ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ಕಿರುತೆರೆಯ ಖ್ಯಾತ ನಟಿ..

ಕನ್ನಡ ಕಿರುತೆರೆಯ ಸಾಕಷ್ಟು ಕಲಾವಿದರು ಸಾಲು ಸಾಲಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ನಿನ್ನೆ ಮತ್ತೊಬ್ಬ ನಟಿ ಕಳೆದ ಹತ್ತು ವರ್ಷಗಳಿಂದ ತಾವು ಪ್ರೀತಿಸಿದ ಹುಡುಗನ ಜೊತೆ ಹಸೆಮಣೆ ಏರಿದ್ದಾರೆ.. ಆದರೆ ಮದುವೆ ಸಮಾರಂಭದ ಸಂತೋಷದಲ್ಲಿಯೂ ಮನೆಯಲ್ಲಿ ಸಾವಿನ ನೋವೊಂದು ಕಾಡುತ್ತಿತ್ತು.. ಹೌದು ಕಳೆದ ಎರಡು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಕಲಾವಿದರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಹೊಸ ಜೀವನ ಆರಂಭಿಸಿದ್ದರು.. ಅದರಲ್ಲೂ ಸಾಕಷ್ಟು ಕಲಾವಿದರುಗಳು ತಮ್ಮ ಸಹಕಲಾವಿದರುಗಳನ್ನೇ ಪ್ರೀತಿಸಿ ಮದುವೆಯಾಗಿದ್ದು ವಿಶೇಷ.. ಕಲಾವಿದರುಗಳಿಗೆ ಮುಂದಿನ ವೃತ್ತಿ ಬದುಕಲ್ಲಿ ಅರ್ಥ ಮಾಡಿಕೊಳ್ಳುವ ಸಂಗಾತಿ ಸಿಕ್ಕಲ್ಲಿ ಅವರ ಜೀವನವು ನೆಮ್ಮದಿಯಿಂದ ಸಾಗಬಹುದು ಎನ್ನುವ ಕಾರಣದಿಂದ ಕಲಾವಿದರುಗಳು ಅದೇ ರಂಗದಲ್ಲಿ ಇರುವ ಕಲಾವಿದರನ್ನು ಮದುವೆ ಮಾಡಿಕೊಳ್ಳುವರು..

ಅದೇ ರೀತಿ ಚಂದನ್ ನಿವೇದಿತಾ‌.. ಲಕ್ಷ್ಮೀ ಬಾರಮ್ಮ ಚಂದನ್ ಕವಿತಾ ಗೌಡ.. ಅಶ್ವಿನಿ ನಕ್ಷತ್ರದ ಮಯೂರಿ ಅರುಣ್.. ಮೊನ್ನೆಮೊನ್ನೆಯಷ್ಟೇ ನಾಗಿಣಿ ಧಾರಾವಾಹಿಯ ನಟ ನಿನಾದ್ ರಮ್ಯ.. ದಾಸ ಪುರಂದರ ಧಾರಾವಾಹಿಯ ನಟಿ ಲಾವಣ್ಯ ಹಾಗೂ ನಟ ಶಶಿ ಹೆಗ್ಗಡೆ.‌.. ಕನ್ಯಾಕುಮಾರಿ ಧಾರಾವಾಹಿಯ ನಟಿ ರಶ್ಮಿತಾ ಶೆಟ್ಟಿ ಹಾಗೂ ನಿರ್ದೇಶಕ ಹೊನ್ನೇಶ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಇನ್ನು ಅದೇ ರೀತಿ ನಿನ್ನೆ ಕನ್ನಡ ಕಿರುತೆರೆಯ ಖ್ಯಾತ ನಟಿ ನಿರೂಪಕಿ ಯೊಬ್ಬರು ನಿರ್ಮಾಪಕರೊಬ್ಬರ ಜೊತೆ ಹಸೆಮಣೆ ಏರಿದ್ದಾರೆ..

ಹೌದು ಆ ನಟಿ ಮತ್ಯಾರೂ ಅಲ್ಲ ನಟಿ ಕಾವ್ಯಾ ಶಾ.. ಹೌದು ಕಾವ್ಯಾ ಶಾ ಅವರ ಮದುವೆ ನಿನ್ನೆ ನಿರ್ಮಾಪಕ ವರುಣ್ ಅವರ ಜೊತೆ ಬೆಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಮದುವೆ ಸಮಾರಂಭಕ್ಕೆ ನಟಿ ರಮ್ಯಾ.. ಯುವ ರಾಜ್ ಕುಮಾರ್ ಸಂತೋಷ್ ಆನಂದರಾಮ್ ಸೇರಿದಂತೆ ಸಿನಿಮಾರಂಗದ ಬಹಳಷ್ಟು ಮಂದಿ ಆಗಮಿಸಿ ಕಾವ್ಯಾ ಹಾಗೂ ವರುಣ್ ಗೆ ಶುಭ ಕೋರಿದ್ದಾರೆ.. ಆದರೆ ಈ ಶುಭ ಸಮಯದಲ್ಲಿಯೂ ಆ ಕುಟುಂಬದಲ್ಲಿ ಸಾವಿನ ನೋವು ಕಾಡುತ್ತಿದ್ದದ್ದು ನಿಜಕ್ಕೂ ಬೇಸರವನ್ನುಂಟು ಮಾಡುತಿತ್ತು..

ಹೌದು ಅಂದುಕೊಂಡಂತೆ ಆಗಿದ್ದರೆ ಕಾವ್ಯಾ ಹಾಗೂ ವರುಣ್ ಅವರ ಮದುವೆ ತಿಂಗಳ ಹಿಂದೆಯೇ ನೆರವೇರಬೇಕಿತ್ತು.. ಎಲ್ಲಾ ಶಾಸ್ತ್ರಗಳು ಸಹ ನೆರವೇರಿದ್ದವು‌.. ಸಂಗೀತ ಮೆಹಂದಿ ಹಳದಿ ಶಾಸ್ತ್ರ ಅಂತ ಎರಡೂ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು.‌. ಇನ್ನೇನು ನಾಳೆ ಮದುವೆ ಎಂದು ಸಕಲ ತಯಾರಿಯೂ ನಡೆದಿತ್ತು.. ಮದುವೆ ಮಂಟಪಕ್ಕೆ ತೆರಳಲು ಕಾರ್ ಗಳು ಸಜ್ಜಾಗಿ ನಿಂತಿದ್ದವು.. ಆದರೆ ಇದ್ದಕಿದ್ದ ಹಾಗೆ ಮದುವೆ ನಡೆಯಬೇಕಿದ್ದ ಕುಟುಂಬದಲ್ಲಿ ಸಾವಿನ ಸೂತಕ ಆವರಿಸಿತ್ತು..

ಹೌದು ಆ ದಿನ ವರುಣ್ ಅವರ ತಂದೆ ಮಂಜುನಾಥ್ ಅವರು ಮಧ್ಯ ರಾತ್ರಿಯಲ್ಲಿ ಮಂಟಪಕ್ಕೆ ತೆರಳುವ ಕಾರ್ ಗಳನ್ನು ಸಿದ್ಧ ಗೊಳಿಸುತ್ತಿದ್ದ ಸಮಯದಲ್ಲಿ ರಸ್ತೆಯಲ್ಲಿ ನಿಂತಿರುವ ಸಮಯದಲ್ಲಿ ಇದ್ದಕಿದ್ದ ಹಾಗೆ ಕುಸಿದು ಬಿದ್ದರು.. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಕಾಲ ಮಿಂಚಿ ಹೋಗಿತ್ತು.. ವರುಣ್ ಅವರ ತಂದೆ ಮಂಜುನಾಥ್ ಅವರು ಕೊನೆಯುಸಿರೆಳೆದು ಬಿಟ್ಟಿದ್ದರು.. ಮಂಜುನಾಥ್ ಅವರ ಅಗಲಿಕೆಯ ಕಾರಣದಿಂದ ವರುಣ್ ಹಾಗೂ ಕಾವ್ಯಾ ಶಾ ಅವರ ಮದುವೆ ಅಂದು ರದ್ದಾಗಿತ್ತು.. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಹಂಚಿಕೊಂಡು ಮದುವೆ ರದ್ದಾಗಿರುವ ವಿಷಯ ತಿಳಿಸಿದ್ದರು..

ಇನ್ನು ಇದೀಗ ತಿಂಗಳ ನಂತರ ಮದುವೆಯನ್ನು ನಿಗದಿ ಮಾಡಿ ಮದುವೆ ಸಮಾರಂಭ ನೆರವೇರಿದೆ.. ನಿನ್ನೆ ಮದುವೆಯ ಎಲ್ಲಾ ಸಂತೋಷಗಳ ನಡುವೆಯೂ ಈ ಎಲ್ಲಾ ಸಂಭ್ರಮ ನೋಡಬೇಕಿದ್ದ ತಂದೆ ಇಲ್ಲವಾಗಿದ್ದು ತಂದೆಯ ಅಗಲಿಕೆಯ ನೋವು ಕಾಡುತಿತ್ತು.. ವರುಣ್ ಕೂಡ ಜೀ ಕನ್ನಡದ ಶೋಗಳ ನಿರ್ಮಾಪಕರಾಗಿದ್ದು.. ಸಧ್ಯ ಇದೀಗ ಸ್ಯಾಂಡಲ್ವುಡ್ ಗೂ ಕಾಲಿಟ್ಟಿದ್ದಾರೆ.. ಹಾಸ್ಟೆಲ್ ಹುಡುಗರು ಸಿನಿಮಾ ನಿರ್ಮಾಣ ಮಾಡುತಿದ್ದು ಪುನೀತ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು.. ಸಧ್ಯ ಇದೀಗ ಹತ್ತು ವರ್ಷಗಳ ಕಾಲ ಪ್ರೀತಿಸಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾವ್ಯಾ ಹಾಗೂ ವರುಣ್ ಜೋಡಿಗೆ ಸ್ನೇಹಿತರು ಆಪ್ತರು ಸಂಬಂಧಿಗಳು ಶುಭಾಶಯ ತಿಳಿಸಿ ಹಾರೈಸಿದ್ದಾರೆ..