಡೆದುಕೊಳ್ಳುವ ವ್ಯಕ್ತಿತ್ವ, ಇದೆಲ್ಲವೂ ಸಹ ಅಭಿಮಾನಿಗಳಿಗೆ ಆದರ್ಶವಾಗಿತ್ತು. ಕಷ್ಟದಲ್ಲಿರುವ ಅದೆಷ್ಟೋ ಜನರಿಗೆ ಸಹಾಯ ಮಾಡಿದ್ದರು ವಿಷ್ಣುದಾದ, ಆದರೆ ತಾವು ಮಾಡಿದ ಸಹಾಯದ ಬಗ್ಗೆ ಗೊತ್ತಾಗದ ಹಾಗೆ ಮಾಡುತ್ತಿದ್ದರು, ಅಂತಹ ವ್ಯಕ್ತಿತ್ವ ಅವರದ್ದು..

ಸಿ.ಎನ್.ಎನ್ ಐಬಿಎನ್ ಮಾಡಿದ ವರದಿಯ ಪ್ರಕಾರ, ಕರ್ನಾಟಕದಲ್ಲಿ ಎಲ್ಲರಿಗಿಂತ ಹೆಚ್ಚು ಜನಪ್ರಿಯತೆ ಮತ್ತು ಗೌರವ ಪಡೆದುಕೊಂಡಿರುವವರ ಸಾಲಿನಲ್ಲಿ ಮೊದಲ ಸ್ಥಾನ ಪಡೆದುಕೊಂಡವವರು ವಿಷ್ಣುದಾದ. ಇವರು ನಟಿಸಿದ ಕೊನೆಯ ಸಿನಿಮಾ ಆಪ್ತರಕ್ಷಕ, ಆಗಿನ ಟಾಪ್ ನಟರಾಗಿದ್ದ ವಿಷ್ಣುವರ್ಧನ್ ಅವರು ಆಗಿನ ಸಮಯಕ್ಕೆ ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿರಬಹುದು ಎಂದು ನಿಮಗೆ ಎನ್ನಿಸಿದರೆ, ಅದು ಸುಳ್ಳಾಗಿದೆ. ಕೊನೆಯ ಸಿನಿಮಾಗೆ ವಿಷ್ಣುವರ್ಧನ್ ಅವರು 65 ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದರು. ನಿರ್ಮಾಪಕರು ಮೊದಲು ಲಾಭ ಮಾಡಲಿ ಎನ್ನುತ್ತಿದ್ದರಂತೆ ವಿಷ್ಣುದಾದ. ಈ ವಿಚಾರವನ್ನು ಅವರ ಆಪ್ತರೊಬ್ಬರು ತಿಳಿಸಿದ್ದಾರೆ.