ವಂಶಿಕಾಗೆ ಒಲಿದು ಬಂತು ಮತ್ತೊಂದು ಅದೃಷ್ಟ.. ಲಕ್ಷ ಲಕ್ಷ ಹಣ ಹರಿದು ಬಂತು..

ವಂಶಿಕಾ ಅಂಜನಿ ಕಶ್ಯಪ.. ಕಳೆದ ಒಂದು ವರ್ಷದಿಂದ ಕನ್ನಡ ಕಿರುತೆರೆಯಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಚಾಲ್ತಿಯಲ್ಲಿರುವ ಹೆಸರು.. ಅದರಲ್ಲೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ರಿಯಾಲಿಟಿ ಶೋಗಳ ಟಿ ಆರ್ ಪಿ ರಾಣಿ ಎಂದೂ ಸಹ ಕರೆಯಲಾಗುತ್ತದೆ.. ಮೊದ ಮೊದಲು ಮಾಸ್ಟರ್ ಆನಂದ್ ಮಗಳಾಗಿ ನನ್ನಮ್ಮ ಸೂಪರ್ ಸ್ಟಾರ್ ಶೋಗೆ ಎಂಟ್ರಿ ಪಡೆದ ವಂಶಿಕಾ ಇದೀಗ ತನ್ನದೇ ಆದ ಹೆಸರನ್ನು ಮಾಡಿದ್ದು ಕಿರುತೆರೆಯಲ್ಲಿ ಭದ್ರವಾಗಿ ನೆಲೆಯೂರಿದ್ದಾಳೆ ಎಂದರೆ ತಪ್ಪಾಗಲಾರದು.. ಹೌದು ನನ್ನಮ್ಮ ಸೂಪರ್ ಸ್ಟಾರ್, ಗಿಚ್ಚಿ ಗಿಲಿಗಿಲಿ ಶೋ ವಿನ್ನರ್ ಆದ 5 ವರ್ಷದ ಪುಟಾಣಿ ವಂಶಿಕಾ ರಂಜನಿ ಕಶ್ಯಪ ಈಗ ಸಿನಿಮಾಗಳಲ್ಲಿ ನಟಿಸುತ್ತಿರುವುದು ಬಹುತೇಕರಿಗೆ ಗೊತ್ತೇ ಇದೆ. ಇದರ ಜೊತೆಗೆ ವಂಶಿಕಾಗೆ ಮತ್ತೊಂದು ಅದೃಷ್ಟ ಒಲಿದು ಬಂದಿದ್ದು ಈ ಅವಕಾಶದಿಂದಲೂ ಲಕ್ಷ ಲಕ್ಷ ಸಂಭಾವನೆ ವಂಶಿಕಾಳ ಕೈ ಸೇರಲಿದೆ..

ಹೌದು ಮಾಸ್ಟರ್ ಆನಂದ್, ಯಶಸ್ವಿನಿ ದಂಪತಿಯ ಮಗಳು ವಂಶಿಕಾ ಅಂಜನಿ ಕಶ್ಯಪ ನನ್ನಮ್ಮ ಸೂಪರ್ ಸ್ಟಾರ್ ಶೋನಲ್ಲಿ ತಾಯಿ ಯಶಸ್ವಿನಿ ಜೊತೆಗೆ ಭಾಗವಹಿಸಿದ್ದರು.. ಆ ಶೋನ ಗೆದ್ದ ವಂಶಿಕಾ ನಂತರ ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಭಾಗವಹಿಸಿ ಆ ಶೋನಲ್ಲಿಯೂ ಗೆಲುವಿನ ಕಿರೀಟವನ್ನು ಮುಡಿಗೇರಿಸಿಕೊಂಡು ಐದು ಲಕ್ಷ ಬಹುಮಾನ ಪಡೆದುಕೊಂಡಳು.. ಈಗ ಮತ್ತೊಂದು ಶೋಗೆ ಆಯ್ಕೆಯಾಗಿದ್ದು ಇದರಲ್ಲಿಯೂ ಸಹ ಲಕ್ಷ ಲಕ್ಷ ಸಂಭಾವನೆ ವಂಶಿಕಾಳ ಕೈ ಸೇರಲಿದೆ.. ಆದರೆ ಈ ಬಾರಿ ಸ್ಪರ್ಧಿಯಾಗಲ್ಲ ಬದಲಿಗೆ ನಿರೂಪಕಿಯಾಗಿ.. ಹೌದು ನನ್ನಮ್ಮ ಸೂಪರ್ ಸ್ಟಾರ್ 2 ಶೋನಲ್ಲಿ ನಿರೂಪಕಿಯಾಗಿ ವಂಶಿಕಾ ಕಾಲಿಟ್ಟಿದ್ದು ಕನ್ನಡ ಕಿರುತೆರೆಯ ಅತ್ಯಂತ ಚಿಕ್ಕ ವಯಸ್ಸಿನ ನಿರೂಪಕಿಯಾಗಿದ್ದಾಳೆ.. ಹೌದು, ನಿರಂಜನ್ ದೇಶಪಾಂಡೆ ಜೊತೆ ಪುಟಾಣಿ ವಂಶಿಕಾ ನಿರೂಪಣೆ ಮಾಡಲಿದ್ದಾಳೆ..

ಈಗಾಗಲೇ ನನ್ನಮ್ಮ ಸೂಪರ್ ಸ್ಟಾರ್ ಒನ್ ಶೋ ಯಶಸ್ವಿಯಾಗಿದ್ದು ಎರಡನೇ ಸೀಸಸ್‌ನಲ್ಲಿ ಸೆಲೆಬ್ರಿಟಿಗಳ ಜೊತೆಗೆ ಜನಸಾಮಾನ್ಯರಿಂದಲೂ ಅಮ್ಮ-ಮಕ್ಕಳ ಜೋಡಿಗಳನ್ನು ಆಯ್ದುಕೊಂಡು ಕಾರ್ಯಕ್ರಮ ರೂಪಿಸಲು ವಾಹಿನಿ ನಿರ್ಧರಿಸಿದೆ. ಇದರಿಂದ ರಾಜ್ಯದ ಸೂಪರ್ ಅಮ್ಮಂದಿರು ಹಾಗೂ ಕಿಲಾಡಿ ಮಕ್ಕಳಿಗೆ ಒಂದು ವೇದಿಕೆ ದೊರೆತಂತಾಗುತ್ತದೆ. ಕಾರ್ಯಕ್ರಮ ಹೆಚ್ಚು ವೈವಿಧ್ಯಮಯವಾಗಲಿದೆ. ಎರಡನೇ ಸೀಸನ್‌ನ ನನ್ನಮ್ಮ ಸೂಪರ್ ಸ್ಟಾರ್ ಶೋನಲ್ಲಿ ಒಟ್ಟು 12 ಅಮ್ಮ-ಮಕ್ಕಳ ಜೋಡಿಗಳು ಪಾಲ್ಗೊಳ್ಳಲಿದ್ದಾರೆ.

ವಂಶಿಕಾ ಅಂಜನಿ ಕಶ್ಯಪ- ಯಶಸ್ವಿನಿ ಮಾಸ್ಟರ್ ಆನಂದ್ ಅವರು ಮೊದಲ ಸೀಸನ್‌ನ ವಿಜೇತರಾಗಿದ್ದರು. ಈಗಾಗಲೇ ಎರಡನೇ ಸೀಸನ್‌ನ ಪ್ರೋಮೋ ರಿಲೀಸ್ ಆಗಿದೆ. ಅದರಲ್ಲಿ ಈ ಅಮ್ಮ ಮಗಳು ಜೋಡಿಯಾಗಿ ಕಾಣಿಸಿಕೊಂಡಿದ್ದಾರೆರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ವಂಶಿಕಾ ಅಂಜನಿ ಕಶ್ಯಪ ಅವರು ಸಿನಿಮಾ ಲೋಕಕ್ಕೂ ಕಾಲಿಟ್ಟಿದ್ದಾರೆ. ನಟ ವಸಿಷ್ಠ ಸಿಂಹ ನಟನೆಯ ಲವ್ ಲೀ ಸಿನಿಮಾದಲ್ಲಿ ವಂಶಿಕಾ ನಟಿಸುತ್ತಿದ್ದಾರಂತೆ. ಇದನ್ನು ಸ್ವತಃ ವಸಿಷ್ಠ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ..

ಈ ಹಿಂದೆಯೇ ಮಾದ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ್ದ ಮಾಸ್ಟರ್ ಆನಂದ್ ಅವರು, ನನ್ನ ಮಗಳಿಗೆ ಧಾರಾವಾಹಿ, ಸಿನಿಮಾ, ವೆಬ್ ಸಿರೀಸ್ ಆಫರ್ ಬಂದಿದೆ. ಅವಳಿಗೆ ಇಷ್ಟ ಇದ್ದರೆ ನಟಿಸಲಿ. ಮುಂದೆ ಅವಳು ನಟನೆಯಲ್ಲಿ ಮುಂದುವರೆಯಬಹುದು, ಬೇರೆ ಕ್ಷೇತ್ರದ ಕಡೆಯೂ ಮುಖ ಮಾಡಬಹುದು. ಅದು ಅವಳ ಇಷ್ಟ ಎಂದು ಹೇಳಿದ್ದಾರೆ.. ಒಟ್ಟಿನಲ್ಲಿ ಐದು ವರ್ಷಕ್ಕೆ ತನ್ನ ಪ್ರತಿಭೆಯ ಮೂಲಕ ಸಾಲು ಸಾಲು ಅವಕಾಶಗಳನ್ನು ಗಿಟ್ಟಿಸಿಕೊಂಡ ವಂಶಿಕಾ ಅಪ್ಪನಂತೆ ಬಣ್ಣದ ಲೋಕದಲ್ಲಿಯೇ ಮುಂದುವರೆಯಬಹುದಾಗಿದೆ..

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ಸಾಧ್ಯ ಆಗುವ ರೂಪದಲ್ಲಿ ಖಚಿತ ಪರಿಹಾರ, ನೂರಕ್ಕೆ ನೂರರಷ್ಟು ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಅಥವಾ ವಾಟ್ಸಪ್ ಮಾಡಿ 9916889622. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. 9916889622