ಕನಸಿನ ಮನೆ ಖರೀದಿ ಮಾಡಿದ ಅಗ್ನಿಸಾಕ್ಷಿ ನಟಿ ವೈಷ್ಣವಿ ಗೌಡ.. ಮನೆ ಹೇಗಿದೆ ನೋಡಿ..

ಕನ್ನಡ ಕಿರುತೆರೆಯ ಖ್ಯಾತ ನಟಿ.. ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ ವೈಷ್ಣವಿ ಗೌಡ ಇದೀಗ ತಮ್ಮ ಜೀವನದ ಅತಿ ಮುಖ್ಯವಾದ ಘಟ್ಟವೊಂದನ್ನು ತಲುಪಿದ್ದು ತಮ್ಮ ದುಡಿಮೆಯ ಹಣದಲ್ಲಿ ಇದೀಗ ತಮ್ಮ ಕನಸಿನ ಮನೆಯನ್ನು ಖರೀದಿ ಮಾಡಿದ್ದಾರೆ.. ಹೌದು ವೈಷ್ಣವಿ ಗೌಡ ಸಧ್ಯ ಸಿಕ್ಕಾಪಟ್ಟೆ ಸಂತೋಷದಲ್ಲಿದ್ದು ಅದಕ್ಕೆ ಕಾರಣ ವೈಷ್ಣವಿ ಗೌಡ ಕನಸಿನ ಮನೆ ಖರೀದಿ ಮಾಡಿದ್ದಾರೆ. ಹೌದು.. ಬೆಂಗಳೂರಿನಲ್ಲಿ ನಟಿ ವೈಷ್ಣವಿ ಗೌಡ ಹೊಸ ಮನೆ ಕೊಂಡುಕೊಂಡಿದ್ದಾರೆ. ವೈಷ್ಣವಿ ಗೌಡ ಅವರ ಹೊಸ ಮನೆಯ ಗೃಹಪ್ರವೇಶ ಸಮಾರಂಭ ಜರುಗಿದೆ..

ಇದೇ ತಿಂಗಳು ಮೇ 8 ರಂದು ವೈಷ್ಣವಿ ಗೌಡ ಅವರ ಹೊಸ ಮನೆಯ ಗೃಹಪ್ರವೇಶ ಸಮಾರಂಭವೂ ಅದ್ಧೂರಿಯಾಗಿ ನೆರವೇರಿದ್ದು ಗೃಹಪ್ರವೇಶಕ್ಕೆ ಕುಟುಂಬಸ್ಥರು, ಸ್ನೇಹಿತರು, ಬಿಗ್ ಬಾಸ್ ಮಾಜಿ ಸ್ಪರ್ಧಿಗಳು ಕೂಡ ಭಾಗವಹಿಸಿ ವೈಷ್ಣವಿಗೆ ಶುಭ ಕೋರಿದರು.. ಹೌದು ಈ ಹಿಂದೆ ವೈಷ್ಣವಿ ಸಾಕಷ್ಟು ಬಾರಿ ಹೇಳಿದಂತೆ ಬೆಂಗಳೂರಿನಲ್ಲಿ ಸ್ವಂತ ಮನೆಯೊಂದನ್ನು ಖರೀದಿಸಬೇಕೆಂದಿದ್ದರು.. ಕಳೆದ ಹತ್ತು ಹನ್ನೆರೆಡು ವರ್ಷದ ಕಿರುತೆರೆಯ ತಮ್ಮ ವೃತ್ತಿ ಬದುಕಿನಲ್ಲಿ ದುಡಿದ ಹಣದಿಂದ ಇದೀಗ ತಮ್ಮ ಕನಸನ್ನು ಸಾಕಾರ ಮಾಡಿಕೊಂಡಿದ್ದಾರೆ..

ನಟಿ ವೈಷ್ಣವಿ ಗೌಡ ಅಗ್ನಿಸಾಕ್ಷಿ ಧಾರಾವಾಹಿ ಮುಗಿದ ಬಳಿಕ ಬಿಗ್ ಬಾಸ್ ಕನ್ನಡ ಸೀಸನ್ ಎಂಟರಲ್ಲಿ ಸ್ಪರ್ಧಿಸಿ ಟಾಪ್ ನಾಲ್ಕನೇ ಸ್ಪರ್ಧಿಯಾಗಿ ಹೊರ ಬಂದರು.. ಇದೇ ರಿಯಾಲಿಟಿ ಶೋನಲ್ಲಿ ರಾಜೀವ್ ಹನು,
ರಾಘು ಗೌಡ ದಿವ್ಯಾ ಉರುಡುಗ ಅರವಿಂದ್.ಕೆ.ಪಿ ಪ್ರಶಾಂತ್ ಸಂಬರಗಿ ಕೂಡ ಸ್ಪರ್ಧಿಸಿದ್ದರು.. ಇವರೆಲ್ಲಾ ವೈಷ್ಣವಿ ಅವರ ಹೊಸ ಮನೆಯ ಗೃಹಪ್ರವೇಶ ಸಮಾರಂಭದಲ್ಲಿ ಪಾಲ್ಗೊಂಡಿದ್ದು ವೈಷ್ಣವಿಯ ಕನಸು ನನಸಾಗಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ‌‌..

