ಉಮಾಶ್ರೀ ಮನೆ ಕಳ್ಳತನ ಮಾಡಿದ್ದು ಯಾರು ಗೊತ್ತಾ? ಶಾಕ್ ಆದ ಕುಟುಂಬ.. ಇವರೇ ನೋಡಿ..

ಕಳೆದ ಒಂದು ವಾರದ ಹಿಂದೆಯಷ್ಟೇ ನಟಿ, ಮಾಜಿ ಸಚಿವೆ ಉಮಾಶ್ರೆ ಅವರ ಮನೆಯಲ್ಲಿ ಕಳ್ಳತನವಾಗಿದ್ದು ಇದೀಗ ಒಂದೇ ವಾರದಲ್ಲಿ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.. ಅಷ್ಟೇ ಅಲ್ಲದೇ ಆತನಿಂದ ಕಳ್ಳತನದ ಹಣವನ್ನು ಸಹ ವಾಪಸ್ ಪಡೆದುಕೊಂಡಿದ್ದಾರೆ..

ಹೌದು ಇದೇ ತಿಂಗಳು ನವೆಂಬರ್ ಎರಡನೇ ತಾರೀಕಿನಂದ ಬಾಗಲಕೋಟೆಯಲ್ಲಿನ ಉಮಾಶ್ರೀ ಅವರ ಮನೆಯಲ್ಲಿ ಕಳ್ಳತನವಾಗಿತ್ತು.. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಮನೆಗೆ ನುಗ್ಗಿದ್ದ ಕಳ್ಳರು ಬೀರುವಿನಲ್ಲಿನ ಬಟ್ಟೆಗಳನ್ನು ಮನೆಯ ಕೆಲ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಹಣ ದೋಚಿ ಪರಾರಿಯಾಗಿದ್ದರು..

ಆನಂತರ ಮನೆ ಬಾಗಿಲು ತೆರೆದು ನೋಡಿದ‌ ಕುಟುಂಬದವರಿಗೆ ಶಾಕ್ ಆಗಿದೆ.. ತಕ್ಷಣ ತೇರದಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.. ಮಾಜಿ ಸಚಿವರ ಮನೆಗೇ ಈ ರೀತಿ ಆದರೆ ಸಾಮಾನ್ಯರ ಮನೆಗಳ ಕತೆಯೇನು ಎಂದು ಸಾಮಾಜಿಕ ಜಾಲತಾಣದಲ್ಲಿ ಮಾತು ಕೇಳಿ ಬಂದಿತ್ತು..

ಅತ್ತ ತನಿಖೆ ಆರಂಭಿಸಿದ ತೇರದಾಳ ಠಾಣೆಯ ಪೊಲೀಸರು ಒಂದೇ ವಾರದಲ್ಲಿ ಪ್ರಕರಣವನ್ನು ಭೇದಿಸುವಲ್ಲಿ‌ ಯಶಸ್ವಿಯಾಗಿದ್ದಾರೆ.. ಹೌದು ಉಮಾಶ್ರೀ ಅವರ ಮನೆಯಲ್ಲಿ ಇಬ್ಬರು ವ್ಯಕ್ತಿಗಳು ಸೇರಿಕೊಂಡು ಕಳ್ಳತನ ಮಾಡಿದ್ದರು ಎಂದು ತಿಳಿದುಬಂದಿದೆ.. ಯಲ್ಲಪ್ಪಗಡ್ಡಿ, ದುರ್ಗಪ್ಪ ವಾಲ್ಮೀಕಿ ಎಂಬುವವರೇ ಕಳ್ಳತನ ಮಾಡಿ ಸಿಕ್ಕಿಬಿದ್ದವರು..

ಇನ್ನು ಇವರನ್ನು ವಶಕ್ಕೆ ಪಡೆದ ಪೊಲೀಸರು ಈ ಇಬ್ಬರಿಂದ ಬರೋಬ್ಬರಿ 1 ಲಕ್ಷದ 94 ಸಾವಿರ ರೂಪಾಯಿ ನಗದನ್ನು ವಶ ಪಡಿಸಿಕೊಂಡು ಈ ಇಬರನ್ನು ನ್ಯಾಯಲಯದ ಮುಂದೆ ಹಾಜರು ಮಾಡಿದ್ದಾರೆ.. ಸದ್ಯ ತ್ವರಿತವಾಗಿ ಪ್ರಕರಣ ಭೇದಿಸಿ ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾದ ತೇರದಾಳ ಪೊಲೀಸರಿಗೆ ಮೆಚ್ಚುಗೆ ವ್ಯಕ್ತವಾಗಿದ್ದು ಉಮಾಶ್ರೀ ಅವರ ಕುಟುಂಬ ಧನ್ಯವಾದಗಳನ್ನು ತಿಳಿಸಿದೆ..