ಮರಳಿ ಮನಸಾಗಿದೆ ಧಾರಾವಾಹಿಯ ವೈಷ್ಣವಿ ನಿಜಕ್ಕೂ ಯಾರು ಗೊತ್ತಾ?

ಮನೆಯಲ್ಲಿರುವ ವೀಕ್ಷಕರಿಗೆ ಹೆಂಗಸರಿಗೆ ಮನರಂಜನೆ ನೀಡುವುದು ಟಿವಿಯಲ್ಲಿ ಮೂಡಿಬರುವ ಕಾರ್ಯಕ್ರಮಗಳು ಮತ್ತು ಸೀರಿಯಲ್. ಹೆಂಗಸರು ಹೆಚ್ಚಾಗಿ ಸೀರಿಯಲ್ ಗಳಿಗೆ ಅಡಿಕ್ಟ್ ಆಗುತ್ತಾರೆ. ಹಲವಾರು ಸೀರಿಯಲ್ ಗಳು ಮೂಡಿಬಂದರು ಸಹ ಎಲ್ಲಾ ಸೀರಿಯಲ್ ಗಳು ಜನರಿಗೆ ಇಷ್ಟ ಆಗುವುದಿಲ್ಲ. ಕೆಲವು ಸೀರಿಯಲ್ ಗಳನ್ನು ಮಾತ್ರ ಜನರು ಇಷ್ಟಪಡುತ್ತಾರೆ. ಅದೇ ರೀತಿ ಹಲವಾರು ಸೀರಿಯಲ್ ಕಲಾವಿದರಿದ್ದರೂ ಸಹ ಜನರಿಗೆ ಇಷ್ಟ ಆಗುವುದು, ಮನಸ್ಸಿನಲ್ಲಿ ಉಳಿಯುವದು ಕೆಲವು ಪಾತ್ರಗಳು ಮಾತ್ರ. ಹಾಗಾಗಿ ಕಿರುತೆರೆಗೆ ಎಂಟ್ರಿ ಕೊಡುವ ಎಲ್ಲರೂ ಯಶಸ್ಸು ಪಡೆಯುವುದಿಲ್ಲ. ಮನಸ್ಸಿಗೆ ಹತ್ತಿರ ಆಗುವಂತಹ ಪಾತ್ರಗಳನ್ನು ಮಾತ್ರ ಜನರು ತುಂಬಾ ಇಷ್ಟಪಡುತ್ತಾರೆ. ಪ್ರಸ್ತುತ ಜನರಿಗೆ ಇಷ್ಟ ಆಗಿರುವಂತಹ ಧಾರಾವಾಹಿಗಳಲ್ಲಿ ಒಂದು ಮರಳಿ ಮನಸ್ಸಾಗಿದೆ. ಈ ಧಾರಾವಾಹಿಯಲ್ಲಿ ವೈಷ್ಣವಿ ಪಾತ್ರ ಮಾಡುತ್ತಿರುವ ನಟಿ ನಿಜಕ್ಕೂ ಯಾರು..

ಮರಳಿ ಮನಸ್ಸಾಗಿದೆ ಧಾರಾವಾಹಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯಲ್ಲಿ ನಟ ಚಂದನ್ ಕುಮಾರ್ ನಾಯಕನಾಗಿದ್ದಾರೆ, ಚಂದನ್ ಅವರು ಪೊಲೀಸ್ ಪಾತ್ರ ನಿರ್ವಹಿಸುಟ್ಟಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಶುರುವಾದ ಈ ಧಾರಾವಾಹಿ ವೀಕ್ಷಕರಿಗೆ ಇಷ್ಟವಾಗಿದೆ. ಮರಳಿ ಮನಸ್ಸಾಗಿದೆ ಚಂದನ್ ಅವರಿಗೆ ಕನ್ನಡದಲ್ಲಿ ಕಂಬ್ಯಾಕ್ ಧಾರಾವಾಹಿ ಎಂದರೆ ತಪ್ಪಾಗುವುದಿಲ್ಲ. ಯಾಕಂದ್ರೆ ಮದುವೆಗಿಂತ ಮೊದಲು ಧಾರಾವಾಹಿಗಳಿಂದ ಬ್ರೇಕ್ ಪಡೆದುಕೊಂಡ ಚಂದನ್, ಮರಳಿ ಮನಸ್ಸಾಗಿದೆ ಮೂಲಕ ಕಂಬ್ಯಾಕ್ ಮಾಡಿದರು. ಪ್ರಸ್ತುತ ಧಾರಾವಾಹಿ ಮತ್ತು ಸಿನಿಮಾ ಎರಡರಲ್ಲೂ ಸಹ ಬ್ಯುಸಿ ಆಗಿದ್ದಾರೆ.

ಈ ಧಾರಾವಾಹಿಯ ಕಥೆ ಹಾಗೂ ಪಾತ್ರಗಳು ವೀಕ್ಷಕರಿಗೆ ಇಷ್ಟವಾಗಿದ್ದು, ಮರಳಿ ಮನಸ್ಸಾಗಿದೆ ಧಾರಾವಾಹಿಯ ಕಥೆಯನ್ನು ಜನರು ಇಷ್ಟಪಟ್ಟಿದ್ದಾರೆ. ಪ್ರತಿದಿನ ಒಳ್ಳೆಯ ಟ್ವಿಸ್ಟ್ ನೀಡುತ್ತಿದೆ ಧಾರಾವಾಹಿ. ಮರಳಿ ಮನಸ್ಸಾಗಿದೆ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ವೀಕ್ಷಕರಿಗೆ ಇಷ್ಟ ಆಗಿರುವ ಮತ್ತೊಂದು ಪಾತ್ರ ವೈಷ್ಣವಿ.ಈ ಪಾತ್ರವು ನೆಗಟಿವ್ ಶೇಡ್ ಇರುವ ಪಾತ್ರ ಆಗಿದ್ದರೂ, ಪಾತ್ರ ನಿರ್ವಹಿಸುತ್ತಿರುವ ನಟಿಯ ಅಭಿನಯವನ್ನು ಎಲ್ಲರೂ ಇಷ್ಟಪಟ್ಟು, ನೆಗಟಿವ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ ಎಂದು ಅಭಿಮಾನಿಗಳು ಮತ್ತು ಕಿರುತೆರೆ ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವೈಷ್ಣವಿ ಪಾತ್ರದಲ್ಲಿ ಅಭಿನಯಿಸರುವ ಈ ನಟಿಯ ಹೆಸರು ಶಿಲ್ಪಾ ಶೆಟ್ಟಿ. ಶಿಲ್ಪಾ ಶೆಟ್ಟಿ ಮೂಲತಃ ಪುತ್ತೂರಿನವರು. ಇವರು ಹುಟ್ಟಿದ್ದು, ಓದಿದ್ದು ಬೆಳೆದದ್ದು ಎಲ್ಲವೂ ಅಲ್ಲಿಯೇ. ಇದೇ ಹೆಸರಿನ ಕರಾವಳಿ ಬೆಡಗಿ ಭಾರತದ ನಂಬರ್ 1 ನಟಿ ಎನ್ನಿಸಿಕೊಂಡಿದ್ದರು, ಈ ಶಿಲ್ಪಾ ಶೆಟ್ಟಿ ಕಿರುತೆರೆಯಲ್ಲಿ ಹೆಸರು ಮಾಡುತ್ತಿದ್ದಾರೆ. ಶಿಲ್ಪಾ ಅವರು ಹುಟ್ಟಿದ್ದು ಜೂನ್ 24ರಂದು. ಇಂಜಿನಿಯರಿಂಗ್ ಓದಿರುವ ಶಿಲ್ಪಾ ಶೆಟ್ಟಿ ನಟನೆ ಮೇಲಿನ ಆಸಕ್ತಿಯಿಂದ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸುವುದನ್ನು ಶುರು ಮಾಡಿದರು. ನಟನೆ ಇವರ ಪ್ಯಾಷನ್ ಆಗಿದೆ.

ಮರಳಿ ಮನಸಾಗಿದೆ ಧಾರಾವಾಹಿಗಿಂತ ಮೊದಲು, ನಾಗಕನ್ನಿಕೆ, ಎರಡು ಕನಸು ಮತ್ತು ರಾಜಾ ರಾಣಿ ಧಾರಾವಾಹಿಯಲ್ಲಿ ಅಭಿನಯಿಸಿದ್ದರು ಶಿಲ್ಪಾ. ಇವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ಮರಳಿ ಮನಸಾಗಿದೆ ಧಾರಾವಾಹಿ ಆಗಿದೆ. ಕಿರುತೆರೆ ಮಾತ್ರವಲ್ಲದೆ ಬೆಳ್ಳಿತೆರೆಯಲ್ಲು ಸಹ ಮಿಂಚಿದ್ದಾರೆ ಶಿಲ್ಪಾ, ಗಿರಗಿಟ್ ಹೆಸರಿನ ತುಳು ಸಿನಿಮಾ ಒಂದರಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ತುಳು ಭಾಷೆಯ ಖ್ಯಾತ ನಟ ರೂಪೇಶ್ ರಾಜು ಅವರು ನಾಯಕನಾಗಿದ್ದ ಈ ಸಿನಿಮಾ, ತುಳುನಾಡಿನಲ್ಲಿ ಸೂಪರ್ ಹಿಟ್ ಆಗಿತ್ತು.

ರಾಜಾ ರಾಣಿ ಧಾರಾವಾಹಿ ನಂತರ ಕಿರುತೆರೆಯಿಂದ ಒಂದು ಗ್ಯಾಪ್ ತೆಗೆದುಕೊಂಡಿದ್ದ ನಟಿ ಶಿಲ್ಪಾ ಶೆಟ್ಟಿ, ಮರಳಿ ಮನಸಾಗಿದೆ ಧಾರಾವಾಹಿ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ವೈಷ್ಣವಿ ಪಾತ್ರದ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಒಳ್ಳೆಯ ಪಾತ್ರ ಸಿಕ್ಕರೆ ಕನ್ನಡ ಸಿನಿಮಾಗಳಲ್ಲಿ ನಟಿಸುವ ಕನಸನ್ನು ಸಹ ಹೊಂದಿದ್ದಾರೆ ಶಿಲ್ಪಾ ಶೆಟ್ಟಿ. ಇವರ ಕೆರಿಯರ್ ನ ಮುಂದಿನ ದಿನಗಳು ಚೆನ್ನಾಗಿರಲಿ ಎಂದು ಹಾರೈಸೋಣ.