ಕನ್ನಡದ ಮತ್ತೊಬ್ಬ ಖ್ಯಾತ ನಟ ಇನ್ನಿಲ್ಲ..

ಕನ್ನಡ ಸಿನಿಮಾರಂಗಕ್ಕೆ ಯಾರ ಕಣ್ಣು ಬಿದ್ದಿದೆಯೋ ಏನೋ, ಒಬ್ಬರಾದ ಮೇಲೆ ಒಬ್ಬ ಕಲಾವಿದರನ್ನು ಕನ್ನಡ ಚಿತ್ರರಂಗ ಕಳೆದುಕೊಳ್ಳುತ್ತಿದೆ. ಕೊರೋನ ಸಮಯದಲ್ಲಿ ನಿರ್ಮಾಪಕ ರಾಮು, ನಂತರ ಹಿರಿಯ ನಟಿ ಜಯಂತಿ, ಕನ್ನಡದ ಪ್ರತಿಭಾನ್ವಿತ ನಟನಾಗಿದ್ದ ನಟ ಸಂಚಾರಿ ವಿಜಯ್, ಇಷ್ಟೆಲ್ಲಾ ಸಾವುಗಳ ಜೊತೆಗೆ ನಮ್ಮ ಕರುನಾಡ ಮುತ್ತು ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ನಾವು ಇತ್ತೀಚೆಗೆ ಕಳೆದುಕೊಂಡೆವು. ಹೀಗೆ ಒಂದಾದ ಮೇಲೆ ಒಂದು ಸಾವುಗಳು ನಮ್ಮ ಕನ್ನಡ ಚಿತ್ರರಂಗದಲ್ಲಿ ಆಗುತ್ತಿರುವುದು ನಿಜಕ್ಕೂ ಬೇಸರ ತಂದುಕೊಟ್ಟಿದೆ. ಇನ್ನು ಈ ನೋವಿನಿಂದ ಹೊರ ಬರಲು ಸಾಧ್ಯವಾಗಿಲ್ಲ ಅಷ್ಟರಲ್ಲಿ ಮತ್ತೊಂದು ಸಾವಿನ ಸುದ್ದಿ ಕೇಳಿ ಬರುತ್ತಿದೆ. ಹೌದು ಇದೀಗ ಕನ್ನಡದ ಹಿರಿಯ ನಟ ನಮ್ಮನ್ನು ಬಿಟ್ಟು ಹೋಗಿದ್ದಾರೆ..

80 ದಶಕದಲ್ಲಿ ತಮ್ಮ ನಟನೆಯ ಮೂಲಕ ಸಾಕಷ್ಟು ಜನರ ಮನಗೆದ್ದ ನಟ, ಛಾಯಾಗ್ರಾಹಕ ಉದಯ್ ಹುತ್ತಿನಗದ್ದೆ. ನಟನೆ ಹಾಗೂ ಛಾಯಾಗ್ರಹಣದ ಜೊತೆಗೆ ನಟ ಉದಯ್ ಅವರಸರಳತೆಗೆ ಸಾಕಷ್ಟು ಜನ ಇಷ್ಟಪಡುತ್ತಿದ್ದರು. ಅದೆಷ್ಟೋ ಜನರಿಗೆ ತಮ್ಮ ಬದುಕು ಕಟ್ಟಿಕೊಳ್ಳಲು ನಟ ಉದಯ್ ಹುತ್ತಿನಗದ್ದೆ ಸಹಾಯ ಮಾಡಿದ್ದಾರೆ. ಸಾಕಷ್ಟು ಯುವಕರಿಗೆ ಮಾರ್ಗದರ್ಶನ ನೀಡಿ, ಅವರಿಗೆ ತಮ್ಮ ಸ್ವಂತ ಕಂಪನಿಯಲ್ಲೇ ಕೆಲಸ ನೀಡಿ ಅವರ ಬದುಕನ್ನು ಒಳ್ಳೆಯ ದಾರಿಗೆ ತರಲು ಪ್ರಯತ್ನಿಸಿದ್ದಾರೆ. ಇದೀಗ ನಟ ಹಾಗೂ ಛಾಯಾಗ್ರಾಹಕ ಉದಯ ನಮ್ಮನ್ನೆಲ್ಲಾ ಬಿಟ್ಟು ಅಗಲಿದ್ದಾರೆ.

ನಟ ಉದಯ್ ಅವರು ಮೂಲತಃ ಚಿಕ್ಕಮಗಳೂರಿನ ಕಳಸ ತಾಲೂಕಿನ ಹುತ್ತಿನಗಡ್ಡೆಯವರು. 1987 ರಲ್ಲಿ ಆರಂಭ ಸಿನಿಮಾದ ಮೂಲಕ ನಟ ಉದಯ್ ಹುತ್ತಿನಗದ್ದೆಯವರು ಸಿನಿಮಾರಂಗಕ್ಕೆ ನಾಯಕನಟನಾಗಿ ಎಂಟ್ರಿ ನೀಡಿದರು. ಈ ಸಿನಿಮಾ ಬಾರಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಈ ಸಿನಿಮಾದ ಯಶಸ್ಸಿನ ನಂತರ ನಟ ಉದಯ್ ಅವರು ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಜಯಭೇರಿ, ಅಮೃತಬಿಂದು, ಕರ್ಮ, ಉಂದುಹೋದ ಕೊಂಡುಹೋದ ನಂತರ ಹಲವಾರು ಸಿನಿಮಾಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ನಟನೆಗಿಂತಲೂ ನಟ ಉದಯ್ ಅವರು ಹೆಸರು ಮಾಡಿದ್ದು ಛಾಯಾಗ್ರಹಣ ಲೋಕದಲ್ಲಿ.

ಉದಯ್ ಅವರು ಸಾಕಷ್ಟು ಕಲರ್ ಲ್ಯಾಬ್ ಗಳನ್ನು ಬೆಳೆಸುವ ಉದ್ಯಮಿಯಾಗಿ ಬೆಳೆದು ನಿಂತರು. ಬೆಂಗಳೂರು ಸೇರಿದಂತೆ ಸಾಕಷ್ಟು ಜಾಗಗಳಲ್ಲಿ ತಮ್ಮ ಕಲರ್ ಲ್ಯಾಬ್ ಗಳನ್ನು ಬೆಳೆಸಿದ್ದಾರೆ. ನಟ ಉದಯ್ ಹುತ್ತಿನಗದ್ದೆ ಅವರ ಹೆಂಡತಿ ಕೂಡ ಒಬ್ಬ ನಟಿ. ಹೌದು ನಟ ಉದಯ್ ಅವರು ನಟಿ ಲಲಿತಾಂಬ ಅವರ ಮದುವೆಯಾದರು. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ನಟ ಉದಯ್ ಹುತ್ತಿನಗದ್ದೆ ವಾಸವಾಗಿದ್ದರು. ಇದೀಗ ಅಚಾನಕ್ಕಾಗಿ ಉದಯ್ ಹುತ್ತಿನಗದ್ದೆ ಅವರು ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ಉದಯ್ ಅವರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.. ಮತ್ತೊಂದು ಅದ್ಬುತ ಕಲಾವಿದನನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬರದಾಗಿದೆ. ಸಿನಿಮಾ ಮಂದಿ ಉದಯ್ ಅವರ ಅಗಲಿಕೆಗೆ ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ..