ವಿನೋದ್ ಪ್ರಭಾಕರ್ ಅವರಿಗೆ ಟವಲ್ ಸುತ್ತಿ ಹೊಡೆದಿದ್ದು ಯಾರು? ನೇರವಾಗಿ ಅಸಮಾಧಾನ ಹೊರ ಹಾಕಿದ ನಟ ವಿನೋದ್ ಪ್ರಭಾಕರ್..

ಕನ್ನಡ ಚಿತ್ರರಂಗ ಎಂದಿಗೂ ಮರೆಯಲಾಗದ ನಟರಲ್ಲಿ ಒಬ್ಬರು ಟೈಗರ್ ಪ್ರಭಾಕರ್. ವಿಲ್ಲನ್ ಪಾತ್ರಗಳಲ್ಲಿ ಮತ್ತು ಹೀರೋ ಆಗಿ, ಎರಡು ರೀತಿಯ ಪಾತ್ರಗಳಲ್ಲಿ ಟೈಗರ್ ಪ್ರಭಾಕರ್ ಅವರು ನಟಿಸಿ ಯಶಸ್ಸು ಪಡೆದಿದ್ದರು. ಪ್ರಭಾಕರ್ ಅವರ ಜನಪ್ರಿಯತೆ ಎಷ್ಟಿತ್ತು ಎಂದರೆ ಇವರ ಫೈಟ್ಸ್ ಗಳನ್ನು ನೋಡುವ ಸಲುವಾಗಿ ಜನರು ಥಿಯೇಟರ್ ಗೆ ಹೋಗುತ್ತಿದ್ದರು. ಇಂತಹ ಅದ್ಭುತ ನಟನ ಮಗ ವಿನೋದ್ ಪ್ರಭಾಕರ್. ಸ್ಟಾರ್ ನಟನ ಮಗ ಆಗಿದ್ದರು ಚಿತ್ರರಂಗಕ್ಕೆ ಎಂಟ್ರಿ ಕೊಡುವುದು ಮತ್ತು ಇಲ್ಲಿ ನೆಲೆಯೂರುವುದು ಸುಲಭ ಆಗಿರಲಿಲ್ಲ. ಬಹಳ ಕಷ್ಟಪಟ್ಟು ಚಂದನವನಕ್ಕೆ ಎಂಟ್ರಿ ಕೊಟ್ಟರು ವಿನೋದ್, ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು ಇವರಿಗೆ ಯಶಸ್ಸು ಸಿಗಲಿಲ್ಲ. ಇದೀಗ ವಿನೋದ್ ಅವರು ವರದ ಎನ್ನುವ ಸಿನಿಮಾದಲ್ಲಿ ನಟಿಸಿದ್ದು ಪ್ರೆಸ್ ಮೀಟ್ ನಲ್ಲಿ ತಮ್ಮ ಚಿತ್ರತಂಡದಿಂದ ತಮಗೆ ಆದ ಅವಮಾನದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ವಿನೋದ್ ಅವರಿಗೆ ಅಸಮಾಧಾನ ಆಗಿದ್ದೇಕೆ? ತಿಳಿಸುತ್ತೇವೆ ನೋಡಿ..

ವಿನೋದ್ ಪ್ರಭಾಕರ್ ಅವರು ಹಲವು ವರ್ಷಗಳ ಹಿಂದೆಯೇ ಸ್ಯಾಂಡಲ್ ವುಡ್ ಗೆ ಹೀರೋ ಆಗಿ ಎಂಟ್ರಿ ಕೊಟ್ಟರು, ಆದರೆ ಇವರು ನಟಿಸಿದ ಸಿನಿಮಾಗಳು ಹೇಳಿಕೊಳ್ಳುವಷ್ಟು ಹಿಟ್ ಆಗಲಿಲ್ಲ. ಹಾಗಾಗಿ ವಿನೋದ್ ಅವರಿಗೆ ಹೆಚ್ಚಿನ ಅವಕಾಶಗಳು ಸಹ ಸಿಗಲಿಲ್ಲ. ವಿನೋದ್ ಅವರಿಗೆ ಕಂಬ್ಯಾಕ್ ಸಿನಿಮಾ ಎನ್ನುವ ಹಾಗೆ ಇದ್ದದ್ದು ದರ್ಶನ್ ಅವರ ರಾಬರ್ಟ್ ಸಿನಿಮಾ, ಇದರಲ್ಲಿ ವಿನೋದ್ ಅವರು ಅಭಿನಯಿಸಿದ್ದ ಪಾತ್ರ ಎಲ್ಲರ ಮೆಚ್ಚುಗೆ ಪಡೆದಿತ್ತು, ಇದಾದ ಬಳಿಕ ಇನ್ನಷ್ಟು ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ವಿನೋದ್ ಅವರಿಗೆ ಸಿಕ್ಕಿತು. ಈಗ ವಿನೋದ್ ಅವರು ವರದ ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಸಿನಿಮಾದ ಪ್ರೆಸ್ ಮೀಟ್ ನಲ್ಲಿ ಹಾಜರಿದ್ದ ವಿನೋದ್ ಅವರು ಕೆಲವು ವಿಚಾರಕ್ಕೆ ಅಸಮಾಧಾನ ಹೊರಹಾಕಿದ್ದಾರೆ..

