ಸುಶಾಂತ್ ನನ್ನ ಹೊಟ್ಟೆಯಲ್ಲಿ ಮತ್ತೆ ಹುಟ್ಟಿ ಬರಲಿದ್ದಾನೆ.. -ಬಹಿರಂಗವಾಗಿ ಹೇಳಿಕೆ ಕೊಟ್ಟ ಬಾಲಿವುಡ್ ನಟಿ..

ನಟ ಸುಶಾಂತ್ ಇಲ್ಲವಾಗಿ ವಾರ ಕಳೆಯುತ್ತಿದ್ದಂತೆ ಇದೀಗ ಬಾಲಿವುಡ್ ನಟಿ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.. ಹೌದು ಸುಶಾಂತ್ ನನ್ನ ಹೊಟ್ಟೆಯಲ್ಲಿ ಮತ್ತೆ ಹುಟ್ಟಿ ಬರಲಿದ್ದಾನೆ.. ಈ ಬಗ್ಗೆ ಅವನೇ ನನ್ನ ಕನಸಿನಲ್ಲಿ ಬಂದು ಹೇಳಿದ್ದಾನೆ ಎಂದು ಹೇಳಿಕೆ ಕೊಟ್ಟಿದ್ದಾರೆ.. ಈ ರೀತಿ ಬಹಿರಂಗವಾಗಿ ಪೋಸ್ಟ್ ಹಾಕಿರುವವರು ಮತ್ಯಾರೂ ಅಲ್ಲ ನಟಿ ರಾಖಿ ಸಾವಂತ್.

ಹೌದು ನಟಿ ರಾಖಿ ಸಾವಂತ್ ಈ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.. ಸ್ನೇಹಿತರೆ ನಿಮಗೆಲ್ಲಾ ಒಂದು ಗುಡ್ ನ್ಯೂಸ್ ಇದೆ.. ನಾನು ರಾತ್ರಿ ಮಲಗಿದ್ದಾಗ ಮಧ್ಯ ರಾತ್ರಿಯಲ್ಲಿ ಅಶರೀರ ವಾಣಿಯೊಂದು ಕೇಳಿಸಿತು.. ನಾನು ತಕ್ಷಣ ಶಾಕ್ ಆದೆ.. ಯಾರು.. ಯಾರು ಅಂತ ಕೇಳಿದೆ.. ಆಗ ಆ ಅಶರೀರ ವಾಣಿ ಸುಶಾಂತ್ ಎಂದು ಹೇಳಿತು.. ಅಷ್ಟೇ ಅಲ್ಲದೆ ನಾನು ಮತ್ತೆ ನಿನ್ನ ಮಗನಾಗಿ ನಿನ್ನ ಹೊಟ್ಟೆಯಲ್ಲಿ ಹುಟ್ಟಿ ಬರುತ್ತೇನೆ… ಈ ವಿಷಯವನ್ನು ನನ್ನ ಎಲ್ಲಾ ಅಭಿಮಾನಿಗಳಿಗೆ ತಿಳಿಸಿ ಎಂದು ಹೇಳಿದ್ದಾನೆ.. ನನಗೆ ಬಾಲಿವುಡ್ ಎಲ್ಲವನ್ನು ಕೊಟ್ಟು, ವಾಪಸ್ ಕಿತ್ತುಕೊಂಡಿತು.. ಪಾರ್ಟಿಗಳಿಂದ ನನ್ನನ್ನು ಬಾಯ್ ಕಟ್ ಮಾಡಲಾಯಿತು..

ಆದರೆ ಈಗ ನಾನು ಯಾರನ್ನೂ ಸುಮ್ಮನೆ ಬಿಡಲ್ಲ.. ಎಂದು ಸುಶಾಂತ್ ನನ್ನ ಕನಸಿನಲ್ಲಿ ಹೇಳಿದ್ದಾನೆ.. ಅಷ್ಟೇ ಅಲ್ಲದೆ ಅರ್ಧಕ್ಕೆ ನಿಂತಿರುವ ನನ್ನ ಎಲ್ಲಾ ಸಿನಿಮಾಗಳನ್ನು ಪೂರ್ಣಗೊಳಿಸಿ.. ಆ ಸಿನಿಮಾಗಳಲ್ಲಿ ರಾಖಿ ಸಾವಂತ್ ಮತ್ತು ಸನ್ನಿಲಿಯೋನ್ ನ ಐಟಂ ಹಾಡನ್ನು ಹಾಕಿ.. ನಾನು ಯಾರನ್ನು ಸುಮ್ಮನೆ ಬಿಡಲ್ಲ.. ನನ್ನ ದೇಹ ಇಲ್ಲದಿದ್ದರೇನು.. ನನ್ನ ಆತ್ಮ ಇದೆ.. ನನಗೆ ಸಪೋರ್ಟ್ ಮಾಡಿರುವ ಕಂಗನಾ ರಾಣಾವತ್ ಹಾಗೂ ರಾಖಿ ಸಾವಂತ್ ಗೆ ಧನ್ಯವಾದಗಳು ಎಂದ.. ಆಗ ನನಗೆ ಎಚ್ಚರವಾಯ್ತು.. ಸಮಯ 4 ಗಂಟೆ ಆಗಿತ್ತು.. ಸ್ನೇಹಿತರೆ ನೀವ್ ನಂಬ್ತೀರೋ ಬಿಡ್ತೀರೋ ಆದರೆ ನಾನು ಸತ್ಯ ಹೇಳ್ತಿದ್ದೀನಿ.. ಖಂಡಿತ ಸುಶಾಂತ್ ನನ್ನ ಹೊಟ್ಟೆಯಲ್ಲಿ ಹುಟ್ಟಿ ಬರ್ತಾನೆ ಎಂದು ರಾಖಿ ಸಾವಂತ್ ಹೇಳಿದ್ದಾರೆ..

ಸದ್ಯ ರಾಖಿ ಸಾವಂತ್ ಅವರ ಈ ಹೊಸ ಹುಚ್ಚಾಟಕ್ಕೆ ನೆಟ್ಟಿಗರಿಂದ ಟೀಕೆಗಳ ಸುರಿಮಳೆ ವ್ಯಕ್ತವಾಗಿದ್ದು. ಇನ್ನು ಕೆಲವರು ಇವರದ್ದು ಸದಾ ಇದ್ದದ್ದೇ ಮಾಮೂಲಿ ಎಂದು ಸುಮ್ಮನಾಗಿದ್ದಾರೆ..