ನನ್ನಮ್ಮ ಸೂಪರ್ ಸ್ಟಾರ್ ನ ವಂಶಿಕಾ ಅಮ್ಮ ಯಶಸ್ವಿನಿ ಅವರು ಮಾಡಿದ ಯಡವಟ್ಟಿಗೆ ಏನಾಗಿದೆ ನೋಡಿ..

ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾಜಾ ರಾಣಿ ಶೋ ಮುಗಿದ ನಂತರ ಪುಟ್ಟ ಮಕ್ಕಳು ಮತ್ತು ಅವರ ತಾಯಿಯರಿಗಾಗಿ ಸ್ಪೆಷಲ್ ಆಗಿ ಶುರುವಾಗಿರುವ ರಿಯಾಲಿಟಿ ಶೋ ನನ್ನಮ್ಮ ಸೂಪರ್ ಸ್ಟಾರ್. ಶುರುವಾಗಿ ಕೆಲವು ವಾರಗಳೇ ಆಗಿದ್ದರೂ ಮಕ್ಕಳ ಮುಗ್ಧತೆ ಮತ್ತು ತಾಯಂದಿರ ಪ್ರೀತಿ ಇದೆಲ್ಲದರಿಂದ ಈ ಶೋ ವೀಕ್ಷಕರಿಂದ ಭಾರಿ ಮೆಚ್ಚುಗೆ ಪಡೆದುಕೊಂಡಿದೆ. ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದ ಮುಖ್ಯ ಆಕರ್ಷಣೆ ವಂಶಿಕಾ ಅಂಜನಿ ಕಶ್ಯಪ ಎಂದರೆ ತಪ್ಪಾಗುವುದಿಲ್ಲ. ವಂಶಿಯ ಪಟಾಕಿಯಂತ ಮುದ್ದು ಮಾತುಗಳಿಗೆ ಕಿರುತೆರೆಯ ವೀಕ್ಷಕರು ಫಿದಾ ಆಗಿದ್ದಾರೆ. ಪ್ರತಿ ವಾರ ವಂಶಿಕಾಳನ್ನು ನೋಡಲು ಸಲುವಾಗಿಯೇ ಶೋ ನೋಡುವವರು ಸಾಕಷ್ಟು ಜನ. ಕ್ಯೂಟ್ನೆಸ್, ಚುರುಕುತನ ಮತ್ತು ಮುಗ್ಧತೆ ಈ ಎಲ್ಲದರ ಮಿಶ್ರಣವೇ ವಂಶಿ. ಈ ವಂಶಿ ಮತ್ಯಾರು ಅಲ್ಲ, ಕನ್ನಡ ಚಿತ್ರರಂಗದ ಖ್ಯಾತ ಬಾಲನಟರಾಗಿದ್ದ ಮಾಸ್ಟರ್ ಆನಂದ್ ಅವರ ಮಗಳು.

ವಂಶಿ ಮಾತನಾಡುವುದನ್ನು ನೋಡಿದರು ಮಾಸ್ಟರ್ ಆನಂದ್ ಅವರು ಆಗಿನ ಕಾಲದಲ್ಲಿ ಪುಟ್ಟ ಬಾಲಕನಾಗಿ ಹೇಗೆ ಮಾತನಾಡುತ್ತಿದ್ದರು, ಆ ಪಟಪಟ ಮಾತಿನ ಮೂಲಕ ಅದೆಷ್ಟು ಫೇಮಸ್ ಆಗಿದ್ದರು, ಅದೇ ನೆನಪಾಗುತ್ತದೆ. ಥೇಟ್ ತಂದೆಯ ಹಾಗೆ ಅರಳು ಹುರಿದ ಹಾಗೆ ಮಾತನಾಡುತ್ತಾಳೆ ವಂಶಿಕಾ. ಮೊದಲ ಎಪಿಸೋಡ್ ನಲ್ಲೇ ತನ್ನನ್ನು ಮಾಸ್ಟರ್ ಆನಂದ್ ಮಗಳು ಅಂತ ಕರಿಬಾರದು, ವಂಶಿಕಾ ಅಂಜನಿ ಕಶ್ಯಪ ಅಂತ ಕರಿಬೇಕು ಎಂದು ತನ್ನ ಐಡೆಂಟಿಟಿ ಬಗ್ಗೆ ಮಾತನಾಡಿದ್ದಳು ಈ ಮುದ್ದು ವಂಶಿ. ಹೀಗೆ ಮೊದಲ ಎಪಿಸೋಡ್ ಇಂದಲೇ ವಂಶಿಯ ಈ ಮಾತುಗಳನ್ನು ಕೇಳಿ ನನ್ನಮ್ಮ ಸೂಪರ್ ಸ್ಟಾರ್ ಅವಳಿಗಾಗಿಯೇ ನೋಡಲು ಜನ ನಿರ್ಧಾರ ಮಾಡಿಬಿಟ್ಟಿದ್ದರು. ವಂಶಿಕಾಳ ತಾಯಿ ಯಶಸ್ವಿನಿ. ಇದೀಗ ಇವರು ಮಾಡಿದ ಒಂದೇ ಒಂದು ಸಣ್ಣ ತಪ್ಪಿನಿಂದ ಎಂಥಹ ಎಡವಟ್ಟು ಆಗಿತ್ತು ಗೊತ್ತಾ?

ಯಶಸ್ವಿನಿ ಮಾಸ್ಟರ್ ಆನಂದ್ ಅವರು ಒಳ್ಳೆಯ ತಾಯಿ ಮತ್ತು ಪತ್ನಿ. ಗಂಡನನ್ನು ಮತ್ತು ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ನನ್ನಮ್ಮ ಸೂಪರ್ ಸ್ಟಾರ್ ಶೋನಲ್ಲಿ ಇವರು ವಂಶಿಕಾ ಜೊತೆ ಇರುವುದನ್ನು ನೋಡಿದರೆ, ಅಮ್ಮ ಮಗಳ ನಡುವೆ ಇರುವ ಪ್ರೀತಿ ಗೊತ್ತಾಗುತ್ತದೆ. ಪ್ರತಿ ವಾರ ಕೊಡುವ ಟಾಸ್ಕ್ ಗಳನ್ನು ವಂಶಿಕಾ ಮತ್ತು ಯಶಸ್ವಿನಿ ಬಹಳ ಚೆನ್ನಾಗಿ ನಿರ್ವಹಿಸಿ ಜಡ್ಜ್ ಗಳಿಂದ ಒಳ್ಳೆಯ ಹೆಸರು ಪಡೆದುಕೊಳ್ಳುತ್ತಿದ್ದರು. ವಂಶಿಕಾ ಮುದ್ದು ಮುದ್ದು ಮಾತುಗಳಿಂದ ಜಡ್ಜ್ ಗಳನ್ನು ಹೇಗೆ ಇಂಪ್ರೆಸ್ ಮಾಡುತ್ತಿದ್ದಳು ಎನ್ನುವುದನ್ನು ನೀವೆಲ್ಲರೂ ಪ್ರತಿ ವಾರ ನೋಡಿರುತ್ತೀರಿ. ಕಳೆದ ಎರಡು ವಾರಗಳಿಂದ ಯಶಸ್ವಿನಿ ಮತ್ತು ಮಾಸ್ಟರ್ ಆನಂದ್ ಇಬ್ಬರಿಗೂ ಕೋವಿಡ್ ಪಾಸಿಟಿವ್ ಬಂದಿದ್ದ ಕಾರಣ ವಂಶಿಕಾ ಮತ್ತು ಅಣ್ಣ ಕೃಷ್ಣ ಚೈತನ್ಯರನ್ನು ಅಜ್ಜಿ ಮನೆಗೆ ಕಳಿಸಿದ್ದರು.

ಹಾಗಾಗಿ ಎರಡು ವಾರಗಳ ಕಾಲ ವಂಶಿಕಾ ನನ್ನಮ್ಮ ಸೂಪರ್ ಸ್ಟಾರ್ ಶೋ ನಲ್ಲಿ ಕಾಣಿಸಿಕೊಳ್ಳಲಿಲ್ಲ. ಅದರ ನಡುವೆಯೇ ಇತ್ತೀಚೆಗೆ ಯಶಸ್ವಿನಿ ಅವರು ಮಾಡಿದ ಒಂದು ಸಣ್ಣ ಕೆಲಸ ಬೇರೆಯದೇ ರೀತಿಯ ಪರಿಣಾಮ ಉಂಟುಮಾಡಿತು. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಯಶಸ್ವಿನಿ ಅವರು, ಮಗಳ ಹೆಸರಿನಲ್ಲಿ ಕೂಡ ಹೊಸದೊಂದು ಇನ್ಸ್ಟಾಗ್ರಾಮ್ ಖಾತೆ ಓಪನ್ ಮಾಡಿದ್ದರು, ಮಗಳ ಖಾತೆಯ ಮೂಲಕ ವಂಶಿಯ ಹಳೆಯ ಫೋಟೋಸ್, ವಿಡಿಯೋಗಳು, ಇನ್ಸ್ಟಾಗ್ರಾಮ್ ರೀಲ್ಸ್ ಇದೆಲ್ಲವನ್ನು ಶೇರ್ ಮಾಡುತ್ತಿದ್ದರು. ತಮ್ಮ ಖಾತೆಯಿಂದಲೂ ಪೋಸ್ಟ್ ಮಾಡುತ್ತಿದ್ದರು. ಸೋಷಿಯಲ್ ಮೀಡಿಯಾದಲ್ಲಿ ವಂಶಿ ಹವಾ ಹೇಗಿದೆ ಅನ್ನೋದು ನಿಮಗೆಲ್ಲ ಗೊತ್ತೇ ಇರುತ್ತದೆ.