ವರದ ಸಿನಿಮಾ ನಿರ್ಮಾಪಕರು ಮತ್ತು ನಟ ವಿನೋದ್ ಪ್ರಭಾಕರ್ ಅವರ ನಡುವೆ ಕೆಲವೊಂದು ವಿಚಾರಗಳಿಗೆ ಮನಸ್ತಾಪವಾಗಿತ್ತು, ಅದು ಸ್ವಲ್ಪ ದೊಡ್ಡ ವಿವಾದವೇ ಆಗಿತ್ತು. ಆ ವಿವಾದಗಳ ಬಗ್ಗೆ ಪ್ರಶ್ನೆ ಕೇಳಿದಾಗ, ವಿನೋದ್ ಅವರು ಹೇಳಿದ್ದು ಹೀಗೆ.. “ನೋಡಿ ಇರುವೆ ಕಷ್ಟ ಇರುವೆಗೆ, ಆನೆ ಕಷ್ಟ ಆನೆಗೆ ಇರುತ್ತೆ. ಅವರಿಗೆ 50 ಸಾವಿರದಷ್ಟು ಕಷ್ಟ ಇದ್ರೆ, ನನಗೆ 5 ಲಕ್ಷದಷ್ಟು ಕಷ್ಟ ಇತ್ತು. ನಾವೇ ಕೂತು ಆ ಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದಿತ್ತು. ಆದರೆ ಸರ್ ಪ್ರೊಡ್ಯೂಸರ್ ಕೌನ್ಸಿಲ್ ಗೆ ಹೋದರು. ನನಗೆ ಹರ್ಟ್ ಆಗಿದ್ದು ಅದರಿಂದ, ಅಲ್ಲಿಂದ ಕಾಲ್ ಬಂದಾಗ ತುಂಬಾ ಹರ್ಟ್ ಆಯ್ತು. ನಾನು ತುಂಬಾ ಸೆನ್ಸಿಟಿವ್, ನಾವೇ ಕೂತ್ಕೊಂಡು ಮಾತಾಡಿ ಸರಿ ಮಾಡಬಹುದಿತ್ತಲ್ಲ, ಅಲ್ಲಿವರೆಗೂ ಯಾಕೆ ಹೋಗಬೇಕಿತ್ತು ಅಂತ ಅನ್ನಿಸ್ತು.

ಕೋವಿಡ್ ನಂತರ ಎಲ್ಲರಿಗೂ ಸಮಸ್ಯೆ ಆಗಿದೆ. ನನಗೂ ಸಮಸ್ಯೆ ಆಗಿದೆ. ನಾನು ಲಂಕಾಸುರ ಅಂತ ಇನ್ನೊಂದು ಸಿನಿಮಾ ಮಾಡ್ತಾ ಇದ್ದೀನಿ. ಆ ಸಿನಿಮಾ ನಿರ್ಮಾಪಕರಿಗು ಕೋವಿಡ್ ನಂತರ ಇದೇ ರೀತಿ ಸಮಸ್ಯೆ ಆಗಿತ್ತು. 10 ತಿಂಗಳಲ್ಲಿ 23 ದಿನ ಅಷ್ಟೇ ಚಿತ್ರೀಕರಣ ಮಾಡಿದ್ವಿ, ಆ ಸಿನಿಮಾಗಾಗಿ ನಾನು 2 ವರ್ಷ ಗಡ್ಡ ಕೂದಲು ಬಿಟ್ಟಿದ್ದೇ, ಫೈಟರ್ ಸಿನಿಮಾ ಚಿತ್ರೀಕರಣಕ್ಕೆ ಗಡ್ಡ ಬೇಕಿರಲಿಲ್ಲ. ನಾನು ಬೇರೆ ಸಿನಿಮಾ ಕೆಲಸಗಳಲ್ಲಿ ಕೂಡ ಭಾಗಿಯಾಗಬೇಕಿದ್ದರಿಂದ, ಲಂಕಾಸುರ ಪ್ರೊಡ್ಯೂಸರ್ ಜೊತೆ ಮಾತನಾಡಿದಾಗ, ನನಗೆ ಹಣ ಸಿಕ್ತಾ ಇಲ್ಲ ಸರ್ ಸಪೋರ್ಟ್ ಮಾಡಿ ಅಂತ ಹೇಳಿದ್ರು. ಪಾರ್ಟ್ನರ್ಶಿಪ್ ನಲ್ಲಿ ಮಾಡಿದ್ರೆ ಹಣ ಕೊಡೋದು ಕಡಿಮೆ ಅಂತ ಹೇಳಿ ನಾನು ಅವರಿಂದ ಸಿನಿಮಾ ತಗೊಂಡೆ.

ನಮ್ಮ ತಂದೆ ಹೆಸರಲ್ಲಿ ಟೈಗರ್ ಟಾಕೀಸ್ ಅಂತ ಹೊಸ ಸಂಸ್ಥೆ ಶುರು ಮಾಡಿ, ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ. ನನಗೂ ಸಮಸ್ಯೆ ಇದೆ, ಫೈನಾನ್ಸ್ ಗಳಿಂದ ಹೇಗೋ ಹಣ ಹೊಂದಿಸಿ ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ. ಇಲ್ಲಿ ಒಬ್ಬರ ಕಷ್ಟಕ್ಕೆ ಮತ್ತೊಬ್ಬರು ಜೊತೆಯಾಗಿ ಹೆಗಲು ಕೊಡಬೇಕು, ಆದರೆ ಆ ಸಮಯದಲ್ಲಿ ಇವರು ಆತುರಪಟ್ಟು ಆ ರೀತಿ ಮಾಡಿದ್ರಿಂದ ನನಗೆ ಬೇಸರ ಆಗಿತ್ತು. ಅವರು ಬರೆದಿದ್ದ ಲೆಟರ್ ನಲ್ಲಿ ಇದನ್ನ ಕಂಪ್ಲೇಂಟ್ ಅಂತ ತಗೋಬೇಡಿ ಅಂತ ಇತ್ತು. ಅದನ್ನ ಓದಿ ಕೇಳಿದೆ, ಇದೇನ್ ಸರ್ ಚಪ್ಪಲಿನ ಶಾಲ್ ನಲ್ಲಿ ಸುತ್ಕೊಂಡು ಹೊಡೆದ ಹಾಗಿದೆ ಅಂತ. ಅವರು ಎಕ್ಸೈಟ್ ಆಗಿಬಿಡ್ತಾರೆ. ಆದರೆ ಎಲ್ಲವು ಸಿಂಪಲ್ ಆಗಿ ಆಗುತ್ತೆ..

ಈಗಲೂ ಕೂಡ ಎಕ್ಸೈಟ್ ಆಗಿ ಏನೋ ಮಾತನಾಡೋಕೆ ಹೋಗಿ, ಎಲ್ಲೆಲ್ಲಿಗೋ ವಿಷಯ ಹೋಯ್ತು. ನಾನು ತುಂಬಾ ಸಿಂಪಲ್ ವ್ಯಕ್ತಿ, ನನಗೆ ದುಡ್ಡುಅನ್ನೋದು ತಲೆಯಲ್ಲಿಲ್ಲ, ನನ್ನ ತಾಯಿ ನನ್ನನ್ನ ಹಾಗೆ ಬೆಳೆಸಿದ್ದಾರೆ. ಎಲ್ಲಿ ಮಲ್ಕೊ ಅಂದ್ರು ಮಲ್ಕೊತಿನಿ, ನೀವು ಏನ್ ಊಟ ಕೊಟ್ರು ಮಾಡ್ತೀನಿ. ಅಂತಹ ವ್ಯಕ್ತಿ ನಾನು, ನಮ್ಮ ತಂದೆ ಹೋಗಿ 20 ವರ್ಷ ಆಗಿದೆ, ಅವರ ಸಮಾಧಿಗೆ ನಮಗಿಂತ ಹೆಚ್ಚಾಗಿ ಅಭಿಮಾನಿಗಳೇ ಹೋಗ್ತಾರೆ. ಅಪ್ಪು ಸರ್ ಎಂಥ ವ್ಯಕ್ತಿ, ನಿನ್ನೆ ಟ್ರೈಲರ್ ನೋಡ್ತಾ ಕಣ್ಣೀರು ಹಾಕಿದೆ. ಹಾಗೆ ಬದುಕಬೇಕು..
ಟ್ರೈಲರ್ ಲಾಂಚ್ ಈವೆಂಟ್ ನಲ್ಲಿ ಈ ವಿಚಾರ ಎಲ್ಲಾ ಬಂದಿದ್ದಕ್ಕೆ ದಯವಿಟ್ಟು ಕ್ಷಮಿಸಿ..” ಎಂದು ಎಲ್ಲರ ಬಳಿ ಕ್ಷಮೆ ಕೇಳುತ್ತಾರೆ ವಿನೋದ್. ಇದು ವರದ ಸಿನಿಮಾ ವಿಚಾರದಲ್ಲಿ ನಡೆದ ವಿವಾದ ಆಗಿದೆ.