ಇಬ್ಬರನ್ನು ಮದುವೆಯಾದ ಘಟನೆಗೆ ರೋಚಕ ತಿರುವು.. ಅಸಲಿ ಕಾರಣ ಬೇರೆಯೇ ಇದೆ.. ಇದು ಪ್ರೀತಿ ಅಂದ್ರೆ..

ಸಾಮಾಜಿಕ ಜಾಲತಾಣದಲ್ಲಿ ಒಮ್ಮೊಮ್ಮೆ ಕೆಲವೊಂದು ಸತ್ಯಗಳನ್ನು ತಿಳಿಯುವ ಮುನ್ನ ಕೆಲವೊಂದನ್ನು ಟ್ರೋಲ್ ಮಾಡಿ ಬಿಡುತ್ತೇವೆ.. ಆದರೆ ಆ ಬಳಿಕ ಸತ್ಯ ತಿಳಿದ ನಂತರ ಮನಸ್ಸಿಗೆ ಬೇಸರ ಆಗೋದು ಉಂಟು..‌ ಅದೇ ರೀತಿ ನಿನೆಯ ಘಟನೆ ಮೊದಮೊದಲು ತಮಾಷೆಯ ವಸ್ತುವಾಗಿತ್ತು.. ಆ ಬಳಿಕ ಇದು ಪ್ರೀತಿ ಮಮಕಾರಕ್ಕೆ ಸಾಕ್ಷಿ‌ ಎನ್ನುವಂತಾಗಿದೆ.. ಹೌದು ಕೋಲಾರದ ಮುಳುಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿ ಉಮಾಪತಿ ಎಂಬುವವರು ಅಕ್ಕ ತಂಗಿ ಇಬ್ಬರನ್ನು ಮದುವೆಯಾದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿತ್ತು.. ಆದರೆ ಉಮಾಪತಿ ಅವರು ಇಬ್ಬರು ಹೆಣ್ಣು ಮಕ್ಕಳನ್ನು ಮದುವೆಯಾಗಲು ನಿಜವಾದ ಕಾರಣ ತಿಳಿದರೆ ಬಹುಶಃ ಅವರ ಮೇಲೆ ಅಭಿಮಾನ ಬರಬಹುದು..

ಹೌದು ಆತನ ಹೆಸರು ಉಮಾಪತಿ.. ಆ ಹೆಣ್ಣು ಮಕ್ಕಳ ಹೆದರು ಸುಪ್ರಿಯಾ ಹಾಗೂ ಲಲಿತಾ.. ಅದರಲ್ಲಿ ಅಕ್ಕನಾದ ಸುಪ್ರಿಯಾಗೆ ಮಾತು ಬರುವುದಿಲ್ಲ.. ಅಕ್ಕನಿಗೆ ಮದುವೆ ಆಗುತ್ತಿರಲಿಲ್ಲ.. ಅಕ್ಕನಿಗೆ ಮದುವೆಯಾಗದೆ ತಂಗಿಯ ಮದುವೆಯೂ ಇಲ್ಲ.. ಕೊನೆಗೆ ಕುಟುಂಬದವರು ನಿರ್ಧಾರ ಮಾಡಿ ಅಕ್ಕ ತಂಗಿಯನ್ನು ಒಬ್ಬರಿಗೆ ಕೊಟ್ಟು ಮದುವೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.. ಇತ್ತ ತಂಗಿ ಲಲಿತಾ ಅಕ್ಕನಿಗಾಗಿ ಆ ಮಹಾನ್ ತ್ಯಾಗಕ್ಕೆ ಮುಂದಾಗಿದ್ದಾಳೆ.. ಮಾತು ಬಾರದ ಅಕ್ಕನ ಜೊತೆ ಜೀವನ ಪೂರ್ತಿ ಕಳೆಯುವ ನಿರ್ಧಾರ ಮಾಡಿ ಒಬ್ಬರನ್ನೇ ಮದುವೆಯಾಗಲು ಒಪ್ಪಿಗೆ ಸೂಚಿಸಿದ್ದಾಳೆ.. ಉಮಾಪತಿ ಇವರ ಮನೆಗೆ ಲಲಿತಾರನ್ನು ನೋಡಲು ಬಂದ ವರ..

ಆ ಸಮಯದಲ್ಲಿ ಅಕ್ಕನನ್ನು ಮದುವೆಯಾದರೆ ಮಾತ್ರ ತಾನು ಮದುವೆಯಾಗುವುದಾಗಿ ತಿಳಿಸಿದ್ದಾರೆ.. ಮನೆಯವರೂ ಸಹ ಇದೇ ಷರತ್ತನ್ನು ಹಾಕಿದ್ದರು.. ಉಮಾಪತಿ ಈ ಷರತ್ತಿಗೆ ಒಪ್ಪಿದರು.. ಕಳೆದ ವಾರ ಮೇ ಏಳರಂದು ಒಂದೇ ಮುಹೂರ್ತದಲ್ಲಿ ಉಮಾಪತಿ ಸುಪ್ರಿಯಾ ಹಾಗೂ ಲಲಿತಾ ಇಬ್ಬರಿಗೂ ತಾಳಿ ಕಟ್ಟಿ ಮದುವೆಯಾಗಿದ್ದಾರೆ.. ಅಚಾನಕ್ ಆಗಿ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಅವರ ಮದುವೆಯ ಫೋಟೋವೊಂದು ವೈರಲ್ ಆಗಿ ಬಿಟ್ಟಿತು.. ಆದರೆ ಕಾರಣ ತಿಳಿದಿದ್ದರೆ ಯಾರೂ ಸಹ ಆಡಿಕೊಳ್ಳುತ್ತಿರಲಿಲ್ಲ.. ಆದರೆ ಇದೆಲ್ಲದರ ನಡುವೆ ಮತ್ತೊಂದು ವಿಚಾರವಿದೆ..

ಹೌದು ಈ ರೀತಿ ಅಕ್ಕ ತಂಗಿ ಇಬ್ಬರೂ ಸಹ ಒಬ್ಬರನ್ನೇ ಮದುವೆಯಾಗೋದು ಈ ಕುಟುಂಬಕ್ಕೆ ಹೊಸದಲ್ಲ.. ಸುಪ್ರಿಯಾ ಹಾಗೂ ಲಲಿತಾ ಅವರ ತಂದೆ ಕೂಡ ಅಕ್ಕ ತಂಗಿ ಇಬ್ಬರನ್ನು ಮದುವೆಯಾಗಿದ್ದರು.. ಅದರಲ್ಲಿಯೂ ಸಹ ಅಕ್ಕನಿಗೆ ಮಾತು ಬರುತ್ತಿರಲಿಲ್ಲ.. ಅವರ ಮಗಳೇ ಸುಪ್ರಿಯಾ ಎನ್ನಲಾಗಿದ್ದು ಅಮ್ಮನಂತೆ ಮಗಳಿಗೂ ಸಹ ಮಾತು ಬಾರಲಿಲ್ಲ.. ಆದರೆ ತನ್ನ ತಂಗಿ ಕೈ ಬಿಡಲಿಲ್ಲ.. ಜೀವನದುದ್ದಕ್ಕೂ ತನ್ನ ಮಾತಾಗಿ ನಿಲ್ಲುತ್ತಿದ್ದಾಳೆ.. ಆಕೆಯ ಪ್ರೀತಿಗೆ ನಮ್ಮ ಕಡೆಯಿಂದ ಹ್ಯಾಟ್ಸ್ ಆಫ್..