ಆ ದೊಡ್ಡ ನಿರ್ಮಾಪಕ ತನ್ನ ಜೊತೆ ನಡೆದುಕೊಂಡ ರೀತಿಯ ಬಗ್ಗೆ ಸತ್ಯ ಬಿಚ್ವಿಟ್ಟ ಖ್ಯಾತ ನಟಿ ತಮನ್ನಾ.. ನಿಜಕ್ಕೂ ಶಾಕಿಂಗ್..

ತಮನ್ನಾ ಭಾಟಿಯಾ ಸೌತ್ ಸಿನಿಮಾ ಇಂಡಸ್ಟ್ರಿಯ ಬಹುಬೇಡಿಕೆ ನಟಿ. ಬಾಹುಬಲಿಯಂತಹ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸಿ ಮಿಂಚಿದವರು.. ಹಾಲಿನ ಬಣ್ಣವನ್ನೇ ಮೈಗೆ ಹೊದ್ದಿಕೊಂಡಂತೆ ಕಾಣುವ ತಮನ್ನಾ ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿ ಪಡೆದವರು.. ತಮನ್ನಾ ಎಂದರೆ ಅಂದರೆ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಪ್ರೀತಿಯೂ ಹೌದು. ಆಕೆಯನ್ನು ತೆರೆ ಮೇಲೆ ನೋಡಲು ಸದಾ ಕಾತುರರಾಗಿರುತ್ತಾರೆ.. ಇಂತಹಾ ನಟಿ ಇದೀಗ ನಿರ್ಮಾಪಕನೊಬ್ಬ ತಮ್ಮ ಜೊತೆ ನಡೆದುಕೊಂಡ ರೀತಿಯ ಬಗ್ಗೆ ಸತ್ಯ ಬಿಚ್ಚಿಟ್ಟಿದ್ದಾರೆ..

ಹೌದು ತಮನ್ನಾ ಅವರ ಸಂಭಾವನೆ ಕೋಟಿ ಕೋಟಿಯಲ್ಲೇ ಇರುತ್ತದೆ. ಚಿಕ್ಕಾ ಪುಟ್ಟ ಪ್ರಾಜೆಕ್ಟ್ ಗಳಲ್ಲಿ ತಮನ್ನಾ ಅವರು ಕಾಣಿಸಿಕೊಳ್ಳೋದೇ ಇಲ್ಲ.. ಹಾಗಿರುವಾಗ ಇತ್ತೀಚೆಗಷ್ಟೇ ಖಾಸಗಿ ತೆಲುಗು ವಾಹಿನಿಯಲ್ಲಿ ಪ್ರಾರಂಭವಾದ ರಿಯಾಲಿಟಿ ಶೋ ಒಂದರಲ್ಲಿ ತಮನ್ನಾ ಕಾಣಿಸಿಕೊಂಡಿದ್ದರು. ಅದೇ, ಮಾಸ್ಟರ್ ಚೆಫ್. ಮಾಸ್ಟರ್ ಚೆಫ್ ಶೋ ಮೂಲಕ ತಮನ್ನಾ ಕಿರುತೆರೆಗೆ ಪಾದರ್ಪಣೆ ಮಾಡಿದ್ದರು.

ತಮನ್ನಾ ಕಾಣಿಸಿಕೊಳ್ಳುತ್ತಿದ್ದ ಕಾರಣ ಶೋಗೆ ಒಳ್ಳೆಯ ರೇಟಿಂಗ್ ಕೂಡ ಬರುತಿತ್ತು.. ಶೋ ನೋಡಲು ವೀಕ್ಷಕರು ಮುಗಿ ಬೀಳುತ್ತಿದ್ದರು. ಶೋ ಆಗಸ್ಟ್ 27ರಂದು ಆರಂಭವಾಗಿತ್ತು. ಶೋ ಕೂಡ ಚೆನ್ನಾಗಿ ಮೂಡಿ ಬರುತ್ತಿತ್ತು. ಆದರೆ, ಕೆಲ ದಿನಗಳ ಹಿಂದಷ್ಟೇ ಇದ್ದಕ್ಕಿದ್ದ ಹಾಗೆ ತಮನ್ನಾ ಈ ಶೋ ನಿಂದ ಹೊರ ನಡೆದಿದ್ದರು. ಇದರಿಂದ ಅಭಿಮಾನಿಗಳು ತುಂಬಾ ಬೇಸರ ಪಟ್ಟುಕೊಂಡಿದ್ದರು. ಹೀಗಾಗಬಾರದಿತ್ತು ಎಂದು ಮಾತನಾಡಿಕೊಂಡಿದ್ದರು. ಪ್ರೊಡಕ್ಷನ್ ಹೌಸ್ ಇನ್ನೋವೇಟಿವ್ ಫಿಲ್ಮಂ ಅಕಾಡೆಮಿ ಈ ಶೋ ಅನ್ನು ನಡೆಸಿಕೊಡುತ್ತಿತ್ತು. ಇನ್ನು ತಮನ್ನಾ ಹೊರ ನಡೆದ ಮೇಲೆ ಆ ಜಾಗಕ್ಕೆ ಖ್ಯಾತ ನಿರೂಪಕರಾದ ಅನಸೂಯ ಭಾರದ್ವಾಜ್ ಅನ್ನು ನೇಮಿಸಲಾಗಿತ್ತು. ಸದ್ಯ ಈ ಶೋ ಅನ್ನು ಅನಸೂಯ ಅವರೇ ನಡೆಸಿಕೊಡುತ್ತಿದ್ದಾರೆ.

ಆದರೆ ಇಲ್ಲಿ ಬೇರೆಯೇ ವಿಚಾರವೊಂದು ನಡೆದಿದೆ.. ಹೌದು ಮಿಲ್ಕೀ ಬ್ಯೂಟಿ ತಮನ್ನಾ ಭಾಟಿಯಾಗೆ ಪ್ರೊಡಕ್ಷನ್ ಹೌಸ್ ಹಣದ ವಿಚಾರದಲ್ಲಿ ಬೇರೆ ರೀತಿ ನಡೆದುಕೊಂಡಿದ್ದು ಹಣ ನೀಡಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ.. ಅಷ್ಟೇ ಅಲ್ಲದೇ ತಮನ್ನಾ ಅವರಿಗೆ ಗೌರವ ನೀಡದೇ ನಡೆಸಿಕೊಂಡಿದೆ ಎನ್ನುವ ಮಾತು ಸಹ ಕೇಳಿ ಬರುತ್ತಿದೆ.. ಈ ಬಗ್ಗೆ ತಮನ್ನಾ ಬೇಸರಗೊಂಡಿದ್ದಾರೆ. ಬಿಗ್ ಸ್ಕ್ರೀನ್ ಬಿಟ್ಟು ಕಿರುತೆರೆಗೆ ಎಂಟ್ರಿಕೊಟ್ಟಿದ್ದ ತಮನ್ನಾ ಈಗ ಅಲ್ಲಿಂದಲೂ ಜಾಗ ಖಾಲಿ ಮಾಡಿದ್ದಾರೆ. ಆದರೆ ಇದೆಲ್ಲದಕ್ಕೂ ಏನು ಕಾರಣ ಎಂಬುದು ಕೇಳಿ ಅಭಿಮಾನಿಗಳಿಗೆ ಬೇಸರವಾಗಿದೆ..

ಹೌದು ತಮನ್ನಾ ಭಾಟಿಯಾ ಈ ಶೋ ಇಂದ ಹೊರ ನಡೆಯಲು ಕಾರಣ ಏನು ಎಂಬುದನ್ನು ಅವರ ವಕೀಲರು ಹೇಳಿದ್ದಾರೆ.. ಅದೇನೆಂದರೆ, ತಮನ್ನಾ ಭಾಟಿಯಾ ಅವರಿಗೆ ಪ್ರೊಡಕ್ಷನ್ ಹೌಸ್ ಇನ್ನೋವೇಟಿವ್ ಫಿಲ್ಮಂ ಅಕಾಡೆಮಿಯ ಮಾಸ್ಟರ್ ಚೆಫ್ ಶೋ ನಲ್ಲಿ ಸಂಭಾವನೆ ನೀಡಿಲ್ಲವಂತೆ.. ತಮನ್ನಾ ಅವರಿಗೆ ಪ್ರೊಡಕ್ಷನ್ ಹೌಸ್ ನವರು ಒಪ್ಪಿಕೊಂಡಿದ್ದ ಸಂಭಾವನೆಯನ್ನೇ ನೀಡಿಲ್ಲವಂತೆ.. ಅಲ್ಲದೇ, ಶೋ ನಲ್ಲಿ ತಂಡದವರು ತಮನ್ನಾರನ್ನು ಗೌರವ ನೀಡದೇ ನಡೆಸಿಕೊಂಡಿದ್ದಾರೆ. ಇದರಿಂದ ತಮನ್ನಾ ಅವರಿಗೆ ತುಂಬಾನೇ ಬೇಸರವಾಗಿದೆ ಎಂದು ವಕೀಲರು ತಿಳಿಸಿದ್ದಾರೆ. ಹೀಗಾಗಿ ತಮನ್ನಾ ಈ ವಿಚಾರವಾಗಿ ಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ.

ಸದ್ಯ ತಮನ್ನಾ ಭಾಟಿಯಾ ಕೈ ನಲ್ಲಿ ಹಲವು ಚಿತ್ರಗಳಿವೆ. ಪ್ಲ್ಯಾನ್ ಎ ಪ್ಲ್ಯಾನ್ ಬಿ, ಮ್ಯಾಸ್ಟ್ರೋ, ಎಫ್3, ಘಣಿ, ಭೋಲೆ ಛೂಡಿಯಾ, ಗುರ್ತುಂದ ಸೀತಾಕಾಲಂ, ಸೀಟಿ ಮಾರ್, ದೆಟ್ ಈಸ್ ಮಹಾಲಕ್ಷ್ಮೀ ಸಿನಿಮಾಗಳಲ್ಲಿ ತಮನ್ನಾ ನಟಿಸುತ್ತಿದ್ದಾರೆ. ಆದರೆ ಈ ನಡುವೆ ಸಂಭಾವನೆ ವಿಚಾರವೊಂದಕ್ಕೆ ತಮನ್ನಾ ಕೋರ್ಟ್ ಮೆಟ್ಟಿಲೇರುವಂತಾಗಿದ್ದು ತಮಗೆ ಆದ ರೀತಿಗೆ ಈಗ ಸುಮ್ಮನಿದ್ದರೆ ಅವರು ಬೇರೆಯವರನ್ನೂ ಸಹ ಹಾಗೆಯೇ ಮಡೆದಿಕೊಳ್ಳಬಹುದು ಅದಕ್ಕಾಗಿಯೇ ಅವರು ನನ್ನ ಜೊತೆ ಗೌರವ ನೀಡದೇ ನಡೆದುಕೊಂಡ ಕಾರಣ ಕೋರ್ಟ್ ಮೆಟ್ಟಿಲೇರಿರುವುದಾಗಿ ತಿಳಿಸಿದ್ದಾರೆ..