ಹಣಕ್ಕಾಗಿ ಈ ವಯಸ್ಸಿನಲ್ಲಿ ಲಲಿತ್ ಮೋದಿ ಹಿಂದೆ ಹೋದ ಸುಶ್ಮಿತಾ ಸೇನ್.. ಇಬ್ಬರ ನಡುವಿನ ವಯಸ್ಸಿನ ಅಂತರವೆಷ್ಟು ಗೊತ್ತಾ?

ಬಾಲಿವುಡ್ ನಟಿ ಸುಶ್ಮಿತಾ ಸೇನ್ ಈಗ ಸೋಷಿಯಲ್ ಮೀಡಿಯಾದ ಹಾಟ್ ಟಾಪಿಕ್ ಆಗಿದ್ದಾರೆ. ಎಲ್ಲಿ ನೋಡಿದರೂ ಇವರ ಬಗ್ಗೆಯೇ ಚರ್ಚೆಯಾಗುತ್ತಿದೆ. ಕೆಲ ಸಮಯದ ಬ್ರೇಕಪ್ ವಿಚಾರದಿಂದ ಸಿಕ್ಕಾಪಟ್ಟೆ ಸುದ್ದಿಯಾಗಿದ್ದ ಸುಶ್ಮಿತಾ ಸೇನ್, ಇದೀಗ ಡೇಟಿಂಗ್ ವಿಚಾರದಿಂದ ಹೆಚ್ಚು ಸುದ್ದಿಯಲ್ಲಿದ್ದಾರೆ. ಅದುವು, ಐಪಿಎಲ್ ಮೊದಲ ಆವೃತ್ತಿಯ ಚೇರ್ಮನ್ ಆಗಿದ್ದ ಲಲಿತ್ ಮೋದಿ ಅವರೊಡನೆ ಡೇಟಿಂಗ್ ಮಾಡುತ್ತಿರುವ ವಿಚಾರ ಈಗ ಬಹಿರಂಗವಾಗಿದ್ದು, ನೆಟ್ಟಿಗರು ಶಾಕ್ ಆಗಿದ್ದಾರೆ.

ಲಲಿತ್ ಮೋದಿ ಅವರು ಉದ್ಯಮ ಕ್ಷೇತ್ರದಲ್ಲಿ ದೊಡ್ಡದಾಗಿ ಗುರುತಿಸಿಕೊಂಡಿರುವವರು. ಐಪಿಎಲ್ ನ ಮೊದಲ ಚೇರ್ಮನ್ ಆಗಿ ಹೆಚ್ಚು ಗುರುತಿಸಿಕೊಂಡಿದ್ದರು. ಇನ್ನು ಸುಶ್ಮಿತಾ ಸೇನ್ ಅವರು ಮಾಜಿ ವಿಶ್ವಸುಂದರಿ. ಬಾಲಿವುಡ್ ನಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಇಬ್ಬರು ಹೆಣ್ಣುಮಕ್ಕಳನ್ನು ದತ್ತು ಪಡೆಯುವ ಮೂಲಕ ಒಳ್ಳೆಯ ಪ್ರಶಂಸೆ ಪಡೆದುಕೊಂಡಿದ್ದರು ಸುಶ್ಮಿತಾ. ಇದೀಗ ಈ ನಟಿ ಲಲಿತ್ ಮೋದಿ ಅವರೊಡನೆ ಡೇಟಿಂಗ್ ಮಾಡುತ್ತಿದ್ದು, ಇವರಿಬ್ಬರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಡೇಟಿಂಗ್ ವಿಚಾರವನ್ನು ಸ್ವತಃ ಲಲಿತ್ ಮೋದಿ ಅವರೇ ಬಹಿರಂಗಪಡಿಸಿದ್ದಾರೆ. ಸುಶ್ಮಿತಾ ಅವರೊಡನೆ ಬಹಳ ಕ್ಲೋಸ್ ಆಗಿರುವ ಫೋಟೋಗಳನ್ನು ಶೇರ್ ಮಾಡಿ, ತಾವಿಬ್ಬರು ಡೇಟ್ ಮಾಡುತ್ತಿರುವ ವಿಚಾರದ ಸ್ಫೋಟಕ ಮಾಹಿತಿ ನೀಡಿದ್ದಾರೆ. “ಮಾಲ್ಡಿವ್ಸ್ ಮತ್ತು ಸರ್ದಿನಿಯ ಟ್ರಿಪ್ ಮುಗಿಸಿ, ಈಗಷ್ಟೇ ಕುಟುಂಬದ ಜೊತೆಗೆ ಲಂಡನ್ ಗೆ ಬಂದಿದ್ದೇನೆ. ನನ್ನ ಬೆಟರ್ ಹಾಫ್ ಜೊತೆಗೆ.. ಜೀವನದಲ್ಲಿ ಈಗ ಕೊನೆಗೂ ಹೊಸ ಅಧ್ಯಾಯ ಶುರುವಾಗುತ್ತಿದೆ..” ಎಂದು ಬರೆದುಕೊಂಡಿದ್ದಾರೆ ಲಲಿತ್ ಮೋದಿ..

