ಸಧ್ಯದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುತ್ತಿರುವಾಗಲೇ ಸಿಹಿ ಸುದ್ದಿ ನೀಡಿದ ತರುಣ್ ಸುಧೀರ್..

ಕನ್ನಡ ಚಿತ್ರರಂಗದ ಕಂಡ ಮಹಾನ್ ನಟರಲ್ಲಿ ಒಬ್ಬರು ಸುಧೀರ್. 70 ಮತ್ತು 80ರ ದಶಕ ಕಂಡ ಅದ್ಭುತವಾದ ಖಳನಟರಲ್ಲಿ ಇವರು ಕೂಡ ಒಬ್ಬರು. ಸ್ಟಾರ್ ನಟರ ಎದುರು ಖಡಕ್ ವಿಲ್ಲನ್ ಆಗಿ ಮಿಂಚಿದ್ದ ಸುಧೀರ್ ಅವರು ಬಹಳ ಬೇಗ ಇಹಲೋಕ ತ್ಯಜಿಸಿದರು. ಇವರಿಗೆ ಇಬ್ಬರು ಗಂಡುಮಕ್ಕಳಿದ್ದು ಇಬ್ಬರು ಸಹ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ನಿರ್ದೇಶಕ ನಂದ ಕಿಶೋರ್ ಮತ್ತು ನಟ ಹಾಗೂ ನಿರ್ದೇಶಕ ತರುಣ್ ಸುಧೀರ್ ಇಬ್ಬರು ಸಹ ಹಿರಿಯನಟ ಸುಧೀರ್ ಅವರ ಮಕ್ಕಳು. ಇವರಿಬ್ಬರು ಸಹ ನಟರಾಗಿ ಕೆರಿಯರ್ ಶುರು ಮಾಡಿ ನಂತರ ನಿರ್ದೇಶಕರಾಗಿ ಯಶಸ್ಸು ಕಂಡವರು. ನಟನೆಗಿಂತ ಇವರ ಕೈಹಿಡಿದು, ಬಿಗ್ ಸಕ್ಸಸ್ ತಂದುಕೊಟ್ಟಿದ್ದು ನಿರ್ದೇಶನ. ಇಂದು ಇವರಿಬ್ಬರು ಕೂಡ ಸ್ಯಾಂಡಲ್ ವುಡ್ ನ ಸ್ಟಾರ್ ಡೈರೆಕ್ಟರ್ ಗಳು ಎಂದು ಖ್ಯಾತಿಯಾಗಿದ್ದಾರೆ. ನಂದ ಕಿಶೋರ್ ಅವರಿಗೆ ಮದುವೆಯಾಗಿದೆ ತಮ್ಮದೇ ಆದ ಒಂದು ಪುಟ್ಟ ಸಂಸಾರ ಇದೆ. ಆದರೆ ತರುಣ್ ಸುಧೀರ್ ಅವರಿಗೆ ಮದುವೆಯಾಗಿಲ್ಲ. ಶೀಘ್ರದಲ್ಲೇ ಮದುವೆ ಆಗುತ್ತೇನೆ ಎಂದಿದ್ದ ತರುಣ್ ಅವರು ಇದೀಗ ಮತ್ತೊಂದು ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.

ತರುಣ್ ಸುಧೀರ್ ಅವರು ಕನ್ನಡ ಚಿತ್ರರಂಗದ ಹಿರಿಯನಟನ ಮಗ ಆಗಿದ್ದರೂ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಡುವುದು, ಅವಕಾಶ ಪಡೆದುಕೊಳ್ಳುವುದು ಸುಲಭ ಆಗಿರಲಿಲ್ಲ. ಮೊದಲಿಗೆ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದರು ತರುಣ್, ತರುಣ್ ಅಭಿನಯಿಸಿದ ಮೊದಲ ಸಿನಿಮಾ ಎಕ್ಸ್ಕ್ಯೂಸ್ ಮಿ.. ನಂತರ ಜೊತೆ ಜೊತೆಯಲಿ ಹಾಗೂ ಇನ್ನು ಕೆಲವು ಸಿನಿಮಾಗಳಲ್ಲಿ ಹೀರೋ ಫ್ರೆಂಡ್ ಹಾಗೂ ಇನ್ನಿತರ ಪಾತ್ರಗಳಲ್ಲಿ ಅಭಿನಯಿಸಿದರು. ನಂತರ ವಿದ್ಯಾರ್ಥಿ ಎನ್ನುವ ಸಿನಿಮಾ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟರು. ಆದರೆ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಯಶಸ್ಸು ಕಾಣಲಿಲ್ಲ. ಮೊದಲ ಸಿನಿಮಾ ಹೀಗಾಗಿ ತರುಣ್ ಸುಧೀರ್ ಅವರಿಗೆ ನಾಯಕನಾಗಿ ನಟಿಸಲು ಹೆಚ್ಚಿನ ಅವಕಾಶಗಳು ಸಿಗಲಿಲ್ಲ.

ಬಳಿಕ ಒಂದೆರಡು ಸಿನಿಮಾಗಳಲ್ಲಿ ಹೀರೋ ಆಗಿ ಮತ್ತು ಇನ್ನು ಕೆಲವು ಸಿನಿಮಾಗಳಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದರು. ನವಗ್ರಹ, ವಿಷ್ಣುಸೇನ,ಹೊಂಗನಸು ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದರು. ನಂತರ ನಟನೆಯಿಂದ ದೂರ ಉಳಿದ ತರುಣ್, ಬರವಣಿಗೆ ಶುರು ಮಾಡಿ, ಸಿನಿಮಾಗೆ ಬರಹಗಾರರಾದರು, ತರುಣ್ ಅಣ್ಣ ನಿರ್ದೇಶನ ಮಾಡಿದ ರಾಂಬೋ ಸಿನಿಮಾದ ಬರಹಕ್ಕೆ ತರುಣ್ ಸಾಥ್ ನೀಡಿದರು. ಅದೇ ಸಿನಿಮಾಗೆ ಕೋ ಡೈರೆಕ್ಟರ್ ಆಗಿ ಸಹ ಕೆಲಸ ಮಾಡಿದರು. ಗಜಕೇಸರಿ, ವಿಕ್ಟರಿ ಹಾಗೂ ಮುಂತಾದ ಸಿನಿಮಾಗಳಿಗೆ ಬರಹಗಾರರಾಗಿ ಕೆಲಸ ಮಾಡಿದ್ದಾರೆ. ಸಿನಿಮಾ ನಿರ್ದೇಶನ ಮಾಡಬೇಕು ಎನ್ನುವ ಕನಸಿದ್ದ ತರುಣ್ ಅವರು ನಿರ್ದೇಶಕನಾಗಿ ಎಂಟ್ರಿ ಕೊಡಲು ಸಾಕಷ್ಟು ತಯಾರಿ ನಡೆಸಿಕೊಂಡರು.

ಚೌಕ ಸಿನಿಮಾ ಮೂಲಕ 2017ರಲ್ಲಿ ನಿರ್ದೇಶಕನಾಗಿ ಬಂದರು. ಚೌಕ ಅದ್ಭುತವಾದ ಕಥೆಯುಳ್ಳ ಸಿನಿಮಾ ಆಗಿತ್ತು, ಚಂದನವನದ ನಾಲ್ಕು ಪ್ರಮುಖ ನಟರು ಈ ಸಿನಿಮಾದಲ್ಲಿ ಅಭಿನಯಿಸಿದ್ದರು. ಚೌಕ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಒಬ್ಬ ಒಳ್ಳೆಯ ನಿರ್ದೇಶಕ ಸಿಕ್ಕರು ಎಂದೇ ಎಲ್ಲರೂ ಭಾವಿಸಿದ್ದರು. ಚೌಕ ಬಳಿಕ ತರುಣ್ ನಿರ್ದೇಶನ ಮಾಡಿದ್ದು ರಾಬರ್ಟ್ ಸಿನಿಮಾ, ಡಿಬಾಸ್ ದರ್ಶನ್ ಹೀರೋ ಆದ ಈ ಸಿನಿಮಾ ಬಾಕ್ಸ್ ಆಫೀಸ್ ಧೂಳೆಬ್ಬಿಸಿತು, ಈ ಸಿನಿಮಾ ಮೂಲಕ ಸ್ಟಾರ್ ಡೈರೆಕ್ಟರ್ ಆದರು ತರುಣ್. ಈಗ ತರುಣ್ ತಮ್ಮ ಜೀವನದಲ್ಲಿ ಯಶಸ್ಸು ಕಂಡು, ಒಳ್ಳೆಯ ಪೊಸಿಷನ್ ನಲ್ಲಿ ನಿಂತಿದ್ದಾರೆ, ಆದರೆ ತರುಣ್ ಅವರಿಗೆ ಇನ್ನು ಮದುವೆಯಾಗಿಲ್ಲ.

ನಟ ದರ್ಶನ್, ಶರಣ್, ನೆನಪಿರಲಿ ಪ್ರೇಮ್ ಎಲ್ಲರೂ ಹೇಳುವ ಹಾಗೆ ತರುಣ್ ಅವರ ಮದುವೆ ಬಗ್ಗೆ ಅವರೆಲ್ಲರೂ ಕಾಳಜಿ ಹೊಂದಿದ್ದಾರೆ. ಮದುವೆ ಬಗ್ಗೆ ಮಾತನಾಡಿದರೆ, ನಮಗ್ಯಾರು ಹುಡುಗಿ ಕೊಡ್ತಾರೆ ಅಂತ ಹೇಳ್ತಾರಂತೆ ತರುಣ್. ತರುಣ್ ಅವರ ಮದುವೆ ನೋಡಬೇಕು ಎನ್ನುವುದು ಅವರ ತಾಯಿಯ ಆಸೆ. ಕೆಲವು ಕಾರ್ಯಕ್ರಮಗಳಲ್ಲಿ ಸಹ ತರುಣ್ ಅವರ ಮದುವೆ ಬಗ್ಗೆ ತಮಾಷೆ ಮಾಡುತ್ತಾ ಚರ್ಚೆ ಮಾಡಲಾಗಿತ್ತು. ತರುಣ್ ಅವರು ಮದುವೆಗೆ ಒಪ್ಪಿದ್ದರೂ ಸಹ ಹುಡುಗಿ ಇನ್ನು ಸಿಕ್ಕಿರಲಿಲ್ಲ. ಅಮ್ಮ ನೋಡಿದ ಹುಡುಗಿಯ ಜೊತೆಯಲ್ಲಿ ಮದುವೆ ಆಗುತ್ತೇನೆ ಎಂದಿದ್ದರು ತರುಣ್.

ನಟ ದರ್ಶನ್ ಅವರು ಸಹ ತರುಣ್ ಅವರಿಗೆ ಒಂದು ಒಳ್ಳೆ ಹುಡುಗಿ ನೋಡಿ ಮದುವೆ ಮಾಡಬೇಕು ಎಂದಿದ್ದರು. ಗೋಲ್ಡನ್ ಗ್ಯಾಂಗ್ ಶೋಗೆ ಬಂದಿದ್ದಾಗ ಕೂಡ ಆದಷ್ಟು ಬೇಗ ಮದುವೆ ಆಗುತ್ತೇನೆ ಎಂದು ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು ತರುಣ್. ಈ ನಡುವೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ಇಂದು ದರ್ಶನ್ ಅವರ ಹುಟ್ಟುಹಬ್ಬ, ಈ ದಿನದಂದು ಒಂದು ಭರ್ಜರಿಯಾದ ಗುಡ್ ನ್ಯೂಸ್ ನೀಡುತ್ತಿದ್ದಾರೆ ತರುಣ್, ದರ್ಶನ್ ಅವರಿಗಾಗಿ ತರುಣ್ ಒಂದು ಅದ್ಭುತವಾದ ಕಥೆಯನ್ನು ರೆಡಿ ಮಾಡಿಕೊಂಡಿದ್ದು, ಇಂದು ಹೊಸ ಸಿನಿಮಾದ ಟೈಟಲ್ ಲಾಂಚ್ ಆಗಲಿದೆ. ರಾಬರ್ಟ್ ನಲ್ಲೇ ಈ ಜೋಡಿ ದೊಡ್ಡದಾಗಿ ಸದ್ದು ಮಾಡಿತ್ತು, ಈ ಹೊಸ ಸಿನಿಮಾ ಹೇಗಿರಲಿದೆ ಎಂದು ಕಾದು ನೋಡಬೇಕಿದೆ. ಸಧ್ಯ ಈ ಸಿನಿಮಾ ಮುಗಿದ ಬಳಿಕವಾದರೂ ತರುಣ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡುವ ಮನಸ್ಸು ಮಾಡಿ ಅವರ ತಾಯಿಯ ಆಸೆ ನೆರವೇರಲಿ..