ಜೇಬಲ್ಲಿ‌ ಇದ್ದದ್ದು ನಲವತ್ತು ರೂಪಾಯಿ ಎಂದ ದುನಿಯಾ ವಿಜಯ್.. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್

ಕನ್ನಡ ಚಿತ್ರರಂಗಕ್ಕೆ ಯಾವುದೇ ಬ್ಯಾಗ್ರೌಂಡ್ ಇಲ್ಲದೆ, ಹಣ ಇಲ್ಲದೆ, ಗಾಡ್ ಫಾದರ್ ಇಲ್ಲದೆ ಬಂದು ಇಂದು ಎತ್ತರಕ್ಕೆ ಬೆಳೆದು, ಯಶಸ್ವಿಯಾಗಿರುವ ಅಪರೂಪದ ನಟರಲ್ಲಿ ಒಬ್ಬರು ದುನಿಯಾ ವಿಜಯ್. ಇವರು ನಡೆದು ಬಂದ ಕಷ್ಟದ ಹಾದಿ ಬಗ್ಗೆ ಹಲವರಿಗೆ ಗೊತ್ತಿರುವುದಿಲ್ಲ. ವಿಜಯ್ ಅವರು ಹುಟ್ಟಿದ್ದು ಬಡತನದ ಕುಟುಂಬದಲ್ಲಿ, ಅವರ ತಂದೆ ತಾಯಿ ಸಿನಿಮಾಗಳಿಗೆ ಪ್ರೋತ್ಸಾಹ ನೀಡುತ್ತಿರಲಿಲ್ಲ. ಓದಿನಲ್ಲಿ ವಿಜಯ್ ಅವರಿಗೆ ಆಸಕ್ತಿ ಇರಲಿಲ್ಲ. ತಂದೆ ತಾಯಿಗೆ ವಿರುದ್ಧವಾಗಿ ಸಿನಿಮಾ ಪ್ರಪಂಚವನ್ನು ಆರಿಸಿಕೊಂಡ ವಿಜಯ್ ಅವರು, ಮೊದಲಿಗೆ ಸ್ಟಂಟ್ಸ್ ಗಳನ್ನು ಕಲಿತುಜ್ ನಂತರ ನಟನೆ ಶುರುಮಾಡಿ, ಇಂದು ನಿರ್ದೇಶಕನಾಗಿ ಯಶಸ್ಸು ಪಡೆದಿರುವುದು ನಿಜಕ್ಕೂ ಗೌರವಯುತವಾದ ಸಾಧನೆ. ವಿಜಯ್ ಅವರ ಈ ಗೆಲುವು ಸುಲಭವಾದದ್ದಲ್ಲ, ಸಲಗ ಸಿನಿಮಾ ಶುರುವಾಗುವ ಸಮಯದಲ್ಲಿ ವಿಜಯ್ ಅವರು ಖಾಲಿ ಕೈಯಲ್ಲಿದ್ದರು, ಅವರ ಬಳಿ ಇದ್ದಿದ್ದು 40 ರೂಪಾಯಿ ಮಾತ್ರ ಎಂದು ಅಂದು ನಡೆದ ಘಟನೆ ಬಗ್ಗೆ ವಿಜಯ್ ಅವರು ತಿಳಿಸಿದ್ದಾರೆ.

ದುನಿಯಾ ವಿಜಯ್ ಎಂದು ಖ್ಯಾತಿಯಾಗಿದ್ದ ಇವರು ಇಂದು ಸಲಗ ವಿಜಯ್ ಎಂದು ಫೇಮಸ್ ಆಗಿದ್ದಾರೆ. ಅಷ್ಟು ಯಶಸ್ಸು ಕಂಡಿದೆ ಸಲಗ ಸಿನಿಮಾ. ನಟ ವಿಜಯ್ ಅವರು ಚಿತ್ರರಂಗದಲ್ಲಿ ಏನಾದರೂ ಸಾಧನೆ ಮಾಡಲೇಬೇಕು ಎನ್ನುವ ಛಲದಿಂದ ಬಂದವರು. ಮೊದಲಿಗೆ ಬಾಡಿ ಬಿಲ್ಡಿಂಗ್ ನಲ್ಲಿ ತೊಡಗಿಕೊಂಡಿದ್ದ ವಿಜಯ್ ಅವರು ಹಲವು ಕಾಂಪಿಟೇಶನ್ ಗಳಲ್ಲಿ ಸ್ಪರ್ಧಿಸಿ, ನಂತರ ಸಿನಿಮಾಗೆ ಬಂದರು. ಮೊದಲಿಗೆ ವಿಜಯ್ ಅವರು ನಟಿಸುತ್ತಾ ಇದ್ದದ್ದು ಸಣ್ಣ ಪುಟ್ಟ ಪಾತ್ರಗಳಲ್ಲಿ ಹಾಗೂ ಫೈಟ್ಸ್ ಸನ್ನಿವೇಶಗಳಲ್ಲಿ. ಶಿವಣ್ಣ ಮತ್ತು ಸುದೀಪ್ ಅವರ ಸಿನಿಮಾಗಳಲ್ಲಿ ವಿಲ್ಲನ್ ಆಗಿ ನಟಿಸಿದ್ದಾರೆ ವಿಜಯ್.

ವಿಜಯ್ ಅವರು ಹೀರೋ ಆಗಿದ್ದು ದುನಿಯಾ ಸಿನಿಮಾ ಮೂಲಕ. ಸಿನಿಮಾ ಬಿಡುಗಡೆ ಆಗುವ ಮೊದಲು ಇವನು ಹೀರೋನ ಎಂದು ಜನರು ಕೇವಲವಾಗಿ ಮಾತನಾಡಿದ್ದರಂತೆ. ಆದರೆ ದುನಿಯಾ ಸಿನಿಮಾ ಬಿಡುಗಡೆಯಾಗಿ ಎಷ್ಟು ದೊಡ್ಡ ಹಿಟ್ ಆಯಿತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಸಿನಿಮಾ ಯಶಸ್ಸಿನಿಂದ ದುನಿಯಾ ಎನ್ನುವ ಹೆಸರು ವಿಜಯ್ ಅವರ ಹೆಸರಿನ ಜೊತೆ ಸೇರಿಕೊಂಡಿತು. ಅದಾದ ನಂತತ ವಿಜಯ್ ಅವರಿಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು, ಆದರೆ ವಿಜಯ್ ಅವರಿಗೆ ಬ್ಲಾಕ್ ಬಸ್ಟರ್ ಎನ್ನುವಂತಹ ಹಿಟ್ ಮತ್ತೆ ಸಿಕ್ಕಿದ್ದು ಜಂಗ್ಲಿ ಸಿನಿಮಾ ಮೂಲಕ. ಅದಾದ ಬಳಿಕ ಕೆಲವು ಸಿನಿಮಾಗಳಲ್ಲಿ ವಿಜಯ್ ಅವರು ನಟಿಸಿದರು ಆದರೆ ಯಾವುದು ಹೇಳಿಕೊಳ್ಳುವಷ್ಟು ಯಶಸ್ಸು ತಂದುಕೊಡಲಿಲ್ಲ.

ಆ ಸಮಯದಲ್ಲಿ ಆರ್ಥಿಕವಾಗಿ ವಿಜಯ್ ಅವರು ತುಂಬಾ ಕಷ್ಟದಲ್ಲಿದ್ದರು. ಯಶಸ್ಸಿಗಾಗಿ ಹುಡುಕಾಟ ನಡೆಸುತ್ತಿದ್ದರು. ಒಳ್ಳೆಯ ಪಾತ್ರ, ಒಳ್ಳೆಯ ಕಥೆಗಾಗಿ ಹುಡುಕುತ್ತಿದ್ದರು. ಆ ಸಮಯದಲ್ಲಿ ಶುರುವಾಗಿದ್ದೆ ಸಲಗ ಸಿನಿಮಾ. ಇದು ವಿಜಯ್ ಅವರ ಕನಸಿನ ಕೂಸು. ಸಿನಿಮಾ ಕಥೆ, ಚಿತ್ರಕತೆ, ಡೈಲಾಗ್ ಎಲ್ಲದರಲ್ಲೂ ತೊಡಗಿಕೊಂಡಿದ್ದ ವಿಜಯ್ ಅವರು ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡರು, ಈ ಸಿನಿಮಾ ಮೂಲಕ ಸಕ್ಸಸ್ ಪಡೆಯಲೇಬೇಕು ಎಂದು ಪಣ ತೊಟ್ಟಿದ್ದರು ವಿಜಯ್. ಅಂದುಕೊಂಡಂತೆ ಕಳೆದ ವರ್ಷ ದಸರಾ ಹಬ್ಬಕ್ಕೆ ಬಿಡುಗಡೆಯಾದ ಸಲಗ ಸಿನಿಮಾ ಬಾಕ್ಸ್ ಆಫೀಸ್ ಧೂಳೆಬ್ಬಿಸಿತು, ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು.

