ದಾಖಲೆ ಬರೆದ ಪಾಪ್ ಕಾರ್ನ್ ಮಂಕಿ ಟೈಗರ್.. ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

ಪಾಪ್ ಕಾರ್ನ್ ಮಂಕಿ ಟೈಗರ್.. ಈ ವರ್ಷದ ಮೊದಲ ಬ್ಲಾಕ್ ಬಸ್ಟರ್ ಮಾಸ್ ಎಂಟರ್ಟೈನರ್ ಸಿನಿಮಾ.. ಅಂದುಕೊಂಡಂತೆ ಯಶಸ್ಸು ಪಡೆದಿದೆ.. ಡಾಲಿ ಧನಂಜಯ್ ಮಂಕಿ ಸೀನನಾಗಿ ತನ್ನ ಅಭಿನಯ ಏನು ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ..

ಇನ್ನು ಸೂರಿ ಅವರು ಪ್ರೇಕ್ಷಕರಿಗೆ ಮನರಂಜನೆಯ ಸುಕ್ಕಾ ಮಾಲ್ ಅನ್ನೇ ನೀಡಿದ್ದು, ಎಲ್ಲೆಡೆ ಒಳ್ಳೆಯ ಪ್ರಶಂಸೆಯನ್ನು ಪಡೆಯುತ್ತಿದೆ.‌. ಹೇಳಲಾಗದ ಕತೆಯೊಂದರಲ್ಲಿ ವಿಭಿನ್ನ ಸ್ಕ್ರೀನ್ ಪ್ಲೇ ಮೂಲಕ ಜನರ ಮುಂದೆ ಮತ್ತೊಂದು ಪ್ರಯೋಗವನ್ನಿಟ್ಟು ಗೆದ್ದಿದ್ದಾರೆ..

ಇನ್ನು ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು ಎಂಬ ಮಾಹಿತಿ ಹೊರ ಬಿದ್ದಿದೆ.. ಹೌದು ಪಾಪ್ ಕಾರ್ನ್ ಮಂಕಿ ಟೈಗರ್ ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದಿದ್ದು ಕಲೆಕ್ಷನ್ ಕೂಡ ಭರ್ಜರಿಯಾಗಿಯೇ ಇದೆ..

ರಾಜ್ಯಾದ್ಯಂತ ಮುನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಿನಿಮಾ ಬಹುತೇಕ ಎಲ್ಲಾ ಥಿಯೇಟರ್ ಗಳಲ್ಲಿಯೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.. ಮೊದಲ ದಿನ ಒಟ್ಟು ಎರಡೂವರೆ ಕೋಟಿ ಕಲೆಕ್ಷನ್ ಆಗಿದ್ದು ವಾರಾಂತ್ಯದಲ್ಲಿ ಇನ್ನು ಹೆಚ್ಚು ಕಲೆಕ್ಷನ್ ಆಗಲಿದೆ ಎಂದು ಅಂದಾಜಿಸಲಾಗಿದೆ..

ಸೂರಿ ಸಿನಿಮಾ ಮಾಡುವ ಸ್ಟೈಲ್ ಮತ್ತೊಮ್ಮೆ ಮಾಸ್ ಪ್ರಿಯರಿಗೆ ಕಿಕ್ಕೇರಿಸಿದೆ.. ಒಮ್ಮೆ ಸಿನಿಮಾ ನೋಡಿದವರು ಮತ್ತೊಮ್ಮೆ ನೋಡಲೇ ಬೇಕು ಎನಿಸುವಂತೆ ಮಾಡಿರುವುದು ಸೂರಿ ಅವರ ಬುದ್ದಿವಂತಿಕೆ ಎಂದರೂ ತಪ್ಪಿಲ್ಲ..

ಇನ್ನು ಮಾದ್ಯಮದ ಕಡೆಯಿಂದಲೂ ಒಳ್ಳೆಯ ರೀವ್ಯೂವ್ ಪಡೆದ ಪಾಪ್ ಕಾರ್ನ್ ಮಂಕಿ ಟೈಗರ್ ಬಹುತೇಕ 4 ರಿಂದ 4.5 ರೇಟಿಂಗ್ ಪಡೆದಿರುವುದು ಮತ್ತೊಂದು ವಿಶೇಷ.. ಕನ್ನಡದ ಸಿನಿಮಾ ಹತ್ತಿರದ ಚಿತ್ರಮಂದಿರಗಳಿಗೆ ಹೋಗಿ ತಪ್ಪದೇ ನೋಡಿ..