ಚಿರು ಧೃವನ ಜೊತೆ ಎಲ್ಲಾ ಫೋಟೋದಲ್ಲಿಯೂ ಜೊತೆಯಲ್ಲಿರುವ ಈತ ಯಾರು ಗೊತ್ತಾ?

ಚಿರು ಹಾಗೂ ಧೃವ ಸರ್ಜಾ ನಾವು ಕಂಡಂತ ಸೆಲಿಬ್ರೆಟಿ ಅಣ್ಣ ತಮ್ಮಂದಿರಲ್ಲಿ ರಾಮ ಲಕ್ಷ್ಮಣರಂತೆ ಎಂಬುದು ಎಲ್ಲರಿಗೂ ತಿಳಿದಿದೆ.. ಆದರೆ ಎಲ್ಲರೂ ಗಮನಿಸಿರುವಂತೆ ಚಿರು ಹಾಗೂ ಧೃವ ಸರ್ಜಾರ ಜೊತೆಯಲಿ ಸದಾ ಮತ್ತೊಬ್ಬ ವ್ಯಕ್ತಿ ಇರ್ತಾರೆ.. ಅಷ್ಟಕ್ಕೂ ಆತ ಯಾರು? ಚಿರು ಹಾಗೂ ಧೃವರ ಜೊತೆಯಲ್ಲೇ ಯಾಕೆ ಇರ್ತಾರೆ.. ಈ ಕೆಲ ಪ್ರಶ್ನೆಗಳು ಅನೇಕರ ಮನಸ್ಸಿನಲ್ಲಿ ಕೆಲ ದಿನಗಳಿಂದ ಬಂದು ಹೋಗಿರಬಹುದು..

ಹೌದು ಆತ ಮತ್ಯಾರೂ ಅಲ್ಲ.. ಇಜ್ ರಾಮ ಲಕ್ಷ್ಮಣರಂತೆಯೇ ಆತ ಆ ಕುಟುಂಬದ ಭರತ ಎಂದರೂ ತಪ್ಪಿಲ್ಲ.. ಆತನ ಹೆಸರು ಸೂರಜ್ ಸರ್ಜಾ.. ಶಕ್ತಿ ಪ್ರಸಾದ್ ಅವರಿಗೆ ಇಬ್ಬರು ಗಂಡು ಮಕ್ಕಳು.. ಒಬ್ಬರು ಕಿಶೋರ್ ಸರ್ಜಾ.. ಎರಡನೆಯವರು ಅರ್ಜುನ್ ಸರ್ಜಾ‌.. ಶಕ್ತಿ ಪ್ರಸಾದ್ ಅವರ ಹೆಣ್ಣು ಮಗಳ ಹೆಸರು ಅಮ್ಮಾಜಿ.. ಅವರೇ ಚಿರು ಹಾಗೂ ಧೃವರ ತಾಯಿ..

ಇನ್ನು ಅರ್ಜುನ್ ಸರ್ಜಾರಿಗೆ ಇಬ್ಬರು ಹೆಣ್ಣು ಮಕ್ಕಳು.. ಕಿಶೋರ್ ಸರ್ಜಾರ ಮಗನೇ ಈ ಸೂರಜ್ ಸರ್ಜಾ.. ಈ ಮೂವರು ಒಟ್ಟಿಗೆ ಬೆಳೆದದ್ದು.. ಸೋದರ ಮಾವನ ಮಗನಾದರೂ ಚಿರು ಗೆ ಧೃವ ಹಾಗೂ ಸೂರಜ್ ಇಬ್ಬರೂ ಒಂದೆಯೇ.. ಸೂರಜ್ ನನ್ನು ಸಹ ತಮ್ಮನಂತೆಯೇ ಕಾಣುತ್ತಿದ್ದರು ಚಿರು.. ಅದೇ ಕಾರಣಕ್ಕೆ ಚಿರು ಹಾಗೂ ಧೃವರ ಎಲ್ಲಾ ಫೋಟೋದಲ್ಲಿಯೂ ಸೂರಜ್ ಕೂಡ ಇರ್ತಾರೆ..

ಕಿಶೋರ್ ಸರ್ಜಾ ಅವರು ಕನ್ನಡದ ಪ್ರಖ್ಯಾತ ನಿರ್ದೇಶಕರು ಹೌದು‌.. ಅಳಿಮಯ್ಯ, ತುತ್ತಾ ಮುತ್ತಾ, ಬಾವ ಬಾಮೈದ, ವಾಯುಪುತ್ರ ಎಲ್ಲವೂ ಅವರ ನಿರ್ದೇಶನದ ಸಿನಿಮಾಗಳೇ.. ಚಿರು ಅವರ ಮೊದಲ ಸಿನಿಮಾ ವಾಯುಪುತ್ರ ಕೂಡ ಅವರೇ ನಿರ್ದೇಶನ ಮಾಡಿದ್ದು, ಆದರೆ ಆ ಸಿನಿಮಾ‌ ಬಿಡುಗಡೆಗೂ ಮುನ್ನವೇ ಅವರೂ ಸಹ 2009 ರಲ್ಲಿ ಹೃದಯಾಘಾತವಾಗಿ ಜೀವ ಕಳೆದುಕೊಂಡರು.. ಚಿರಂಜೀವಿ ಅವರಿಗೆ ಕಿಶೋರ್ ಅವರೆಂದರೆ ಬಹಳ ಪ್ರೀತಿ.. ಅದೇ ಕಾರಣಕ್ಕೆ ಚಿರು ತಮ್ಮ ಬಲಗೈ ಮೇಲೆ ಕಿಶೋರ್ ಎಂದು ಅಚ್ಚೆ ಹಾಕಿಸಿಕೊಂಡಿದ್ದರು..

ಕಿಶೋರ್ ಅವರು 2009 ರಲ್ಲಿ ತೀರಿಕೊಂಡ ಬಳಿಕ ಸೂರಜ್ ನನು ಸಹ ಅಮ್ಮಾಜಿ ತಮ್ಮ ಮಗನಂತೆಯೇ ಸಾಕಿ ಬೆಳೆಸಿದರು.. ಚಿರು ಧೃವ ಹಾಗೂ ಸೂರಜ್ ಮೂವರು ಸಹ ಸದಾ ಒಟ್ಟಿಗೆ ಇರುತ್ತಿದ್ದರು.. ಆದರೆ ಚಿರು ಮಾತ್ರ ಇದೀಗ ಇವರನ್ನೆಲ್ಲಾ ಬಿಟ್ಟು ತನ್ನ ಪ್ರೀತಿಯ ಮಾವನ ಬಳಿ ಸೇರಿಬಿಟ್ಟರು‌..