ಇನ್ನು ಮತ್ತೊಂದು ಟ್ವೀಟ್ ಮಾಡಿ, “ಇದು ಎಲ್ಲರಿಗೂ ಸ್ಪಷ್ಟನೆ ಕೊಡುವುದಕ್ಕಾಗಿ, ನಾವು ಇನ್ನು ಮದುವೆ ಆಗಿಲ್ಲ, ಡೇಟಿಂಗ್ ಮಾಡುತ್ತಿದ್ದೇವೆ..ಶೀಘ್ರದಲ್ಲೇ ಮದುವೆ ನಡೆಯುತ್ತದೆ..” ಎಂದು ಹೇಳಿದ್ದಾರೆ ಲಲಿತ್ ಮೋದಿ. ಹಣಕ್ಕಾಗಿ ಲಲಿತ್ ಮೋದಿ ಅವರ ಹಿಂದೆ ಸುಶ್ಮಿತಾ ಸೇನ್ ಬಿದ್ದಿದ್ದಾರೆ ಎನ್ನುವಂತಹ ಮಾತುಗಳು ಕೇಳಿ ಬರುತ್ತಿವೆ. ಮತ್ತೊಂದು ಕಡೆ, ಸುಶ್ಮಿತಾ ಹಾಗೂ ಲಲಿತ್ ಮೋದಿ ನಡುವಿನ ವಯಸ್ಸಿನ ಅಂತರ ಸಹ ಸದ್ದು ಮಾಡುತ್ತಿದೆ. ಸುಶ್ಮಿತಾ ಅವರಿಗೆ 46 ವರ್ಷ ವಯಸ್ಸು, ಲಲಿತ್ ಮೋದಿ ಅವರಿಗೆ 56 ವರ್ಷ ವಯಸ್ಸು.

10 ವರ್ಷಗಳ ವಯಸ್ಸಿನ ವ್ಯತ್ಯಾಸ ದೊಡ್ಡದೇನು ಅಲ್ಲ. ಆದರೆ, ಈ ವಯಸ್ಸಿನಲ್ಲಿ ಮದುವೆ ಆದವರಿದ್ದಾರೆ, ಅದರೆ ಡೇಟಿಂಗ್ ಮಾಡುತ್ತಿರುವುದರಿಂದ ಇವರಿಬ್ಬರು ಟ್ರೋಲ್ ಆಗಿದ್ದಾರೆ. ಅಜ್ಜ ಅಜ್ಜಿಯ ಲವ್ ಸ್ಟೋರಿ ಎನ್ನುತ್ತಿದ್ದಾರೆ ನೆಟ್ಟಿಗರು. ಈ ಹಿಂದೆ 2018ರಿಂದ ಖ್ಯಾತ ಮಾಡೆಲ್ ರೋಹನ್ ಅವರೊಡನೆ ರಿಲೇಶನ್ಷಿಪ್ ನಲ್ಲಿದ್ದರು ಸುಶ್ಮಿತಾ, 2021ರ ಡಿಸೆಂಬರ್ ನಲ್ಲಿ ರೋಹನ್ ಜೊತೆ ಬ್ರೇಕಪ್ ಮಾಡಿಕೊಂಡರು. ಇದೀಗ ಲಲಿತ್ ಮೋದಿ ಅವರೊಡನೆ ಡೇಟಿಂಗ್ ಇಂದ ಮತ್ತೆ ಸುದ್ದಿಯಲಿದ್ದಾರೆ.