ಇತ್ತೀಚೆಗೆ ಸಲಗ ಸಿನಿಮಾದ ಸಕ್ಸಸ್ ಮೀಟ್ ಹಮ್ಮಿಕೊಂಡಿದ್ದರು ನಟ ದುನಿಯಾ ವಿಜಯ್. ಆ ಕಾರ್ಯಕ್ರಮಕ್ಕೆ ಸೆಂಚುರಿ ಸ್ಟಾರ್ ಶಿವಣ್ಣ ಸೇರಿದಂತೆ ಇನ್ನಿತರ ಸಿನಿಮಾರಂಗದ ಗಣ್ಯರು ಬಂದಿದ್ದರು. ಆಗ ಮಾತನಾಡಿದ ದುನಿಯಾ ವಿಜಯ್ ಅವರು, ಸಲಗ ಸಿನಿಮಾ ಶುರುವಾಗುವ ಮೊದಲು ತಮ್ಮ ಪರಿಸ್ಥಿತಿ ಹೇಗಿತ್ತು ಎನ್ನುವುದನ್ನು ಹೇಳುತ್ತಾ, ವೇದಿಕೆ ಮೇಲೆ ಗಳಗಳನೆ ಕಣ್ಣೀರು ಹಾಕಿದ್ದಾರೆ..
ನಿಜ ಹೇಳ್ತೀನಿ ಆವತ್ತು ನನ್ನ ಹತ್ರ ಇದ್ದಿದ್ದು 40 ರೂಪಾಯಿ.. ಅದನ್ನ ಫೋಟೋ ತೆಗೆದು ಇಟ್ಟಿದ್ದೀನಿ, ಮುಂದಿನ ಜರ್ನಿಯಲ್ಲಿ ಅದರ ಬಗ್ಗೆ ಹೇಳ್ತಾ ಹೋಗ್ತೀನಿ.. ಆವತ್ತು ನಾನು ಮಾತನಾಡಿದ್ದು ಅದರ ಫೋಟೋ ತೆಗೆದು ಹಾಗೆ ಇಟ್ಟಿದ್ದೀನಿ, ಸಾಮ್ರಾಟ್, ಕೀರ್ತಿ, ನನ್ ಜೊತೆ ಇದ್ದಂತಹ ಮೊಹಮ್ಮದ್ ಅವರು, ಇಷ್ಟೇ ಜನಕ್ಕೆ ಆ ವಿಚಾರ ಗೊತ್ತಿರೋದು. ಆ 40 ರೂಪಾಯಿ ಇಂದ ಇವತ್ತು ಸಲಗ ಆಗಿದೆ..
ಎಂದು ಹೇಳಿ ಭಾವುಕರಾಗುತ್ತಾರೆ ದುನಿಯಾ ವಿಜಯ್.

ಆದರೆ ದುನಿಯಾ ವಿಜಯ್ ಅವರು ಹೇಳಿದ ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಬಣ್ಣದ ಬದುಕು, ಕಲಾವಿದರ ಜೀವನ ಅಂದ್ರೆ ಎಲ್ಲವೂ ಆಕರ್ಷಕವಾಗಿರುತ್ತದೆ ಎಂದು ನಾವು ಭಾವಿಸುತ್ತೇವೆ. ಆದರೆ ಹಲವು ಬಾರಿ ಅದೆಲ್ಲದಕ್ಕೂ ವಿರುದ್ಧವಾಗಿರುತ್ತದೆ ಕಲಾವಿದರ ಜೀವನ. ಅವರು ಪಡುವ ಕಷ್ಟಗಳು ಅವರಿಗೆ ಮಾತ್ರವೇ ಗೊತ್ತಿರುತ್ತದೆ. ವಿಜಯ್ ಅವರು ಹಾಗೆ ತುಂಬಾ ಕಷ್ಟಪಟ್ಟು, ಸಲಗ ಸಿನಿಮಾ ಮಾಡಿ ಇಂದು ಯಶಸ್ಸು ಪಡೆದಿದ್ದಾರೆ. ಸಲಗ ಸಿನಿಮಾ ಅವರಿಗೆ ಯಶಸ್ಸಿನ ಜೊತೆಗೆ ಹಣವನ್ನು ತಂದುಕೊಟ್ಟಿದೆ. ತಮ್ಮ ಬಳಿ ಹಣ ಇದ್ದಾಗ, ಕಷ್ಟದಲ್ಲಿರುವವರಿಗೆ ಅನೇಕ ಬಾರಿ ಸಹಾಯ ಮಾಡಿದ್ದಾರೆ ದುನಿಯಾ ವಿಜಯ್. ಮುಂದೆ ಅವರು ಇನ್ನಷ್ಟು ಒಳ್ಳೆಯ ಸಿನಿಮಾಗಳನ್ನು ನಿರ್ದೇಶನ ಮಾಡಲಿ ಎಂದು ಹಾರೈಸೋಣ.