ಲಕುಮಿ, ಯಾರೆ ನೀ‌ ಮೋಹಿನಿ ಧಾರಾವಾಹಿಯ ನಟಿ ಸುಷ್ಮಾ ಏನಾದರು ಗೊತ್ತಾ..

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲಿ ಗಿಣಿರಾಮ ಧಾರವಾಹಿ ಕೂಡ ಒಂದು. ಇನೇನು ಮಹತಿ ಹಾಗೂ ಶಿವರಾಮನ ಕಷ್ಟಗಳೆಲ್ಲಾ ಬಗೆಹರಿದವು, ಇನ್ನು ಇಬ್ಬರೂ ಸಂತೋಷವಾಗಿರಬಹುದು ಎನ್ನುವಷ್ಟರಲ್ಲಿ ಧಾರಾವಾಹಿಯಲ್ಲಿ ಮತ್ತೊಂದು ಟ್ವಿಸ್ಟ್ ಶುರುವಾಗಿದೆ. ಹೌದು ಇನ್ನು ಮಹತಿಗೆ ತನ್ನ ಪ್ರೀತಿಯನ್ನು ಶಿವರಾಮ ಹೇಳಬೇಕು ಅಷ್ಟರಲ್ಲಿ, ಶಿವರಾಮನ ಪ್ರೇಯಸಿ ನೇಹಾಳ ಎಂಟ್ರಿಯಾಗಿದೆ. ಇದೀಗ ನೇಹಾಳ ಆಗಮನ ಮಹತಿ ಹಾಗೂ ಶಿವರಾಮನ ಬದುಕಿನಲ್ಲಿ ಇನ್ನೇನು ತಿರುಗಳು ಕಾದಿದೆಯೋ ಎಂದು ನೋಡಬೇಕಿದೆ. ಇನ್ನು ನೇಹಾ ಪಾತ್ರದಲ್ಲಿ ಈ ಖ್ಯಾತ ನಟಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಹಾಗಾದರೆ ಈ ನಟಿ ಯಾರು ಎಂದು ತಿಳಿಯುವ ಕುತೂಹಲ ನಿಮಗೂ ಇದ್ದರೆ, ಬನ್ನಿ ನೋಡೋಣ.

ಮಹತಿ ಹಾಗೂ ಶಿವರಾಮ ಇಬ್ಬರಿಗೂ ಒಬ್ಬರ ಮೇಲೆ ಒಬ್ಬರಿಗೂ ಸಾಕಷ್ಟು ಪ್ರೀತಿ ಇದ್ದರೂ ಸಹ ಎಲ್ಲೋ ಒಂದು ಕಡೆ ಸಣ್ಣ ಭಯ. ಇದೀಗ ಕೊನೆಗೂ ಶಿವರಾಮ ತನ್ನ ಪ್ರೀತಿಯನ್ನು ಮಹತಿ ಹೇಳಬೇಕು ಎನ್ನುವಷ್ಟರಲ್ಲಿ ಇದೀಗ ಧಾರವಾಹಿಯಲ್ಲಿ ಶಿವರಾಮನ ಪ್ರೇಯಸಿ ನೇಹಾಳ ಎಂಟ್ರಿಯಾಗಿದೆ. ಇಷ್ಟು ದಿನ ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ನೇಹಾ ಬದುಕಿಲ್ಲ ಎಂದು ತಿಳಿದಿದ್ದ ಶಿವರಾಮನಿಗೆ ನೇಹಾಳನ್ನು ಕಂಡು ಶಾಕ್ ಆಗಿದೆ. ನೇಹಾ ಇನ್ನು ಇಲ್ಲ ಎಂದು ಭಾವಿಸಿ, ಶಿವರಾಮ ಮಹತಿಯನ್ನು ಪ್ರೀತಿಸಲು ಶುರುಮಾಡಿದ್ದನ್ನು. ಇದೀಗ ನೇಹಾ ಆಗಮನದಿಂದ ಈ ಇಬ್ಬರಲ್ಲಿ ಶಿವರಾಮ ಯಾರನ್ನು ಆಯ್ಕೆ ಮಾಡುತ್ತಾನೆ? ಮಹತಿ ತನ್ನ ಪ್ರೀತಿಯನ್ನು ಒಪ್ಪಿಸುತ್ತಾನಾ ಅಥವಾ ತನ್ನ ಹಳೆಯ ಪ್ರೀತಿ ನೇಹಾ ಬಳಿ ಹೋಗುತ್ತಾನಾ? ಎನ್ನುವ ಸಾಕಷ್ಟು ಪ್ರಶ್ನೆಗಳು ಅಭಿಮಾನಿಗಳಲ್ಲಿ ಕಾಡುತ್ತಿದೆ.

ಇನ್ನು ನೇಹಾ ಪಾತ್ರದಲ್ಲಿ ನಟಿ ಸುಷ್ಮಾಶೇಖರ್ ಕಾಣಿಸಿಕೊಂಡಿದ್ದಾರೆ. ಸುಷ್ಮಾ ಶೇಖರ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ತಮ್ಮ ಅಪ್ರತಿಮಾ ನಟನೆಯ ಮೂಲಕ ಕನ್ನಡದ ಮನೆಮಗಳಾಗಿ ಗುರುತಿಸಿಕೊಂಡಿದ್ದಾರೆ. ಲಕುಮಿ ಹಾಗೂ ಬೆಳ್ಳಿ ಎಂದೇ ಇಂದಿಗೂ ಸಹ ಸುಷ್ಮಾ ಅವರನ್ನು ಎಲ್ಲರೂ ಗುರುತಿಸುತ್ತಾರೆ. ಬಾಲನಟಿಯಾಗಿ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟು ಸಾಕಷ್ಟು ಜನರ ಮನಸ್ಸನ್ನು ಗೆದ್ದಿದ್ದಾರೆ ನಟಿ ಸುಷ್ಮಾ. ಯಾರೇ ನೀ ಮೋಹಿನಿ ಧಾರಾವಾಹಿಯಲ್ಲಿ ನಟಿ ಸುಷ್ಮಾ ಬೆಳ್ಳಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸದಾ ಮುತ್ತು ಮಾವನ ಜಪ ಮಾಡುತ್ತಾ, ಮುತ್ತು ಮಾವ, ಮುತ್ತು ಮಾವ ಎಂದು ಸದಾ ಅವನಿಗಾಗಿ ಕನವರಿಸುತ್ತಿದ್ದಳು, ಈ ಪಾತ್ರದ ಮೂಲಕ ನಟಿ ಸುಷ್ಮಾ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇದೀಗ ತಮ್ಮ ಅಭಿಮಾನಿಗಳನ್ನು ರಂಜಿಸಲು ಮತ್ತೊಂದು ಹೊಸ ಪಾತ್ರದ ಮೂಲಕ ತೆರೆ ಮೇಲೆ ಬರುತ್ತಿದ್ದಾರೆ ನಟಿ ಸುಷ್ಮಾ.

ಯಾರೇ ನೀ ಮೋಹಿನಿ ಧಾರವಾಹಿಯ ಬಳಿಕ ನಟಿ ಸುಷ್ಮಾ ಕಿರುತೆರೆ ಲೋಕದಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದರು. ಬೇರೆ ತರಹದ ಪಾತ್ರಗಳಲ್ಲಿ ನಟಿಸುವ ಆಸೆ ಸುಷ್ಮಾ ಅವರಿಗಿದ್ದು, ಹೊಸ ತರಹದ ಪಾತ್ರದ ನಿರೀಕ್ಷೆಯಲ್ಲಿದ್ದರು. ಉತ್ತಮ ಪಾತ್ರಗಳ ನಿರೀಕ್ಷೆಯಲ್ಲಿದ್ದ ಸುಷ್ಮಾ ಅವರು ಇದೀಗ ನಟಿ ಗಿಣಿರಾಮ ಧಾರವಾಹಿಯಲ್ಲಿ ಹೊಸ ಪಾತ್ರದ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಶಿವರಾಮನ ಪ್ರೇಯಸಿ ನೇಹಾ ಪಾತ್ರದಲ್ಲಿ ನಟಿ ಸುಷ್ಮಾ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಇವರ ಆಗಮನದಿಂದ ಧಾರಾವಾಹಿಯಲ್ಲಿ ಯಾವ ತಿರುವುಗಳಿಂದ ಸಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟಿವ್ ಇರುವ ನಟಿ ಸುಷ್ಮಾ ಆಗಾಗ ತಮ್ಮ ಫೋಟೋಗಳು ಹಾಗೂ ವಿಡಿಯೋಗಳನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ನಟಿ ಸುಷ್ಮಾ ಅವರು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೀಗ ನಟಿ ಮತ್ತೆ ಕಿರುತೆರೆಗೆ ಮರಳಿರುವುದು ಅವರ ಅಭಿಮಾನಿಗಳಿಗೆ ಸಕತ್ ಖುಷಿ ತಂದುಕೊಟ್ಟಿದೆ. ಇನ್ನು ಈ ಬಗ್ಗೆ ನಟಿ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಪತ್ರಿ ದಿನ ಸೋಮವಾರದಿಂದ- ಶುಕ್ರವಾರದವರೆಗೂ ರಾತ್ರಿ 8:30 ತಪ್ಪದೆ ಗಿಣಿರಾಮ ಧಾರವಾಹಿಯನ್ನು ನೋಡಿ. ನಿಮ್ಮ ಆಶೀರ್ವಾದ ಸದಾ ನನ್ನ ಮೇಲೆ ಹೀಗೆ ಇರಲಿ ಎಂದು ನಟಿ ಬರೆದುಕೊಂಡಿದ್ದಾರೆ. ಇದೀಗ ಅಭಿಮಾನಿಗಳು ಸುಷ್ಮಾ ಅವರಿಗೆ ಶುಭ ಕೋರುತ್ತಿದ್ದಾರೆ.