ಸುನಿಲ್ ಅವರ ಕೊನೆ ಕ್ಷಣದಲ್ಲಿ ಜೊತೆಯಲ್ಲಿದ್ದವರು‌ ಯಾರು? ನಿಜಕ್ಕೂ ಅಂದು ನಡೆದದ್ದೇನು ಗೊತ್ತಾ?

ಯಶಸ್ಸಿನ ಮೆಟ್ಟಿಲು ಹತ್ತುತ್ತಿರಬೇಕಾದರೆನೇ ಜವರಾಯ ನಟ ಸುನೀಲ್’ಗಾಗಿ ಕಾಯುತ್ತಿದ್ದ ಅನ್ಸತ್ತೆ. ಹುಡುಗಿಯರ ಎದೆಗೆ ಕನ್ನ ಹಾಕಿದ ಚಾಕ್ಲೇಟ್ ಹೀರೋ ಸುನೀಲ್, ‘ಬೆಳ್ಳಿ ಕಾಲುಂಗುರ’ ಸುನಿಲ್ ಅಂತಾನೆ ಇವತ್ತಿಗೂ ಫೇಮಸ್. ತನ್ನ ಮುದ್ದು ಮುಖದ ಚೆಲುವಿನಿಂದ ಹುಡುಗಿಯರ ನಿದ್ದೆ ಕದ್ದ ಚೋರ. ಹುಡುಗ ಅಂದ್ರೆ ಇವನ ಥರ ಸುಂದರವಾಗಿರಬೇಕು ಅಂತ ಹುಡುಗಿಯರು ಮನದಲ್ಲಿ ಆಸೆ ಪಡುತ್ತಿದ್ದರು. ಈಗಲೂ ಸುನೀಲ್ ಸಿನಿಮಾಗಳು ಹೆಂಗಳೆಯರ ಅಚ್ಚುಮೆಚ್ಚಿನ ಸಿನಿಮಾಗಳು.

ಮಂಗಳೂರು ಮೂಲದವರಾದ ಸುನೀಲ್ 1991ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ನಟ, ನಿರ್ದೇಶಕರಾದ ದ್ವಾರಕೀಶ್ ಅವರ ನಿರ್ದೇಶನದ ‘ಶೃತಿ’ ಚಿತ್ರದ ಮೂಲಕ ಎಂಟ್ರಿ ಕೊಟ್ಟರು. ನಂತರ ಕನಸಿನ ರಾಣಿ ಮಾಲಾಶ್ರೀ ಜೊತೆ ಅನೇಕ ಚಿತ್ರಗಳಲ್ಲಿ ನಟಿಸಿದ್ರು. ತೊಂಬತ್ತರ ದಶಕದಲ್ಲಿ ಇವರಿಬ್ಬರದ್ದು ಸೂಪರ್ ಜೋಡಿ. ಸುನೀಲ್ ಮತ್ತು ಮಾಲಾಶ್ರೀ ಹಲವಾರು ಹಿಟ್ ಚಿತ್ರಗಳನ್ನು ನೀಡಿದರು. ‘ಬೆಳ್ಳಿ ಕಾಲುಂಗುರ’, ‘ಸಿಂಧೂರ ತಿಲಕ’, ‘ಮನಮೆಚ್ಚಿದ ಸೊಸೆ’, ‘ಮರಣ ಮೃದಂಗ’ ಹೀಗೆ ಅನೇಕ ಚಿತ್ರಗಳಲ್ಲಿ ಈ ಜೋಡಿ ರೊಮ್ಯಾಂಟಿಕ್ ಆಗಿ ನಟಿಸಿ ಸೈ ಎನಿಸಿಕೊಂಡರು. ಈ ಜೋಡಿ ತೆರೆಯ ಮೇಲೆ ಬಹಳ ಮುದ್ದು ಮುದ್ದಾಗಿ ಕಾಣಿಸಿಕೊಳ್ಳುತ್ತಿತ್ತು.

ಬರೀ ಮೂರೇ ವರ್ಷಗಳಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡಿ ಗಮನ ಸೆಳೆದಿದ್ದರು. ಇಂತಹ ಒಳ್ಳೆಯ ನಟ ಕೇವಲ 30 ವರ್ಷಕ್ಕೆ ತಮ್ಮ ಬದುಕಿನ ವಿದಾಯ ಹೇಳಿದರು. ಶೃತಿ, ಬಿಸಿ ರಕ್ತ, ದಾಕ್ಷಾಯಿಣಿ, ಮೆಚ್ಚಿದ ಮದುಮಗ, ನಗರದಲ್ಲಿ ನಾಯಕರು, ಸಿಂಧೂರ ತಿಲಕ, ಸಾಹಸಿ ಮುಂತಾದ ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಸುನಿಲ್ ಅಭಿನಯಿಸಿದ್ದಾರೆ.

ಆವತ್ತು ಜುಲೈ 25, 1994ರಂದು ನಡೆದ ಒಂದು ದುರ್ಘಟನೆಯಲ್ಲಿ ಚಾಕಲೇಟ್ ಹೀರೋ ಸುನೀಲ್, ನಟಿ ಮಾಲಾಶ್ರೀ ಹಾಗೂ ಪ್ರೊಡ್ಯೂಸರ್ ಸಚ್ಚಿನ್ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಅವರ ಕಾರಿಗೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿತ್ತು. ಚಿತ್ರದುರ್ಗದಿಂದ 13 ಕಿಲೋ ಮೀಟರ್ ದೂರದಲ್ಲಿ ಇರುವ ಮಾದನಾಯಕನ ಹಳ್ಳಿಯಲ್ಲಿ ಈ ಅವಘಾತ ನಡೆದಿತ್ತು. ಘಟನೆಯಲ್ಲಿ ಕಾರಿನ ಚಾಲಕ ಕೃಷ್ಣ ಸ್ಥಳದಲ್ಲಿಯೇ ಮೃತಪಟ್ಟರು. ಎರಡು ಕಾಲುಗಳಿಗೆ ಬಲವಾದ ಹೊಡೆತ ಬಿದ್ದಿತ್ತು. ಸುನೀಲ್ ಚಿತ್ರದುರ್ಗದ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ನಟಿ ಮಾಲಾಶ್ರೀ ತಲೆಗೆ ಪೆಟ್ಟು ಬಿದ್ದು, ಅವರು ಹಾಗೂ ಪ್ರೊಡ್ಯೂಸರ್ ಅಪಾಯದಿಂದ ಪಾರಾದರು. ನಟ ಸುನೀಲ್ ವಿಧಿವಶರಾಗಿ ಎರಡೂವರೆ ದಶಕಗಳೇ ಕಳೆದಿದೆ.

ಅಂದು ಕರ್ನಾಟಕ ಫಿಲಂ ಇಂಡಸ್ಟ್ರಿ ಒಬ್ಬ ಉತ್ತಮ ನಾಯಕನನ್ನು ಕಳೆದುಕೊಂಡಿತು. ಕನ್ನಡ ಚಿತ್ರರಂಗದ ಉದಯೋನ್ಮುಖ ನಟ ಸುನಿಲ್ ಅವರ ಸಾವು ಕನ್ನಡ ಚಿತ್ರ ರಂಗಕ್ಕೆ ತುಂಬಾಲಾರದ ನಷ್ಟ ಅಂತಾನೆ ಹೇಳಬಹುದು. ಇಂದಿಗೂ ಮರ ತಾಯಿ ಸುನೀಲ್ ಸಮಾಧಿ ಬಳಿಯಿರುವ ಮರಕ್ಕೆ ನೀರೆರೆಯುತ್ತಿದ್ದಾರೆ.