ತುಳಸಿಯನ್ನು ಈ ರೀತಿ ಬಳಸಿ ಸಾಕು..‌ ಮುಖದಲ್ಲಿನ ಎಲ್ಲಾ ಕಲೆ ಮಾಯ..

ನಮಗೆ ನಮ್ಮ ದೇಹದಲ್ಲಿ ಅತ್ಯಂತ ಮುಖ್ಯ ಅನ್ನಿಸುವುದು ಏನು? ನಮ್ಮ ಮುಖ. ಅದು ಯಾವಾಗಲೂ ಸುಂದರವಾಗಿಯೇ ಕಾಣಬೇಕು. ಮುಖದಲ್ಲಿ ಯಾವುದೇ ರೀತಿಯ ಕಲೆಗಳಾಗಲಿ, ಗುಳ್ಳೆಗಳಾಗಲಿ, ಮೊಡವೆಯ ಗುರುತುಗಳಾಗಲಿ ಇರಲೇಬಾರದು ಎಂದೇ ನಾವೇಲ್ಲರೂ ಬಯಸುತ್ತೇವೆ ಅಲ್ಲವೇ? ಆದರೆ ಅದು ಅಷ್ಟು ಸುಲಭನಾ? ನಮ್ಮಲ್ಲಿನ ಹಾರ್ಮೋನಲ್ ಬದಲಾವಣೆಗಳಿರಬಹುದು ಅಥವಾ ಹೊರಗಿನ ಪ್ರದೂಷಣೆಗಳಿರಬಹುದು ನಮ್ಮ ತ್ವಚೆಗೆ ಒಂದಿಲ್ಲೊಂದು ರೀತಿಯಲ್ಲಿ ಹಾನಿಯನ್ನುಂಟು ಮಾಡುತ್ತಲೇ ಇರುತ್ತವೆ. ಹಾಗಾಗಿ ಇವೆಲ್ಲವುಗಳಿಂದ ನಮ್ಮ ತ್ವಚೆಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ.

ಕೇವಲ ತುಳಸಿ ಎಲೆಗಳು ನಿಮ್ಮೆಲ್ಲ ತ್ವಚೆಯ ಸಮಸ್ಯೆಗೆ ಪರಿಹಾರ ನೀಡಬಲ್ಲದು ಎಂಬುದು ಇಲ್ಲಿದೆ ನೋಡಿ.. ತುಳಸಿ ಎಲೆಗಳು ಸಕಲ ರೋಗಗಳಿಗೂ ಮದ್ದು. ಮನೆಯಲ್ಲಿ ತುಳಸಿಗಿಡವನ್ನಿಟ್ಟು ಪೂಜೆ ಮಾಡುವುದು ಸಾಮಾನ್ಯ. ತುಳಸಿ ಗಿಡ ಮನೆಯಲ್ಲಿರುವ ಎಲ್ಲಾ ನಕಾರಾತ್ಮಕ ಶಕ್ತಿಯನ್ನೂ ಹೋಗಲಾಡಿಸುತ್ತದೆ ಎಂದು ಹೇಳಲಾಗುತ್ತದೆ. ಇಷ್ಟೇ ಅಲ್ಲದೇ ಹಲವಾರು ಖಾಯಿಲೆಗಳಿಗೂ ಕೂಡ ಈ ತುಳಸಿ ಎಲೆಗಳು ಅತ್ಯುತ್ತಮ ಪರಿಹಾರವಾಗಿದೆ. ಮುಖದಲ್ಲಿನ ಕಲೆಗಳನ್ನೇಲ್ಲ ಹೋಗಲಾಡಿಸಲು ತುಳಸಿ ಎಲೆಯಿಂದ ತಯಾರಿಸಬಹುದಾದ ಒಂದು ಮನೆಮದ್ದಿನ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ತುಳಸಿ ರಸ ತಯಾರಿಸಲು ಬೇಕಾದ ಸಾಮಗ್ರಿಗಳು : ತುಳಸಿ ಎಲೆಗಳು ಹಾಗೂ ಶುದ್ಧವಾದ ರೋಸ್ ವಾಟರ್ (ಗುಲಾಬಿ ದಳಗಳ ನೀರು)
ಮುಖದಲ್ಲಿ ಆಗಾಗ ಏಳುವ ಮೊಡವೆಗಳು, ಅಥವಾ ಈಗಾಗಲೇ ಉಳಿದ ಮೊಡವೆಯ ಕಲೆಗಳು, ಗುಳ್ಳೆಗಳು, ದಿನದಿಂದ ದಿನಕ್ಕೆ ಮುಖದ ತುಂಬೆಲ್ಲಾ ಹರಡಬಹುದಾದಂಥ ಕಲೆಗಳು ಇವೆಲ್ಲವನ್ನು ಹೋಗಲಾಡಿಸಲು ತುಳಸಿ ರಸವನ್ನು ದಿನವೂ ಮುಖಕ್ಕೆ ಹಚ್ಚುವುದು ಶಾಶ್ವತ ಪರಿಹಾರವನ್ನು ನೀಡುತ್ತದೆ.

ನಾಲೈರಿಂದ ಐದು ತುಳಸಿ ಎಲೆಗಳನ್ನು ಚೆನ್ನಾಗಿ ತೊಳೆದುಕೊಂಡು ಅದನ್ನು ಜಜ್ಜಿ ರಸ ತೆಗೆದುಕೊಳ್ಳಿ. ನಂತರ ಈ ಜಜ್ಜಿದ ಮಿಶ್ರಣಕ್ಕೆ ಶುದ್ಧವಾದ ರೋಸ್ ವಾಟರ್ ನ್ನು ಬೆರೆಸಿ. ಈ ಮಿಶ್ರಣವನ್ನು ಅರ್ಧ ಗಂಟೆಗಳ ಕಾಲ ಹಾಗೆಯೇ ಬಿಡಿ. ನಂತರ ಮಿಶ್ರಣವನ್ನು ಒಂದು ಸ್ಪ್ರೇ ಬಾಟಲ್ ಗೆ ಸೋಸಿ ಇಡಿ. ದಿನದಲ್ಲಿ ಮೂರರಿಂದ ನಾಲ್ಕು ಬಾರಿ ಈ ರಸವನ್ನು ಮುಖಕ್ಕೆ ಸ್ಪ್ರೇ ಮಾಡಿಕೊಳ್ಳಿ. ಅಥವಾ ಶುದ್ಧವಾದ ಹತ್ತಿಯಿಂದ ಮುಖಕ್ಕೆ ಉಜ್ಜಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ನಿಮ್ಮ ತ್ಚಚೆ ಇನ್ನಷ್ಟು ಉತ್ತಮವಾಗಿ ಕಾಣಿಸುತ್ತದೆ. ಈ ರಸವನ್ನು ಹೆಚ್ಚು ದಿನಗಳವರೆಗೆ ಶೇಖರಿಸಿ ಇಡಬಹುದಾದ್ದರಿಂದ ನಿಮಗೆ ಸಮಯವಾಗಾದ ತಯಾರಿಸಿಟ್ಟುಕೊಂಡು ಬೇಕಾದಾಗ ಬಳಸಬಹುದು.