ಸೋಷಿಯಲ್ ಮೀಡಿಯಾದಲ್ಲಿ 2 ಲಕ್ಷ ಫಾಲೋವರ್ಸ್ ದಾಟಿತ್ತು ವಂಶಿಯ ಖಾತೆ, ಅಮ್ಮ ಮಗಳು ಬ್ರ್ಯಾಂಡ್ ಪ್ರೊಮೋಷನ್ ಗಳನ್ನು ಸಹ ಮಾಡುತ್ತಿದ್ದರು. ಯಶಸ್ವಿನಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲೂ ಬಹಳ ಆಕ್ಟಿವ್ ಆಗಿದ್ದರು. ಇದ್ದಕ್ಕಿದ್ದ ಹಾಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಗೆ ಬಂದ ಲಿಂಕ್ ಒಂದನ್ನು ಓಪನ್ ಮಾಡಿ ಅದರಿಂದ ಅವರ ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್ ಆಯಿತು. ಹ್ಯಾಕ್ ಮಾಡಿದವರು ಕೆಲವರ ಬಳಿ ಹಣವನ್ನು ಸಹ ಕೇಳಿದರು. ತಕ್ಷಣವೇ ಇದರ ಬಗ್ಗೆ ತಿಳಿದುಕೊಂಡ ಯಶಸ್ವಿನಿ, ತಮ್ಮ ಅಕೌಂಟ್ ಹ್ಯಾಕ್ ಆಗಿದ್ದು ಯಾರಾದರೂ ಮೆಸೇಜ್ ಮಾಡಿ ಹಣ ಕಳಿಸಬೇಡಿ ಎಂದು ವಂಶಿಕಾ ಖಾತೆಯ ಮೂಲಕ ಪೋಸ್ಟ್ ಮಾಡಿ ಮನವಿ ಮಾಡಿಕೊಂಡರು.

ನಂತರ ಒಂದು ಕಂಪೆನಿಯವರ ಸಹಾಯದಿಂದ ತಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನು ರಿಕವರಿ ಮಾಡಿಕೊಂಡರು. ಇದರ ಬಗ್ಗೆ ಕೂಡ ವಿಡಿಯೋ ಮಾಡಿ ವೀಕ್ಷಕರಿಗೆ ತಿಳಿಸಿದರು ಯಶಸ್ವಿನಿ. ಈಗ ಯಶಸ್ವಿನಿ ಅವರ ಇನ್ಸ್ಟಾಗ್ರಾಮ್ ಖಾತೆ ರಿಕವರಿ ಆಗಿದೆ. ಈ ರೀತಿ ಆಗಿದ್ದಕ್ಕೆ ಕೆಲವರು ಇದೆಲ್ಲವನ್ನು ನೀವು ಬೇಕಂತಲೇ ಮಾಡಿದ್ದೀರಿ, ಇದೆಲ್ಲವೂ ಕೊಲಾಬೊರೇಶನ್ ಎಂದರು, ಅದಕ್ಕೆ ಉತ್ತರ ನೀಡಿದ ಯಶಸ್ವಿನಿ ಅವರು ಹ್ಯಾಕರ್ ಗಳು ವಾಟ್ಸಪ್ ನಲ್ಲಿ ಕಳಿಸಿದ್ದ ವಾಯ್ಸ್ ನೋಟ್ ನ ಸ್ಕ್ರೀನ್ ಶಾಟ್ ಶೇರ್ ಮಾಡಿ, ಇಲ್ಲಿ ಕೊಲಾಬೊರೇಶನ್ ಏನು ನಡೆದಿಲ್ಲ, ಅವರ ಮೆಸೇಜ್ ಗಳನ್ನು ಮತ್ತು ಆ ವಿಚಿತ್ರವಾದ ನಂಬರ್ ಗಳನ್ನು ನೀವೇ ನೋಡಿ.. ನಿಮಗೆ ಯಾವುದಾದರೂ ಲಿಂಕ್ ಬಂದರೆ ಓಪನ್ ಮಾಡುವಾಗ ಜಾಗರೂಕವಾಗಿರಿ ಎಂದು ಜನರಿಗೆ ತಿಳಿಸಿದ್ದಾರೆ ಯಶಸ್ವಿನಿ. ಈಗ ಎಲ್ಲವೂ ಸರಿಯಾಗಿದೆ.