ನಾನಿನ್ನು ಉಳಿಯೋದಿಲ್ಲ.. ರಾತ್ರೋ ರಾತ್ರಿ ಆ ಸ್ಥಿತಿಯಲ್ಲಿ ನಟಿ ವಿಜಯಲಕ್ಷ್ಮಿ ಮಾಡಿದ್ದೇನು ಗೊತ್ತಾ.. ಮನಕಲಕುತ್ತದೆ..

ನಟಿ ವಿಜಯಲಕ್ಷ್ಮಿ ಒಂದು ಕಾಲದ ಕನ್ನಡದ ಟಾಪ್ ನಟಿಯರ ಪೈಕಿ ಒಬ್ಬರು.. ಕೈತುಂಬಾ ದುಡ್ಡು ನೋಡಿದವರು.. ಐಶಾರಾಮಿ ಬದುಕು ಸಾಗಿಸಿದವರು. ಆದರೆ ಈಗ ಜೀವನ ಯಾವ ಮಟ್ಟಕ್ಕೆ ಬಂದಿದೆ ಎಂದರೆ ನಿಜಕ್ಕೂ ಅವರ ಸ್ಥಿತಿ‌ ಮನಕಲಕುತ್ತದೆ.. ಅವರು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿರಬಹುದು.. ಪದೇ ಪದೇ ಸಹಾಯ ಕೇಳುವ ಮೂಲಕ ಜನರಿಗೆ ಕಿರಿಕಿರಿಯನ್ನೂ ಸಹ ಉಂಟು ಮಾಡಿರಬಹುದು.. ಆದರೆ ಒಂದು ಸಮಯದಲ್ಲಿ ಚೆನ್ನಾಗಿ ಬದುಕಿ ಬಾಳಿದವರು ಈ ರೀತಿಯ ಸ್ಥಿತಿಗೆ ಬಂದು ಮತ್ತೊಬ್ಬರನ್ನು ಅಂಗಲಾಚುವುದು ನಿಜಕ್ಕೂ ನೋಡಲಸಾಧ್ಯ.. ಯಾರಿಗೂ ಇಂತಹ ಪರಿಸ್ಥಿತಿ ಬಾರದಿರಲಿ.. ಇಷ್ಟು ದಿನಗಳ ಕಾಲ ಅಕ್ಕನಿಗಾಗಿ ಸಹಾಯ ಕೇಳುತ್ತಿದ್ದ ವಿಜಯಲಕ್ಷ್ಮಿ ಅವರು ಇದೀಗ ರಾತ್ರೋ ರಾತ್ರಿ ಮನಕಲಕುವ ಸ್ಥಿತಿಗೆ ಬಂದು ನಿಂತಿದ್ದು ಕೊನೆಯದಾಗಿ ವೀಡಿಯೋ ಒಂದನ್ನು ಮಾಡಿದ್ದಾರೆ..

ಹೌದು ಸ್ಯಾಂಡಲ್ವುಡ್ ನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ನಟಿ ವಿಜಯಲಕ್ಷ್ಮಿ ಅವರು ನಂತರದ ದಿನಗಳಲ್ಲಿ ಸೃಜನ್ ಅವರ ಜೊತೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು.. ಆದರೆ ಎರಡೂ ಕುಟುಂಬದ ನಡುವೆ ಮನಸ್ಥಾಪಗಳು ಬಂದ ಕಾರಣ ಇಬ್ಬರು ಕೂತು ಮಾತನಾಡಿ ನಿಶ್ಚಿತಾರ್ಥವನ್ನು ಮುರಿದುಕೊಂಡರು.. ಅದಾದ ಬಳಿಕ ವಿಜಯಲಕ್ಷ್ಮಿ ತಮಿಳು ಚಿತ್ರರಂಗದಲ್ಲಿ ಬ್ಯುಸಿ ಆದರು.. ಅಲ್ಲಿಯೇ ಸೆಟಲ್ ಆದರು.. ಇತ್ತ ಕನ್ನಡದ ಜನರು ಸಹ ಅವರನ್ನು ಮರೆತರು.. ನಂತರ ಬಹಳಷ್ಟು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದರು‌.‌ ಆದರೆ ಕಳೆದ ಎರಡು ವರ್ಷಗಳ ಹಿಂದಷ್ಟೇ ಮತ್ತೆ ಕಾಣಿಸಿಕೊಂಡ ವಿಜಯಲಕ್ಷ್ಮಿ ಅವರು ಮತ್ತೆ ಕನ್ನಡ ಚಿತ್ರರಂಗದಲ್ಲಿ ಕಾಣಿಸುವುದಾಗಿ ತಿಳಿಸಿದರು.. ತಮಿಳಿನ ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದರು..

ಆದರೆ ಕಳೆದ ವರ್ಷ ಆರೋಗ್ಯ ಸರಿ ಇಲ್ಲದೇ ಆಸ್ಪತ್ರೆಗೆ ದಾಖಲಾದ ನಟಿ ವಿಜಯಲಕ್ಷ್ಮಿ ಅವರು ಆರ್ಥಿಕ ಸಂಕಷ್ಟದಲ್ಲಿದ್ದು ಕನ್ನಡ ಚಿತ್ರರಂಗದವರನ್ನು ಸಹಾಯ ಕೇಳಿದ್ದರು.. ಕೆಲವರು ಸಹಾಯ ಮಾಡಿದ್ದು ಉಂಟು.. ಸುದೀಪ್ ಅವರೇ ಖುದ್ದು ಲಕ್ಷ ರೂಪಾಯಿ ಕೊಟ್ಟು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿದ್ದೂ ಉಂಟು.. ಆದರೆ ಆನಂತರ ಚೇತರಿಕೆ ಕಂಡ ಬಳಿಕ ಕಷ್ಟಗಳನ್ನು ನೋಡಿದ್ದ ವಿಜಯಲಕ್ಷ್ಮಿ ಅವರು ಸಿನಿಮಾ ಅಥವಾ ಧಾರಾವಾಹಿ ಗಳಲ್ಲಿ ಅಭಿನಯಿಸಿ ಕೈಯಲ್ಲಿ ನಾಲ್ಕು ಕಾಸು ಹಣ ಇಟ್ಟುಕೊಳ್ಳಬೇಕಾಗಿತ್ತು.. ಆದರೆ ಅವರು ಮಾಡಿದ್ದೇ ಬೇರೆ.. ಹೌದು ಪದೇ ಪದೇ ವೀಡಿಯೋ ಮಾಡಿ ಚಿತ್ರರಂಗದವರ ಬಳಿಯೇ ಸಹಾಯ ಕೇಳುತ್ತಲೇ ಇದ್ದರು.. ಕೆಲ ತಿಂಗಳ ಹಿಂದೆ ವಿಜಯಲಕ್ಷ್ಮಿ ಅವರ ಅಕ್ಕನ ಆರೋಗ್ಯ ಸಹ ತೀರಾ ಹದಗೆಟ್ಟು ಆಸ್ಪತ್ರೆಗೆ ಸೇರಿಸಿ ಮತ್ತೊಮ್ಮೆ ಹಣದ ಸಹಾಯ ಮಾಡುವಂತೆ ಮನವಿ ಮಾಡಿದ್ದರು..

ಜನರು ಸಹ ಇವರದ್ದು ಇದ್ದದ್ದೇ ಎಂದು ಸುಮ್ಮನಾದರು.. ಆದರೆ ಆ ಪರಿಸ್ಥಿತಿಯಲ್ಲಿ ಅಸಾಹಯಕರಾಗಿದ್ದ ವಿಜಯಲಕ್ಷ್ಮಿ ಅವರಿಗೆ ಅಕ್ಕನ ಜೊತೆ ಅಮ್ಮನನ್ನು ಜೊತೆಯಲ್ಲಿಯೇ ಆಸ್ಪತ್ರೆಯಲ್ಲಿ ಇಟ್ಟುಕೊಂಡು ನೋಡಿಕೊಳ್ಳಬೇಕಾದ್ದರಿಂದ ಹಣ ಕೇಳಲೇ ಬೇಕಾಗಿತ್ತು.. ವಿನೋದ್ ರಾಜ್ ಅವರು ಶೃತಿ ಅವರು ಎಲ್ಲರೂ ಸಹ ತಮ್ಮ ಕೈಲಾದಂತೆ ಸಣ್ಣದಾಗಿ ಹಣವನ್ನೂ ನೀಡಿದರು.. ಆನಂತರ ಕಲಾವಿದರ ಬಳಿ ಸಹಯಾ ಕೇಳುವುದರಲ್ಲಿ ಯಾವುದೇ ಪ್ರಯೋಜನವಿಲ್ಲವೆಂದು ಸುಮ್ಮನಾದರು..

