ಜೀವನದ ಹೊಸ ಇನ್ನಿಂಗ್ಸ್ ಆರಂಭಿಸುತ್ತಿರುವ ಕಿರುತೆರೆ ನಟ ಸಿದ್ಧಾರ್ಥ್ ಹಾಗೂ ವೈಷ್ಣವಿ ಗೌಡ.. ಸಿಹಿ ಸುದ್ದಿ..

ಸಿದ್ಧಾರ್ಥ್‌ ಸನ್ನಿಧಿ ಜೋಡಿ ಕನ್ನಡ ಕಿರುತೆರೆಯಲ್ಲಿ ಅತಿ ದೊಡ್ಡ ಯಶಸ್ಸು ಕಂಡ ಜೋಡಿ ಎಂದರೆ ತಪ್ಪಾಗಲಾರದು.. ಸತತ ಎಂಟು ವರ್ಷಗಳ ಕಾಲ ಜನರ ಮನರಂಜಿಸಿದ ಧಾರಾವಾಹಿ ಅಗ್ನಿ ಸಾಕ್ಷಿ.. ಅಗ್ನಿಸಾಕ್ಷಿ ಧಾರಾವಾಹಿಯ ಈ ಜೋಡಿ ಟಿವಿ ವೀಕ್ಷಕರ ಅತ್ಯಂತ ಫೆವರೇಟ್‌ ಜೋಡಿಯಾಗಿತ್ತು. ಟಿವಿ ಪರದೆಯ ಮೇಲೆ ಈ ಕ್ಯೂಟ್‌ ಜೋಡಿಯನ್ನು ನೋಡಲು ಜನ ಇಷ್ಟ ಪಡುತ್ತಿದ್ದರು.. ಈಗ ಈ ಜೋಡಿ ಗುಡ್‌ ನ್ಯೂಸ್‌ ಒಂದನ್ನು ನೀಡಿದೆ. ಹೌದು ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಮೋಡಿ ಮಾಡಿದ ಜೋಡಿ ಇದು. ಧಾರಾವಾಹಿ ಯಲ್ಲಿ ಐದು ವರ್ಷ ನಟಿಸಿ ಬದಲಾವಣೆಗಾಗಿ ಧಾರಾವಾಹಿಯಿಂದ ಹೊರ ಬಂದ ನಟ ವಿಜಯ್ ಸೂರ್ಯ ನಂತರ ಬೇರೆ ಧಾರಾವಾಹಿ ಸಿನಿಮಾಗಳಲ್ಲಿ ಅಭಿನಯಿಸಿದ್ದರು..

ಆದರೆ ಅಗ್ನಿಸಾಕ್ಷಿ ಕೊಟ್ಟ ಯಶಸ್ಸನ್ನು ಬೇರೆ ಯಾವುದೂ ನೀಡಲಿಲ್ಲ.. ಇತ್ತ ಎಂಟು ವರ್ಷಗಳ ಕಾಲ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿಯೇ ಕಾಣಿಸಿಕೊಂಡ ಸನ್ನಿಧಿ ನಂತರ ಬಿಗ್ ಬಾಸ್ ನಲ್ಲಿ ಭಾಗವಹಿಸಿದ್ದು ಕೆಲ ಶೋಗಳಲ್ಲಿಯೂ ಪಾಲ್ಗೊಂಡರು‌. ಸಧ್ಯ ಸಿದ್ಧಾರ್ಥ್‌ ಪಾತ್ರದ ನಟ ವಿಜಯ್‌ ಸೂರ್ಯ ಹಾಗು ಸನ್ನಿಧಿ ಪಾತ್ರದ ವೈಷ್ಣವಿ ಗೌಡ ಮತ್ತೇ ಒಂದಾಗಲಿದ್ದಾರೆ.. ವೃತ್ತಿ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಲು ಹೊರಟಿದ್ದಾರೆ.. ಹೌದು ಈ ಕ್ಯೂಟ್‌ ಪೇರ್‌ ಮತ್ತೊಂದು ಹೊಸ ಸೀರಿಯಲ್‌ನಲ್ಲಿ ಒಟ್ಟಾಗಿ ಆಕ್ಟ್‌ ಮಾಡಲಿದ್ದಾರೆ ಎನ್ನುವ ಮಾಹಿತಿ ಬಂದಿದೆ. ಈ ಮೂಲಕ ಸಿದ್ಧಾರ್ಥ್‌ ಸನ್ನಿಧಿ ಜೋಡಿಯನ್ನು ಟಿವಿ ಪರದೆಯ ಮೇಲೆ ಮತ್ತೊಮ್ಮೆ ಕಣ್ತುಂಬಿಕೊಳ್ಳಬಹುದಾಗಿದೆ.. ಹೌದು ‘ಅಗ್ನಿಸಾಕ್ಷಿʼ ಸೀರಿಯಲ್‌ ಮುಗಿದು ವರ್ಷಗಳೇ ಉರುಳಿದವು ಆದ್ರೆ ಇನ್ನೂ ಆ ಸೀರಿಯಲ್‌ ಜನರ ಮನದಲ್ಲಿ ಉಳಿದುಕೊಂಡಿದೆ.

ಇನ್ನೂ ಆ ಸೀರಿಯಲ್‌ನ ಕಲಾವಿದರನ್ನು ಜನ ಅವರ ಪಾತ್ರದಿಂದಲೇ ಗುರುತಿಸುತ್ತಾರೆ. ಅದರಲ್ಲೂ ಸಿದ್ಧಾರ್ಥ್‌ ಸನ್ನಿಧಿ ಜೋಡಿ ಮಾತ್ರ ಜನ ತುಂಬಾ ಮೆಚ್ಚಿಕೊಂಡಿದ್ದರು. ಸಿದ್ಧಾರ್ಥ್‌ ಪಾತ್ರಕ್ಕೆ ಹೆಣ್ಣುಮಕ್ಕಳ ದೊಡ್ಡ ಫ್ಯಾನ್‌ ಬಳಗವೇ ಇದೆ. ಸಿದ್ಧಾರ್ಥ್‌ ಸನ್ನಿಧಿ ಒಟ್ಟಾಗಿ ಮತ್ತೊಂದು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದುವೇ ‘ಡಾಕ್ಟರ್‌ ಕರ್ಣʼ. ಈ ಹೊಸ ಸೀರಿಯಲ್‌ನಲ್ಲಿ ಸಿದ್ಧಾರ್ಥ್‌ ಮೇನ್‌ ರೋಲ್‌ನಲಿದ್ದಾರೆ. ಸನ್ನಿಧಿ ಇವರಿಗೆ ಜೋಡಿ ಆಗಲಿದ್ದಾರೆ. ಕೆ.ಎಸ್‌ ರಾಮ್‌ಜೀ ಡಾಕ್ಟರ್‌ ಕರ್ಣ ಧಾರಾವಾಹಿಯನ್ನು ನಿರ್ದೇಶನ ಮಾಡಲಿದ್ದು, ಜೀ ಕನ್ನಡ ವಾಹಿನಿಯಲ್ಲಿ ಈ ಹೊಸ ಧಾರಾವಾಹಿ ಶುರುವಾಗಲಿದೆ. ಗಗನ ಎಂಟರ್‌ಪ್ರೈಸಸ್‌ ಸಂಸ್ಥೆ ಅಡಿಯಲ್ಲಿ ಸೀರಿಯಲ್‌ ನಿರ್ಮಾಣವಾಗಲಿದೆ ಎಂದು ತಿಳಿದು ಬಂದಿದೆ..

ವಿಜಯ್‌ ಸೂರ್ಯ ಅವರ ಐದನೇ ಧಾರಾವಾಹಿ ‘ಡಾಕ್ಟರ್‌ ಕರ್ಣ’. ಈ ಮುಂಚೆ ಇವರು ‘ಅಗ್ನಿಸಾಕ್ಷಿ’, ‘ಪ್ರೇಮಲೋಕ’, ಸೇರಿದಂತೆ ‘ಜೊತೆ ಜೊತೆಯಲಿ’ ಮತ್ತು ‘ಲಕ್ಷ್ಮೀ ಬಾರಮ್ಮ’ ಸೀರಿಯಲ್‌ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇಲ್ಲಿಯೂ ಸಹ ವಿಜಯ್‌ ಸೂರ್ಯ ತಮ್ಮ ಅಭಿನಯ ಮತ್ತು ಪಾತ್ರಕ್ಕಾಗಿ ವೀಕ್ಷಕರಿಂದ ಮೆಚ್ಚುಗೆ ಪಡೆದಿದ್ದರು. ಈಗ ‘ಡಾಕ್ಟರ್‌ ಕರ್ಣ’ ಸೀರಿಯಲ್‌ ಮೂಲಕ ಟಿವಿ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಲು ಹೊರಟಿದ್ದಾರೆ. ಬಹಳ ದಿನಗಳ ನಂತರ ವಿಜಯ್‌ ಸೂರ್ಯ ಮತ್ತು ವೈಷ್ಣವಿಯವರನ್ನು ಟಿವಿ ಪರೆದೆಯ ಮೇಲೆ ನೋಡಲು ಜನ ಕಾತುರರಾಗಿದ್ದಾರೆ. ಆದರೆ ಈ ಕುರಿತಾಗಿ ವಿಜಯ್‌ ಸೂರ್ಯ ಆಗಲಿ ವೈಷ್ಣವಿ ಗೌಡ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಜೀ ವಾಹಿನಿ ಕೂಡ ತನ್ನ ಹೊಸ ಸೀರಿಯಲ್‌ ಕುರಿತಾಗಿ ಸೀಕ್ರೇಟ್‌ ಬಿಟ್ಟುಕೊಟ್ಟಿಲ್ಲ.

ಮತ್ತೇ ಅಗ್ನಿಸಾಕ್ಷಿ ಜೋಡಿ ಭರ್ಜರಿಯಾಗಿ ಮೋಡಿ ಮಾಡುವುದು ಎಂದು ‘ಡಾಕ್ಟರ್‌ ಕರ್ಣ’ ಸೀರಿಯಲ್‌ ತಂಡ ನಿರೀಕ್ಷೆ ಇಟ್ಟುಕೊಂಡಿದೆ. ಆ ನೀರಿಕ್ಷೆಯನ್ನು ಇಟ್ಟುಕೊಂಡೇ ‘ಅಗ್ನಿಸಾಕ್ಷಿ’ ಜೋಡಿಯನ್ನು ಮತ್ತೇ ಒಂದು ಮಾಡಿದೆ ಎನ್ನುತ್ತಾರೆ ಸೀರಿಯಲ್‌ ವೀಕ್ಷಕರು. ‘ಡಾಕ್ಟರ್‌ ಕರ್ಣ’ ಧಾರಾವಾಹಿಯ ಮೂಲಕ ಸಿದ್ಧಾರ್ಥ್‌ ಸನ್ನಿಧಿ ಜೋಡಿ ಹೇಗೆ ಮೋಡಿ ಮಾಡಲಿದೆ. ಜನ ಅವರನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ಧಾರಾವಾಹಿ ಮೂಡಿಬಂದ ಮೇಲೆಯೇ ತಿಳಿದುಬರಲಿದೆ.