ಅಂದು ರಸ್ತೆ ಗುಂಡಿಗೆ ಬಿದ್ದು ತಲೆಗೆ ಪೆಟ್ಟಾಗಿದ್ದ ನಟಿ ಸುನೇತ್ರ ಪಂಡಿತ್ ಏನಾದರು ಗೊತ್ತಾ..

ಕೆಲವು ಧಾರವಾಹಿಗಳು ಜನರ ಮನಸ್ಸಿನಲ್ಲಿ ಸದಾ ಕಾಲ ಉಳಿದು ಬಿಡುತ್ತದೆ, ಅಂತಹ ಧಾರವಾಹಿಗಳಲ್ಲಿ ಒಂದು ಸಿಲ್ಲಿ ಲಲ್ಲಿ, ಸಿಲ್ಲಿ ಲಲ್ಲಿ ಧಾರವಾಹಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇಂದಿಗೂ ಸಹ ಈ ಸಿಲ್ಲಿ ಲಲ್ಲಿ ಧಾರವಾಹಿ ಅನೇಕ ಜನರ ಫೇವರೆಟ್. ಸಿಲ್ಲಿ ಲಲ್ಲಿ ಧಾರವಾಹಿಯ ಎಲ್ಲಾ ಪಾತ್ರಗಳು ಸಹ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇನ್ನು ಈ ಧಾರಾವಾಹಿ ಮತ್ತೊಮ್ಮೆ ಪ್ರಸಾರವಾಗಲಿ ಎಂದು ಸಾಕಷ್ಟು ಜನರು ಬೇಡಿಕೆ ಇಟ್ಟಿದ್ದರು. ಅದರಂತೆ ಸಿಲ್ಲಿ ಲಲ್ಲಿ ಧಾರಾವಾಹಿ ಲಾಕ್ ಡೌನ್ ಸಮಯದಲ್ಲಿ ಮರುಪ್ರಸಾರವಾಗಿತ್ತು. ಅದೆಷ್ಟೇ ಕೆಲಸಗಳು ಇದ್ದರೂ ಸಹ ವೀಕ್ಷಕರು ಈ ಧಾರವಾಹಿಯನ್ನು ಮಿಸ್ ಮಾಡದೆ ನೋಡುತ್ತಾರೆ. ಅಷ್ಟಾಗಿ ಇಷ್ಟಪಡುತ್ತಾರೆ ಈ ಸಿಲ್ಲಿ ಲಲ್ಲಿ ಧಾರಾವಾಹಿಯನ್ನು.

ಸಿಲ್ಲಿ ಲಲ್ಲಿ ಧಾರವಾಹಿಯ ಬಹುತೇಕ ಎಲ್ಲಾ ಪಾತ್ರಗಳು ಜನರ ಮನಸ್ಸಿಗೆ ತುಂಬಾ ಹತ್ತಿರವಾಗಿದೆ. ಈ ಧಾರಾವಾಹಿಯ ಮತ್ತೊಂದು ಮುಖ್ಯ ಪಾತ್ರ ವಿಶಾಲು. ಈ ಪಾತ್ರವನ್ನು ರಂಗಭೂಮಿ ಕಲಾವಿದೆ ನಟಿ ಸುನೇತ್ರ ಪಂಡಿತ್ ಅವರು ನಿರ್ವಹಿಸಿದ್ದರು. ಸಿಲ್ಲಿ ಲಲ್ಲಿ ಧಾರಾವಾಹಿಯಲ್ಲಿ ಇವರ ಚಪ್ಪಾಳೆ ಡೈಲಾಗ್ ಬಹಕ ಫ್ಹೇಮಸ್. ಕನ್ನಡ ಬಹುತೇಕ ಧಾರಾವಾಹಿಗಳಲ್ಲಿ ಹಾಗೂ ಸಿನಿಮಾಗಳಲ್ಲಿ ನಟಿ ಸುನೇತ್ರ ಪಂಡಿತ್ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ನಟಿ ಸುನೇತ್ರ ಪಂಡಿತ್ ಅವರು ರಸ್ತೆಯ ಗುಂಡಿಗೆ ಬಿದ್ದು ತಲೆಗೆ ತೀವ್ರ ಪೆಟ್ಟು ಬಿದ್ದು ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ನಂತರ ಸುನೇತ್ರ ಪಂಡಿತ್ ಅವರು ಹೇಗಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇತ್ತು..

