ಹಿರಿಯ ನಟಿ ತಾರಾ ಅವರ ಮನೆಯಲ್ಲಿ ಸಾವು.. ನಿಜಕ್ಕೂ ಮೈಸೂರಿನಲ್ಲಿ ನಡೆದದ್ದೇನು ಗೊತ್ತಾ..

ಸ್ಯಾಂಡಲ್ವುಡ್ ನ‌ ಖ್ಯಾತ ನಟಿ ತಾರಾ ಅವರು ಕೆಲ ತಿಂಗಳ ಹಿಂದಷ್ಟೇ ನನ್ನಮ್ಮ ಸೂಪರ್ ಸ್ಟಾರ್ ಶೋನಲ್ಲಿ ಜಶ್ಜ್ ಆಗಿದ್ದ ಸಮಯದಲ್ಲಿ ವೇದಿಕೆಯಲ್ಲಿ ತಮ್ಮ ಜೀವನದ ಅತಿ ಮುಖ್ಯವಾದ ವ್ಯಕ್ತಿಯೊಬ್ಬರನ್ನು ಪರಿಚಯ ಮಾಡಿಸಿದ್ದರು.. ಆದರೆ ಇಂದು ಆ ಜೀವ ಇಲ್ಲವಾಗಿದೆ.. ಹೌದು ತಾರಾ ಅವರ ಕುಟುಂಬದಲ್ಲಿ ಸಾವಾಗಿದ್ದು ಸ್ನೇಹಿತರು ಸಂಬಂಧಿಕರಿ ಕಂಬನಿ‌ ಮಿಡಿದಿದ್ದಾರೆ..

ಹೌದು ಹಿರಿಯ ನಟಿ ತಾರಾ ಅವರ ತಾಯಿ ನಿನ್ನೆ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.. ತಾರಾ ಅವರ ತಾಯಿಯ ಹೆಸರು ಪುಷ್ಪಾ.. ಅವರಿಗೆ ಎಪ್ಪತ್ತಾರು ವರ್ಷ ವಯಸ್ಸಾಗಿತ್ತು.. ಪುಷ್ಪಾ ಅವರು ತಾರಾ ಅವರ ಜೊತೆಯೇ ಬೆಂಗಳೂರಿನ ಜೆಪಿನಗರದ ತಾರಾ ಅವರ ಮನೆಯಲ್ಲಿಯೇ ವಾಸವಿದ್ದರು.. ಇನ್ನು ನಿನ್ನೆ ತಾರಾ ಅವರ ತಾಯಿ ಮೈಸೂರಿನ ಜೆ ಎಸ್ ಎಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.. ಹೌದು ಬೆಂಗಳೂರಿನಲ್ಲಿಯೇ ಉಳಿದಿದ್ದರೆ ಪುಷ್ಪಾ ಅವರು ಉಳಿದುಕೊಳ್ಳುತ್ತಿದ್ದರೋ ಏನೋ.. ಆದರೆ ವಿಧಿಯಾಟವೇ ಬೇರೆ ಇತ್ತು.

ಹೌದು ತಾರಾ ಅವರ ತಾಯಿ ಪುಷ್ಪಾ ಅವರು ತಾರಾ ಅವರ ಜೊತೆ ನಿನ್ನೆ ಮೈಸೂರಿನಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.. ಚಿತ್ರೀಕರಣದ ಸಮಯದಲ್ಲಿ ಪುಷ್ಪಾ ಅವರಿಗೆ ವಾಂತಿಯಾಗಿದೆ.. ವಾಂತಿಯಾಗಿ ಪುಷ್ಪಾ ಅವರು ಬಹಳ ಅಸ್ವಸ್ಥರಾಗಿದ್ದರು.. ಆ ತಕ್ಷಣ ಪುಷ್ಪಾ ಅವರನ್ನು ಮೈಸೂರಿನ ಜೆ ಎಸ್ ಎಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು.. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.. ತಾಯಿಯನ್ನು ಕಳೆದುಕೊಂಡು ಕಣ್ಣೀರಿಡುತ್ತಿರುವ ತಾರಾ ಅವರನ್ನು‌ ನೋಡಿದಾಗ ನಿಜಕ್ಕೂ ಸಂಕಟವೆನಿಸುತ್ತದೆ..

ತಾರಾ ಅವರು ಮೂವತ್ತಾರು ವರ್ಷದ ಹಿಂದೆ ಚಿತ್ರರಂಗಕ್ಕೆ‌ ಕಾಲಿಟ್ಟಾಗ ತಾರಾ ಅವರ ಬೆಂಬಲಕ್ಕೆ ನಿಂತವರು ಅವರ ತಾಯಿ ಪುಷ್ಪಾ ಅವರೇ.. ಸದಾ ಕಾಲ ಮಗಳ ಜೊತೆಗಿದ್ದರು.. ಮಗಳ ಪ್ರತಿಯೊಂದು ಸಿನಿಮಾ ಚಿತ್ರೀಕರಣದ ಸಮಯದಲ್ಲಿಯೂ ಪುಷ್ಪಾ ಅವರೂ ಸಹ ಹೋಗುತ್ತಿದ್ದರು.. ಮಗಳ ಬಗ್ಗೆ ಕೆಲವೊಬ್ಬರು ಕೆಲವೊಂದು ಮಾತನಾಡಿದ ಸಮಯದಲ್ಲಿಯೂ ತಾರಾ ಅವರ ಜೊತೆಗೆ ಬೆನ್ನೆಲುಬಾಗಿ ನಿಂತಿದ್ದವರು ಅವರ ತಾಯಿ ಪುಷ್ಪ.. ಇನ್ನು ತಾರಾ ಅವರು ತಾವು ಸ್ವಂತವಾಗಿ ದುಡಿದ ಹಣದಿಂದ ಬೆಂಗಳೂರಿನಲ್ಲಿ‌ ಮನೆ ಕಟ್ಟಿ ಆ ಮನೆಯಲ್ಲಿಯೇ ತನ್ನ ತಾಯಿಯನ್ನು ಇರಿಸಿಕೊಂಡು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು..

ನಂತರ ಮದುವೆಯಾದ ಬಳಿಕವೂ ತಾರಾ ಅವರು ತಮ್ಮ ತಾಯಿಯನ್ನು ಜೊತೆಯಲ್ಲಿಯೇ ಇರಿಸಿಕೊಂಡು ನೋಡಿಕೊಳ್ಳುತ್ತಿದ್ದರು.. ಇನ್ನೂ ಕೆಲ ತಿಂಗಳ ಹಿಂದೆ ತಾರಾ ಅಬರು ನನ್ನಮ್ಮ ಸೂಪರ್ ಸ್ಟಾರ್ ಶೋನಲ್ಲಿ ತೀರ್ಪುಗಾರರಾಗಿದ್ದ ಸಮಯದಲ್ಲಿ ಅಮ್ಮನ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡು ಭಾವುಕರಾಗಿದ್ದರು… ಅವರಿಗೆ ಸರಿಯಾಗಿ ಸಮಯ ನೀಡಲು ಆಗುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದರು..

ಆದರೆ ಈಗ ತಾರಾ ಅವರು ಅವರ ತಾಯಿಯನ್ನು ಕಳೆದುಕೊಂಡಿದ್ದು ಸ್ನೇಹಿತರು ಸಂಬಂಧಿಕರು‌ ಸಿನಿಮಾ ಮಂದಿ ಸಂತಾಪ ಸೂಚಿಸಿ ಕಂಬನಿ‌ ಮಿಡಿದಿದ್ದಾರೆ.. ಇಷ್ಟು ದಿನಗಳ ಕಾಲ ಯಾರದ್ದೇ ಮನೆಯಲ್ಲಿ ಇಂತಹ ನೋವು ಎದುರಾದರೂ ಸಹ ತಾರಾ ಅವರು ಭಾಗಿಯಾಗಿ ಮುಂದೆ ನಿಂತು ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತಿದ್ದರು.. ಅವರುಗಳ ನೋವಿಗೆ ಜೊತೆಯಾಗಿ ನಿಂತು ಧೈರ್ಯ ತುಂಬುತ್ತಿದ್ದರು.. ಆದರೆ ಇದೀಗ ತಾರಾ ಅವರೆ ತಮ್ಮ ತಾಯಿಯನ್ನು ಕಳೆದುಕೊಂಡು ನಿಜಕ್ಕೂ ಕುಗ್ಗಿ ಹೋದಂತಾಗಿದ್ದು ತಾರಾ ಅವರಿಗೆ ಈ ನೋವು ತಡೆಯುವ ಶಕ್ತಿ ನೀಡಲಿ ಆ ಭಗವಂತ..