ವಂಶಿಕಾಗೆ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಕೊಟ್ಟ ದುಬಾರಿ ಬೆಲೆಯ ಉಡುಗೊರೆ ಏನು ಗೊತ್ತಾ..

ಕನ್ನಡ ಕಿರುತೆರೆಯ ಖ್ಯಾತ ಶೋ ನನ್ನಮ್ಮ ಸೂಪರ್ ಸ್ಟಾರ್ ಶೋ ಮೂಲಕ‌ ಮನೆ ಮಾತಾದ ಮಾಸ್ಟರ್ ಆನಂದ್ ಅವರ ಮಗಳು ವಂಶಿಕ ಅಂಜನಿ ಕಶ್ಯಪ ತನ್ನ ಮಾತು ಹಾಗೂ ನಟನೆಯ ಮೂಲಕವೇ ಜನರ ಮನಗೆದ್ದದ್ದು ಮಾತ್ರವಲ್ಲ ನನ್ನಮ್ಮ ಸೂಪರ್ ಸ್ಟಾರ್ ಶೋ ಕೂಡ ಗೆದ್ದು ಐದು ಲಕ್ಷ ರೂಪಾಯಿ ನಗದು ಬಹುಮಾನ ಪಡೆದಳು. ಇನ್ನು ಆ ಶೋ‌ಮುಗಿದ ಬಳಿಕ ಸಧ್ಯ ಗಿಚ್ಚಿ ಗಿಲಿಗಿಲಿ ಶೋನಲ್ಲಿ ಬ್ಯುಸಿ ಆಗಿರುವ ವಂಶಿಕಾ ಸಧ್ಯ ಇದೀಗ ತನ್ನ ಶಾಲೆ ಹಾಗೂ ಶೋ ಚಿತ್ರೀಕರಣದಿಂದ ಬಿಡುವು ಮಾಡಿಕೊಂಡು ಧರ್ಮಸ್ಥಳಕ್ಕೆ ಭೇಟಿ‌ ನೀಡಿ ಮಂಜುನಾಥ ಸ್ವಾಮಿ ದರ್ಶನ ಪಡೆದು ಬಂದಿದ್ದು ಅಲ್ಲಿ ಧರ್ಮಾಧಿಕಾರಿಗಳು ವಂಶಿಕಾಳಿಗೆ ದುಬಾರಿ ಬೆಲೆಯ ಉಡುಗೊರೆಯನ್ನು ನೀಡಿದ್ದು ಅದನ್ನು ವಂಶಿಕಾಳ ತಾಯಿ ಯಶಸ್ವಿನಿ ಮಾಸ್ಟರ್ ಆನಂದ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ..

ಹೌದು ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಅಂಜನಿ ಕಶ್ಯಪ ತನ್ನ ಅಭಿನಯ ಹಾಗೂ ಡ್ಯಾನ್ಸ್ ಮೂಲಕ ಕನ್ನಡ ಕಿರುತೆರೆ ಪ್ರಿಯರ ಮನಸ್ಸು ಗೆದ್ದಿದ್ದಾಳೆ. ಸಧ್ಯ ಈ ಪುಟಾಣಿ ವಂಶಿಕಾ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವೀರೇಂದ್ರ ಹೆಗ್ಗಡೆಯವರ ಬಳಿ ತೆರಳಿ ಆಶೀರ್ವಾದ ಪಡೆದಿದ್ದಾಳೆ.. ಅಷ್ಟೇ ಅಲ್ಲದೇ ಅವರ ಮುಂದೆ ಶ್ಲೋಕವನ್ನು ಹೇಳಿ ಅವರಿಂದ ಮೆಚ್ಚುಗೆಯ ಮಾತುಗಳನ್ನು ಪಡೆದಿದ್ದಾಳೆ..

ಇನ್ನು ಈ ಬಗ್ಗೆ ಹಂಚಿಕೊಂಡಿರುವ ಮಾಸ್ಟರ್ ಆನಂದ್ ಹಾಗೂ ಯಶಸ್ವಿನಿ ಅವರು “ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಂಶಿಕ ಹೇಳಿದ ಸ್ತೋತ್ರವ ತಂದೆಯಂತೆ ಆಲಿಸಿ ತಾಯಿಯಂತೆ ಅವಳಿಗೆ ಉಡುಗೊರೆ ಇತ್ತ ಧರ್ಮ ದೇವತೆಯ ಪ್ರೀತಿಯ ಪುತ್ರ ಶ್ರೀ ವೀರೇಂದ್ರ ಹೆಗ್ಗಡೆ ಅಪ್ಪಾಜಿ ಅವರಿಗೆ ಧನ್ಯವಾದಗಳು” ಎಂದಿದ್ದಾರೆ..

ಶ್ಲೋಕ ಕೇಳಿದ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಅಂಜನಿ ಕಶ್ಯಪಳಿಗೆ ಧರ್ಮಾಧಿಕಾರಿಗಳು ದುಬಾರಿ ಬೆಲೆಯ ಉಡುಗೊರೆ ನೀಡಿ ಆಶೀರ್ವಾದ ಮಾಡಿದ್ದಾರೆ.. ಹೌದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಂಶಿಕಾ ಸ್ತೋತ್ರ ಹೇಳಿದ್ದಳು. ಅದನ್ನು ಕೇಳಿದ ವೀರೇಂದ್ರ ಹೆಗ್ಗಡೆಯವರು ವಂಶಿಕಾಗೆ ಬೆಳ್ಳಿಯ ಬಟ್ಟಲನ್ನು ಉಡುಗೊರೆಯಾಗಿ ನೀಡಿದ್ದಾರೆ. ವಂಶಿಕಾ ಶ್ಲೋಕ ಹೇಳಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಕಲಕಲಾವಲ್ಲಭೆ, ಇಂತಹ ಮಗಳನ್ನು ಪಡೆದ ನೀವೇ ಧನ್ಯರು ಎಂದು ಆನಂದ್‌ ದಂಪತಿಗೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಸ್ವಚ್ಛತಾ ಅಭಿಯಾನ.. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಾಸ್ಟರ್ ಆನಂದ್ ಕುಟುಂಬ ಹೋಗುವುದಕ್ಕೆ ಇನ್ನೊಂದು ಮುಖ್ಯ ಕಾರಣವಿತ್ತು. “ಧರ್ಮದ ನೆಲೆಬೀಡಾದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಗ್ರೀನ್ ಗೆಳೆಯರು ತಂಡದಿಂದ ಅಳಿಲು ಸೇವೆ ಮಾಡಲಾಗಿದೆ” ಎಂದು ಮಾಸ್ಟರ್ ಆನಂದ್ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಅಂದರೆ ಗ್ರೀನ್ ಗೆಳೆಯರು ಎಂಬ ತಂಡದ ಮೂಲಕ ಮಾಸ್ಟರ್ ಆನಂದ್ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ಆರಂಭಿಸಲಾಗಿದೆ. ಅಂತೆಯೇ ಧರ್ಮಸ್ಥಳದಲ್ಲಿ ಕೂಡ ಸ್ವಚ್ಛತೆ ಮಾಡಲಾಗಿದೆ.

