ಹಲ್ಲು ಹಳದಿ ಆಗಿದ್ದರೆ ಇದನ್ನ ಬಳಸಿ ಸಾಕು.. ಎರಡೇ ನಿಮಿಷ ಹೊಳೆಯುವಂತಾಗುವುದು..

ಸೌಂದರ್ಯ ಎಂದ ಮೇಲೆ ಬರೀ ತ್ವಚೆ, ಕೂದಲಿನ ಸೌಂದರ್ಯ ಮಾತ್ರವಲ್ಲ, ಹಲ್ಲುಗಳ ಸೌಂದರ್ಯ ಕೂಡ ಪ್ರಮುಖವಾಗಿರುತ್ತದೆ. ಸಾಮಾನ್ಯವಾಗಿ ಎಲ್ಲ ವಯಸ್ಸಿನವರಿಗೂ ಹಲ್ಲನ್ನು ಹೇಗೆ ಸ್ವಚ್ಛವಾಗಿ ಹೊಳೆಯುವಂತೆ ಇಟ್ಟುಕೊಳ್ಳುವುದು ಎನ್ನುವುದೇ ಸಮಸ್ಯೆ. ದಿನಕ್ಕೆ 2-3 ಬಾರಿ ಬ್ರಶ್ ಮಾಡಿದರೂ ಸಹ ಕೆಲವರಿಗೆ ಹಲ್ಲುಗಳು ಹಳದಿ ಕರೆ ಕಟ್ಟುವುದು, ಹಲ್ಲಿನ ಹುಳುಕು ತಪ್ಪುವುದಿಲ್ಲ.

ಹೊಳೆಯುವ ಹಲ್ಲುಗಳು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವುದರಿಂದ ಆದಷ್ಟು ಹಲ್ಲುಗಳ ಆರೈಕೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕಾಗುತ್ತದೆ. ನಾವು ಸಣ್ಣವರಾಗಿದ್ದಾಗ ಅಷ್ಟು ಚೆನ್ನಾಗಿ ಬೆಳ್ಳನೆ ಪಳಪಳನೆ ಹೊಳೆಯುತ್ತಿದ್ದ ಹಲ್ಲುಗಳು ನೋಡ ನೋಡುತ್ತಿದ್ದಂತೆ ಹಳದಿ ಬಣ್ಣಕ್ಕೆ ತಿರುಗಿ ನಮಗೂ ಬೇಜಾರು ಮಾಡಿ ಇತರರಿಗೂ ಬೇಸರವನ್ನು ತಂದಿಡುತ್ತವೆ.

ಇದಕ್ಕೆ ಮುಖ್ಯ ಕಾರಣವೆಂದರೆ ನಮ್ಮ ಹಲ್ಲುಗಳ ಮೇಲಿರುವ ಎನಾಮೆಲ್ ಎಂಬ ಒಂದು ಬಿಳಿ ಪದರ. ಸಾಮಾನ್ಯವಾಗಿ ನಾವು ಯಾವ ವಸ್ತುವಿಗಾದರೂ ಬಣ್ಣ ಹಚ್ಚಿದರೆ ಅದು ದಿನಕಳೆದಂತೆ ಹೇಗೆ ಮಾಸುತ್ತದೋ ಅದೇ ರೀತಿ ನಿಸರ್ಗದತ್ತವಾಗಿ ನಮ್ಮ ಹಲ್ಲುಗಳು ಹುಟ್ಟುವಾಗ ಈ ಎನಾಮೆಲ್ ಎಂಬ ಬಿಳಿ ಬಣ್ಣದ ಪದರವನ್ನು ಹೊದ್ದುಕೊಂಡು ನಮ್ಮ ಬಾಯೊಳಗೆ ಮೂಡಿ ಬಂದಿರುತ್ತವೆ. ಹಲ್ಲುಗಳ ಉಪಯೋಗ ದಿನದಿಂದ ದಿನಕ್ಕೆ ಜಾಸ್ತಿಯಾದಂತೆ ಈ ಪದರ ಇಲ್ಲವಾಗುತ್ತದೆ. ಆಗ ಇದರ ಕೆಳಗೆ ಇರುವ ಹಳದಿ ಬಣ್ಣದ ಪದರ ಗೋಚರಿಸುತ್ತದೆ.

ಹಲ್ಲುಗಳ ಹಲವಾರು ಸಮಸ್ಯೆಗಳನ್ನು ನಿವಾರಿಸಲು ಉಪ್ಪು ಅತ್ಯದ್ಭುತ ಉಪಾಯವಾಗಿದೆ. ಹೆಚ್ಚಿನ ಟೂತ್‌ ಪೇಸ್ಟ್‌’ಗಳು ಉಪ್ಪಿನ ಅಂಶದೊಂದಿಗೆ ಬಂದಿದ್ದು ನಿಮ್ಮ ಹಲ್ಲುಗಳನ್ನು ತೊಳೆಯಲು ಉಪ್ಪನ್ನು ಬಳಸಿಕೊಳ್ಳಿ. ಕಲ್ಲುಪ್ಪನ್ನು ಬಳಸಿಕೊಂಡು ನಿತ್ಯ ಒಂದು ಬಾರಿ ಹಲ್ಲುಜ್ಜಿ. ಮತ್ತು ದಿನಕ್ಕೊಮ್ಮೆ ಉಪ್ಪು ಮತ್ತು ಬೆಳ್ಳುಳ್ಳಿ ಪೇಸ್ಟ್ ನಿಂದ ಬಾಯಿ ಮುಕ್ಕಳಿಸಿ. ಇದರಿಂದ ಒಸಡಿನ ತೊಂದರೆಗಳು ನಿವಾರಣೆಯಾಗುತ್ತದೆ. ಹಲ್ಲು ಕೂಡ ಬಲಿಷ್ಠವಾಗುತ್ತವೆ. ಇನ್ನು ಮನೆಯಲ್ಲೇ ಹಳದಿ ಹಲ್ಲನ್ನು ಸ್ವಚ್ಛ ಮಾಡಲು ಪೇಸ್ಟ್ ಅನ್ನು ತಯಾರಿಸಬಹುದು.

ಬೇಕಾಗುವ ಸಾಮಾಗ್ರಿಗಳು: ಪೇಸ್ಟ್, ಬೆಳ್ಳುಳ್ಳಿ, ಅರಿಶಿಣ, ಉಪ್ಪು, ನಿಂಬೆ ರಸ. ಮಾಡುವ ವಿಧಾನ: ನೀವು ದಿನವು ಹಲ್ಲುಜ್ಜುವ ಪೇಸ್ಟ್ ಸ್ವಲ್ಪ, ಜಜ್ಜಿ ಪೇಸ್ಟ್ ಮಾಡಿರುವ ಬೆಳ್ಳುಳ್ಳಿ 3 ಎಸಳು, ಅರಿಶಿಣ ಚಿಟಿಕೆ, ಉಪ್ಪು ¼ ಚಮಚ, ನಿಂಬೆ ರಸ 8 ಹನಿ. ಇವಿಷ್ಟನ್ನು ಬೌಲ್’ಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಮನೆಯಲ್ಲೇ ತಯಾರಾದ ಈ ಪೇಸ್ಟ್’ನಿಂದ ಹಲ್ಲುಜ್ಜಿ. ಒಂದೇ ವಾಶ್’ನಲ್ಲೇ ನಿಮಗೆ ವ್ಯತ್ಯಾಸ ಗೊತ್ತಾಗುತ್ತೆ.