ಮಲೆನಾಡು ಮೂಲದ ನಟಿ ಜೊತೆ ಪ್ರೀತಿಯಲ್ಲಿ ಬಿದ್ದ ನಟ ವಸಿಷ್ಠ ಸಿಂಹ.. ಸಿಹಿ ಸುದ್ದಿ ನೀಡಿದ ಜೋಡಿ..

ಕನ್ನಡ ಸಿನಿಮಾ ಇಂಡಸ್ಟ್ರಿಯ ಪ್ರತಿಭಾವಂತ ನಟ ವಸಿಷ್ಠ ಸಿಂಹ ಅವರು ಸಧ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದರೂ ಸಹ ಸ್ಯಾಂಡಲ್ವುಡ್ ನಲ್ಲಿ ನಾಯಕನಾಗಿ ದೊಡ್ಡದೊಂದು ಬ್ರೇಕ್ ಗಾಗಿ ಕಾಯುತ್ತಿರುವುದು ಸುಳ್ಳಲ್ಲ.. ಹೌದು ಸಹ ನಟನಾಗಿ.. ನಾಯಕನಟನಾಗಿ.. ಹಾಗೂ ವಿಲನ್ ಪಾತ್ರಗಳಲ್ಲಿ ಮಿಂಚಿರುವ ವಸಿಷ್ಠ ಸಿಂಹ ಅವರಿಗೆ ಹೀರೋ ಆಗಿ ಸಿನಿಮಾಗಳು ಯಾವುದೂ ನಿರೀಕ್ಷೆ ಮಾಡಿದಷ್ಟು ಯಶಸ್ಸು ನೀಡಲಿಲ್ಲ.. ಆದರೆ ವಸಿಷ್ಠ ಸಿಂಹ ಅವರು‌ ಮಾತ್ರ ಅದನ್ನೇ ನಂಬಿಕೊಂಡು ಕೂರದೇ ಒಳ್ಳೊಳ್ಳೆ ಪಾತ್ರಗಳಲ್ಲಿ ಅಭಿನಯಿಸುತ್ತ ತಮ್ಮ ಸಿನಿಮಾ ಜರ್ನಿಯನ್ನು ಮುಂದುವರೆಸಿದ್ದರು..

ಇವರು ಮೊದಲಿನಿಂದಲೂ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡ ಸಾಕಷ್ಟು ಯಾಕೆ ಬಹುತೇಕ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆದವು.. ಟಗರು ಸಿನಿಮಾದ ಚಿಟ್ಟೆ ಪಾತ್ರದ ಮೂಲಕ ಮತ್ತಷ್ಟು ಖ್ಯಾತಿ ಪಡೆದರು.. ಇನ್ನು ಈಗ ಕೆಜಿಎಫ್ ಸೇರಿದಂತೆ ಬಹಳಷ್ಟು ಸಿನಿಮಾಗಳಲ್ಲಿ ತಮ್ಮ ಪಾತ್ರದ ನಟನೆಯ ಮೂಲಕವೇ ಹೆಸರು ಮಾಡಿದರು.. ಇನ್ನು ಈ ನಡುವೆ ಇದೀಗ ಹೊಸ ಸುದ್ದಿಯೊಂದನ್ನು ನೀಡಿದ್ದು ಲವ್ ಲಿ ಬಿದ್ದಿರುವ ವಿಚಾರ ತಿಳಿಸಿದ್ದಾರೆ..

ಹೌದು ರಾಜಾಹುಲಿ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟ ವಸಿಷ್ಠ ಸಿಂಹ ನಿಜಕ್ಕೂ ಕನ್ನಡ ಸಿನಿಮಾ ಇಂಡಸ್ಟ್ರಿಯ ಪ್ರತಿಭಾವಂತ ನಟರಲ್ಲಿ ಒಬ್ಬರೆಂದರೆ ಸುಳ್ಳಲ್ಲ.. ಸಿನಿಮಾ ಹೊರತು ಪಡಿಸಿ ನೋಡಿದರೆ ನಿಜಕ್ಕೂ ವಸಿಷ್ಠ ಸಿಂಹ ಅತ್ಯಂತ ಒಳ್ಳೆಯ ಮನಸ್ದಿನವರು.. ಅವರನ್ನು ಹತ್ತಿರದಿಂದ ಕಂಡವರಿಗೆ ಇದ ಬಲ್ಲರು.. ಮರ್ಮವಿಲ್ಲದ ವಸಿಷ್ಠ ಸಿಂಹ ಎಲ್ಲಿಯೂ ಯಾರ ಬಗ್ಗೆಯೂ ಎಂದೂ ಸಹ ತಪ್ಪಾಗಿ‌ ಮಾತನಾಡಿದವರಲ್ಲ.. ಇನ್ನು ಕೊರೊನಾ ಸಮಯದಲ್ಲಿ ಹಾಗೂ ಇನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಸಾಕಷ್ಟು ಜನರಿಗೆ ಸಹಾಯ ಮಾಡಿ ತೆರೆ ಮರೆಯಲ್ಲಿಯೇ ಉಳಿದ ನಟ..

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಮೊದಲ ಸಿನಿಮಾ ರಾಜಾ ಹುಲಿ ಇಂದಲೂ ಯಶ್ ಹಾಗೂ ನಾಯಕಿಯ ನಡುವಿನ ಪಾತ್ರವಾಗಿ ಮಿಂಚುವ ವಸಿಷ್ಠ ಸಿಂಹ ಅವರು ಕೆಜಿಎಫ್ ಸಿನಿಮಾದಲ್ಲಿಯೂ ಅಂತಹುದೇ ಪಾತ್ರದಲ್ಲಿ ಅಭಿನಯಿಸಿ ಎಂದಿನಂತೆ ತಮ್ಮ ಅಭಿನಯದ ಮೂಲಕವೇ ಜನರ ಮನಗೆದ್ದರು.. ಯಾವುದೇ ಪಾತ್ರವಾಗಲಿ ಸೈ ಎನಿಸಿಕೊಳ್ಳುವ ವಸಿಷ್ಠ ಸಿಂಹರಿಗೆ ಹೀರೋ ಆಗಿ ಒಂದೊಳ್ಳೆ ಸಿನಿಮಾದ ಬ್ರೇಕ್ ಬೇಕಾಗಿದ್ದು ಇದೀಗ ಅದೇ ವಿಚಾರವಾಗಿ ಸಿಹಿ ಸುದ್ದಿ ಬಂದಿದೆ..

ಹೌದು ಸಧ್ಯ ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾವೊಂದರಲ್ಲಿ ನಾಯಕನಾಗಿ ಅಭಿನಯಿಸುತ್ತಿರುವ ವಸಿಷ್ಠ ಸಿಂಹ ಅವರೀಗ ಮಲೆನಾಡ ಹುಡುಗಿ ಜೇಮ್ಸ್ ಸಿನಿಮಾದ ನಟಿ‌ ಸಮೀಕ್ಷಾ ಜೊತೆ ಲವ್ ಲಿ ಬಿದ್ದಿದ್ದಾರೆ.. ಹೌದು ವಸಿಷ್ಠ ಸಿಂಹ ಅವರು ನಾಯಕನಾಗಿ ಅಭಿನಯಿಸುತ್ತಿರುವ ಹೊಸ ಸಿನಿಮಾದ ಹೆಸರು ಲವ್ ಲಿ..

ಈ ಸಿನಿಮಾಗೆ ಜೇಮ್ಸ್ ಸಿನಿಮಾದಲ್ಲಿ ಅಭಿನಯಿಸಿರುವ ನಟಿ ಸಮೀಕ್ಷಾ ಅವರು ನಾಯಕಿಯಾಗಿದ್ದು ಚಿತ್ರದ ಮುಹೂರ್ತ ನೆರವೇರಿದೆ.. ಚೇತನ್ ಕೇಶವ್ ಸಿನಿಮಾದ ನಿರ್ದೇಶನ ಮಾಡುತ್ತಿದ್ದು ಅನೂಪ್ ಸೀಳಿನ್ ಸಂಗೀತ ನೀಡುತ್ತಿದ್ದಾರೆ.. ಈ ಸಿನಿಮಾ ವಸಿಷ್ಠ ಅವರ ಸಿನಿಮಾ ಕೆರಿಯರ್ ಗೆ ನಾಯಕನಾಗಿ ಒಳ್ಳೆಯ ಯಶಸ್ಸನ್ನು ನೀಡುವಂತಾಗಲಿ..