ದರ್ಶನ್ ಪತ್ನಿ‌ ವಿಜಯಲಕ್ಷ್ಮಿ, ನಟ ರವಿಶಂಕರ್ ಅವರಿಗೆ ಕೊರೊನಾ ಆತಂಕ..

ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಿನ್ನೆಯಷ್ಟೇ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರ ಮನೆಯಲ್ಲಿ ತಂದೆ, ಪತ್ನಿ ಹಾಗೂ ಮಗಳಿಗೂ ಸೋಂಕು ಕಾಣಿಸಿಕೊಂಡಿದ್ದು, ಆತಂಕ ಹೆಚ್ಚಾಗಿದೆ.. ಮನೆಯ ಅಡುಗೆ ಕೆಲಸದವರಿಗೆ ಮೊದಲು ಸೋಂಕು ಕಾಣಿಸಿಕೊಂಡಿದ್ದು, ಆ ಬಳಿಕ ತಂದೆ, ಪತ್ನಿ, ಮಗಳು ಹಾಗೂ ಮನೆಯ ಸಹಾಯಕ ಕೆಲಸಗಾರರೊಬ್ಬರಿಗೆ ಸೋಂಕು ಇರುವುದು ದೃಢ ಪಟ್ಟಿದೆ‌..

ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ಜೋನ್ ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಎಲ್ಲಿ ಏನು ಬೇಕಾದರೂ ಆಗವು ಸಾಧ್ಯತೆ ಇದೆ.. ಹೌದು ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು, ನಟ ರವಿಶಂಕರ್ ಗೌಡ, ನಟಿ ಪೂಜಾ ಗಾಂಧಿ ಅವರಿಗೂ ಕೊರೊನಾ ಆತಂಕ ಹೆಚ್ಚಾಗಿದೆ.. ಹೌದು ವಿಜಯಲಕ್ಷ್ಮಿ ಅವರು ಮಗ ವಿನೀಶ್ ಜೊತೆ ವಾಸ ಮಾಡುತ್ತಿರುವ ಬೆಂಗಳೂರಿನ ಪ್ರೆಸ್ಟಿಜ್ ಅಪಾರ್ಟ್ಮೆಂಟ್ ನಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು ಪ್ರತಿದಿನ ಒಂದೇ ಅಪಾರ್ಟ್ಮೆಂಟ್ ನಲ್ಲಿ ಓಡಾಡುವ ಅಲ್ಲಿನ ನಿವಾಸಿಗಳಿಗೆ ಭಯದ ವಾತಾವರಣ ಮೂಡಿದೆ..

ಅದೇ ಅಪಾರ್ಟ್ಮೆಂಟ್ ನಲ್ಲಿ ನಟಿ ಪೂಜಾ ಗಾಂಧಿ, ನಟ ರವಿಶಂಕರ್ ಗೌಡ ಕೂಡ ವಾಸವಿದ್ದು ಅಪಾರ್ಟ್ಮೆಂಟ್ ಸೀಲ್ ಡೌನ್ ಆಗಿದೆ.. ಆ ಜಾಗದಿಂದ ಯಾರೂ ಹೊರ ಬರಲಾಗದ ಕಾರಣ ಆತಂಕದಿಂದ ದಿನ ದೂಡುವಂತಾಗಿದೆ.. ಇನ್ನು ಕೆಲ ದಿನಗಳ‌ ಹಿಂದಷ್ಟೇ ಸುದೀಪ್ ಅವರ ಮನೆ ಇರುವ ಏರಿಯಾ ಕೂಡ ಸೀಲ್ ಡೌನ್‌ ಆಗಿದೆ..