ಬಾಯ್ ಫ್ರೆಂಡ್ ಕೊಟ್ಟ ನೋವು ತಾಳಲಾರದೇ ಜೀವ ಕಳೆದುಕೊಂಡ ಕಿರುತೆರೆ ಖ್ಯಾತ ನಟಿ..

ಕಿರುತೆರೆ ಕಲಾವಿದರು ಕಳೆದ ಒಂದೆರೆಡು ವರ್ಷಗಳಿಂದ ಸಾಕಷ್ಟು ಮಂದಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂತೋಷದ ಸುದ್ದಿಗಳನ್ನು ಕಂಡಿದ್ದೇವೆ.. ಅದರಲ್ಲೂ ಕೊರೊನಾ ಬಂದ ನಂತರ ಸಾಕಷ್ಟು ಕಲಾವಿದರು ಅದರಲ್ಲೂ ಕಿರುತೆರೆ ಕಲಾವಿದರುಗಳು ಮದುವೆತ ನಿರ್ಧಾರ ಮಾಡಿ ನೂತನ ಜೀವನಕ್ಕೆ ಕಾಲಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಸಂತೊಷ ಹಂಚಿಕೊಳ್ಳುತ್ತಿದ್ದರು.. ಸಾಲು ಸಾಲು ಸಿಹಿ ಸುದ್ದಿಗಳನ್ನು ಕಿರುತೆರೆ ಪ್ರಿಯರು ಕೇಳುತ್ತಿದ್ದರು.. ಆದರೆ ಅದೇ ರೀತಿಯಾಗಿ ಕಳೆದ ಒಂದೆರೆಡು ವರ್ಷಗಳಿಂದ ಸಾಕಷ್ಟು ಕಿರುತೆರೆ ಕಲಾವಿದರುಗಳು ಜೀವ ಕಳೆದುಕೊಂಡಿದ್ದು ಅದರಲ್ಲೂ ಸಣ್ಣ ಪುಟ್ಟ ವಿಚಾರಗಳಿಗೆ ಮನನೊಂದು ದುಡುಕಿನ ನಿರ್ಧಾರ ಕೈಗೊಂಡು ಜೀವನವನ್ನೇ ಮುಕ್ತಾಯ ಮಾಡಿಕೊಂಡಿದ್ದು ನಿಜಕ್ಕೂ ಬೇಸರವನ್ನುಂಟು ಮಾಡುತ್ತದೆ..

ಅದೇ ರೀತಿ ಇದೀಗ ಮತ್ತೊಬ್ಬ ಕಿರುತೆರೆಯ ಖ್ಯಾತ ನಟಿ ಜೀವ ಕಳೆದುಕೊಂಡಿದ್ದಾರೆ.. ಹೌದು ಕೊರೊನಾ ಸಮಯದಲ್ಲಿ ಆರ್ಥಿಕ ತೊಂದರೆ ಇಂದಾಗಿ ಕನ್ನಡ ಸೇರಿದಂತೆ ಹಲವಾರು ಭಾಷೆಗಳ ಕೆಲ ಕಲಾವಿದರುಗಳು ದುಡುಕಿನ ನಿರ್ಧಾರ ಮಾಡಿ ಇಹಲೋಕ ತ್ಯಜಿಸಿಬಿಟ್ಟಿದ್ದರು.. ಇನ್ನು ಪ್ರೀತಿ ಪ್ರೇಮ ಎನ್ನುವ ವಿಚಾರಕ್ಕೆ ಕಳೆದ ಒಂದು ವರ್ಷದಿಂದ ಕೆಲ ನಟಿಯರು ಜೀವ ಕಳೆದುಕೊಂಡದ್ದೂ ಉಂಟು ಅದೇ ರೀತಿ ಇದೀಗ ಧಾರಾವಾಹಿಗಳ ಮೂಲಕ ಹೆಸರು ಮಾಡಿ ಮಿಂಚಿ ಹಣ ಯಶಸ್ಸು ಎಲ್ಲಾ ಗಳಿಸಿಕೊಂಡಿದ್ದ ಖ್ಯಾತ ನಟಿಯೊಬ್ಬರು ತನ್ನ ಬಾಯ್ ಫ್ರೆಂಡ್ ಕೊಟ್ಟ ನೋವು ತಾಳಲಾರದೇ ಇದೀಗ ದುಡುಕಿ ತನ್ನ ಜೀವನವನ್ನೇ ಮುಗಿಸಿಕೊಂಡಿದ್ದಾರೆ..

ಹೌದು ಆ ನಟಿ ಮತ್ಯಾರೂ ಅಲ್ಲ.. ವೈಶಾಲಿ ತಕ್ಕರ್.. ಹೌದು ಹಿಂದಿ ಭಾಷೆಯ ಕಿರುತೆರೆಯಲ್ಲಿ ಅಭಿನಯಿಸುತ್ತಿದ್ದ ವೈಶಾಲಿ ತಕ್ಕರ್ ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿ ಮನೆ ಮಾತಾಗಿದ್ದರು.. ಆದರೆ ತಾನು ಪ್ರೀತಿಸಿದ ಹುಡುಗನ ಕೋಪದ ಮಾತುಗಳಿಂದ ಮನನೊಂದು ನಿನ್ನೆ ತಮ್ಮ ನಿವಾಸದಲ್ಲಿಯೇ ಜೀವ ಕಳೆದುಕೊಂಡು ಬಿಟ್ಟಿದ್ದಾರೆ.. ಹೌದು ವೈಶಾಲಿ ತಕ್ಕರ್ ಮೂಲತಃ ಇಂದೋರ್ ನವರು.. ವ್ರೆಶಾಲಿ ತಕ್ಕರ್ ಸಸುರಲ್ ಸಿಮರ್ ಕಾ ಧಾರಾವಾಹಿಯಲ್ಲಿ ಅಂಜಲಿ ಭರದ್ವಾಜ್ ಎಂಬ ಪಾತ್ರವನ್ನು ಮಾಡುವ ಮೂಲಕ ಮನೆಮಾತಾಗಿದ್ದರು.. ಇನ್ನುಳಿದಂತೆ ಸೂಪರ್ ಸಿಸ್ಟರ್ಸ್ ಧಾರಾವಾಹಿಯಲ್ಲಿ ಶಿವಾನಿ ಶರ್ಮಾ.. ವಿಷ್ ಯಾ ಅಮೃತ್ ಧಾರಾವಾಹಿಯಲ್ಲಿ ನೇತ್ರಾ ಸಿಂಗ್ ರಾಥೋರ್.. ಮನ್ಮೋಹಿನಿ 2 ಧಾರಾವಾಹಿಯಲ್ಲಿ ಅನನ್ಯ ಮಿಶ್ರಾ ಪಾತ್ರಗಳಲ್ಲಿ ಕಾಣಿಸಿಕೊಂಡು ಹೆಸರು ಮಾಡಿದ್ದರು..

