ದೊಡ್ಡ ದೊಡ್ಡವರಿಗೆ ನೇರವಾಗಿಯೇ ತಿರುಗೇಟು ಕೊಟ್ಟ ವಿಜಯಲಕ್ಷ್ಮಿ ದರ್ಶನ್..

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ವಿಚಾರ ಬಿಟ್ಟರೆ ಸದಾ ಸಾಮಾಜಿಕ ಕಳಕಳಿಯುಳ್ಳ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ.. ಸದಾ ತಮ್ಮ ಅಭಿಮಾನಿಗಳಿಗೆ ಸ್ಪೂರ್ತಿಯಾಗಿ ನಿಂತಿರುತ್ತಾರೆ.. ಸದ್ಯ ಕೊರೊನಾ ಲಾಕ್ ಡೌನ್ ಸಮಯದಲ್ಲಿಯೂ ಕೂಡ ಸಾವಿರಾರು ಜನರಿಗೆ ನೆರವಾಗಿದ್ದು ಮಾನವೀಯತೆ ತೋರಿದ್ದಾರೆ..

ಇದೀಗ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಸುದ್ದಿಯಾಗುತ್ತಿದ್ದಾರೆ.‌ ಹೌದು ವಿಜಯಲಕ್ಷ್ಮಿ ದರ್ಶನ್ ಅವರು ಸದ್ಯ ಸಣ್ಣ ಪುಟ್ಟ ಅಂಗಡಿಗಳ ಕುರಿತು ಪೋಸ್ಟ್ ಮಾಡಿದ್ದು, ವೈರಲ್ ಆಗುತ್ತಿದೆ.. ಅದರಲ್ಲೂ ದೊಡ್ಡ ದೊಡ್ಡ ಕಂಪನಿಗಳಾದ ಅಮೇಜಾನ್ , ಕೆ ಎಫ್ ಸಿ ಈ ರೀತಿಯ ಅಂಗಡಿಗಳಲ್ಲಿ ಕೊಳ್ಳಲೇ ಬೇಡಿ ಎಂದು ನೇರವಾಗಿಯೇ ಹೇಳಿದ್ದು ಸಣ್ಣ ಪುಟ್ಟ ಅಂಗಡಿಗಳಲ್ಲಿ ವ್ಯಾಪಾರ ಮಾಡಿ ಎಂದು ಮನವಿ ಮಾಡಿದ್ದಾರೆ..

ಹೌದು, ಲಾಕ್​ಡೌನ್ ಮುಗಿಯುತ್ತಿದ್ದಂತೆ ಪಿಜ್ಜಾ.. ಬರ್ಗರ್​ ಅನ್ನು ಬಿಟ್ಟಾಕಿ.. ಕಿರಾಣಿ ಅಂಗಡಿಗಳಿಗೆ ಹೋಗಿ ವ್ಯಾಪಾರ ಮಾಡಿ ಎಂದು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.. ಕೊರೊನಾದಿಂದಾಗಿ ಸಣ್ಣ ಸಣ್ಣ ವ್ಯಾಪಾರಿಗಳಿಗೆ ನಷ್ಟ ಉಂಟಾಗಿದೆ.. ಒಂದೇ ಒಂದು ತಿಂಗಳು ಬಂದ್ ಆಗಿದ್ದಕ್ಕೆ ಅವರೆಲ್ಲರ ವ್ಯಾಪಾರವೇ ಮುಚ್ಚಿ ಹೋಗುವ ಆತಂಕ ವ್ಯಕ್ತಪಡಿಸಿದ್ದಾರೆ.. ಇದೇ ಕಾರಣಕ್ಕೆ ಎಲ್ಲರೂ ತರಕಾರಿಗಳನ್ನು ಅಕ್ಕಪಕ್ಕದ ಸಣ್ಣ ತರಕಾರಿ ವ್ಯಾಪಾರಿಗಳಿಂದ ಕೊಂಡುಕೊಳ್ಳಿ.. ಸಮೀಪದ ದರ್ಶಿನಿಗಳಲ್ಲಿ ಫಿಲ್ಟರ್​ ಕಾಫಿ ಕುಡಿಯಿರಿ.. ಅಮೇಜಾನ್, ಪಿಜ್ಜಾ, ಕೆಎಫ್ ಸಿ, ಮ್ಯಾಕ್ ಡೊನಾಲ್ಡ್ ಇವೆಲ್ಲವೂ ಲಾಕ್​ಡೌನ್ ಆದ್ರೂ ಬದುಕುತ್ತವೆ.. ಆದ್ರೆ ಸಣ್ಣ ವ್ಯಾಪಾರಿಗಳ ಕಷ್ಟ ಹೇಳಲು ಅಸಾಧ್ಯ.. ಹೀಗಾಗಿ ಎಲ್ಲರೂ ಲಾಕ್​ಡೌನ್ ಮುಗಿದ ಮೇಲೆ ದಯವಿಟ್ಟು ಸಣ್ಣ ಅಂಗಡಿಗಳತ್ತ ಹೋಗಿ.. ಅಕ್ಕಪಕ್ಕದ ಕಿರಾಣಿ ಅಂಗಡಿಗಳಲ್ಲಿ ಹೋಗಿ ವ್ಯಾಪಾರ ಮಾಡಿ.. ಇದರಿಂದ ಅವರ ಬದುಕಿಗೆ ಸಹಾಯವಾಗುತ್ತದೆ ಎಂದಿದ್ದಾರೆ..

ಸದ್ಯ ವಿಜಯಲಕ್ಷ್ಮಿ ದರ್ಶನ್ ಅವರ ಕಾಳಜಿಗೆ ಮೆಚ್ಚುಗೆ ವ್ಯಕ್ತವಾಗಿದ್ದು ಎಲ್ಲರೂ ಸ್ಥಳೀಯರಲ್ಲಿಯೇ ವ್ಯಾಪಾರ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ..