ಟಿಕ್ ಟಾಕ್ ಮಾಡಲು ಹೋಗಿ ಜೀವವನ್ನೇ ಕಳೆದುಕೊಂಡ.. ಬೇಕಿತ್ತಾ ಇವೆಲ್ಲಾ?

ಯಾವುದೇ ಅಭ್ಯಾಸವಾಗಲಿ ಹವ್ಯಾಸವಾಗಲಿ ಎಲ್ಲದಕ್ಕೂ ಒಂದು ಲಿಮಿಟ್ ಇದ್ದರೆ ಒಳ್ಳೆಯದು.. ಅದರಲ್ಲು ಟೈಮ್ ಪಾಸ್ ಮಾಡಲು ಮಾಡುವ ಆ ಹಾಳಾದ್ ಟಿಕ್ ಟಾಕ್ ಒಂದು ರೀತಿ ಚಟವಾಗಿ ಹೋಗಿದೆ.. ಈ ಹಿಂದೆಯೂ ತುಮಕೂರಿನ ಯುವಕನೊಬ್ಬ ಟಿಲ್ ಟಾಕ್ ಮಾಡಲು ಹೋಗಿ ಕತ್ತು ಮುರಿದುಕೊಂಡಿದ್ದ ಕೊನೆಗೆ ಜೀವವನ್ನೇ ಕಳೆದುಕೊಂಡ.. ಇದೊಂದೇ ಅಲ್ಲ ಟಿಕ್ ಟಾಕ್ ಮಾಡಲು ಹೋಗಿ ನಡೆದ ದುರ್ಘಟನೆಗಳು ಬಹಳಷ್ಟು ನಡೆದಿದೆ..

ಇದೀಗ ಮತ್ತೊಂದು ಘಟನೆ ನಡೆದಿದ್ದು ಟಿಕ್ ಟಾಕ್ ಮಾಡಲು ಹೋಗಿ ಯುವಕ ಜೀವವನ್ನೇ ಕಳೆದುಕೊಂಡಿದ್ದಾನೆ.. ಹೌದು ಜೀವಂತ ಮೀನು ನುಂಗುವ ಟಿಕ್ ಟಾಕ್ ಮಾಡಲು ಹೋದ ಯುವಕ ಹಾಳು ಅಭ್ಯಸಕ್ಕಾಗಿ ತನ್ನ ಜೀವವನ್ನೇ ಕಳೆದುಕೊಂಡು ಬಿಟ್ಟ.. ಹೌದು ತಮಿಳು ನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರಿನ ಪಾರ್ವತಿ ನಗರದ ನಿವಾಸಿ 22 ವರ್ಷದ ವೆಟ್ರಿವೆಲ್ ಮೃತ ದುರ್ದೈವಿ.. ವೆಟ್ರಿವೆಲ್ ಕೂಲಿ ಕೆಲಸ ಮಾಡುತ್ತಿದ್ದ..

ತನ್ನ ಸ್ನೇಹಿತರ ಜೊತೆ ಥರ್ಪೆಟ್ಟೈ ಕೆರೆಗೆ ಮೀನು ಹಿಡಿಯಲು ಹೋಗಿದ್ದಾಗ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಟಿಕ್‍ಟಾಕ್ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ.. ಆಗ ಜೀವಂತ ಮೀನನ್ನು ನುಂಗಿದ್ದಾನೆ.. ಆದರೆ ಮೀನು ವೆಟ್ರಿವೆಲ್‍ನ ಗಂಟಲಿನಲ್ಲಿ ಸಿಕ್ಕಿಕೊಂಡಿದೆ.. ಮೀನು ಗಂಟಲಿನಲ್ಲಿ ಸಿಲುಕಿಕೊಂಡಿದ್ದರಿಂದ ವೆಟ್ರಿವೆಲ್ ಉಸಿರಾಡಲು ಸಾಧ್ಯವಾಗದೇ ಒದ್ದಾಡಿದ್ದಾನೆ.. ಸ್ನೇಹಿತರು ವೆಟ್ರಿವೆಲ್ ಗಂಟಲಿನಲ್ಲಿ ಸಿಲುಕಿದ್ದ ಮೀನು ತೆಗೆಯಲು ಪ್ರಯತ್ನಿಸಿದ್ದಾರೆ ಆದರೆ ಸಾಧ್ಯವಾಗದೇ ಕೊನೆಗೆ ಹೊಸೂರಿನ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ.. ಆದರೆ ಕಾಲ‌ ಮಿಂಚಿ ಹೋಗಿತ್ತು… ಅವನ ಜೀವ ಹೋಗಿತ್ತು.. ಮರಣೋತ್ತರ ಪರೀಕ್ಷೆ ವೇಳೆ ಸತ್ತ ಮೀನನ್ನು ಆತನ ಗಂಟಲಿನಿಂದ ಹೊರತೆಗೆಯಲಾಗಿದೆ..

ಇನ್ನಾದರೂ ದಯವಿಟ್ಟು ಹಾಳು ವೀಡಿಯೋಗಳನ್ನು ಮಾಡುವ ಸಕುವಾಗಿ ಅರ್ಧಂಬರ್ಧ ಬಟ್ಟೆ ತೊಡಬೇಡಿ.. ಹುಚ್ಚು ಸಾಹಸ ಮಾಡಿ ಜೀವ ಕಳೆದುಕೊಳ್ಳಬೇಡಿ.. ಯಾವುದನ್ನಾದರೂ ಸಹ ಒಳ್ಳೆಯದಕ್ಕೆ ಮಾತ್ರ ಬಳಸಿಕೊಳ್ಳಿ.. ಆತನೇನೋ ಜೀವಂತ ಮೀನು ನುಂಗಿ ಹೀರೋ ಆಗಲು ಹೋಗಿ ಜೀವ ಕಳೆದುಕೊಂಡ.. ಈಗ ಆತನ ತಂದೆ ತಾಯಿಯ ಗತಿ? ಅವರೇನು ತಪ್ಪು ಮಾಡಿದ್ರು? ಸಾಕಿ ದೊಡ್ಡವನನ್ನಾಗಿ ಮಾಡಿದ್ದಕ್ಕೆ ಕೊನೆವರೆಗೂ ಕೊರಗುವಂತೆ ಮಾಡಿ ಹೋದ.. ಇನ್ನಾದರೂ ಈ ರೀತಿಯ ವೀಡಿಯೋ ಮಾಡುವವರು ಎಚ್ಚರವಹಿಸಿ..