ಈ ಫೋಟೋದಲ್ಲಿನ ಮಕ್ಕಳು ಈಗ ಸೂಪರ್ ಸ್ಟಾರ್ ನಟರುಗಳು.. ಯಾರು ಗೊತ್ತಾ..

ಈ ಫೋಟೋದಲ್ಲಿರುವ ಇಬ್ಬರು ಈಗ ಸ್ಟಾರ್ ನಟರು. ದಕ್ಷಿಣ ಭಾರತದಲ್ಲಿ ಇವರಿಬ್ಬರಿಗೆ ದೊಡ್ಡ ಅಭಿಮಾನಿ ವರ್ಗವಿದೆ. ಅಂದಹಾಗೆ, ಇವರಿಬ್ಬರು ಸಹೋದರರು. ಸಿನಿಮಾ ಹಿನ್ನೆಲೆಯಿಂದ ಬಂದಿದ್ದರೂ, ತಮ್ಮದೇ ಸ್ವಂತ ಶ್ರಮದಿಂದ ಇವರಿಬ್ಬರು ಸ್ಟಾರ್ ನಟರಾಗಿದ್ದಾರೆ. ಅಷ್ಟಕ್ಕೂ ಇವರು ಯಾರು? ಹೌದು, ಇದು ತಮಿಳು ನಟ ಸೂರ್ಯ ಮತ್ತು ಕಾರ್ತಿ ಸಹೋದರರ ಬಾಲ್ಯದ ಫೋಟೋ. ಈ ಸ್ಪೆಷಲ್ ಫೋಟೋವನ್ನು ಈಗ ಹಂಚಿಕೊಂಡಿರುವುದು ನಟ ಕಾರ್ತಿ. ಅವರು ಈ ಫೋಟೋವನ್ನು ಶೇರ್ ಮಾಡಿದ್ದಕ್ಕೂ ಒಂದು ಕಾರಣವಿದೆ. ಆ ಕುರಿತು ಇಲ್ಲಿದೆ ಮಾಹಿತಿ.

ನಟ ಸೂರ್ಯ ಸಿನಿಮಾರಂಗಕ್ಕೆ ಬಂದು 25 ವರ್ಷ ತುಂಬಿದೆ. ಆ ಹಿನ್ನೆಲೆಯಲ್ಲಿ ಅಣ್ಣನ ಜೊತೆಗಿರುವ ಈ ಬಾಲ್ಯದ ಫೋಟೋವನ್ನು ಕಾರ್ತಿ ಶೇರ್ ಮಾಡಿಕೊಂಡಿದ್ದಾರೆ. ಅವರು ತಮ್ಮಲ್ಲಿರುವ ಎಲ್ಲ ಮೈನಸ್‌ಗಳನ್ನು ಪ್ಲಸ್ ಮಾಡಿಕೊಳ್ಳುವ ಸಲುವಾಗಿ ಹಗಲು ರಾತ್ರಿಯೆನ್ನದೇ ಕಷ್ಟಪಟ್ಟಿದ್ದಾರೆ. ಅವರು ಯಾವಾಗಲೂ ತಮ್ಮ ಸಾಧನೆಗಳನ್ನು ಮೀರಿಸಲು ಗಮನ ನೀಡುತ್ತಿದ್ದರು. ಒಬ್ಬ ವ್ಯಕ್ತಿಯಾಗಿ, ಅವರು ಈಗಾಗಲೇ ಉದಾರತೆಯಿಂದ ಕೆಲಸ ಮಾಡಿದ್ದಾರೆ. ಸಾವಿರಾರು ಅರ್ಹ ಮಕ್ಕಳ ಜೀವನವನ್ನು ರೂಪಿಸಿದ್ದಾರೆ. ಅವರೇ ನನ್ನ ಸಹೋದರ.. ಎಂದು ಕಾರ್ತಿ ಬರೆದುಕೊಂಡಿದ್ದಾರೆ.