ಇನ್ನೂ ಅಗ್ನಿಸಾಕ್ಷಿ ಧಾರಾವಾಹಿ ಹೊರತುಪಡಿಸಿ ಕಿರುತೆರೆಯ ಬೇರೆ ಬೇರೆ ಕಾರ್ಯಕ್ರಮಗಳಲ್ಲಿಯೂ ಸಹ ವೈಷ್ಣವಿ ಕಾಣಿಸಿಕೊಂಡಿದ್ದು ಇದೀಗ ಕಿರುತೆರೆಯ ಸಾಕಷ್ಟು ಸ್ನೇಹಿತರು ವೈಷ್ಣವಿ ಅವರ ಹೊಸ ಮನೆಯ ಗೃಹ ಪ್ರವೇಶ ಸಮಾರಂಭದಲ್ಲಿ ಭಾಗಿಯಾಗಿದ್ದರು‌.. ಕನ್ನಡತಿ ಖ್ಯಾತಿಯ ನಟಿ ಚಿತ್ಕಳಾ ಬಿರಾದಾರ ಅಗ್ನಿಸಾಕ್ಷಿ ಖ್ಯಾತಿಯ ವಿಜಯ್ ಸೂರ್ಯ ಹಾಗೂ ಪತ್ನಿ.. ನಟಿ ಕಾವ್ಯಾ ಶಾ ಸೇರಿದಂತೆ ಸಾಕಷ್ಟು ಕಲಾವಿದರು ಹಾಜರಾಗಿದ್ದರು.

ಇನ್ನು ಇತ್ತ ಸಮಾರಂಭದ ಫೋಟೋಗಳನ್ನು ಹಂಚಿಕೊಂಡಿರುವ ನಟ ರಾಜೀವ್ ಹನು.. ವೈಷ್ಣವಿ ಅವರಿಗೆ ಅಭಿನಂದನೆಗಳು.. ಗೃಹ ಪ್ರವೇಶ ಸಮಾರಂಭ ಅದ್ಭುತವಾಗಿತ್ತು. ನಿಮ್ಮ ಇಡೀ ಕುಟುಂಬಕ್ಕೆ ನನ್ನ ಶುಭಾಶಯಗಳು. ಅನೇಕ ದಿನಗಳ ಬಳಿಕ ಸ್ನೇಹಿತರನ್ನು ಭೇಟಿ ಮಾಡಿದ್ದು ಖುಷಿಯಾಯಿತು.. ಎಂದು ಬರೆದು ಪೋಸ್ಟ್ ಮಾಡಿದ್ದು ಸಮಾರಂಭದಲ್ಲಿ ಸ್ನೇಹಿತರೊಟ್ಟಿಗೆ ಸಮಯ ಕಳೆದ ಫೋಟೋಗಳನ್ನು ಹಂಚಿಕೊಂಡಿದ್ದಾರೆ..

ಇನ್ನು ಸಧ್ಯ ಬಿಗ್ ಬಾಸ್ ನಿಂದ ಬಂದ ಬಳಿಕ ಬೇರೆ ಯಾವುದೇ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳದ ವೈಷ್ಣವಿ ಒಂದೆರೆಡು ಸಿನಿಮಾದಲ್ಲಿ ಅಭಿನಯಿಸಿದ್ದು.. ಸಧ್ಯ ಇದೀಗ ತಮ್ಮ ಕನಸಿನ ಮನೆಯನ್ನು ಕೊಂಡುಕೊಂಡ ಸಂಭ್ರಮದಲ್ಲಿದ್ದಾರೆ.. ಇನ್ನು ಕಿರುತೆರೆಯ ಮೂಲಗಳ ಪ್ರಕಾರ ಅಗ್ನಿಸಾಕ್ಷಿಯ ಖ್ಯಾತ ಜೋಡಿ ವೈಷ್ಣವಿ ಗೌಡ ಹಾಗೂ ವಿಜಯ್ ಸೂರ್ಯ ಅವರ ಮತ್ತೆ ತೆರೆ ಮೇಲೆ ಒಂದಾಗುತ್ತಿದ್ದು ಜೀ ಕನ್ನಡದ ಹೊಸ ಧಾರಾವಾಹಿಯಲ್ಲಿ‌ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು ಇನ್ನು ಕೆಲ ತಿಂಗಳುಗಳಲ್ಲಿ ಧಾರಾವಾಹಿ ತೆರೆ ಮೇಲೆ ಬರಲಿದೆ ಎನ್ನಲಾಗಿದೆ..