ಆದರೆ ಇದೀಗ ನಟಿ ವಿಜಯಲಕ್ಷ್ಮಿ ಅವರಿಗೆ ಕೊರೊನಾ ಸೋಂಕು ತಗುಲಿದ್ದು ಜೊತೆಗೆ ನ್ಯುಮೋನಿಯಾ ಸಹ ಕಾಣಿಸಿಕೊಂಡಿದೆ.. ನಾನು ಉಳಿಯೋದು ಸಂಶಯ.. ಇಂತಹ ಪರಿಸ್ಥಿತಿಯಲ್ಲಿಯೂ ನಮಗೆ ಯಾರೂ ಸಹ ಸಹಾಯ ಮಾಡುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.. ಹೌದು ಕಳೆದ ಐದು ದಿನಗಳಿಂದ ವಿಪರೀತ ಜ್ವರ ಇದೆ.. ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಕೋವಿಡ್ ಕೇಂದ್ರಕ್ಕೆ ಹೋಗಬೇಕು.. ಆದರೆ ನನ್ನ ಅಕ್ಕ ಹಾಗೂ ನನ್ನ ತಾಯಿಯನ್ನು ಎಲ್ಲಿ ಇಡಬೇಕು ಅನ್ನೋದು ನನಗೆ ತಿಳಿಯುತಿಲ್ಲ.. ಕಲಾವಿದರ ಸಂಘಕ್ಕೆ ಮನವಿ ಮಾಡುತ್ತಲೇ ಇದ್ದೇನೆ.. ಆದರೆ ಯಾವುದೇ ಪ್ರಯೋಜನ ಇಲ್ಲ.. ಐವತ್ತು ಜನರ ಬಳಿ‌‌ ಮಾತನಾಡಿದೆ.. ದಯವಿಟ್ಟು ಯಾರಾದರು ದರ್ಶನ್ ಸರ್ ಹತ್ತಿರ ಅಥವಾ ಯಶ್ ಸರ್ ಹತ್ತಿರ ಮಾತನಾಡಿಸಿ ಎಂದು ಕೇಳಿಕೊಳ್ಳುತ್ತಿದ್ದೇನೆ.. ಆದರೆ ಯಾರೂ ಸಹ ಮಾತನಾಡಿಸುತ್ತಿಲ್ಲ..

ನಾನು ಉಳಿಯೋದು ಸಂಶಯವಾಗಿದೆ.. ನನಗೆನಾದರು ಆದರೆ ಅದಕ್ಕೆ ಇವರುಗಳೇ ಕಾರಣ.. ನನಗೆ ಯಾರಾದರು ಸಹಾಯ ಮಾಡಿ ಬಹಳ ಕೆಟ್ಟ ಪರಿಸ್ಥಿತಿಯಲ್ಲಿ ಇದ್ದೇನೆ ಎಂದಿದ್ದಾರೆ.. ನಿಜಕ್ಕೂ ಸಂದರ್ಭ ಅನ್ನೋದು ಯಾರ ಜೀವನದಲ್ಲಿ ಹೇಗೇಗಿದಿಯೋ ತಿಳಿಯದು.. ಹೌದು ವಿಜಯಲಕ್ಷ್ಮಿ ಅವರು ಸಹಾಯ ಕೇಳುವಾಗ ಸರೊಯಾದ ರೀತಿಯಲ್ಲಿ ಕೇಳಿಲ್ಲ ನಿಜ.‌ ಆದರೆ ಸಧ್ಯ ಅವರ ಮಾತುಗಳು ಅವರ ಪರಿಸ್ಥಿತಿ ನೋಡಿದರೆ ತೀರಾ ತೊಂದರೆಯಲ್ಲಿದ್ದು ಅಸಾಹಯಕರಾಗಿರುವುದಂತೂ ಸತ್ಯ.. ಕಲಾವಿದರ ಸಂಘ ಅವರಿಗೆ ಸಧ್ಯ ಈ ಪರಿಸ್ಥಿತಿಯಿಂದ ಹೊರ ಬರಲು ಸಹಾಯ ಮಾಡಿದರೆ ಒಳ್ಳೆಯದು.. ನಂತರ ಅವರು ಧಾರವಾಹಿಗಳಲ್ಲಿಯೋ ಅಥವಾ ಸಿನಿಮಾಗಳಲ್ಲಿಯೋ ಅಭಿನಯಿಸಿ ತಮ್ಮ ಜೀವನವನ್ನು ರೂಪಿಸಿಕೊಳ್ಳುವಂತಾಗಲಿ.. ಹೋದ ಮೇಲೆ ಅಯ್ಯೋ ಎನ್ನುವುದಕ್ಕಿಂತ ಇದ್ದಾಗ ಸಹಾಯ ಮಾಡುವುದು ಸೂಕ್ತ..