ನಟ ಸೂರ್ಯ ಅವರಿಗೆ ಈಗ 47 ವರ್ಷ. ತಮ್ಮ 22ನೇ ವಯಸ್ಸಿಗೆ ಅವರು ನೆರುಕ್ಕು ನೇರ್‌ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ಆ ಸಿನಿಮಾದಲ್ಲಿ ದಳಪತಿ ವಿಜಯ್ ಕೂಡ ನಟಿಸಿದ್ದರು. ಈವರೆಗೂ 40ಕ್ಕೂ ಅಧಿಕ ಸಿನಿಮಾಗಳಲ್ಲಿ ಸೂರ್ಯ ನಟಿಸಿದ್ದಾರೆ. ಜೈ ಭೀಮ್‌, ಸೂರರೈ ಪೋಟ್ರು, ಪಿತಾಮಗನ್,ವಾರಣಂ ಆಯಿರಂ, ಕಾಖಾ ಕಾಖಾ, ಫ್ರೆಂಡ್ಸ್, 24,ನಂದ, ಆಯನ್, ಸಿಂಗಂ ಮುಂತಾದ ಸಿನಿಮಾಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಸೂರರೈ ಪೋಟ್ರು ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿದೆ.

ತಂದೆ ಶಿವಕುಮಾರ್ ಅವರು 70 – 80ರ ದಶಕದಲ್ಲಿ ಸ್ಟಾರ್ ನಟರಾಗಿದ್ದವರು. ಆದರೂ, ತಂದೆಯ ವರ್ಚಸ್ಸಿನ ಲಾಭ ಪಡೆಯದೇ ಸ್ವಂತ ಹೆಜ್ಜೆ ಗುರುತನ್ನು ಸೂರ್ಯ ಚಿತ್ರರಂಗದಲ್ಲಿ ಮೂಡಿಸಿದ್ದಾರೆ. ನಟಿ ಜ್ಯೋತಿಕಾ ಅವರನ್ನು ಪ್ರೀತಿಸಿ ಮದುವೆಯಾಗಿರುವ ಸೂರ್ಯ ಅವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.

ಬರೀ ನಟನೆ ಮಾತ್ರವಲ್ಲದೆ, ಸಿನಿಮಾ ನಿರ್ಮಾಣಕ್ಕೂ ಸೂರ್ಯ ಕಾಲಿಟ್ಟಿದ್ದಾರೆ. ತಮ್ಮ 2ಡಿ ಎಂಟರ್‌ಟೇನ್ಮೆಂಟ್ ಮೂಲಕ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಅದರಲ್ಲೂ ಅವರು ನಟಿಸಿ, ನಿರ್ಮಿಸಿದ್ದ ಜೈ ಭೀಮ್’ಗೆ ಭಾರಿ ಮನ್ನಣೆ ಸಿಕ್ಕಿತ್ತು. ಪ್ರಸ್ತುತ ಅವರು ಬಾಲ ನಿರ್ದೇಶನದ ವಾನಂಗಾನ್ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ. ಇದಾದ ಮೇಲೆ ನಿರ್ದೇಶಕ ವೆಟ್ರಿಮಾರನ್ ಅವರ ಬಹುನಿರೀಕ್ಷಿತ ವಾಡಿವಾಸಲ್ ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರೆ.

ಬರೀ ಸಿನಿಮಾರಂಗ ಮಾತ್ರವಲ್ಲ, ಸಾಮಾಜಿಕ ಕಳಕಳಿಯಲ್ಲೂ ಸೂರ್ಯ ಅವರ ಹೆಸರು ಕೇಳಿಬರುತ್ತದೆ. ಅಗರಂ ಫೌಂಡೇಷನ್‌ ಮೂಲಕ ಅನೇಕ ಬಡ ಮಕ್ಕಳಿಗೆ ಆಸರೆಯಾಗಿದ್ದಾರೆ ನಟ ಸೂರ್ಯ.

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ಸಾಧ್ಯ ಆಗುವ ರೂಪದಲ್ಲಿ ಖಚಿತ ಪರಿಹಾರ, ನೂರಕ್ಕೆ ನೂರರಷ್ಟು ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಅಥವಾ ವಾಟ್ಸಪ್ ಮಾಡಿ 9916889622. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. 9916889622