ನಟಿ ತಾರಾ ಅವರು ಮಾತನಾಡಿರುವ ಈ ವ್ಯಕ್ತಿ ನಿಜಕ್ಕೂ ಯಾರು ಗೊತ್ತಾ?..

ಈಗಿನ ಪ್ರಪಂಚದಲ್ಲಿ ಜನರು ಕಾವಿಯನ್ನು ನಂಬುವಷ್ಟು ಬೇರೊಂದನ್ನು ನಂಬುವುದು ಅಸಾಧ್ಯ. ಆಧ್ಯಾತ್ಮದ ಗುರುಗಳು, ಸ್ವಾಮೀಜಿಗಳು ಇವರನ್ನೆಲ್ಲಾ ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳು, ರಾಜಕಾರಣಿಗಳು ಎಲ್ಲರೂ ಹೆಚ್ಚಾಗಿ ನಂಬುತ್ತಾರೆ. ತಮ್ಮ ಜಾತಕದ ಪ್ರಕಾರ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎನ್ನುವುದನ್ನು ಒಬ್ಬ ಗುರೂಜಿ ಹೇಳಿದರೆ ತಮ್ಮ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ ಎನ್ನುವುದು ಬಹುತೇಕ ಎಲ್ಲರ ನಂಬಿಕೆ. ಅದರಲ್ಲೂ ಸಿನಿಮಾ ಮತ್ತು ರಾಜಕೀಯ ರಂಗಕ್ಕೆ ಸೇರಿದ ವ್ಯಕ್ತಿಗಳು ಯಾವುದೇ ಹೊಸ ಕೆಲಸ ಆರಂಭ ಮಾಡುವುದಕ್ಕಿಂತ ಮೊದಲು ತಾವು ನಂಬುವ ಒಬ್ಬ ಗುರೂಜಿ ಬಳಿ ಸಲಹೆ ಕೇಳಿ ನಂತರ ಎಲ್ಲಾ ಕೆಲಸಗಳನ್ನು ಶುರು ಮಾಡುತ್ತಾರೆ. ಅವರ ಪರಿಶ್ರಮದ ಜೊತೆ ದೇವರ ಅನುಗ್ರಹ ಕೂಡ ಜೊತೆಯಾಗಿರಲಿ ಎನ್ನುವುದು ಅವರ ಆಸೆ. ಇರುವವರಲ್ಲಿ ಕೆಲವು ಸ್ವಾಮೀಜಿಗಳು ನಿಜಕ್ಕೂ ಒಳ್ಳೆಯವರಾಗಿ ಜನರಿಗೂ ಒಳ್ಳೆಯದನ್ನು ಮಾಡುತ್ತಾರೆ..

ಅಂತಹ ಒಬ್ಬರು ಪವಾಡವನ್ನು ಸೃಷ್ಟಿಸುವಂಥಹ ಸ್ವಾಮೀಜಿಗಳ ಬಗ್ಗೆ ನಟಿ ತಾರಾ ಬಹಳ ಸಂತೋಷದಿಂದ ಮಾತನಾಡಿದ್ದಾರೆ. ಆ ಸ್ವಾಮೀಜಿ ಮತ್ಯಾರು ಅಲ್ಲ, ಮೈಸೂರಿನ ಅರ್ಜುನ್ ಗುರೂಜಿ ಅವರು. ಇವರು ತಾವು ನುಡಿಯುವ ಭವಿಷ್ಯ ಮತ್ತು ಮಾಡುವ ಪವಾಡಗಳಿಂದ ಫೇಮಸ್ ಆಗಿದ್ದಾರೆ. ಇತ್ತೀಚೆಗೆ ಚಂದನ್ ಶೆಟ್ಟಿ ಅಭಿನಯಿಸಲಿರುವ ಹೊಸ ಸಿನಿಮಾ ಎಲ್ರು ಕಾಲೆಳಿತದೆ ಕಾಲ ಸಿನಿಮಾ ಮುಹೂರ್ತ ನೆರವೇರಿತು. ಸಿನಿಮಾ ತಂಡಕ್ಕೆ ವಿಶ್ ಮಾಡಿ ಶುಭಕೋರಲು ಅರ್ಜುನ್ ಗುರೂಜಿ ಸಹ ಬಂದಿದ್ದರು. ಮುಹೂರ್ತದಲ್ಲಿ ಪಾಲ್ಗೊಂಡಿದ್ದ ನಟಿ ತಾರಾ, ಅರ್ಜುನ್ ಗುರೂಜಿ ಅವರ ಬಗ್ಗೆ ಹಲವು ವಿಚಾರಗಳನ್ನು ಶೇರ್ ಮಾಡಿಕೊಂಡರು.

ನಟಿ ತಾರಾ ಅರ್ಜುನ್ ಗುರೂಜಿ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದು ಮೈಸೂರಿನಲ್ಲಿ. ತಮ್ಮ ಸ್ನೇಹಿತರ ಮೂಲಕ ಅರ್ಜುನ್ ಗುರೂಜಿ ಅವರನ್ನು ನಟಿ ತಾರಾ ಭೇಟಿ ಮಾಡಿದ್ರಂತೆ, ಇದು ನಡೆದಿದ್ದು ಹಲವು ವರ್ಷಗಳ ಹಿಂದೆ, ಆಗ ನಟಿ ತಾರಾ ಸಿನಿಮಾಗಳಲ್ಲಿ ಮಾತ್ರ ಅಭಿನಯ ಮಾಡುತ್ತಿದ್ದರು. ತಾರಾ ಅವರನ್ನು ನೋಡಿ ನೀವು ರಾಜಕೀಯಕ್ಕೆ ಬರುತ್ತೀರಾ ಎಂದಿದ್ದರಂತೆ ಅರ್ಜುನ್ ಗುರೂಜಿ. ಆಗ ತಾರಾ ಅವರು ಅದು ಸಾಧ್ಯವೇ ಇಲ್ಲ. ನನಗೆ ಆ ರೀತಿಯ ಯೋಚನೆ ಇಲ್ಲ ಅಂದಿದ್ದರಂತೆ. ಆದರೆ ಕೆಲ ವರ್ಷಗಳ ನಂತರ ಬಿಜೆಪಿ ಪಕ್ಷದ ಆಕ್ಟಿವ್ ಸದಸ್ಯೆಯಾದರು ನಟಿ ತಾರಾ..ವರ್ಷಗಳ ಹಿಂದೆ ತಾರಾ ಅವರ ಬಗ್ಗೆ ಅರ್ಜುನ್ ಗುರೂಜಿ ಹೇಳಿದ್ದ ಮಾತುಗಳು ನಿಜವಾಗಿಯು ಸತ್ಯವಾಯಿತು. ರಾಜಕೀಯದಲ್ಲಿ ಯಶಸ್ಸನ್ನು ಸಹಪಡೆದರು ನಟಿ ತಾರಾ..

ಇದು ಮಾತ್ರವಲ್ಲದೆ ತಾರಾ ಅವರ ಎದುರಲ್ಲೇ ಒಂದು ಪವಾಡ ಸೃಷ್ಟಿ ಮಾಡಿದ್ದರು ಅರ್ಜುನ್ ಗುರೂಜಿ. ತಾರಾ ಅವರು ಒಮ್ಮೆ ಅರ್ಜುನ್ ಅವರ ಮನೆಯಲ್ಲಿ ಮಾತನಾಡುತ್ತಾ ಇದ್ದರಂತೆ. ಗುರೂಜಿ ಅವರ ಮನೆಯ ಕೆಳಗೆ ದೊಡ್ಡದೊಂದು ಬಾಬಾ ಮೂರ್ತಿ ಇಡಲಾಗಿದೆಯಂತೆ. ಬಾಬಾ ಮೂರ್ತಿಯ ಎದುರು ದೀಪಾ ಹಚ್ಚಲು ಒಬ್ಬ ವ್ಯಕ್ತಿ ಒಂದು ಬಾಟಲ್ ನಲ್ಲಿ ಏನೋ ತಂದರು, ಅದನ್ನೇ ಹಾಕಿ ಗುರೂಜಿ ದೀಪ ಹಚ್ಚಿದರು. ಅದನ್ನು ನೋಡಿ ತಾರಾ ಅವರು ಬಿಳಿ ಬಣ್ಣ ಇರುವ ಎಣ್ಣೆ ಎಂದುಕೊಂಡರಂತೆ. ಆದರೆ ಅದು ಸುಳ್ಳಾಗಿತ್ತು. ಗುರೂಜಿ ನಿಜಕ್ಕೂ ದೀಪಾ ಹಚ್ಚಿದ್ದು ಬಿಸ್ಲೆರಿ ನೀರಿನಿಂದ. ತಮ್ಮ ಮುಂದೆಯೇ ನಡೆದ ಈ ಪವಾಡ ನೋಡಿ ಶಾಕ್ ಗೆ ಒಳಗಾಗಿದ್ದರಂತೆ ತಾರಾ.

ಅರ್ಜುನ್ ಅವರ ಜೊತೆಯಲ್ಲೇ ನಡೆದ ಮತ್ತೊಂದು ಸ್ವಾರಸ್ಯಕರ ಘಟನೆಯನ್ನು ಸಹ ತಾರಾ ಅವರು ಶೇರ್ ಮಾಡಿಕೊಂಡಿದ್ದಾರೆ. ಅದೇನು ಅಂದ್ರೆ ಒಂದು ಸಾರಿ ತಾರಾ ಅವರ ಕೈಗೆ ಒಂದು ಬೆಳ್ಳಿ ಗಣಪತಿಯ ವಿಗ್ರಹ ನೀಡಿ ಅದನ್ನು ಪ್ರಧಾನ ಮಂತ್ರಿ ಮೋದಿ ಅವರಿಗೆ ತಲುಪಿಸಲು ಹೇಳಿದರಂತೆ ಗುರೂಜಿ. ಸ್ನೇಹಿತೆಯ ಗಂಡನ ಕಡೆಯ ಸಮಾರಂಭ ಒಂದರಿಂದ ತಾರಾ ಅವರಿಗೆ ಮೋದಿ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಆದರೆ ಅದನ್ನು ಮೋದಿ ಅವರಿಗೆ ಕೊಡುವುದು ಹೇಗೆ ಎನ್ನುವ ಗೊಂದಲವನ್ನು ಅರ್ಜುನ್ ಗುರೂಜಿ ಅವರಿಗೆ ತಿಳಿಸಿದಾಗ, ಅವರು ನೀವು ಏನು ಚಿಂತೆ ಮಾಡಬೇಡಿ ಅವರೇ ಬಂದು ವಿಗ್ರಹವನ್ನು ತೆಗೆದುಕೊಂಡು ಹೋಗುತ್ತಾರೆ ಅಂತ ಹೇಳಿದ್ರಂತೆ. ಅದೇ ರೀತಿ ಸ್ವತಃ ಮೋದಿ ಅವರೇ ಬಂದು ತಾರಾ ಅವರನ್ನು ಮಾತನಾಡಿಸಿ ಬೆಳ್ಳಿ ಗಣಪತಿಯನ್ನು ತೆಗೆದುಕೊಂಡು ಹೋದ್ರಂತೆ ಮೋದಿ ಅವರು.

ಹೀಗೆ ಹಲವು ವಿಚಾರಗಳ ಬಗ್ಗೆ ಅರ್ಜುನ್ ಗುರೂಜಿ ಅವರು ಹೇಳಿರುವ ಮಾತುಗಳು ನಿಜವಾಗಿದೆ. ತಾರಾ ಅವರು ರಾಜಕೀಯಕ್ಕೆ ಎಂಟ್ರಿ ಕೊಡುವ ವಿಚಾರದಿಂದ ಹಿಡಿದು, ತಾರಾ ಅವರ ವೈಯಕ್ತಿಕ ಜೀವನದ ಬಗ್ಗೆ ಕೂಡ ಅನೇಕ ವಿಚಾರಗಳನ್ನು ಗುರೂಜಿ ಹೇಳಿದ್ದು, ಅವರು ಹೇಳಿದ ಹಾಗೆಯೇ ಎಲ್ಲವೂ ನಡೆದಿದೆಯಂತೆ. ಹಾಗಾಗಿ ತಾರಾ ಅವರಿಗೆ ಅರ್ಜುನ್ ಗುರೂಜಿ ಮೇಲೆ ಹೆಚ್ಚಿನ ನಂಬಿಕೆ. ಅಂತಹ ವ್ಯಕ್ತಿ ಬಂದು ತಮ್ಮ ಸಿನಿಮಾಗೆ ಶುಭಕೋರಿ ಹಾರೈಸಿರುವುದು ನಿಜಕ್ಕೂ ತುಂಬಾ ಒಳ್ಳೆಯ ವಿಚಾರ ಎಂದು ಹೇಳಿ ಸಂತೋಷಪಟ್ಟಿದ್ದಾರೆ ನಟಿ ತಾರಾ.