ನಿನ್ನೆಯಷ್ಟೇ ಸುಮಲತಾ ಅವರಿಗೆ ಕೊರೊನಾ ಪಾಸಿಟಿವ್.. ಒಂದೇ ದಿನದಲ್ಲಿ ಹೊರಬಿತ್ತು ಶಾಕಿಂಗ್ ಸುದ್ದಿ..

ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ನಿನ್ನೆಯಷ್ಟೇ ಕೊರೊನಾ ಪಾಸಿಟಿವ್ ವರದಿ ಬಂದಿದ್ದು.. ಖುದ್ದು ಅವರೇ ಈ ವಿಚಾರ ತಿಳಿಸಿ ಹೋಂ ಕ್ವಾರಂಟೈನ್ ನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು, ಆದಷ್ಟು ಬೇಗ ಗುಣಮುಖರಾಗುವುದಾಗಿ ತಿಳಿಸಿದ್ದರು‌‌.. ಆದರೆ ಇಂದು ಒಂದೇ ದಿನದಲ್ಲಿ ದೊಡ್ಡ ಆತಂಕದ ಸುದ್ದಿ ಎದುರಾಗಿದೆ.. ಹೌದು ಕೊರೊನಾ ದಿನದಿಂದ ದಿನಕ್ಕೆ ವೇಗವಾಗಿ ಹರಡುತ್ತಿದ್ದು ಎಲ್ಲಿ ಯಾರಿಗೆ ಅದ್ಯಾವಾಗ ಪಾಸಿಟಿವ್ ಆಗುತ್ತಿದೆಯೋ ಊಹಿಸಲು ಸಾಧ್ಯವಾಗುತ್ತಿಲ್ಲ..

ಅತ್ತ ಜನಪ್ರತಿನಿಧಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತಿರುವುದು ಹೆಚ್ಚಿನ ಆತಂಕ ಮೂಡಿಸುತ್ತಿದೆ.. ಹೌದು ನಿನ್ನೆ ಸುಮಲತಾ ಅವರು ತಮಗೆ ಕೊರೊನಾ ಪಾಸಿಟಿವ್ ಆದ ವಿಚಾರವನ್ನು ತಿಳಿಸಿ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ “ಶನಿವಾರ, ಜುಲೈ 4ರಂದು, ನನಗೆ ಸ್ವಲ್ಪ ತಲೆನೋವು ಮತ್ತು ಗಂಟಲು ನೋವು ಕಾಣಿಸಿಕೊಂಡಿತ್ತು. ನಿರಂತರವಾಗಿ ನನ್ನ ಕ್ಷೇತ್ರದ ಕಾರ್ಯಗಳಲ್ಲಿ ತೊಡಗಿದ್ದರಿಂದ ಮತ್ತು ಕೊರೊನಾ ಪೀಡಿತ ಪ್ರದೇಶಗಳಿಗೂ ಭೇಟಿ ಕೊಟ್ಟಿದ್ದರಿಂದ, ಕೋವಿಡ್ 19 ಪರೀಕ್ಷೆಗೆ ಒಳಗಾದೆ. ಇವತ್ತು ಪಾಸಿಟಿವ್ ಎಂದು ಫಲಿತಾಂಶ ಬಂದಿದೆ. ಹಾಗಾಗಿ ವೈದ್ಯರ ಸಲಹೆ ಪಡೆದುಕೊಂಡು ಅಗತ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಮನೆಯಲ್ಲಿಯೇ ಕ್ವಾರಂಟೈನ್ ಗೆ ಒಳಪಟ್ಟಿದ್ದೀನಿ.

ರೋಗನಿರೋಧಕ ಶಕ್ತಿಯು ನನ್ನಲ್ಲಿ ಪ್ರಬಲವಾಗಿದೆ ಮತ್ತು ನಿಮ್ಮ ಆಶೀರ್ವಾದ ನನ್ನ ಮೇಲೆ ಇರುವುದರಿಂದ ಬೇಗ ಗುಣಮುಖ ಆಗುತ್ತೇನೆ. ಈಗಾಗಲೇ ನನ್ನನ್ನು ಭೇಟಿಯಾದ ವ್ಯಕ್ತಿಗಳ ವಿವರವನ್ನು ಸರಕಾರಿ ಅಧಿಕಾರಿಗಳಿಗೆ ಕೊಟ್ಟಿರುವೆ. ಆದರೂ ನನ್ನನ್ನು ಭೇಟಿಯಾದವರಲ್ಲಿ ಯಾರಿಗಾದರೂ ಕೋವಿದ್ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಪರೀಕ್ಷೆ ಮಾಡಿಸಲು ವಿನಂತಿಸುತ್ತೇನೆ. ನಿಮ್ಮ ಹಾರೈಕೆ ಇರಲಿ. ಸುಮಲತಾ ಅಂಬರೀಶ್” ಎಂದು ಬರೆದು ಪೋಸ್ಟ್ ಮಾಡಿದ್ದರು..

ಆದರೀಗ ಒಂದೇ ದಿನಕ್ಕೆ ಆತಂಕದ ಸುದ್ದಿಯೊಂದು ಹೊರಬಿದ್ದಿದೆ.. ಹೌದು ಸುಮಲತಾ ಅವರಿಗೆ ಜುಲೈ 4ನೇ ತಾರೀಕಿನಂದು ಸೋಂಕಿನ ಲಕ್ಷಣ ಕಾಣಿಸಿಕೊಂಡಿತ್ತು.. ತಲೆ ನೋವು ಗಂಟಲು ನೋವು ಕಾಣಿಸಿಕೊಂಡದ್ದು ಅದೇ ದಿನ.. ಆದರೆ ಶಾಕಿಂಗ್ ವಿಚಾರ ಏನೆಂದರೆ ಜೂನ್ 30 ರಿಂದ ಸುಮಲತಾ ಅವರು ಸರಣಿ‌ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.. ಎಲ್ಲಾ ಕಾರ್ಯಕ್ರಮದಲ್ಲಿಯೂ ನೂರಾರು ಮಂದಿ ಪಾಲ್ಗೊಂಡಿದ್ದರು.. ಅದರಲ್ಲೂ ಜೂನ್ 30 ರಂದು ಸುಮಲತಾ ಅಂಬರೀಶ್ ಅವರು ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ನೀಡುವ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಾರೆ.. ಅಂದು ಸುಮಲತಾ ಅವರು ಮಾಡಿದ ತಪ್ಪೆಂದರೆ ಅಂದು ಅವರು ಮಾಸ್ಕ್ ಧರಿಸದೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು..

ಆದ್ದರಿಂದ ಮಂಡ್ಯದ ಅಧಿಕಾರಿಗಳು ಜನಪ್ರತಿನಿಧಿಗಳಿಗೂ ಕೊರೊನಾ ಆತಂಕ ಹೆಚ್ಚಾಗಿದೆ.. ಮಂಡ್ಯದ ರೈತ ಸಭಾಂಗಣದಲ್ಲಿ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಿಸುವ ಕಾರ್ಯಕ್ರಮ ಅದಾಗಿತ್ತು.. ಈ ವೇಳೆ ಅದಾಗಲೇ ಸುಮಲತಾ ಅವರಿಗೆ ಸೋಂಕು ಇದ್ದರೆ ಮಾಸ್ಕ್ ಧರಿಸದ ಸಮಯದಲ್ಲಿ ಸುಲಭವಾಗಿ ಮತ್ತಿತರರಿಗೆ ಸೋಂಕು ಹರಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.. ವೇದಿಕೆಯ ಮೇಲೆ ಅನೇಕ ಗಣ್ಯರಿದ್ದು ಅವರೆಲ್ಲರೂ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.. ಅಷ್ಟೇ ಅಲ್ಲದೆ ಅದೇ ದಿನ ಆ ಕಾರ್ಯಕ್ರಮದಲ್ಲಿ ಅನೇಕ ಆಶಾ ಕಾರ್ಯಕರ್ತೆಯರ ಹಾಗೂ ಅವರ ಬೆಂಬಲಿಗರ ಸಂಪರ್ಕಕ್ಕೂ ಸುಮಲತಾ ಅವರು ಬಂದಿದ್ದು, ಆತಂಕ ಹೆಚ್ಚಿಸಿದೆ.. ದೇವರ ದಯೆಯಿಂದ ಆ ಕಾರ್ಯಕ್ರಮದಿಂದ ಯಾವುದೇ ಸೋಂಕು ಹರಡಿರದೆ ಆದಷ್ಟು ಬೇಗ ಸುಮಲತಾ ಅಂಬರೀಶ್ ಅವರು ಗುಣಮುಖರಾಗುವಂತಾಗಲಿ..

ಇನ್ನು ಜನ ಪ್ರತಿನಿಧಿಗಳು ಬೇರೆ ಬೇರೆ ಊರುಗಳಲ್ಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಸುಲಭವಾಗಿ ಅವರುಗಳಲ್ಲಿ ಸೋಂಕು ಕಾಣಿಸಿಕೊಳ್ಳಬಹುದು.. ಅಷ್ಟೇ ಸುಲಭವಾಗಿ ಸೋಂಕು ಹರಡಬಹುದಾಗಿದ್ದು ಆದಷ್ಟು ಹೆಚ್ಚಿನ ರೀತಿಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು‌ ಕೈಗೊಂಡು ಅವರ ಆರೋಗ್ಯದ ಜೊತೆಗೆ ಜನರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕೆಂದು ಜನ ಸಾಮಾನ್ಯರ ಮನವಿ‌‌..