ನನ್ನಮ್ಮ ಸೂಪರ್ ಸ್ಟಾರ್ ವಂಶಿಕಾ ಮನೆಯಲ್ಲಿ ಮಾಡೋ ಕೆಲಸ ನೋಡಿ

ನನ್ನಮ್ಮ ಸೂಪರ್ ಸ್ಟಾರ್ ಮೂಲಕ ಕರ್ನಾಟಕದ ಮನೆಮಾತಾಗಿರುವ ಮಗು ವಂಶಿಕಾ ಅಂಜನಿ ಕಶ್ಯಪ. ಚೋಟುದ್ದ ಇರುವ 5 ವರ್ಷದ ಪುಟ್ಟ ಮಗು ಇಂದು ಇಡೀ ಕರ್ನಾಟಕದ ಜನತೆಯ ಫೇವರೆಟ್ ಆಗಿದೆ. ವಂಶಿ ಮುದ್ದು ಮಾತು ಕೇಳಿ ಫಿದಾ ಅಗದವರಿಲ್ಲ. ಏನಪ್ಪಾ ಈ ನಗು ಇಷ್ಟು ಚಿಕ್ಕ ವಯಸ್ಸಿಗೆ ಎಷ್ಟೆಲ್ಲಾ ಮಾತಾಡುತ್ತಿದೆ ಎಂದು ಹಲವರು ಬಾಯಿ ಮೇಲೆ ಬೆರಳು ಇಟ್ಟುಕೊಂಡಿದ್ದು ಉಂಟು. ಮಾಸ್ಟರ್ ಆನಂದ್ ಅವರ ಮಗಳು ಎಂದು ಹೇಳಲು ವಂಶಿ ಪರ್ಫೆಕ್ಟ್ ಆಗಿದ್ದಾಳೆ ಎಂದೇ ಎಲ್ಲರೂ ಹೇಳುತ್ತಿದ್ದಾರೆ. ಮಾಸ್ಟರ್ ಆನಂದ್ ಅವರು ಚಿಕ್ಕ ವಯಸ್ಸಿನಲ್ಲಿದ್ದಾಗ ಸಿನಿಮಾಗಳಲ್ಲಿ ಹೇಗೆ ಪಟ ಪಟ ಎಂದು ಮಾತನಾಡುತ್ತಿದ್ದರೋ ವಂಶಿ ಸಹ ಹಾಗೆಯೇ ಇದ್ದಾಳೆ. ನನ್ನಮ್ಮ ಸೂಪರ್ ಸ್ಟಾರ್ ಶೋನಲ್ಲಿ ವಂಶಿ ಹೇಗಿದ್ದಾಳೆ, ಎಷ್ಟು ತರ್ಲೆ ತುಂಟತನ ಮಾಡ್ತಾಳೆ ಅಂತ ನಮ್ಮೆಲ್ಲರಿಗೂ ಗೊತ್ತಿದೆ, ಆದರೆ ವಂಶಿ ಮನೆಯಲ್ಲಿ ಹೇಗಿರ್ತಾಳೆ ಗೊತ್ತಾ? ಇಂದು ನಿಮಗೆ ತಿಳಿಸುತ್ತೇವೆ ನೋಡಿ…

ಮಾಸ್ಟರ್ ಆನಂದ್ ಅವರಿಗೆ ಹೆಣ್ಣುಮಗು ಅಂದ್ರೆ ತುಂಬಾ ಇಷ್ಟ. ತಮಗೆ ಜನಿಸುವ ಮೊದಲ ಮಗು ಹೆಣ್ಣುಮಗುವಾಗಿರಬೇಕು ಎಂದು ತುಂಬಾ ಆಸೆ ಇಟ್ಟುಕೊಂಡಿದ್ದರಂತೆ ಆನಂದ್, ಆದರೆ ಮೊದಲಿಗೆ ಗಂಡು ಮಗು ಜನಿಸಿದ್ದು ಅವರಿಗೆ ಬೇಸರವನ್ನುಂಟು ಮಾಡಿತ್ತಂತೆ. ಹಾಗಾಗಿ ಎಲ್ಲಾ ದೇವರುಗಳಿಗೆ ಹರಕೆ ಹೊತ್ತು ಎರಡನೇ ಬಾರಿ ಹೆಣ್ಣುಮಗುವನ್ನು ಪಡೆದರು. ಆ ಮುದ್ದಿನ ಮಗಳೇ ವಂಶಿ. ಮಾಸ್ಟರ್ ಆನಂದ್ ಮತ್ತು ಯಶಸ್ವಿನಿ ಇಬ್ಬರಿಗೂ ಕೂಡ ವಂಶಿ ಅಂದ್ರೆ ಪ್ರಾಣ. ಮಗಳನ್ನು ತುಂಬಾ ಮುದ್ದಾಗಿ ಪ್ರೀತಿಯಿಂದ ಬೆಳೆಸುತ್ತಿದ್ದಾರೆ ಮಾಸ್ಟರ್ ಆನಂದ್. 5 ವರ್ಷದ ಮುದ್ದು ವಂಶಿಗೆ ಸಿಕ್ಕ ಅದ್ಭುತವಾದ ಅವಕಾಶ ನನ್ನಮ್ಮ ಸೂಪರ್ ಸ್ಟಾರ್ ವೇದಿಕೆ.

ಇಷ್ಟು ಚಿಕ್ಕ ವಯಸ್ಸಿಗೆ ವಂಶಿಯಲ್ಲಿರುವ ಪ್ರತಿಭೆಯನ್ನು ಈ ಶೋ ತುಂಬಾ ಚೆನ್ನಾಗಿ ಬಳಸಿಕೊಳ್ಳುತ್ತಿದೆ. ವಂಶಿ ಹೇಳುವ ಡೈಲಾಗ್ ಗಳು, ಮಾಡುವ ಡ್ಯಾನ್ಸ್, ಮಾತನಾಡುವ ಮಾತುಗಳು ಇದೆಲ್ಲದಕ್ಕೂ ವೀಕ್ಷಕರು ಮತ್ತು ಜಡ್ಜ್ ಗಳು ನಗುವುದರ ಜೊತೆಗೆ ವಂಶಿಯನ್ನು ಇನ್ನು ಹೆಚ್ಚು ಇಷ್ಟಪಪಡಲು ಶುರು ಮಾಡಿದ್ದಾರೆ. ನನ್ನಮ್ಮ ಸೂಪರ್ ಸ್ಟಾರ್ ವೇದಿಕೆ ಮೇಲೆ ವಂಶಿ ಎಷ್ಟು ತುಂಟತನ ಮಾಡುತ್ತಾಳೆ ಎನ್ನುವುದು ಗೊತ್ತಾಗುತ್ತದೆ. ಸೆಟ್ ನಲ್ಲಿ ಮಾತ್ರವಲ್ಲದೆ ಮನೆಯಲ್ಲಿ ಕೂಡ ಇದೇ ರೀತಿ ತುಂಟತನ ಮಾಡುತ್ತಾ ಇರುತ್ತಾಳೆ ವಂಶಿ. ವಂಶಿ ನಿದ್ದೆ ಮಾಡುವಾಗ ಬಂದು ಬೇಗ ಎದ್ದೇಳಿಸಿದರೆ ಪುಟ್ಟ ವಂಶಿಗೆ ಕೋಪ ಬರುತ್ತಂತೆ.

ಹಾಗೂ ವಂಶಿಗೆ ಫೋಟೋ ಅಂದ್ರೆ ಆಗಲ್ವಂತೆ, ಇರಿಟೇಟ್ ಆಗುತ್ತಂತೆ. ಇದರ ಬಗ್ಗೆ ಮುದ್ದು ಮಾತುಗಳಲ್ಲಿ ವಂಶಿ ಹೇಳೋದೇನು ಗೊತ್ತಾ.. “ನಂಗೆ ಫೋಟೋ ಅಂದ್ರೇನೇ ಆಗಲ್ಲ. ಇಷ್ಟಾನೆ ಆಗಲ್ಲ, ಇರಿಟೇಟ್ ಆಗುತ್ತೆ. ಅಮ್ಮ ಅಪ್ಪ ಸಂತುಗೆ ಯಾವಾಗಲೂ ಅಮ್ಮ ಸಾಕು, ಅಪ್ಪ ಸಾಕು, ಸಂತು ಸಾಕು ಸಾಕು ಅಂತಾನೆ ಇರ್ತೀನಿ. ಒಬ್ಬರಲ್ಲ, ಇಬ್ಬರಲ್ಲ, 1, 2 3, 4…16 ಫ್ಯಾನ್ಸ್ ಬಂದು ಸೆಲ್ಫಿ ತಗೋಬೇಕು ಅಂತಾರೆ. ಆದ್ರೆ ನಂಗೆ ಫೋಟೋನೆ ಇಷ್ಟ ಇಲ್ಲ. ಈ ಅಮ್ಮ ಏಯ್ ತೆಗೂಸ್ಕೊ ಅಂತ ಬಯ್ಯುತ್ತೆ. ಆದ್ರೆ ನಂಗೆ ನಿದ್ದೆ ಬರ್ತಿರುತ್ತೆ ಏನ್ ಮಾಡ್ಲಿ.. ನಂಗೆ ಈ ಫೋಟೋ ಎಲ್ಲಾ ಇಷ್ಟಾನೆ ಆಗಲ್ಲ..” ಎನ್ನುತ್ತಾಳೆ ವಂಶಿ. ಆಗ ಮಾಸ್ಟರ್ ಆನಂದ್ ಅವರು ನಿಂಗೋಸ್ಕರ ಎಷ್ಟು ದೂರದಿಂದ ಬಂದಿರ್ತಾರೆ ಹಾಗಾಗಿ ನೀನು ಫೋಟೋ ತೆಗೆಸಿಕೊಳ್ಳಬೇಕು ಅಲ್ವಾ ಎಂದು ಮಗಳಿಗೆ ತಿಳಿಸಿಹೇಳುತ್ತಾರೆ.

ಒಂದು ಪ್ರಶ್ನೆಗೆ ಉತ್ತರ ಕೊಟ್ಟ ವಂಶಿ, ನಾನು ಮಗುವಲ್ಲ ಮುದುಕಿ ಎಂದಿದ್ದಾಳೆ. ನನ್ನ ಪೆಟ್ ನೇಮ್ ಮುದುಕಿ ಅಂತ. ಕುರುಕಲು ರಾಣಿ ಕೂಡ ನನ್ನ ಪೆಟ್ ನೇಮ್, ನಾನು ಚಿಪ್ಸ್, ಚೌಚೌ ಮತ್ತು ಇನ್ನೊಂದು ಚಿಪ್ಸ್ ತುಂಬಾ ತಿಂತೀನಿ ಎಂದು ಮುದ್ದಾಗಿ ಹೇಳುತ್ತಾಳೆ ವಂಶಿ. ನನಗೆ ಅಪ್ಪ ಅಮ್ಮನ ಮೇಲೆ ಏನು ಕಂಪ್ಲೇಂಟ್ ಇಲ್ಲ, ಶೋನಲ್ಲಿ ಹೇಳಿದ್ದು ಎಲ್ಲಾ ಡೈಲಾಗ್ ಗಳು ಅಷ್ಟೇ ಎನ್ನುತ್ತಾಳೆ. ಹಾಗೆಯೇ ಊಟದ ಬಗ್ಗೆ ಮಾತನಾಡಿ, “ನಂಗೆ ಪಿಜ್ಜಾ, ಬರ್ಗರ್, ಫ್ರೆಂಚ್ ಫ್ರೈಸ್, ಇವುಗಳು ಇಷ್ಟ. ಮನೆಯಲ್ಲಿ ಅಮ್ಮ, ಇಡ್ಲಿ ಮಾಡ್ತಾರೆ ಮತ್ತೆ ಅದೇ ಇಡ್ಲಿ ಮಾಡ್ತಾರೆ. ಚಪಾತಿ ಮಾಡ್ತಾರೆ ಮತ್ತೆ ಅದೇ ಚಪಾತಿ ಮಾಡ್ತಾರೆ, ಅದೆಲ್ಲ ತಿನ್ನೋದಕ್ಕೆ ಬೋರ್ ಆಗುತ್ತೆ..” ಎಂದು ಅಮ್ಮ ಮಾಡುವ ಅಡುಗೆ ಬಗ್ಗೆ ಹೇಳಿದ್ದಾಳೆ.

ಪಿಜ್ಜಾ ಬರ್ಗರ್ ತಿಂದ್ರೆ ದಪ್ಪ ಆಗ್ತಿಯ ಅಂತ ಅಪ್ಪ ಹೇಳಿದಾಗ, “ನಾನು ಎಕ್ಸರ್ಸೈಸ್ ಮಾಡಿ, ಸಣ್ಣ ಆಗ್ತೀನಿ. ಅಪ್ಪನ ಜೊತೆ ವರ್ಕೌಟ್ ಮಾಡ್ತೀನಿ. ಮೊದಲು ಕೂಡ ಎಕ್ಸಸೈಸ್ ಮಾಡಿ ಸಣ್ಣ ಆಗಿದ್ದೆ. ಈಗ ಒಂದು ಮೂರು ಕೆಜಿ ಸಣ್ಣ ಆಗಿದ್ದೀನಿ.. ಎಂದು ಹೇಳುತ್ತಾಳೆ ವಂಶಿ. ಹೀಗೆ ಮುದ್ದು ಮುದ್ದು ಮಾತುಗಳಲ್ಲಿ ಮನೆಯಲ್ಲಿ ಅಪ್ಪನಿಗೂ ಮನರಂಜನೆ ಕೊಡುತ್ತಾಳೆ ವಂಶಿ. ಮಕ್ಕಳು ಅಂದ್ರೆ ಹಾಗೆ ಚಿಕ್ಕ ವಯಸ್ಸಿಗೆ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾ ಎಲ್ಲರೂ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವ ಹಾಗೆ ಮಾಡುತ್ತಾರೆ. ಇಂತಹ ಒಂದು ಪುಟ್ಟ ಮಗು ಮನೆಯಲ್ಲಿದ್ದರೆ ಹೆತ್ತವರಿಗೆ ಎಷ್ಟು ಸಂತೋಷ ಆಗುತ್ತದೆ ಎಂದು ಆನಂದ್ ಯಶಸ್ವಿನಿ ದಂಪತಿಗಳನ್ನು ನೋಡಿದರೆ ಗೊತ್ತಾಗುತ್ತದೆ.