ಜೂನ್ 21 ಚೂಡಾಮಣಿ ಸೂರ್ಯ ಗ್ರಹಣ..‌ ಈ ಎರಡು ರಾಶಿಗಳಿಗೆ ಕೆಟ್ಟ ಪರಿಣಾಮ..

ಗ್ರಹಣಗಳು ರಾಶಿಗಳ ಮೇಲೆ ಪ್ರಭಾವ ಬೀರುವುದು ಸಾಮಾನ್ಯ.. ಆದರೆ ಈ ಬಾರಿ ಜೂನ್ 21 ರಂದು ನಡೆಯುವ ಚೂಡಾಮಣಿ ಸೂರ್ಯಗ್ರಹಣದ ಪ್ರಭಾವ ಈ ಮೂರು ರಾಶಿಗಳ ಮೇಲೆ ಬೀಳಲಿದ್ದು ಕೆಟ್ಟ ಪರಿಣಾಮಗಳಾಗಲಿದೆ.‌. ದೇವರ ಪ್ರಾರ್ಥನೆ ಮಾಡಿದರೆ ಒಳಿತು ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತಿದೆ..

ಜೂನ್ 21, ಮುಂದಿನ ಭಾನುವಾರ ಚೂಡಾಮಣಿ ಸೂರ್ಯಗ್ರಹಣ ನಡೆಯಲಿದೆ. ಭಾನುವಾರ ಬೆಳಗ್ಗೆ 10.13ರಿಂದ ಮಧ್ಯಾಹ್ನ 1.32ರವರೆಗೆ ಸೂರ್ಯಗ್ರಹಣ ಸಂಭವಿಸಲಿದ್ದು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದನ್ನು ಚೂಡಾಮಣಿ ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ… ಈ ಚೂಡಾಮಣಿ ಸೂರ್ಯಗ್ರಹಣದ ವೇಳೆ ಮನೆಯಿಂದ ಹೊರಬರಬಾರದು.. ಮನೆಯಲ್ಲೇ ಇದ್ದು, ದೇವರ ಜಪ-ತಪ ಮಾಡಿ ಗ್ರಹಣ ಮೋಕ್ಷಕಾಲದ ಬಳಿಕ ಸ್ನಾನ ಮಾಡಿ ನಂತರ ದೇವಾಲಯದಲ್ಲಿ ದೇವರ ದರ್ಶನ ಮಾಡೋದು ಪದ್ದತಿಯಾಗಿದೆ..

ಕೆಲ ದಿನಗಳ ಹಿಂದಷ್ಟೇ ದೇವಸ್ಥಾನಗಳನ್ನು ತೆರೆಯಲಾಗಿದೆ.. ಸಾಮಾಜಿಕ ಅಂತರ ಕಾಯ್ದುಕೊಂಡು ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.. ಆದರೆ ಗ್ರಹಣದ ದಿನ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಲಿದ್ದು ಈಗಾಗಲೇ ದೇವಸ್ಥಾನ ಮಂಡಳಿಗಳು ಈ ಬಗ್ಗೆ ಚರ್ಚೆ ನಡೆಸಿ ಅಗತ್ಯ ಕ್ರಮಗಳನ್ನು‌ ಕೈಗೊಳ್ಳಲಾಗುತ್ತಿದೆ.. ಆದರೆ ಆದಷ್ಟು ಜನರು ಮನೆಯಲ್ಲಿಯೇ ದೇವರನ್ನು ಪ್ರಾರ್ಥಿಸಿ ಎಂದು ಕೆಲ ದೇವಸ್ಥಾನಗಳ ಮಂಡಳಿಗಳು ಮನವಿ ಮಾಡಿವೆ..

ಇನ್ನು ಇದೇ ಭಾನುವಾರ ನಡೆಯುವ ಚೂಡಾಮಣಿ ಸೂರ್ಯಗ್ರಹಣದ ಪರಿಣಾಮ ಎರಡು ರಾಶಿ ಹಾಗೂ ಒಂದು ನಕ್ಷತ್ರದವರ ಮೇಲೆ ಪರಿಣಾಮ ಬೀರಲಿದೆ.. ಹೌದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಸೂರ್ಯಗ್ರಹಣ ಮಿಥುನ, ಸಿಂಹ ರಾಶಿ ಹಾಗೂ ಮೃಗಶಿರ ನಕ್ಷತ್ರದವರ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ…