ಮೂರನೇ ಸ್ಥಾನ ಪಡೆದ ವಾಸುಕಿಗೆ ನಿಜವಾಗಿ ಸಿಕ್ಕ ಹಣವೆಷ್ಟು ಗೊತ್ತಾ?

ಬಿಗ್ ಬಾಸ್ ಮನೆಯ ವಾಸ ಮುಗಿದಿದೆ.. ಇನ್ನೇನಿದ್ದರೂ ಬಿಗ್ ಬಾಸ್ ಮೂಲಕ ಪಡೆದುಕೊಂಡ ಹೆಸರನ್ನು ಸಮರ್ಥವಾಗಿ ಬಳಸಿಕೊಂಡು ತಮ್ಮ ತಮ್ಮ ಜೀವನದ ಜರ್ನಿಯನ್ನು ಶುರು ಮಾಡಬೇಕಷ್ಟೆ..

ಅದೇ ರೀತಿಯಾಗಿ ಈ ಸೀಸನ್ ನಲ್ಲಿ ಒಬ್ಬಬ್ಬರು ಒಂದೊಂದು ರೀತಿಯಲ್ಲಿ ಜನರ ಮೆಚ್ಚುಗೆಗೆ ಪಾತ್ರರಾದರು.. ಕೊನೆಯದಾಗಿ ಶೈನ್ ಶೆಟ್ಟಿ ಅವರು ಗೆಲುವಿನ ಪಟ್ಟ ಪಡೆದುಕೊಂಡರೆ ಇತ್ತ ಕುರಿ ಪ್ರತಾಪ್ ಅವರು ಎರಡನೇ ಸ್ಥಾನ ಪಡೆದರು..

ಆದರೆ ಗೆಲ್ಲಲೇಬೇಕೆಂದು ಸಾಕಷ್ಟು ಶ್ರಮ ಪಟ್ಟಿದ್ದ ವಾಸುಕಿ ವೈಭವ್ ಮಾತ್ರ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಯಿತು.. ಆದರೆ ವಾಸುಕಿ ಅವರ ಕೈಗೆ ನಿಜವಾಗಿ ಸಿಕ್ಕ ಹಣವೆಷ್ಟು ಗೊತ್ತಾ?

ವಾಸುಕಿ ಅವರಿಗೆ ಸಂಭಾವನೆಯಾಗಿ ವಾರಕ್ಕೆ ಮೂವತ್ತು ಸಾವಿರ ಮಾತನಾಡಲಾಗಿತ್ತು.. ಹೌದು ವಾಸುಕಿ ವೈಭವ್ ಅವರಿಗೆ ವಾರಕ್ಕೆ ಮೂವತ್ತು ಸಾವಿರದಂತೆ ಒಟ್ಟು 16 ವಾರಕ್ಕೆ ನಾಲ್ಕು ಲಕ್ಷದ ಎಂಭತ್ತು ಸಾವಿರ ರೂಪಾಯಿ ಸಂಭಾವನೆಯ ರೂಪದಲ್ಲಿ ವಾಸುಕಿ ಅವರ ಕೈ ಸೇರಿದೆ..

ಇದರ ಜೊತೆಗೆ ಪ್ರಾಯೋಜಕರ ಕಡೆಯಿಂದ ಒಂದು ಲಕ್ಷ ನಗದು ಬಹುಮಾನವೂ ವಾಸುಕಿ ಅವರ ಕೈ ಸೇರಿದೆ.. ಒಟ್ಟು 5 ಲಕ್ಷದ 80 ಸಾವಿರ ರೂಪಾಯಿಗಳು ವಾಸುಕಿ ಅವರಿಗೆ ನೀಡಲಾಗಿದೆ..