ಹೌದು ಮೇ 7 ರಂದು ಸುನೇತ್ರ ಅವರು ರಸ್ತೆಯ ಗುಂಡಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಹೌದು ಮೇ 7 ರಂದು ಸುನೇತ್ರ ಅವರು ಎಂದಿನಂತೆ ಶೂಟಿಂಗ್ ಮುಗಿಸಿ ಮನೆಗೆ ತಮ್ಮ ದ್ವಿ ಚಕ್ರ ವಾಹನದಲ್ಲಿ ಎನ್ ಆರ್ ಕಾಲೊನಿಯ ರಸ್ತೆಯಲ್ಲಿ ಇಂತಿರುಗುವಾಗ ರಸ್ತೆ ಸರಿ ಇರದ ಕಾರಣ, ಸುನೇತ್ರ ಅವರು ಗುಂಡಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು, ಅವರಿಗೆ ತಲೆಗೆ ಪೆಟ್ಟು ಬಿದ್ದಿದ್ದು. ಈ ವೇಳೆ ಅಲ್ಲೇ ಇದ್ದ ಮಂದಿ ಸುನೇತ್ರ ಅವರನ್ನು ಕೂಡಲೇ ಬಸವನಗುಡಿಯ ಖಾಸಗಿ ಆಸ್ಪತ್ರೆಗೆ ಧಾಖಲಿಸಿದರು. ಗಾಯಗೊಂಡಿದ್ದ ನಟಿ ಸುನೇತ್ರ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ಕಂಪ್ಲೀಟ್ ಬೆಡ್ ರೆಸ್ಟ್ ಸಲಹೆ ನೀಡಿದ್ದರು.

ಇಷ್ಟು ದಿನ ಮನೆಯಲ್ಲೆ ಇದ್ದು ಚೇತರಿಸಿಕೊಂಡಿದ್ದ ನಟಿ ಸುನೇತ್ರ ಪಂಡಿತ್ ಇದೀಗ ಮತ್ತೆ ನಟನೆಗೆ ಇಂತಿರುಗುವ ಸೂಚನೆ ನೀಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ನಟಿ ಸುನೇತ್ರ ಪಂಡಿತ್ ಆಗಾಗ ತಮ್ಮ ಅಭಿಮಾನಿಗಳ ಸಂಪರ್ಕದಲ್ಲಿರಲು ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅಪಘಾತದ ಬಳಿಕ ಮೊದಲ ಬಾರಿಗೆ ರೀಲ್ಸ್ ಮಾಡಿ ನಟಿ ಸುನೇತ್ರ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ನಟಿ ಸುನೇತ್ರ ಅವರು ಚೇತರಿಸಿಕೊಂಡತೆ ಕಾಣುತ್ತದೆ. ನಟಿ ಸುನೇತ್ರ ಅವರ ರೀಲ್ಸ್ ನೋಡಿ ಅಭಿಮಾನಿಗಳು ಖುಷ್ ಆಗಿದ್ದಾರೆ.

ನಟಿ ಸುನೇತ್ರ ಅವರು ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ಸಕ್ರಿಯರಾಗಿರುವ ನಟಿ. ನಟನೆಯ ಜೊತೆಗೆ ನಟಿ ಸಾಕಷ್ಟು ಕಲಾವಿದರಿಗೆ ಧ್ವನಿ ಕೂಡ ನೀಡಿದ್ದಾರೆ. ಇನ್ನು ಸದ್ಯ ನಟಿ ಸ್ಟಾರ್ ಸುವರ್ಣ ವಾಹಿನಿಯ ಬೆಟ್ಟದ ಹೂ ಧಾರವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು ಈ ಅಪಘಾತದ ಕಾರಣದಿಂದ ಅವರು ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದರು. ಇನ್ನು ಇದೀಗ ನಟಿ ಸುನೇತ್ರ ಅವರು ಚೇತರಿಸಿಕೊಂಡಿದ್ದು, ಶೀಘ್ರದಲ್ಲೇ ಧಾರಾವಾಹಿಗೆ ಮತ್ತೆ ಇಂತಿರುಗಲಿದ್ದಾರೆ ಎನ್ನಲಾಗುತ್ತಿದೆ. ಸುನೇತ್ರ ಅವರು ಬೇಗ ಚೇತರಿಸಿಕೊಳ್ಳಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣ….