ರಿಲೇಷನ್ ಶಿಪ್ ನಲ್ಲಿರುವ ವೈಷ್ಣವಿ.. ಯಾರೊಂದಿಗೆ ಗೊತ್ತಾ..

ವೈಷ್ಣವಿ ಗೌಡ ಕನ್ನಡ ಕಿರುತೆರೆ ಲೋಕದಲ್ಲಿ ಎಲ್ಲರ ಫೇವರೆಟ್ ಆಗಿರುವ ಹುಡುಗಿ ಇವರು. ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಸನ್ನಿಧಿ ಎಂದೇ ಫೇಮಸ್ ಆದ ವೈಷ್ಣವಿ ಅವರನ್ನು ಪ್ರತಿದಿನ ನೋಡಲು ಆಗುವುದಿಲ್ಲ ಎಂದು ವೀಕ್ಷಕರು ಈಗಲೂ ಬೇಸರ ಮಾಡಿಕೊಳ್ಳುತ್ತಾರೆ. ವೈಷ್ಣವಿ ಕಿರುತೆರೆಗೆ ಕಂಬ್ಯಾಕ್ ಮಾಡಲಿ ಎಂದು ಕಾಯುತ್ತಿದ್ದಾರೆ. ವೈಷ್ಣವಿ ಅವರಿಗೆ ದೊಡ್ಡ ಫ್ಯಾನ್ ಬೇಸ್ ಇದೆ, ಬಿಗ್ ಬಾಸ್ ಮನೆಯೊಳಗೆ ಹೋಗಿ ಬಂದ ನಂತರ ಇವರಿಗಿರುವ ಅಭಿಮಾನಿ ಬಳಗ ಇನ್ನು ದೊಡ್ಡದಾಗಿದೆ ಅಂದ್ರೆ ತಪ್ಪಾಗುವುದಿಲ್ಲ. ವೈಷ್ಣವಿ ಅವರ ಬಗ್ಗೆ ಆಗಾಗ ಕೆಲವು ವಿಚಾರಗಳು ಚರ್ಚೆಯಾಗುತ್ತದೆ. ಅವುಗಳಲ್ಲಿ ಒಂದು ವೈಷ್ಣವಿ ಅವರ ಮದುವೆ ವಿಚಾರ. ಬಿಗ್ ಬಾಸ್ ಮನೆಯೊಳಗೆ ಹೋದ ನಂತರವಂತು ಮದುವೆ ಬಗ್ಗೆ ಭಾರಿ ಚರ್ಚೆಯಾಗಿತ್ತು. ಹೀಗೆ ವೈಷ್ಣವಿ ಮದುವೆ ಯಾವಾಗ, ವೈಷ್ಣವಿ ಯಾರ ಜೊತೆಯಲ್ಲಾದರು ರಿಲೇಶನ್ಷಿಪ್ ನಲ್ಲಿದ್ದಾರಾ ? ಎನ್ನುವ ಪ್ರಶ್ನೆಗಳನ್ನು ಅವರಿಗೆ ಕೇಳುತ್ತಲೇ ಇರುತ್ತಾರೆ. ಇದೀಗ ಆ ಪ್ರಶ್ನೆಗೆ ಕೊನೆಗೂ ಉತ್ತರ ಕೊಟ್ಟಿದ್ದಾರೆ ವೈಷ್ಣವಿ. ಇವರು ಯಾರ ಜೊತೆ ರಿಲೇಶನ್ಷಿಪ್ ನಲ್ಲಿದ್ದಾರೆ ಗೊತ್ತಾ..

ವೈಷ್ಣವಿ ಗೌಡ ಅಂದ ತಕ್ಷಣವೇ ನೆನಪಾಗುವುದು, ಮುಗ್ಧವಾದ ಆ ಮುದ್ದು ಮುಖ, ಗುಳಿ ಕೆನ್ನೆಯ ನಗು ಮತ್ತು ಆ ಮುದ್ದಾದ ಮಾತುಗಳು. ಮೊದಲಿಗೆ ಡ್ಯಾನ್ಸ್ ರಿಯಾಲಿಟಿ ಶೋ ಒಂದರ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ವೈಷ್ಣಬಿ, ನಂತರ ನಟಿಸಿದ್ದು ದೇವಿ ಸೀರಿಯಲ್ ನಲ್ಲಿ. ಚಿಕ್ಕ ವಯಸ್ಸಿನಲ್ಲೇ ಜೀಕನ್ನಡ ವಾಹಿನಿಯಲ್ಲಿ ದೇವಿಯ ಭಕ್ತೆಯ ಪಾತ್ರದಲ್ಲಿ ಅಭಿನಯಿಸಿ ಎಲ್ಲರ ಮನಗೆದ್ದರು ವೈಷ್ಣವಿ. ಈ ಧಾರಾವಾಹಿ ಜನರಿಗೆ ಇಷ್ಟವಾದರು ಕೂಡ ದೊಡ್ಡ ಯಶಸ್ಸನ್ನು ತಂದುಕೊಡಲಿಲ್ಲ. ವೈಷ್ಣವಿ ಅವರಿಗೆ ಬಿಗ್ ಬ್ರೇಕ್ ಸಿಕ್ಕಿದ್ದು ಅಗ್ನಿಸಾಕ್ಷಿ ಧಾರಾವಾಹಿ ಮೂಲಕ.

ಜನರೆಲ್ಲರೂ ಇವರ ನಿಜವಾದ ಹೆಸರನ್ನು ಮರೆತು, ಸನ್ನಿಧಿ ಎಂದೇ ಕರೆಯುತ್ತಿದ್ದರು. ಈಗಲೂ ಸಾಕಷ್ಟು ಅಭಿಮಾನಿಗಳು ವೈಷ್ಣವಿ ಅವರನ್ನು ಸನ್ನಿಧಿ ಎಂದೇ ಕರೆಯುತ್ತಾರೆ, ಸನ್ನಿಧಿ ಪಾತ್ರವನ್ನು ಜನರು ಈಗಲೂ ಮಿಸ್ ಮಾಡಿಕೊಳ್ಳುತ್ತಾರೆ. ಸನ್ನಿಧಿ ಮತ್ತು ಸಿದ್ಧಾರ್ಥ್ ನ ಪ್ರೀತಿಯ ಸನ್ನಿವೇಶಗಳು, ಸನ್ನಿಧಿಯ ಧೈರ್ಯ, ಕುಟುಂಬದ ಎಲ್ಲಾ ಸಮಸ್ಯೆಗಳನ್ನು ಎದುರಿಸುವ ಸ್ಥೈರ್ಯ ಇದೆಲ್ಲವನ್ನು ಜನರು ತುಂಬಾ ಇಷ್ಟಪಟ್ಟಿದ್ದರು. ಅಗ್ನಿಸಾಕ್ಷಿ ನಂತರ ಇನ್ಯಾವುದೇ ಧಾರಾವಾಹಿಗಳಲ್ಲು ನಟಿ ವೈಷ್ಣವಿ ಕಾಣಿಸಿಕೊಂಡಿಲ್ಲ. ಮಜಾ ಭಾರತ ಕಾಮಿಡಿ ಶೋ ನಿರೂಪಣೆ ಮಾಡಿದ್ದರು, ಆದರೆ ಅದು ಹೇಳಿಕೊಳ್ಳುವಷ್ಟು ಹೆಸರು ತಂದುಕೊಡಲಿಲ್ಲ.

ವೈಷ್ಣವಿ ಅವರು ಕನ್ನಡ ಚಿತ್ರರಂಗದಲ್ಲಿ ಸಹ ಸಕ್ರಿಯವಾಗಿದ್ದು, ಒಂದೆರಡು ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ನಂತರ ವೈಷ್ಣವಿ ಅವರು ಕಾಲಿಟ್ಟಿದ್ದು ಬಿಗ್ ಬಾಸ್ ಮನೆಗೆ. ಬಿಗ್ ಮನೆಯೊಳಗೆ ಬಹಳ ಸರಳವಾಗಿ, ಎಲ್ಲರ ಜೊತೆ ಎಷ್ಟು ಬೇಕು ಅಷ್ಟು ಮಾತ್ರ ಬೆರೆಯುತ್ತಾ, ತಾನೊಬ್ಬ ಸೆಲೆಬ್ರಿಟಿ ಎನ್ನುವ ಅಹಂ ಇಲ್ಲದೆ, ಅಡುಗೆ ಮಾಡುತ್ತಾ, ಯೋಗ ಮಾಡುತ್ತಾ, ಆಗಾಗ ತಮಾಷೆ ಮಾಡುತ್ತಾ ಇರುತ್ತಿದ್ದ ವೈಷ್ಣವಿ ಅವರ ನಿಜಸ್ವಭಾವ ಜನರಿಗೆ ಮೆಚ್ಚುಗೆಯಾಗಿ, ಫೈನಲ್ಸ್ ವರೆಗೂ ತಲುಪಿದ್ದರು ವೈಷ್ಣವಿ. ಇತ್ತೀಚೆಗೆ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಒಂದನ್ನು ಶುರು ಮಾಡಿದ್ದಾರೆ.

ಯೂಟ್ಯೂಬ್ ಚಾನೆಲ್ ನಲ್ಲಿ ತಮ್ಮ ನಿಜ ಜೀವನದ ಬಗ್ಗೆ ವೃತ್ತಿ ಜೀವನದ ಬಗ್ಗೆ ಸಾಕಷ್ಟು ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಸಹ ಆಕ್ಟಿವ್ ಆಗಿರುವ ವೈಷ್ಣವಿ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ ಬರೋಬ್ಬರಿ 1 ಮಿಲಿಯನ್ ಫಾಲೋವರ್ಸ್ ಇದ್ದಾರೆ. ವೈಷ್ಣವಿ ಅವರು ಆಗಾಗ ಫೋಟೋಶೂಟ್ ಗಳಿಗೆ ಪೋಸ್ ನೀಡಿ ಅವುಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ಮಿನುಗುತಾರೆ ಕಲ್ಪನಾ ಅವರ ಲುಕ್ ರೀಕ್ರಿಯೇಟ್ ಮಾಡಿ, ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದರು. ವೈಷ್ಣವಿ ಅವರು ಯಾವುದೇ ಸಂದರ್ಶನದಲ್ಲಿ ಪಾಲ್ಗೊಂಡರು ಸಹ ಮದುವೆ ಬಗ್ಗೆ ರಿಲೇಶನ್ಷಿಪ್ ಬಗ್ಗೆ ಪ್ರಶ್ನೆ ಕೇಳುತ್ತಾರೆ..

ಇತ್ತೀಚೆಗೆ ಇವರು ಪಾಲ್ಗೊಂಡಿದ್ದ ಒಂದು ಸಂದರ್ಶನದಲ್ಲಿ ಕೂಡ ಯಾರ ಜೊತೆ ರಿಲೇಶನ್ಷಿಪ್ ನಲ್ಲಿದ್ದೀರಾ ಎಂದು ಪ್ರಶ್ನೆ ಕೇಳಲಾಗಿತ್ತು, ಅದಕ್ಕೆ ಉತ್ತರ ಕೊಟ್ಟಿರುವ ವೈಷ್ಣವಿ ಅವರು, “ನಾನು ಅವರ ಜೊತೆ ತುಂಬಾ ವರ್ಷದಿಂದ ರಿಲೇಶನ್ಷಿಪ್ ನಲ್ಲಿದ್ದೇನೆ..” ಎಂದು ಉತ್ತರ ಕೊಟ್ಟರು. ಶಾಕ್ ಆದ ನಿರೂಪಕರು, ಯಾರವರು ಎಂದು ಕೇಳಿದಾಗ, “ನನ್ನ ಕೆಲಸದ ಜೊತೆ ರಿಲೇಶನ್ಷಿಪ್ ನಲ್ಲಿದ್ದೇನೆ..” ಎನ್ನುತ್ತಾರೆ ವೈಷ್ಣವಿ. ಮೊದಲಿಗೆ ವೈಷ್ಣವಿ ಈ ಉತ್ತರ ಕೊಟ್ಟಾಗ ಎಲ್ಲರಿಗೂ ಶಾಕ್ ಆಗಿತ್ತು, ನಿಜಕ್ಕೂ ವೈಷ್ಣವಿ ಯಾರನ್ನಾದರೂ ಪ್ರೀತಿ ಮಾಡುತ್ತಿದ್ದಾರಾ? ಎಂದು ಅನ್ನಿಸಿತ್ತು. ಆದರೆ ಈ ಉತ್ತರ ಕೇಳಿ ಅಭಿಮಾನಿಗಳು ನಗುವ ಹಾಗೆ ಆಗಿದೆ.