ಹೀಗೆ ಹತ್ತಕ್ಕೂ ಹೆಚ್ಚಿನ ಧಾರಾವಾಹಿಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದ ವೈಶಾಲಿ ತಕ್ಕರ್ 5 ದಿನಗಳ ಹಿಂದಷ್ಟೇ ತನ್ನ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ರೀಲ್ಸ್ ಒಂದನ್ನು ಶೇರ್ ಮಾಡಿದ್ದಾರೆ.. ಸಂತೋಷದಿಂದ ರೀಲ್ಸ್ ಮಾಡಿರುವ ವೈಶಾಲಿ ತಕ್ಕರ್ ಇನ್ನು ಐದು ದಿನದಲ್ಲಿ ತಾನೇ ಇರುವುದಿಲ್ಲ ಎಂಬ ಸಣ್ಣ ಕಲ್ಪನೆಯೂ ಆಕೆಗೆ ಇದ್ದಿದ್ದಿಲ್ಲ.. ವೈಶಾಲಿ ಇನ್ ಸ್ಟಾಗ್ರಾಂ ಖಾತೆಗೆ 5 ಲಕ್ಷಕ್ಕೂ ಹೆಚ್ಚಿನ ಫಾಲೋವರ್ಸ್ ಗಳಿದ್ದು ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದ ವೈಶಾಲಿ ಆಗಾಗ ರೀಲ್ಸ್ ಮಾಡಿ ಹಾಕುತ್ತಿದ್ದರು.. ಮೊನ್ನೆಯೂ ವೀಡಿಯೋ ಹಾಕಿರುವ ವೈಶಾಲಿ ಇಂದು ಇಲ್ಲವಾಗಿದ್ದಾರೆ..

ಇಂದೋರ್ ನ ತಮ್ಮ ಮನೆಯಲ್ಲಿಯೇ ಜೀವ ಕಳೆದುಕೊಂಡಿದ್ದು ಹೋಗುವ ಮುನ್ನ ಕೊನೆಯ ಪತ್ರ ಬರೆದು ತಮ್ಮ ಎಲ್ಲಾ ನೋವನ್ನೂ ಹಂಚಿಕೊಂಡಿದ್ದಾರೆ.. ಹೌದು ತನ್ನ ಮಾಜಿ ಪ್ರಿಯಕರ ತನಗೆ ಸಾಕಷ್ಟು ನೋವು ನೀಡುತ್ತಿದ್ದು ಅದರಿಂದ ಒತ್ತಡಕ್ಕೆ ಒಳಗಾಗಿದ್ದೇನೆ.. ಇದೆಲ್ಲವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ.. ಆ ಕಾರಣಕ್ಕೆ ನಾನು ಜೀವ ಕಳೆದುಕೊಳ್ಳುತ್ತಿದ್ದೇನೆ ಎಂದು ಇನ್ನೂ ಆವಿವರವಾಗಿ ಬರೆದು ಈ ನಿರ್ಧಾರ ಮಾಡಿದ್ದಾರೆ.. ವೈಶಾಲಿ ಬರೆದ ಪತ್ರ ಆಧರಿಸಿ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.. ಒಟ್ಟಿನಲ್ಲಿ ಪ್ರೀತಿಸುವಾಗ ಪ್ರಿಯಕರನನ್ನು ನಂಬಿ ತಪ್ಪು ಹೆಜ್ಜೆ ಇಟ್ಟು ಮುಂದೆ ಅವರುಗಳಿಂದ ನೋವು ಅನುಭವಿಸಿ ಜೀವನವನ್ನೇ ಮುಕ್ತಾಯ ಮಾಡಿಕೊಳ್ಳುವುದು ನಿಜಕ್ಕೂ ಬೇಸರವನ್ನುಂಟು ಮಾಡುತ್ತದೆ.. ದಯವಿಟ್ಟು ಪ್ರೀತಿ ಪ್ರೇಮ ಮಾಡುವಾಗ ನಿಮ್ಮ ನಿಮ್ಮ ಗಡಿಗಳನ್ನು ದಾಟದೇ ನೆಮ್ಮದಿಯ ಜೀವನ ಮಾಡಿ ಅಷ್ಟೇ..

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ಸಾಧ್ಯ ಆಗುವ ರೂಪದಲ್ಲಿ ಖಚಿತ ಪರಿಹಾರ, ನೂರಕ್ಕೆ ನೂರರಷ್ಟು ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಅಥವಾ ವಾಟ್ಸಪ್ ಮಾಡಿ 9916889622. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. 9916889622