ಇನ್ನು ವಂಶಿಕಾಳನ್ನು ಮೆಚ್ಚಿಕೊಂಡವರು ಸಾಕಷ್ಟು ಮಂದಿಯ ನಡುವೆಯೇ ದೊಡ್ಡವರ ಶೋನಲ್ಲಿ ವಂಶಿಕಾ ಯಾಕೆ ಎಂದೂ ಸಹ ಕೆಲವರು ಕೇಳಿದ್ದುಂಟು… ಹೌದು ವಂಶಿಕಾ ‘ಗಿಚ್ಚಿ ಗಿಲಿಗಿಲಿ ಶೋ’ನಲ್ಲಿ ಭಾಗವಹಿಸಿ, ತನ್ನ ಮುಗ್ಧ ಮಾತು, ನಟನೆಯಿಂದ ಎಲ್ಲರ ಗಮನ ಸೆಳೆದಿದ್ದಾಳೆ. ಇದರ ಜೊತೆಗೆ ‘ದೊಡ್ಡವರ ಶೋನಲ್ಲಿ ವಂಶಿಕಾ ನಟಿಸೋದ್ಯಾಕೆ, ನಿಮಗೆ ದುಡ್ಡೇ ಮುಖ್ಯನಾ.. ಎಂದು ಕೆಲವರು ಅಪಸ್ವರ ತೆಗೆದಿದ್ದರು. ಅದಕ್ಕೆ ಉತ್ತರ ನೀಡಿರುವ ಮಾಸ್ಟರ್ ಆನಂದ್.. ನಾವು ಅವಳಿಂದ ಯಾವುದೇ ದುಡ್ಡಿನ ನಿರೀಕ್ಷೆ ಮಾಡುತ್ತಿಲ್ಲ. ಇದು ಬಯಸದೇ ಬಂದಿದ್ದು.. ಭಗವಂತ ವೀಕ್ಷಕರ ರೂಪದಲ್ಲಿ ಅವಳಿಗೆ ಆಶೀರ್ವಾದ ನೀಡಿದ್ದಾನೆ.. ಎಂದಿದ್ದಾರೆ.. ಇನ್ನು ವಂಶಿಕಾಳ ತಾಯಿ ಯಶಸ್ವಿನಿ ಕೂಡ ಈ ಬಗ್ಗೆ ಮಾತನಾಡಿ ಅವಳಿಗೆ ಬಂದ ಹಣದಿಂದ ನಾವು ಜೀವನ ಮಾಡುವಂತಹ ಸ್ಥಿತಿಯಲ್ಲಿ ಭಗವಂತ ನಮ್ಮನ್ನು ಇಟ್ಟಿಲ್ಲ.. ದೇವರ ದಯೆಯಿಂದ ನಾವು ಚೆನ್ನಾಗಿದ್ದೇವೆ.. ಅವಳ ಪ್ರತಿಭೆಗೆ ಅವಕಾಶ ಸಿಕ್ಕಾಗ ಅದನ್ನು‌ಸದುಪಯೋಗ ಪಡಿಸಿಕೊಳ್ಳಬೇಕಾದದ್ದು ತಂದೆ ತಾಯಿಯ ಕರ್ತವ್ಯ ಎಂದಿದ್ದಾರೆ..

ಪ್ರಖ್ಯಾತ ಜ್ಯೋತಿಷಿ.. ದೈವಜ್ಞಾ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್.. 98808 68514 ನೂರಕ್ಕೆ ನೂರು ಪರಿಹಾರ‌.. ವಿದ್ಯೆ ಉದ್ಯೋಗ ಕುಟುಂಬ ಸಮಸ್ಯೆ ಸಂತಾನ ದಾಂಪತ್ಯದಲ್ಲಿ ತೊಂದರೆ ಸಾಲದ ಬಾಧೆ ಕೋರ್ಟ್ ಕೇಸ್ ಜಾಗದ ವಿಚಾರ.. ಅರೋಗ್ಯ ಬಿಸಿನೆಸ್.. ಹಾಗೂ ಇನ್ನಿತರ ಎಲ್ಲಾ ಸಮಸ್ಯೆಗಳಿಗೆ ಫೋನ್ ಅಥವಾ ವಾಟ್ಸಪ್ ಮೂಲಕ ಶಾಶ್ವತ ಪರಿಹಾರ.. ನಿಮ್ಮ ಒಂದು ಕರೆ ನಿಮ್ಮ ಭವಿಷ್ಯ ಬದಲಿಸಬಹುದು.. ಕರೆ ಮಾಡಿ.. 98808 68514